Posts

Showing posts from October 30, 2011

ವಾರ್ತೆಗೇ ಹೆಸರು

Image
ಇಂತಹ ವಾರ್ತೆಗಳು  ವಾರ್ತಾ ವಾಹಿನಿಗಳಲ್ಲಿ, ನ್ಯೂಸ್ ಪೇಪರ್ ಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಲೇ ಇರುತ್ತದೆ. ಅದನ್ನು ಆ ಕ್ಷಣ ಓದಿ, ವೀಕ್ಷಿಸಿ ಸುಮ್ಮನಾಗುವುದು ಸಾಮಾನ್ಯ. ಆದರೆ ಸಾಕಷ್ಟು ಸರ್ತಿ ಕೆಲವು ಸುದ್ದಿಗಳು ಹೆಚ್ಚು ಮನ ತಟ್ಟುತ್ತದೆ... ಇಂದು ಹಾಗೆ ಆಯ್ತು ಸಮಯ ವಾಹಿನಿಯಲ್ಲಿ ಮುಂಜಾನೆ ಹತ್ತುಗಂಟೆಯ  ವಾರ್ತೆಯಲ್ಲಿ ಮಹಾರಾಷ್ಟ್ರ-ಕರ್ನಾಟಕದ ಗಡಿ ಭಾಗದಲ್ಲಿರುವ ಕನ್ನಡಿಗರ ಪಾಡಿನ ಬಗ್ಗೆ ಒಂದು ಸುದ್ದಿ ಪ್ರಸಾರ ಮಾಡಿತು ವಾಹಿನಿ . ಸೋಲಾಪುರದ ದಕ್ಷಿಣ ಭಾಗ ಅಂದ್ರೆ ಸಾಂಗ್ಲಿ ಯ ಕೆಲವು ಹಳ್ಳಿಗಳಲ್ಲಿ ಮಾತಾಡುವುದು ಕನ್ನಡ ವ್ಯವಹಾರ, ಶಾಲೆ ಕಲಿಕೆ... ಎಲ್ಲವೂ ಕನ್ನಡಮಯ ಆದರೆ ಅದು ಮಹಾರಾಷ್ಟ್ರಕ್ಕೆ ಸೇರಿದ ಸ್ಥಳಗಳು.ಅದಕ್ಕಿಂತಲೂ ಹೆಚ್ಚಾಗಿ ಕರ್ನಾಟಕ- ಮಹಾರಾಷ್ಟ್ರ ಸರ್ಕಾರಗಳ ನಿರ್ಲಕ್ಷಕ್ಕೆ ಒಳಗಾದ ಸ್ಥಳಗಳು. ಬೆಳಗಾವಿ ನಮಗೆ ಬೇಕು, ಕಾಸರಗೋಡು  ನಮಗೆ ಬಿಟ್ಟು ಕೊಡಿ ಎಂದು ಹೊಡೆದಾಡುವವರ  ಚಿತ್ತ ಆ ಹಳ್ಳಿಗಳತ್ತ ಹೋಗಿ ಅಭಿವೃದ್ಧಿ ಕಾರ್ಯ ನಡೆಸಿ ಹಳ್ಳಿಗಳನ್ನು ಉಳಿಸಿದರೆ..! ಗಡಿಯಲ್ಲಿರುವ ಕನ್ನಡಿಗರ ಸ್ಥಿತಿ ಬದಲಾಗುವುದು ಎಂದೂ ???
  ಮತ್ತೊಂದು ಸಂಗತಿ ಸಮಯ ವಾಹಿನಿಯಲ್ಲಿ ವಾರ್ತೆಗಳಿಗೆ ಭಿನ್ನ ಹೆಸರುಗಳನ್ನೂ ಕೊಟ್ಟಿದೆ. ಫ್ರೆಶ್  @10 , ನ್ಯೂಸ್ ನೌವ್...ಹೀಗೆ ಹಲವಾರು... ಎಲ್ಲವೂ ತುಂಬಾ ಚಂದಿದೆ. ಅವುಗಳ ಲೋಗೋ ಸಹ :-)
ಚಂದನವಾಹಿನಿಯಲ್ಲಿ  ವೀಕ್ಷಕರ ಪ್ರೀತಿಯ ಕ್ವಿಜ್ ಮಾಸ್ಟರ್ ಡಾ. ನಾ .ಸೋಮೇಶ್ವ…

ಹಾಂಗ್ ಅಲ್ರಿ !

Image
ವಿಶೇಷವಾಗಿ ವಾಹಿನಿಗಳು ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ವೀಕ್ಷಕರ ಮನದಣಿಸಿತು. ಒಂದು ವಾಹಿನಿಯವರು ಬರೀ ಕನ್ನದದ್ದಲ್ಲೇ ಮಾತಾಡಿದರೆ, ಮತ್ತೊಬ್ಬರು ಕನ್ನಡದ ಸರಿಯಾದ ಪದಗಳ ಬಗ್ಗೆ ತಿಳಿಸಿ ಕೊಡುವ ಪ್ರಯತ್ನ ