Posts

Showing posts from September 4, 2011

ಕಷ್ಟ ಪಟ್ಟು

Image
ಯಾವುದೇ ಒಂದು ಕಾರ್ಯಕ್ರಮ ವೀಕ್ಷಣೆ ಮಾಡುವಾಗ ವೀಕ್ಷಕರು ಎಷ್ಟು ಮುಖ್ಯವೋ ಅಷ್ಟೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ ವೀಕ್ಷಕರ ಅಭಿಪ್ರಾಯ. ತಮಾಷೆ ಅಥವ  ವಿಶೇಷ ಅಂದ್ರೆ ನಾನು ಕಂಡಂಗೆ ವಾಹಿನಿಗಳಲ್ಲಿ ಅನೇಕರು ಹಾಗೆನ್ನುವುದಕ್ಕಿಂತ ಬಹು ಸಂಖ್ಯೆಯ ಮಾಧ್ಯಮಿಗಳು ಇದರ ಬಗ್ಗೆ ಹೆಚ್ಚು ಗಮನ ನೀಡಲ್ಲ. ಅಂದ್ರೆ ಅದರ ಬಗ್ಗೆ ರಿಯಾಕ್ಟ್ ಮಾಡಲ್ಲ. ನಾವು  ವೀಕ್ಷಕರಿಗಿಂತ ಸ್ವಲ್ಪ ಎತ್ತರದಲ್ಲಿದ್ದಿವಿ  ಅಂತ ಅಭಿಪ್ರಾಯ ಹೊಂದಿರ ಬಹುದೇನೋ ಗೊತ್ತಿಲ್ಲ. ಆದರೆ ಫೇಸ್ಬುಕ್ ನಂತಹ  ಸೋಶಿಯಲ್ ನೆಟ್ ವರ್ಕ್ ನಲ್ಲಿ ವೀಕ್ಷಕ ಪ್ರಭುಗಳು ನನ್ನ ಬರಹಗಳಿಗೆ ನೀಡುವ ಅಭಿಪ್ರಾಯಗಳು, ಕಡು ಉತ್ತರಗಳು, ಕಾರ್ಯಕ್ರಮಗಳ ಬಗ್ಗೆ ಅವರಿಗಿರುವ ಆಳ , ಪ್ರಬುದ್ಧತೆ, ನೇರ ನಿಷ್ಠುರ ಉತ್ತರ ... ಇವೆಲ್ಲವೂ ಹೊಸದಾದ ಲೋಕವನ್ನೇ ತೆರೆದಿಡುತ್ತದೆ. ಮುಖ್ಯವಾಗಿ ನನ್ನ ಬುದ್ಧಿಯನ್ನು ತುಂಬಾ ಶಾರ್ಪ್ ಮಾಡುತ್ತದೆ. ನಿನ್ನೆ ಬರೆದಬರಹಕ್ಕೆ
ಸಿಕ್ಕಾಪಟ್ಟೆ ಇಂತಹ ಪ್ರತಿಕ್ರಿಯೆಗಳು ಬಂದಿದೆ ಅದರಲ್ಲಿ  ಒಂದನ್ನು ಹಾಕ್ತಾ ಇದ್ದೇನೆ ...
ಮನೋರಂಜನೆಯ ಜೊತೆಗೆ ಮೂಡುತಿದ್ದ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ ದುಡ್ಡು ಗಳಿಕೆಯ ಸೆಳೆತದ ಸುಳಿಯಲ್ಲಿ ಸಿಕ್ಕಿ ನಲುಗಿ ಹೋಗಿದೆ. ಇಂದಿನ ಸಿರಿಯಲ್ ಗಳ ಬಗ್ಗೆ ನನ್ನ ಅಪ್ತರೊಬ್ಬರ ಮಾತು : "ಸಿರಿಯಲ್ ಗಳ ...ಸಿರಿಯಸ್ ಆಗಿ ನೋಡದೆ, ತಮಗೆ ಏನು ಮತ್ತೆ ಎಷ್ಟು ಬೇಕೋ ಅಷ್ಟನ್ನೇ ಅರಗಿಸಿಕೊಳ್ಳುವ ಮನೋಹವ್ಯಾಸ ಗಟ್ಟಿ ಮಾಡಿಕೊಂಡು ಟೀವೀ ಹಚ್ಚುವದು ನ…

