Posts

Showing posts from July 31, 2011

ಕಾನ್ಸೆಪ್ಟ್

Image
ಯಾವುದೇ ಕಾರ್ಯಕ್ರಮ ಇರಲಿ ನಿರೂಪಕರ ಪಾತ್ರ ಮಹತ್ವದ್ದು. ಅದೇ ರೀತಿಯಲ್ಲಿ ಕೆಲವು ಸೀರಿಯಲ್ಗಳಲ್ಲಿ ಸಹ ಡೈಲಾಗ್ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಒಂದಷ್ಟು ಕಾರ್ಯಕ್ರಮಗಳಲ್ಲಿ ಅದರ ಸೆಟ್ಟಿಂಗ್. ಸಾಮಾನ್ಯವಾಗಿ ಅಬ್ಬರದ ಸೆಟ್ಟಿಂಗ್ ಕಾಣ ಬೇಕಾದರೆ ಹಿಂದಿ  ಸೀರಿಯಲ್ಗಳ ಕಡೆ ಗಮನ ಕೊಡ ಬೇಕು . ಯಾಕೆ ಅಂದ್ರೆ ನಿಜ ಬದುಕಿನ ಯಾರದೋ ಮಗಳು ಸೀರಿಯಲ್ ನಲ್ಲಿ ಮತ್ತೊಂದು ಕುಟುಂಬದ ಕುಡಿಯಾಗಿ ಅವಳ ಮದುವೆಗೆ ಗಂಡು ಹುಡುಕುವ ಕಥೆ, ಯಪ್ಪಾ ಯಪ್ಪಾ ಬ್ಯಾಡ..! ನಿಜ ಬದುಕಲ್ಲಿ ಆಕೆಗೆ ಅಂತಹ ಮರ್ಯಾದೆ ಸಿಗುತ್ತೋ ಇಲ್ವೋ.. ಆದರೆ ಸೀರಿಯಲ್ ವೀಕ್ಷಣೆ ಮಾಡುವ ಹೆಣ್ಣುಮಕ್ಕಳಿಗೆ ಛೆ ನಮಗೂ ಇಂಥ ಶ್ರೀಮಂತರ ಮನೆ ಬದುಕು ಸಿಗಬಾರದಿತ್ತ ಅನ್ನಿಸುವುದು ಸತ್ಯ ಬಿಡಿ ಅಷ್ಟೊಂದು ಚಂದ ಅನ್ನಿಸುವಂತೆ ಶೂಟ್ ಮಾಡಿರ್ತಾರೆ. 
ಆದರೆ ಈ ಟೀವಿ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಅನಾವರಣ ಧಾರಾವಾಹಿಯಲ್ಲಿ ಡೈಲಾಗ್ ಗಳು  ವಾಸ್ತವ ಚಿತ್ರಣ ಎದ್ದು ತೋರಿಸುತ್ತದೆ. ಸೇತು ರಾಮ್ ಅವರ ನಟನೆ , ಸುಂದರಶ್ರೀ , ಕಲಾವಿದ ಧರ್ಮೇಂದ್ರ ಅರಸ್, ಭವಾನಿ ... ಎಲ್ಲ ಕಲಾವಿದರನ್ನು ನಿರ್ದೇಶಕರು ಸಖತ್ತಾಗಿ  ದುಡಿಸಿಕೊಂಡಿದ್ದಾರೆ.  ಅತ್ಯಂತ ಮನಸ್ಪರ್ಶಿ ಡೈಲಾಗ್ ಗಳು. ಬದುಕು ಸತ್ಯ. ಆದರೆ ಆ ಸತ್ಯದಲ್ಲಿ ನಾವು ಅನೇಕ ಮಿಥ್ಯದ ಕೋಟೆಗಳನ್ನು ಕಟ್ಟಿಕೊಂಡು ಬಾಳ್ತಾ ಇರ್ತೀವಿ.ಚುರುಕಾದ ಸಂಭಾಷಣೆ ...
ರಾಜ್ ಮ್ಯೂಸಿಕ್  ವಾಹಿನಿಯಲ್ಲಿ ಯು ಟು ವಾಹಿನಿಯಲ್ಲಿ ಪ್ರಸಾರ ಆಗುವಂತೆ ಹಾಡುಗಳು ಪ್…