Posts

Showing posts from July 17, 2011

ಹೀಗೆ ಆಯ್ತಾ ?

Image
ಕನ್ನಡದ ಮನಗಳಿಗೆ ನೋವಾಗುವಂತಹ ಘಟನೆಗಳು ಪದೇಪದೇ ನಡಿತಾನೆ ಇರುತ್ತದೆ.ಸಿಂಗಂ ಮೂಲಕ ಅಂಥ ನೋವಿನ ಅಂಶ ಪುನರಾವರ್ತನೆ ಆಯ್ತು . ಒಂದು ರಾಜ್ಯದ ಹೆಸರು ಡೈಲಾಗ್ ನಲ್ಲಿ ತಂದಿದ್ದೆ ತಪ್ಪು .ಅದರಲ್ಲೂ ಗಡಿ ಭಾಗದ ಕನ್ನಡಿಗರು ನಾಯಿಗಳು !
ಮತ್ತೊಂದು ಸಂಗತಿ ಅಂದ್ರೆ ನಿನ್ನೆ ಜನಶ್ರೀ  ವಾಹಿನಿಯಲ್ಲಿ  ಸಾ.ರಾ. ಗೋವಿಂದ್ ಒಂದು ಮಾತು ಹೇಳಿದರು ಈಗ ಜಾತಿ, ಕೆಲವು ಸಂಪ್ರದಾಯ ಕಡೆಗೆ ಒಂದು  ಸಣ್ಣ ಸಂಗತಿಯನ್ನು ತಿಳಿಸುವಾಗಲೂ ಸಾಕಷ್ಟು ಸರ್ತಿ ಯೋಚಿಸುವ ಪರಿಸ್ಥಿತಿಯಿದೆ.
ಅಂತಹುದರಲ್ಲಿ ಈ ರೀತಿಯ ಸಂಭಾಷಣೆಯ ಬಗ್ಗೆ ಅಲ್ಲಿನ ಸೆನ್ಸಾರ್ ಮಂಡಳಿ ಎಚ್ಚರ ವಹಿಸ ಬೇಕಿತ್ತು ಎಂದು. ಅದಂತೂ ಸತ್ಯ ಬಿಡಿ ಎಲ್ಲಾ ರಾಜ್ಯಗಳಲ್ಲೂ ಸೆನ್ಸಾರ್ ಮಂಡಳಿ ಇದೆ .ಅಲ್ಲಿ ಅವರು  ಅವರ ಮೂಗಿನ ನೇರಕ್ಕೆ ನಡಿಯುವ ಸಂಭವ ಇದೆ.ಈಗಂತೂ ಒಂದು ಗಾದೆಯನ್ನು ಬಳಕೆ ಮಾಡುವಾಗಲೂ ಯೋಚಿಸಿ ಮಾಡ ಬೇಕು ಅಂತಹ ಪರಿಸ್ಥಿತಿಯಿದೆ. 
ನನಗೆ ಆ ಕಾರ್ಯಕ್ರಮ ವೀಕ್ಷಿಸಿದಾಗ ತುಂಬಾ ಖೇದ ಎಂದು ಅನ್ನಿಸಿದ ಸಂಗತಿ ನಮ್ಮ ರಾಜ್ಯದ ಸೆನ್ಸಾರ್ ಮಂಡಳಿಯ ಸದಸ್ಯರ ಮಾತು .ಅವರ ಪ್ರಕಾರ ನಾನು ಸಿನಿಮಾವನ್ನು ನೋಡಿಲ್ಲ. ನೋಡಿದ ಬಳಿಕ ನಿರ್ಧಾರಕ್ಕೆ ಬರ ಬಹುದು. ಯಾವುದೇ ಡೈಲಾಗ್ ಸಮಗ್ರವಾಗಿ ಯಾವ ರೀತಿ ಬಳಕೆ ಆಗಿದೆ, ಅದು ತಪ್ಪೋ ಸರಿಯೋ ಎನ್ನುವ ನಿರ್ಧಾರಕ್ಕೆ ಬರ ಬಹುದು ಎಂದರು. 

ಆದ್ರೆ ಯಾವುದೇ ಡೈಲಾಗ್ ಸಮಗ್ರವಾಗಿ ಯಾವ ಅರ್ಥ ಕೊಡುತ್ತದೆ ಎನ್ನುವುದು ಸಾಮಾನ್ಯ ವೀಕ್ಷಕರಿಗೆ ಅನಗತ್ಯ ಸಂಗತಿ. ಸಾಮ…

ಅಯ್ಯೋ ಬ್ಯಾಡ ಕಣ್ರಿ ಚನ್ನಾಗಿರಲ್ಲ .