ಕೈ ಚಳಕ

Image
ಕಳೆದ ಮೂರು ತಿಂಗಳಿಂದ ವೈದ್ಯರೊಬ್ಬರ ಕನಸಿನ ಪುಸ್ತಕ ಬರೆಯುವ ಕೆಲಸದಲ್ಲಿ ಬ್ಯುಸಿ ಇದ್ದೆ. ಅಂತೂ ಮುಗಿಯಿತು ಬರೆದದ್ದು. ಅದು ಪ್ರಕಟಗೊಂಡರೆ ಅತ್ಯುತ್ತಮ ವೈದ್ಯ ಸಾಹಿತ್ಯ ಅಂತ ಹೇಳ ಬಹುದು. ಹೊಸ ಸಬ್ಜೆಕ್ಟ್ ಕನ್ನಡ ಸಾಹಿತ್ಯ ವನ್ನು  ಅಲಂಕರಿಸುತ್ತದೆ.

ಆದರೆ ಕೆಲವು ಸರ್ತಿ ನಿರೀಕ್ಷೆಗಳು ನಾವು ನಿರೀಕ್ಷಿಸಿದಷ್ಟು  ವೇಗವಾಗಿ ಸಾಕಾರ ಆಗುವುದಿಲ್ಲ ಅನ್ನುವುದಕ್ಕೆ ಈ ವೈದ್ಯರೇ ಸಾಕ್ಷಿ. ಪಾಪ ಅವರ ಜೀವಿತಾವಧಿಯಲ್ಲಿ ಕಂಡಿರುವುದು ಟೋಪಿ ಹಾಕುವ ಪತ್ರಕರ್ತರನ್ನೇ. ಅವರಿಗೆ ಪಾಪ ಲೋಕವೆಲ್ಲ ಹಳದಿ... ! ನನ್ನ ಕಥೆ ಕೇಳಿ ನಾನು ಹೋಗಿ ಹೋಗಿ ಅವರ ಕೈಲಿ ಸಿಕ್ಕಿ  ಹಾಕಿಕೊಂಡೆ... ಬ್ಯಾಡ ನನ್ನ ಕಥೆ :-). ಬರೆಯೋದು ಓದೋದು.. ಬರೆಯೋದು ಓದೋದು... ! ಜಾಸ್ತಿ ಕಾಲ ಇದ್ರೆ ನನಗೆ ತಲೆ ಕೆಟ್ಟು ಹೋಗುತ್ತೆ ಎನ್ನುವ ನಿಶ್ಚಯಕ್ಕೆ ಬಂದು ಅವರು ಹೇಳಿದಂತೆ ಪುಸ್ತಕ ಬರೆದು ನೀವುಂಟು.. ನಿಮ್ಮ ಪ್ರಕಟಣೆಯ ತಲೆ ಬಿಸಿ ಉಂಟು ಎಂದು ಹೊರಗೆ ಬಂದೆ...


ಕಳೆದ ಮೂರು ತಿಂಗಳಿಂದ ಆಗುತ್ತಿರುವ ಅನುಭವ ಅಂತಿಂತಹುದಲ್ಲ  ಕಣ್ರೀ...! ನಾನು ನಿರೀಕ್ಷೆ ಮಾಡದೆ ಇರುವಷ್ಟು ಕೆಟ್ಟದಾಗಿ  ಕೆಲವು ಪತ್ರಕರ್ತರು  ಬಣ್ಣ ಬದಲಾಯಿಸಿದರು.  ಅವರ ಬಗ್ಗೆ ಹೇಳೋಕೆ ಹೋದ್ರೆ ಅವರ ಮೆಚ್ಚಿನ ಬಂಟರುಗಳು ಟೀವಿಯವರು ( ಅವರನ್ನು ಸಹ ಪತ್ರಕರ್ತರು ಎಂದು ಕರೆಯಲಾಗುತ್ತದೆ )  ಆಮೇಲೆ ಬಣ್ಣ ಕಟ್ಟಿ ಹೇಳುವ ಸಂಭವ ಅಧಿಕ.. ನನಗೆ ಯಾರ ಬಗ್ಗೆಯೂ ಭಯ ಆತಂಕ ಇಲ್ಲ, ಆದರೆ ಅವುಗಳ ಬಗ್ಗೆ ಹೇಳೋಕೆ ಸ್ವಲ್…