Posts

Showing posts from September 11, 2011

ಇಬ್ಬರು ಖಳರು !

Image
ಪ್ರತಿಭೆಗಳಲ್ಲಿ ಕೆಲವರನ್ನು  ಮಾತ್ರ ನಾವು ದೈತ್ಯ ಪ್ರತಿಭೆ ಎಂದು ಕರೆಯೋದು. ಅದರಲ್ಲೂ ರಂಗಭೂಮಿ ಅಡಿಪಾಯ ಹೊಂದಿರುವ ಮಹನೀಯರು ತಮ್ಮ ಪ್ರತಿಭೆಯನ್ನು ಎರ್ರಾಬಿರ್ರಿ ಬಳಸಿ ಕಲಾರಸಿಕರ  ಮನಸ್ಸು ಸಂತೋಷ  ಪಡಿಸ್ತಾನೆ ಇರ್ತಾರೆ. ಕನ್ನಡದ ಕಿರುತೆರೆಯಲ್ಲಿ ಅಂತಹ ಮಹನೀಯರು ಅನೇಕರಿದ್ದಾರೆ. ಆದರೆ ಇತ್ತೀಚಿನ ಟೀವಿ ಸೀರಿಯಲ್ಗಳನ್ನು ಗಮನಿಸುವಾಗ  ಅತ್ಯಂತ ಹೆಚ್ಚು ಗಮನ ಸೆಳೆಯುವಂತೆ ಮಾಡ್ತಾ ಇರುವ ಕಲಾವಿದರು ನಾಗೇಂದ್ರ ಶಾ ಹಾಗೂ ಕರಿಬಸವಯ್ಯನವರು. ನಾಗೇಂದ್ರ ಷಾ ಈ ಟೀವಿ ವಾಹಿನಿಯ ಅನಾವರಣ ಧಾರಾವಾಹಿಯಲ್ಲಿ ಅತ್ಯಲ್ಪ ಕಾಲ ಬರುವ .. ಖಳನಾಯಕ... ಹಾಗೆನ್ನುವುದಕ್ಕಿಂತ ಇಂದಿನ ಪ್ರಸ್ತುತ ಸಮಾಜಕ್ಕೆ ಮಾತ್ರವಲ್ಲದೆ ನಾಗರೀಕ  ಸಮಾಜದ ಅತ್ಯಂತ ಮುಖ್ಯವಾದ  ಪ್ರತಿನಿಧಿ .

ನಾಗೇಂದ್ರ ಶಾ ಮಾಡಿರುವ ಪಾತ್ರ  ಮನದಲ್ಲಿ ಉಳಿದು ಹೋಗುತ್ತದೆ. ನಾಗೇಂದ್ರ  ಮುಖದಲ್ಲಿ  ತೋರಿಸುವ ಲಂಪಟತನದಛಾಯೆ, ಆಸೆಬುರುಕುತನ... ! ಅದ್ಭುತ  ಕಣ್ರೀ.. ವೀಕ್ಷಕರು ಅಸಹ್ಯದಿಂದ ಮೈ  ಪರಚಿಕೊಳ್ಳಬೇಕು...ಅಷ್ಟೊಂದು ಜೀವ ತುಂಬಿದ್ದಾರೆ ಪಾತ್ರಕ್ಕೆ. ಕಲಾವಿದರು ಯಾವ್ ಪಾತ್ರ ಕೊಟ್ರು ಮಾಡ್ತಾರೆ , ಆದ್ರೆ ಈ ವಿಲನ್ ಪಾತ್ರಗಳಿಗೆ ಹೆಚ್ಚಿನ ಗಮನ  ನೀಡಬೇಕು. ಅವರು ಹಳೆಯ ಸಿನಿಮಾಗಳ ಪಾತ್ರಗಳಂತೆ  ಹಾ ಹೂ ಅಂತ ಹೇಳುವುದಕ್ಕಿಂತ   ಭಾವನೆಗಳು, ಮುಖದ ಕವಳಿಕೆಗಳು ... ಪ್ರಕಟ ಮಾಡ್ತಾರಲ್ಲ... ಯಪ್ಪಾ !! ನಾಗೇಂದ್ರ ಶಾ ಅವರ ಈ ಕೆಲವು ಸಣ್ಣಪುಟ್ಟ ಸಂಗತಿಗಳು ಸಿಕ್ಕಾಪಟ್ಟ…

