Posts

Showing posts from September 25, 2011

ಸಂಭ್ರಮ !

Image
ಕನ್ನಡಕ್ಕೊಬ್ಬರೇ ಕಸ್ತೂರಿ ಅನ್ನುವ ಹೆಮ್ಮೆ ನಮ್ಮದು. ಅದೇ ರೀತಿ ಸಂಪೂರ್ಣಕನ್ನಡ ವಾಹಿನಿ ಕಸ್ತೂರಿ ವಾಹಿನಿಅನ್ನುವ ಖುಷಿಯಿಂದ  ಕನ್ನಡ ವೀಕ್ಷಕರು ಕಸ್ತೂರಿ ವಾಹಿನಿಯನ್ನು ಬರ ಮಾಡಿಕೊಂಡರು. ಅದರಲ್ಲಿ ಪ್ರಸಾರ ಆದ ಕಾರ್ಯಕ್ರಮಗಳು ಹೆಚ್ಚು ಬೇರೆ ವಾಹಿನಿಗಳಲ್ಲಿ ಪ್ರಸಾರ ಆಗುವ ಕಾರ್ಯಕ್ರಮಗಳ ಛಾಯೆ ಇದ್ದರೂ ತನ್ನಟನ ಉಳಿಸಿಕೊಳ್ಳಲು ಅಗತ್ಯ ಇರುವ ಪ್ರಯತ್ನ ಮಾಡುತ್ತಲೇ ಬಂದಿದೆ. ವಾಹಿನಿಗೆ ಸಂಬಂಧಪಟ್ಟ ಮಿತ್ರರೊಬ್ಬರು ಸದಾ ಕದ್ದ ಮಾಲು ಕಾಣುವ ಹಾಗೆ ಮಾರಾಟ ಅನ್ನುವ ಪದ ಬಳಕೆಯನ್ನು ಕೆಲವು ಕಡೆ ಮಾಡ್ತಾ  ಇರ್ತಾರೆ. ಅವರ ಅಸಹನೆ, ಬೇಸರ ಅರ್ಥ ಆದರೂ ಒಂದು ಸಂಸ್ಥೆಯಲ್ಲಿ ಇದ್ದ ಬಳಿಕ ನಾವು ಆ ಸಂಸ್ಥೆಗೆ ಸದಾ ಲಾಯಲ್ ಆಗಿರಬೇಕು . ಅದೇ ನಿಜವಾದ ವೃತ್ತಿ ಧರ್ಮ.

ನಾನು ಇದ್ದ ಮ್ಯಾಗಜೈನ್ ಒಂದರಲ್ಲಿ ಸಿನಿಮಾ ನಟಿ ರಮ್ಯ ಬಗ್ಗೆ ಒಳ್ಳೆಯ ಮಾತು ಬರೆಯ ಬಾರದಿತ್ತು. ಆಕೆಯ ಯಾವುದೇ ಒಳ್ಳೆಯ ಅಂಶವನ್ನು ಬೆಳಕಿಗೆ ತರುವ ಹಾಗೆ ಇರಲಿಲ್ಲ ಯಾಕೆ ಅಂದ್ರೆ ಆ ಸಂಸ್ಥೆಯ  ಯಜಮಾನರಿಗೆ ಆಕೆ ಕಂಡ್ರೆ ಸಿಟ್ಟು- ಕ್ವಾಪ. ನಾವು ಅಲ್ಲಿ ಇರುವಾಗ ಅವರ ಮೂಗಿನ ನೇರಕ್ಕೆ ಬರಿತಾ ಇದ್ವಿ. ಇದನ್ನು ಕೆಲವು ಜಾಣ .. ಸೊ ಕಾಲ್ಡ್  ಪ್ರಜ್ಞಾವಂತ ಪತ್ರಕರ್ತರು ಅಕ್ಷರ ಹಾದರ ಅನ್ನುವ ಪದದ ಬಳಕೆ ಮಾಡ್ತಾ ಇದ್ರು.  ನಮಗೆ ಗೊತ್ತಿರುವುದು ಸಂಸ್ಥೆಗೆ  ನಿಯತ್ತಾಗಿ ಕೆಲಸ ಮಾಡೋದು. ಅದರಂತೆ ನಡಿತಾ ಇದ್ವಿ...
ನೋಡೀ ವಿಷಯ ಹೇಗೆ ಬದಲಾವಣೆ ಕಂಡು ಕೊಂಡಿತು :-) ಕಸ್ತೂರಿವಾ…

