Posts

Showing posts from October 23, 2011

ಕೇಳು!!

Image
ಇದು ಇಂದು ಮಾರಾಟ ಆಯಿತೊ ...., ಇದು ಇಂದಿನ ಯಶಸ್ಸು...

Bharath Gokuನಮ್ಮದಲ್ಲ  ಅವರದೆ , ಯಾವಾಗಲು  ಹಳೆ  ನ್ಯೂಸ್  ತೋರಿಸ್ತಾರೆ ... ಕ್ರಿಕೆಟ್  ನಲ್ಲಿ  ಇಂಡಿಯಾದವರು ಆಸ್ಟ್ರೇಲಿಯಗೆ   ಹೋಗಿ  ಪ್ರಾಕ್ಟೀಸ್  ಮಾಡ್ತಿದ್ದರೆ ,ಬೆಂಗಳೂರಿನಲ್ಲಿ   ಯಾವಾಗಲೋ  ಪ್ರಾಕ್ಟೀಸ್  ಮಾಡಿದನ್ನ  ತೋರಿಸ್ತಾರೆ ....ಭಾರತದವರು aus ನಲ್ಲಿ  ಕಠಿಣ ಅಭ್ಯಾಸ  ಮಾಡುತ್ತಿದ್ದಾರೆ  ಅಂತ  ವೀಡಿಯೊ  ತೋರಿಸ್ತಾರೆ  ಅಲ್ಲಿ  ನೋಡಿದಿರೆ  CHINNSWAMY STADIUM ಪ್ರಸಾರ ಆಗ್ತಾ ಇರುತ್ತೆ !!

ಮೇಲಿರುವ ಫೋಟೋ ಈಗಿನ ಮಾಧ್ಯಮಲೋಕಕ್ಕೆ ಹೇಳಿ ಮಾಡಿಸಿದ್ದು. ಯಾಕೆ ಅಂತ ಹೇಳುವ ಅಗತ್ಯವಿಲ್ಲ. ನೀವೆಷ್ಟು ಒಳ್ಳೆಯ ಸರಕು ಕೊಟ್ರೆ ಅಷ್ಟು ಒಳ್ಳೆಯ ಫಲಿತಾಂಶ ಸಿಗುತ್ತದೆ ಎನ್ನುವ ಸಂಗತಿ ಒಂದು ಕಡೆ ಆದರೆ, ಇಂದಿನ  ಮಾರಾಟ ಎಷ್ಟು ಆಗುತ್ತದೆಯೋ ಅದೇ ಇಂದು ದಕ್ಕಿದ ಯಶಸ್ಸು :-).ಈ  ಫೋಟೋ   ಜಾದುಗಾರ್  ಓಂಗಣೇಶ್  ಕಾಮತ್ ಅವರಿಂದ ಪಡೆದದ್ದು. ಮೇಲಿನ ಶೀರ್ಷಿಕೆಯು ಸಹ ಅವರದ್ದೇ :-) ನಿನ್ನೆ ನಾನು ಬರೆದ ಬರಹದಲ್ಲಿ ಉದಯ ನ್ಯೂಸ್ ಬಗ್ಗೆ ಬರೆದ ಬರಹವನ್ನು ಓದಿದ ಬಳಿಕ ಅನೇಕ ರೀತಿಯ ಪ್ರತಿಕ್ರಿಯೆಗಳು ಬಂತು.ಅದರಲ್ಲಿ ಇಷ್ಟ ಆಗಿದ್ದು ಇಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ. ವೀಕ್ಷಕರು ಸಾಮಾನ್ಯದವರಲ್ಲ, ಅವರ ಕಿವಿಗೆ ನೀವು ಹೂ ಇಡಲು ಪ್ರಯತ್ನಿಸಿದರೆ, ಲಾಲ್ಬಾಗ್ ಇಟ್ಟು ಬಿಡ್ತಾರೆ. 


ಸಮಯ ವಾಹಿನಿಯಲ್ಲಿ ಮಧ್ಯಾನದ ವೇಳೆಯಲ್ಲಿ ಪ್ರಸಾರ ಆಗುವ ಮಹಿಳ ಕಾರ್ಯಕ್ರಮದಲ್ಲಿ ಪ್ರತ…

ತಪ್ಪು !!

