Posts

Showing posts from October 16, 2011

ಒಂದೇನಾ ?

Image
ನಾನು ಅತಿ ಹೆಚ್ಚು ಬೈಸಿಕೊಳ್ಳುವುದು ನನ್ನ ಫೇಸ್ ಬುಕ್ ಮಿತ್ರವಲಯದ ಕೈಲಿ. ಟೀವಿ ಬಗ್ಗೆ ಬರೆಯುವ ಬರಹಗಳನ್ನು ಶ್ರದ್ಧೆಯಿಂದ ಓದುವ ಫ್ರೆಂಡ್ಸ್ ಜೊತೆಗೆ ಬೈದೆ ತೀರುತ್ತಾರೆ. ಅದರಲ್ಲಿ ಮಿತ್ರ ಭೈರವ ಕೋಡಿ ರಾಮನಗರದವರು, ಜಯ್ಯಕ್ಕ ಈ ದರಿದ್ರ ಟೀವಿ ಕಾರ್ಯಕ್ರಮಗಳನ್ನು ಬರೆಯುವುದನ್ನು ನಿಲ್ಲಿಸ ಬಾರದೆ ಎಂದು ಆಗಾಗ ಬೈತಾರೆ ತಮ್ಮ ಕಮೆಂಟ್ ಮೂಲಕ. ಅತ್ಯುತ್ತಮ ಓದುಗರಲ್ಲಿ ಭೈರವ್ ಸಹ ಒಬ್ಬರು. ಹಿಂದಿ ವಾಹಿನಿಯ ಬಗ್ಗೆ ಬರೆಯುವಾಗ ಅಯ್ಯೋ ನಮ್ಮ ವಾಹಿನಿಗಳು ಅಂತಹ ಕಾರ್ಯಕ್ರಮ ಪ್ರಸಾರ ಮಾಡುವುದಿಲ್ಲವಲ್ಲ ಎಂದು ಹಲಬುವ ಓದುಗ ಮಿತ್ರರು ಅನೇಕರು. ಎಲ್ಲರ ಬಗ್ಗೆ ಬರೆಯಲು ಹೊರಟರೆ ಗಂಟೆಗಟ್ಟಲೆ ನನ್ನ ಲ್ಯಾಪಿ ಮುಂದೆ ಕೂರ ಬೇಕಾಗುತ್ತದೆ :-)

ಈ ಕಮೆಂಟುಗಳು,ಕೋಪಗಳು ನನ್ನಲ್ಲಿ ಹೆಚ್ಚು ಉತ್ಸಾಹ ನೀಡುತ್ತದೆ. ಅವರ ಸ್ನೇಹಗಳನ್ನು ಜೀವಂತವಾಗಿಡಲು ನಾನು ಶ್ರಮಿಸ್ತಾನೆ ಇರ್ತೀನಿ. ಎಷ್ಟು ವೀಕ್ಷಕರು,ಅವರದೆಷ್ಟು ಬಗೆಯ ಅಭಿಪ್ರಾಯಗಳು, ಎಂತಹ ಬುದ್ಧಿವಂತ ವರ್ಗ...ಎಲ್ಲವನ್ನೂ ದೊರಕಿಸಿಕೊಟ್ಟಿದೆ ನನಗೆ ನನ್ನ ಬರಹಗಳು.



ಸುವರ್ಣ ನ್ಯೂಸ್ ವಾಹಿನಿಯಲ್ಲಿ ಹಮೀದ್ ಪಾಳ್ಯ ನಿರೂಪಣೆಯ ಅಂಡರ್ವರ್ಲ್ಡ್ ಕಾರ್ಯಕ್ರಮ ನಮ್ಮ ಬೆಂಗಳೂರನ್ನು ಆಳಿದ ಡಾನ್ ಗಳ ಬಗ್ಗೆ ತಿಳಿಸಿಕೊಡುತ್ತದೆ.ಈ ಕಾರ್ಯಕ್ರಮದ ನೇತೃತ್ವ ಅಜಿತ್ ಹನುಮಕ್ಕನವರ್ ದಾಗಿದೆ. ಡಾನ್ ಗಳ ವಿಷಯಕ್ಕೆ ಬಂದಾಗ ಸಾಮಾನ್ಯರಿಗೆ ಅವರ ಬಗ್ಗೆ ಒಂದು ಬಗೆ ಆಸಕ್ತಿ ಕುತೂಹಲ ಇದ್ದೆ ಇದೆ.ಅದನ್ನು ತಣಿಸುವ ಇಂತಹ ಕಾರ್ಯಕ್ರ…