Image
ಕಸ್ತೂರಿವಾಹಿನಿಯಲ್ಲಿ ಇತ್ತೀಚೆಗೆ ವೀಕ್ಷಿಸಿದ ಕಾರ್ಯಕ್ರಮ ಕಾಮಿಡಿ ದರ್ಬಾರ್ . ಹಿರಿಯ ನಟ ನಿರ್ದೇಶಕ ಕಾಶಿನಾಥ್,ರಾಜು ಮತ್ತು  ತಾಳಿಕೋಟೆ  ಅವರ ಜೊತೆಯಲ್ಲಿ ಪ್ರತಿ ಎಪಿಸೋಡ್ಗೆ ಒಬ್ಬರು ರಾಜಕುಮಾರಿ.ಹೊಸಬರು  ಹಳಬರು, ಹೀಗೆ ಪ್ರತಿಭಾವಂತರು ತಮ್ಮ ಕೈಲಾದ ಮಟ್ಟಿಗೆ ಪ್ರಯತ್ನ ಮಾಡ್ತಾ ಇರ್ತಾರೆ ವೀಕ್ಷಕರನ್ನು ನಗಿಸಲು. ಇತ್ತೀಚೆಗೆ ರೇಡಿಯೋ ಆರ್ಜೆಗಳಾದ ಪ್ರಾದೀಪಾ, ಸೌಜನ್ಯ ಹಾಗೂ ವಿನಯ್  ಗ್ರೂಪ್ ಕಾಮಿಡಿ ಕಾರ್ಯಕ್ರಮ ನಡೆಸಿಕೊಟ್ರು. ಪ್ರಾದೀಪಾ ಪೋಲೀಸಪ್ಪ .

91 .1  ಎಫೆಮ್ ನ  ಮಾತುಗಾರ ಆರ್ಜೆ ಪ್ರಾದೀಪಾ. ಇಲ್ಲಿ ನಟನೆ ಮಾಡಿ ನಾವು ಸಹ ನಟನೆಯನ್ನು ಮಾಡ್ತೀವಿ ಎಂದು ವೀಕ್ಷಕರಿಗೆ ತೋರಿಸಿಕೊಟ್ರು. ಪರವಾಗಿಲ್ಲ ಈ ಟೀಮ್ ತಾವು ಒಳ್ಳೆಯ ಕಲಾವಿದರು . ಇನ್ನೊಂದು ಸಂಗತಿ ತಿಳಿಸಲೇ ಬೇಕು ಪ್ರದೀಪಾ ಇನ್ನು ಸ್ವಲ್ಪ ಹೋಂ ವರ್ಕ್ ಮಾಡಿದ್ರೆ ಹೆಚ್ಚು ಉತ್ತಮ ಫಲಿತಾಂಶ ಪಡೆಯ ಬಹುದು. ರೇಡಿಯೋ ಒಳಗೆ ನಟನೆ ಮಾಡುವಾಗ ಜನರಿಗೆ ಕೇಳಿಸಿದರೆ ಸಾಕು ಆದರೆ ಟೀವಿಯ ಪರದೆಯಲ್ಲಿ ವೀಕ್ಷಕರಿಗೆ ಇಷ್ಟ ಆಗ ಬೇಕಾದ್ರೆ ಹೆಚ್ಚು ಪ್ರಯತ್ನದ ಅಗತ್ಯ ಇದ್ದೆ ಇರುತ್ತದೆ. ಎಂತಹ ಒಳ್ಳೆಯ ಕಲಾವಿದರೂ ಸಹ ಜನರ ಮುಂದೆ ಬರುವ ಮುನ್ನ ಹೆಚ್ಚು ಸಿದ್ಧ ಆಗಲೇ ಬೇಕು. ಇದೆ ಸರಿಯಾದ ಪದ್ಧತಿ. ಒಟ್ಟಾರೆ ಕಾಮಿಡಿ ದರ್ಬಾರ್ ಡಿಫರೆ೦ಟಾಗಿದೆ. ಶನಿವಾರ ಭಾನುವಾರದ ಬೇಜಾರು ಕಳಿಯುತ್ತದೆ. ಕಲಾವಿದರು ಇನ್ನು ಹೆಚ್ಚು  ಶ್ರಮ ವಹಿಸಿ ಮಾಡಿದರೆ ದರ್ಬಾರು  ಮತ್ತೂ ಸುಂದರವಾಗಿ ಇ…

ಇತಿಹಾಸ ಕೆದಕಿದಾಗ!!