Image
ಬೆಂಗಳೂರಿನಲ್ಲಿ ಕೆಲವು ಸ್ಥಳಗಳತ್ತ ಹೋದರೆ ಕನ್ನಡ ಅನ್ನುವ ಭಾಷೆಯನ್ನು ಹುಡುಕಾಡುವ ಪರಿಸ್ಥಿತಿ  ಉಂಟಾಗುತ್ತದೆ. ಮುಖ್ಯವಾಗಿ ನಾವು ಕನ್ನಡಿಗರಾಗಿ ಹುಟ್ಟಿದ್ದಿವಲ್ಲ,  ಅಯ್ಯೋ ಇನ್ನೇನು ಗತಿ ಎನ್ನುವ ಕೀಳರಿಮೆ ಕಾಡುತ್ತದೆ :-) ದೇವ್ರಾಣೆ ಕಣ್ರೀ ! ಇಂಗ್ಲೀಷ್ನಲ್ಲಿ  ಮ್ಯಾನೆಜ್  ಮಾಡಿ ,ಹಿಂದಿಯ ಮೂಲಕ ಕೆಲಸ ಪೂರ್ತಿ ಮಾಡಿ ,ತೆಲುಗು ಮಾತಾಡಿ  ಮತ್ತೊಂದಷ್ಟು ಮಾರ್ಗದರ್ಶನ  ಪಡೆದು, ತಮಿಳಿನಲ್ಲಿ ಕೇಳಿ ಕೆಲಸ ಮುಂದುವರೆಸ ಬಹುದು ಅಂತಹ ಪರಿಸ್ಥಿತಿ ಅಲ್ಲಿ. ಇಲ್ಲಿ ನಮ್ಮ ಕನ್ನಡದ ಸಾಫ್ಟ್ವೇರ್ ಹುಡುಗರು ಕನ್ನಡ ಕನ್ನಡ ಅಂತ ಹೇಳಿ ಹೇಳಿ ತಾವೂ ಆಂದೋಲದಲ್ಲಿ  ಭಾಗಿಯಾಗಿ ನಮ್ಮಂತಹವರನ್ನು ಬಿಡದೆ ಕಾಡುತ್ತಾರೆ :-). ಮೊದಲು ಬೆಂಗಳೂರು ಕನ್ನಡದ ಊರು ಆಗ್ಬೇಕು... ಆದರೆ ಅದೆಂದಿಗೂ ಉಹುಂ !

ಕನ್ನಡದಲ್ಲಿ  ಮಾತಾಡುವ ವಿಷಯಕ್ಕೆ ಬರುವುದಾದರೆ ರಾಜ್ ಮ್ಯೂಸಿಕ್ ಕಡೆ ಒಮ್ಮೆ ಕಣ್ಣು ಹಾಯಿಸಬೇಕು. ಅದರಲ್ಲಿ ಚಂದನ್ ಎನ್ನುವ ಆಂಕರ್ ಇದ್ದಾರೆ. ಅವರು ಮೊದಲು ಇದ್ದುದು ಉದಯ ಮ್ಯೂಸಿಕ್ ನಲ್ಲಿ ಈಗ ಇಲ್ಲಿದ್ದಾರೆ. ಈ ಪುಣ್ಯಾತ್ಮ ಕನ್ನಡ ಬಿಟ್ರೆ ಬೇರೆ ಭಾಷೆ ಬಳಕೆ ಮಾಡೋದೇ ಇಲ್ಲ. ನಾನು ಗಮನಿಸಿಕೊಂಡು ಕೂತಿದ್ದೇನೆ ಟೀವಿ ಮುಂದೆ ಸಾಕಷ್ಟು ಸರ್ತಿ :-) ಉಹುಂ ಇಲ್ಲ ಕನ್ನಡವನ್ನು ಬಿಟ್ಟು..ಅನ್ಯ ಭಾಷೆಯನ್ನೂ ಮಾತಾಡೆ ಅನ್ನುವ ಹಟಕ್ಕೆ ಬಿದ್ದು ! ಖುಷಿ ಅನ್ನಿಸುತ್ತೆ ಈ ಪ್ರಯತ್ನ... ಕೀಪ್ ಇಟ್ ಅಪ್ ಯ !