ವಿಜಯ ಸಲಹೆ

Image
ರಾಜಕೀಯ, ಸಿನಿಮಾ ಒಟ್ಟಾರೆ ಯಾವುದೇ ವಿಷಯ ಆಗಿರಲಿ , ಅದನ್ನು ವಿಡಂಬನಾತ್ಮಕವಾಗಿ ಸಿದ್ಧ ಮಾಡಿ ಅದನ್ನು ವೀಕ್ಷಕರು ಖುಷಿಯಿಂದ ನೋಡುವಂತೆ ಮಾಡುವ ಜಾಣತನ ವಾಹಿನಿಗಳ ಕೈಲಿ ಇರುತ್ತದೆ. ಸುವರ್ಣ ನ್ಯೂಸ್  ವಾಹಿನಿಯಲ್ಲಿ ಪ್ರಸಾರ ಆಗುವ ತಲೆ ಹರಟೆ ಕಾರ್ಯಕ್ರಮ ಅಂತಹ ಖುಷಿ ಕೊಡುವ ವಿಶೇಷ ಕಾರ್ಯಕ್ರಮ. ಒಬ್ಬ ಬಾಯಿ ಬಡುಕ, ಆದರೆ ಜಾಣ - ಅಬ್ಬೇಪಾರಿ  ವ್ಯಕ್ತಿ ಸಮಾಜದ  ಕೊಳಕು, ಸಮಸ್ಯೆಗಳನ್ನು ತನ್ನ ಶೈಲಿಯಲ್ಲಿ ಹೇಳುತ್ತಾ ಸಾಗುವ ಒಂದು ಪುಟ್ಟ ಕಾರ್ಯಕ್ರಮ. ಪ್ರತಿದಿನ  ಇದು ಪ್ರಸಾರ ಆಗುತ್ತದೆ. ಯಾವ ಸಮಯ ಅಂತ ಹೇಳುವುದಕ್ಕಿಂತ ಆಗಾಗ ಪ್ರಸಾರ ಆಗುತ್ತದೆ.

ನನ್ನ ಪ್ರಿಯ ಓದುಗರು ನಾನು ಕಾರ್ಯಕ್ರಮಗಳ ಬಗ್ಗೆ ಬರೆಯುವಾಗ ಯಾವ ಪ್ರಸಾರ ಆಗುತ್ತದೆ ಸಮಯ ತಿಳಿಸಿ ಎಂದು ಕೇಳ್ತಾರೆ.ಆದರೆ ಚಾನೆಲ್ಗಳು ಸಾಮಾನ್ಯವಾಗಿ ಒಂದೇ ಕಾರ್ಯಕ್ರಮವನ್ನು ಅನೇಕ ಬಾರಿ ಜಡಿದು ಬಿಡುತ್ತದೆ, ಈ ಕಾರಣದಿಂದ ಯಾವ ಸಮಯ ಎಂದು ಹೇಳುವುದಕ್ಕೆ ಆಗುವುದಿಲ್ಲ. ಮತ್ತೊಂದು ಸಂಗತಿ ಅಂದ್ರೆ ಸಾಕಷ್ಟು ಸರ್ತಿ ನಾನು ಮೂಲ ಸಮಯ ಹೊರೆತುಪಡಿಸಿ ಬೇರೆಯ ಸಮಯದಲ್ಲಿ  ಪುನರ್ ಪ್ರಸಾರ ಆದ ಕಾರ್ಯಕ್ರಮವನ್ನು ವೀಕ್ಷಿಸಿ  ಇರ್ತೀನಿ.ಆ ಮಟ್ಟಿಗೆ ಹೇಳುವುದಾದರೆ ನಾನು ಸ್ವಲ್ಪ ಲೇಟ್ ಲತೀಫ್.. ಹಿಂದಿ ಸೀರಿಯಲ್ಗಳ ಸೀನ್ ಗಳಂತೆ ;-)

ತಲೆಹರಟೆ ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆ ಕೊಳಕು ಬಟ್ಟೆ ಧರಿಸಿದ ವ್ಯಕ್ತಿ, ಮಾತಿನ ಶೈಲಿ ಮತ್ತು ವಿಷಯ ಮಂಡನೆ. ಅದರ ಮತ್ತೊಂದು ಆಕರ್ಷಣೆ ಅಂದ…