ಶ್ರದ್ಧೆ ಜಾಣ್ಮೆ

Image
ಇಂದು ಸೆಪ್ಟೆಂಬರ್ 10 ... ವಿಶ್ವದ ಕರಾಳದಿನಗಳಲ್ಲಿ ಒಂದು..
ಇದು ಅಮೆರಿಕಾ ಪೆಂಟಗನ್ ಸ್ಮಾರಕ. 2001 ರಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಸಾವನ್ನಪ್ಪಿದವರ ಸವಿನೆನಪಿಗಾಗಿ ಈ ಸ್ಮಾರಕವನ್ನು ನಿಮರ್ಿಸಲಾಗಿದೆ. 2008 ರಲ್ಲಿ ನಾನು ಅಮೆರಿಕಾ ಪ್ರವಾಸ ಕೈಗೊಂಡಿದ್ದಾಗ ಇಲ್ಲಿಗೆ ಭೇಟಿ ನೀಡಿದ್ದೆ. ಹೇಗಾದರೂ ಮಾಡಿ ಅಲ್ಲೊಂದು ಪಿಟುಸಿ ನೀಡಿ ಸ್ಟೋರಿಗೆ ಒಂದು ಅಧಿಕೃತ ಸ್ವಂತಿಗೆ ಮೊಹರು ಒತ್ತಬೇಕು. ಆ ಮೂಲಕ ಚಾನೆಲ್ಗೆ ಹೆಸರು ತಂದುಕೊಡಬೇಕು ಎಂಬ ತುಡಿತ ನನ್ನಲ್ಲಿ. ಹೈ ಸೆಕ್ಯೂರಿಟಿ ಜೋನ್ನಲ್ಲಿರುವ ಪೆಂಟಗನ್ನಲ್ಲಿ ಯಾರನ್ನೂ ಕ್ಯಾಮರಾ ಹಿಡಿದುಕೊಳ್ಳುವಂತೆ ಕೇಳುವುದು ಸಾಧ್ಯವಿರಲಿಲ್ಲ. ಆದರೆ ಅದೊಂದು ಕಾರಣ ನನ್ನ ಆಕಾಂಕ್ಷೆಗೆ ಅಡ್ಡಿ ಎನಿಸಲಿಲ್ಲ. ನಾನೇ ಎಡಗೈನಲ್ಲಿ ಕ್ಯಾಮರಾ ಹಿಡಿದು ಶೂಟ್ ಮಾಡಿ ಪಿಟುಸಿ ನೀಡಿದೆ. ಇದೊಂದು ಜರ್ನಲಿಸಂ ವಿದ್ಯಾರ್ಥಿಗಳಿಗೆ ಅನುಕರಣೀಯ ವಿದ್ಯೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಏಕೆಂದರೆ ಎಂಥಹ ಕಠಿಣ ಪರಿಸ್ಥಿತಿಗಳಲ್ಲಿ ಲಭ್ಯವಿರುವ ಮೂಲಭೂತ ಸೌಲಭ್ಯಗಳನ್ನು ಬಳಸಿ ಹೇಗೆ ಕೆಲಸ ಮಾಡಬಹುದೆಂಬುದಕ್ಕೆ ಇದೊಂದು ಜ್ವಲಂತ ನಿದರ್ಶನ. ಈ ವಿಡಿಯೋ ಕ್ಲಿಪ್ ನೋಡಿದಾಕ್ಷಣ ಕಠಿಣ ಪರಿಸ್ಥಿತಿಯಲ್ಲಿ ಪತ್ರಿಕೋದ್ಯಮದ ಸ್ಫೂತರ್ಿ ಮೆರೆದು ಕೆಲಸ ನಿರ್ವಹಿಸಿದ ನನಗೆ ನನ್ನ ಬಗ್ಗೆ ಹೆಮ್ಮೆ ಎನಿಸುತ್ತದೆ. ಕ್ಯಾಮರಾ, ಕಾರು, ಡ್ರೈವರ್, ಅಸಿಸ್ಟೆಂಟ್, ಕ್ಯಾಸೆಟ್ ಎಲ್ಲ ನೀಡಿ ಬೆಳಿಗ್ಗೆಯಿಂದ ಸಂಜೆವರೆಗೂ ಸಮಯ ನೀಡಿದರ…