Posts

Showing posts from August 14, 2011

ನೀನಾ ನಾನ!

Image
ನಮ್ಮ ವಾಹಿನಿಗಳು ಭರಪೂರ ಬೆಂಬಲ ಅಣ್ಣಾ ಹಜಾರೆ ಅವರಿಗೆ ನೀಡ್ತಾ ಇದ್ದಾರೆ. ಅಷ್ಟೇ ಅಲ್ಲದೆ ಯುವಶಕ್ತಿಯಿಂದಲೂ ಅಣ್ಣಾಗೆ ಸಖತ್ ಬೆಂಬಲ ದೊರಕಿದೆ.ಓರ್ವ  ಸಾಧಾರಣ ವ್ಯಕ್ತಿಯ ಬೆಂಬಲವಾಗಿ ಈ ಪರಿಯ ಸಮೂಹ ನಿಂತಿರುವುದು ಕಂದಾಗಂತೂ ಸಾಮಾನ್ಯನಿಗೆ ಖಂಡಿತ ಅನ್ನಿಸುವ ಒಂದು ಅಂಶ ಹೌದು ನಾನು ನ್ಯಾಯಕ್ಕಾಗಿ ಹೋರಾಡ ಬಹುದು. ಮುಖ್ಯವಾಗಿ ಅಣ್ಣಾ ಅವರ ಬಗ್ಗೆ ಗಮನ ಸೆಳೆಯುವ ಸಂಗತಿ ಅಂದ್ರೆ ಅವರ ಜೀವನ್ಮುಖಿ ಗುಣ. ಅಷ್ಟು ಮಳೆ ಅದರಲ್ಲೂ ಕ್ಯಾರೆ ಅನ್ನದೆ ಅವರು ಸಾಮಾನ್ಯ ಮನುಷ್ಯರಂತೆ ಮಲೆಯಲ್ಲಿ ಓದಿದ್ದು ಸ್ವಲ್ಪ ಮಜ ಕೊಟ್ರು ಅನ್ನ ಅವರ ಆತ್ಮಶಕ್ತಿಯ ಬಗ್ಗೆ ಖುಷಿ ಆಯ್ತು.

ಭ್ರಷ್ಟಾಚಾರ ನಿರ್ಮೂಲನ , ಜನಲೋಕ್ ಪಾಲ್ ಜಾರಿ ಇವುಗಳ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತಿರುವ ಅಣ್ಣಾ , ಸಂತೋಷ್ ಹೆಗಡೆ ಅವರಿಗೆ ನಮ್ಮ ಕಡೆಯಿಂದಲೂ ಬೆಂಬಲ ಇದ್ದೆ ಇದೆ. ನಮ್ಮ ವಾಹಿನಿಗಳು ಇದನ್ನು ಪ್ರಚಾರದ ರೂಪದಲ್ಲಿ ಕೊಡದೆ ಇದ್ರೂ, ಕೆಲವರು ಇದರ ಬಳಕೆ ಮಾಡಿಕೊಳ್ಳುವ ರೀತಿಯು ಸಹ ಸಾಮಾನ್ಯರಿಗೆ ಮಜ ಕೊಡ್ತಾ ಇದೆ. ಒಟ್ಟಾರೆ ನಮ್ಮ ವಾಹಿನಿಗಳು , ಫೇಸ್ ಬುಕ್ ನಂತಹ ಸೋಶಿಯಲ್ ನೆಟ್ ವರ್ಕ್ ಗಳು ,ಎಲ್ಲಾ ಕಡೆಯಿಂದಲೂ ನಡೆಯುತ್ತಿರುವ ಚರ್ಚೆ, ಆ ವಿಷಯದ ಬಗ್ಗೆ ಇರುವ ಗಂಭೀರವಾದ ವರ್ತನೆ ಕಂಡಾಗ ಬದಲಾಗುತ್ತಿದೆ ಭಾರತ ಎಂದು ಅನ್ನಿಸ್ತಾ ಇದೆ.

@@@ಸುವರ್ಣ ವಾಹಿನಿಯಲ್ಲಿ 'ನೀನಾ ನಾನ' ಎನ್ನುವ ಟಾಕ್ ಷೋ ಪ್ರಸಾರ ಆಗುತ್ತದೆ. ಅದರ ನೇತೃತ್ವ ವಹಿಸಿರುವವರು ಹಿ…