Image
ನಾವು ರೆಗ್ಯುಲರ್ ಆಗಿ ಟೀವಿ ನೋಡಿದರು ಕೆಲವು ಸರ್ತಿ ಯಾವ ಕಾರ್ಯಕ್ರಮ ವೀಕ್ಷಿಸ ಬೇಕು ಎನ್ನುವ ಸಂಗತಿ ಅರ್ಥ ಆಗಲ್ಲ, ಬೆಟರ್ ಟು ಸೆ ಗೊತ್ತಾಗಲ್ಲ ಎಂದು ಹೇಳ ಬಹುದು ಎಂದು ನಮ್ಮ ಅಕ್ಕ ಒಬ್ರು ಹೇಳ್ತಾ ಇದ್ರು. ನನ್ನ ಬ್ಲಾಗ್ ಓದುಗರು ಅವರು. ಆದ್ರೆ ಇತ್ತಿಚಿನ ದಿನಗಳಲ್ಲಿ ಸ್ವಲ್ಪ ಹೆಚ್ಚೇ ಕೆಲಸ ಆಗಿ ಬಿಟ್ಟಿದೆ. ಯಾವುದರ ಬಗ್ಗೆ ಗಮನ ನೀಡಲು ಆಗ್ತಾ ಇಲ್ಲ :-)

ಇತ್ತೀಚೆಗೆ ಉದಯ ನ್ಯೂಸ್ ನಲ್ಲಿ ದೀಪಕ್ ತಿಮ್ಮಯ್ಯ ನಿರೂಪಣೆಯ  ಟಾಕ್  ಷೋ ವೀಕ್ಷಿಸಿದೆ. ಅದರಲ್ಲಿ ಅತಿಥಿ ಆಗಿದ್ದವರು ಸುಪ್ರೀಂ ಕೋರ್ಟ್ ವಕೀಲರಾದ ಬ್ರಿಜೇಶ್ ಬೋಪಯ್ಯ.ತುಂಬಾ ಚೆನ್ನಾಗಿತ್ತು ಕಾರ್ಯಕ್ರಮ. ಮುಖ್ಯವಾಗಿ ಅವರು ಸಮೂಹಸನ್ನಿ ಅದರಲ್ಲೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತ ಆ ವಿಷಯಕ್ಕೆ ಸಂಬಂಧಿಸಿದ  , ಅಣ್ಣಾ ಹಜಾರೆ ಅವರ ಬಗ್ಗೆ ಕೆಲವು ಮಾಹಿತಿಗಳನ್ನು ಹೇಳಿದರು. ಬ್ರಿಜೇಶ್ ತಿಳಿಸಿದಂತೆ ಅಣ್ಣಾ ಅವರ ಇತಿಹಾಸ ಕೆದಕಿದಾಗ ಕೆಲವು ಸತ್ಯಗಳು ಅವರ ಬಗ್ಗೆ ಸಣ್ಣ ಎಳೆಯ ಪ್ರಶ್ನೆ ಮೂಡಿಸುತ್ತದೆ. ಮುಖ್ಯವಾಗಿ ಅಣ್ಣಾ ಹಜಾರೆ ರೀತಿಯಲ್ಲೇ ಮೇಧಾ ಪಾಟ್ಕರ್ ಅವರ ಬಗ್ಗೆ ಉತ್ತರ ಭಾರತದ ಕೆಲವು ಫ್ರೆಂಡ್ಸ್ ಹೇಳಿದ್ದಾರೆ ಅದರ ಬಗ್ಗೆ ಸ್ಪಷ್ಟ ಸಾಕ್ಷಿ ಇಲ್ಲದೆ ಮಾತಾಡೋಕೆ ಆಗಲ್ಲ.


ಮಾಧ್ಯಮ ಕ್ಷೇತ್ರದಲ್ಲಿ  ಸಾಕಷ್ಟು ಹೆಸರು ಮಾಡಿರುವ  ವಾಹಿನಿ ಒಂದರ ಚೀಫ್ ಆಗಿರುವ  ಕ್ಲೋಸ್ ಫ್ರೆಂಡ್ ಒಬ್ರು  ಈಗ ನಮ್ಮ ಓನರ್ ಗಳು ನೀವು ಹೇಗಾದರೂ ಇರಿ ನಮಗೂ ಸ್ವಲ್ಪ ಮಾಡಿ ಅನ್ನುವ ಸ…