ಜನಶ್ರೀ ವಾಹಿನಿಯಲ್ಲಿ ಇತ್ತೀಚೆಗೆ ಯುಕೆ…

ನಿರಾಕಾರ

Image
'ಹರಿಗೆ ಒಂದು ಗುಡಿಯನೊಂದು ಕಟ್ಟುತಿರುವೆನು  ದೀನಗಿಂತ ದೇವ ಬಡವ ಎಂದು ಬಗೆವೆನು' ದೇವರ ವಿಷಯಕ್ಕೆ ಬಂದಾಗ ಅನೇಕಾನೇಕ ರೀತಿಯಲ್ಲಿ ದೇವರ ಬಗ್ಗೆ ತಮ್ಮದೇ ಆದ ಪ್ರೀತಿ , ವಾದ, ಅಭಿಪ್ರಾಯಗಳನ್ನು ಭಕ್ತರು ತಿಳಿಸಿದ್ದಾರೆ.ಅದು ದೇವರು ಮತ್ತು ಭಕ್ತರ ನಡುವಿನ ಬಾಂಧವ್ಯ . ಅದರ ಬಗ್ಗೆ ಎರಡು ಮಾತಿಲ್ಲ ಬಿಡಿ !

ಇತ್ತೀಚಿಗೆ ಟೀವಿ ನೈನ್ ವಾಹಿನಿಯಲ್ಲಿ  ತಿರುಪತಿಯ ಏಡುಕೊಂಡಲವಾಡ ವೆಂಕಟೇಶ್ವರ ಯಾವ ಜಾತಿ ಅನ್ನುವ ವಿಷಯದ ಬಗ್ಗೆ ಚರ್ಚೆ ನಡೆಯಿತು. ಅಲ್ಲಿ ಭಕ್ತರು ಹೋಗಿ ಮುಡಿ ಕೊಡುವುದರಿಂದ ಮುಸ್ಲಿಂ, ಬೌದ್ಧ , ಹೀಗೆ ಅನೇಕ ರೀತಿಯ ವಾದಗಳ ಹುಟ್ಟು ಭಕ್ತರ ಮನಸ್ಸು ತಾರುಮಾರು ಮಾಡಿದೆ. ಸಾಮಾನ್ಯವಾಗಿ ಧರ್ಮಗಳು ಮುಖ್ಯವಾಗಿ ಆಚರಣೆಯ ಮೂಲಕ ಹುಟ್ಟಿದೆ. ಭಾರತವು ವಲಸಿಗರ ನಾಡು. ಇಲ್ಲಿ ಅನೇಕ ಸಂಸ್ಕೃತಿಗಳು ಶಾಶ್ವತವಾಗಿ ಬೇರು ಬಿಟ್ಟಿದೆ.


ಆರ್ಯರು, ಮಧ್ಯ ಪ್ರಾಚ್ಯದಿಂದ ವಲಸೆ ಬಂದವರು, ಮೂಲ  ಬುಡಕಟ್ಟು ಜನಾಂಗದವರು...ಹೀಗೆ ಹತ್ತು ಹಲವಾರು ಕಾರಣಗಳು ಸಹ ಅನೇಕ ಸಂಗತಿಗಳ ಬೆಳವಣಿಗೆಗೆ ಕಾರಣ ಆಗುತ್ತದೆ.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಂಡಿತೋತ್ತಮರು ತಿಳಿಸಿದಂತೆ ದೇವರಿಗೆ ಜಾತಿ ಎಲ್ಲಿದೆ ಎನ್ನುವುದು ಸತ್ಯ. ಇಲ್ಲದೆ ಇದ್ರೆ ಅಷ್ಟೊಂದು ಧರ್ಮಗಳು, ದೇವರು-ದಿಂಡರು ಈ ಪರಪಂಚದಲ್ಲಿ ಇನ್ನು ಉಳಿಯಲು ಸಾಧ್ಯ  ಇತ್ತೇ.ತೆಲುಗು ಪ್ರಾಚಿನ ಕವಿ  ರೆಡ್ಡಿ ಅನ್ನುವ ಪದ ಬಳಸಿದ ಕಾರಣ ಆತ ರೆಡ್ಡಿ  ಜನಾಂಗಕ್ಕೆ ಸೇರಿದವ ಅನ್ನುವ ಮಾತು ಬಾಲಿಶ. ದೇವರನ್ನು…

ಅತಿರೇಕ!!

Image
ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಬದುಕು ಸದಾ ಶಾಂತಿ,ನೆಮ್ಮದಿ, ಗೆಲುವು, ಹರ್ಷವೆಂಬ ಬೆಳಕಿನಿಂದ ಬೆಳಗಲಿ... ದುಃಖ, ಚಿಂತೆ, ಬೇಸರಗಳೆಂಬ ಕತ್ತಲು ದೂರವಾಗಲಿ ಎನ್ನುವ ಹಾರೈಕೆ ನನ್ನದು.  
ಸಾಮಾನ್ಯವಾಗಿ ಟೀವಿ ಕಾರ್ಯಕ್ರಮಗಳಿಗೆ ಸಂಬಂಧ ಪಟ್ಟಂತೆ ಅನೇಕ ಬಗೆಯ ಅಭಿಪ್ರಾಯಗಳು ಕಾಣಸಿಗುತ್ತಲೇ ಇರುತ್ತದೆ. ಕೆಲವರು ನಾನು ಬರೆದ ಬರಹದ ಬಗ್ಗೆ ಹೇಳಿ ಮತ್ತೊಂದು ಕಾರ್ಯಕ್ರಮದ ಬಗ್ಗೆಯೂ ತಿಳಿಸಿಬಿಡುತ್ತಾರೆ. ಆದರೆ ಒಂದಷ್ಟು ಮಂದಿ ಮೇಲ್ ಮಾಡುತ್ತಾರೆ. ಇದು ಮೊದಲಿಂದಲೂ ಬಂದ ಪದ್ಧತಿ. 
ಈಗಷ್ಟೇ ಎಂಜಿನೀರಿಂಗ್ ಮುಗಿಸಿಸುವ ಯುವ ಬರಹಗಾರ ಮಿತ್ರ -ತಮ್ಮ ಪವನ್ ಹೆಚ್ಚು ಅಭಿಪ್ರಾಯ ಹೇಳ್ತಾನೆ ಇರ್ತಾನೆ. ಈತ ಹಿರಿಯ ನಟ ಉದಯ ಕುಮಾರ್ ಅವರ ಸಂಬಂಧಿ .  ಈಟೀವಿ ವಾಹಿನಿಯಲ್ಲಿ ಪ್ರಸಾರ ಆಗುವ ಅರುಂಧತಿ ಧಾರವಾಹಿ ಟಿಆರ್ಪಿ  ಹೆಚ್ಚಿಸಿಕೊಂಡಿರುವ ಧಾರಾವಾಹಿಗಳಲ್ಲಿ ಒಂದು .ಅದರಲ್ಲಿ ಮಾತಾ ಮಂತ್ರ, ಸಾವು, ನೋವು, ದೆವ್ವ, ದೇವರು ಎಲ್ಲ ಇದೆ. ಮನೋರಂಜನೆಯ ದೃಷ್ಟಿಯಿಂದ  ಸರಿಯಾಗೇ ಇತ್ತು ಇಷ್ಟು ದಿನ, ಆದರೆ ತನ್ನ ಸ್ಥಾನ ಉಳಿಸಿಕೊಳ್ಳಲು ಮಾಡುತ್ತಿರುವ ಕಸರತ್ತು ಯಪ್ಪಾ ಅನ್ನುವಂತೆ ಇದೆ. ಈಗ ಆ ಧಾರವಾಹಿ ಕೊಲೆ, ಕಗ್ಗೊಲೆ, ರಕ್ತಪಾತಮಯ . ಅದರ ಬಗ್ಗೆ ಅರುಂಧತಿ ಅಭಿಮಾನಿ ವಲಯ ಬೇಸರ ಪಟ್ಟಿದ್ದು ನನ್ನ ಗಮನಕ್ಕೆ ಬಂದಿತ್ತು. 
ಅರುಂಧತಿ ಧಾರವಾಹಿ ತಪ್ಪದೆ ವೀಕ್ಷಿಸುವ ಗ್ರೂಪಿನಲ್ಲಿ ಒಬ್ಬರಾದ ಪವನ್ ಮನೆಯವರು-ಮಿತ್ರ-ಊರಿನ ವೀಕ್ಷಕರ ಸಮಷ್ಟಿ ಅಭಿ…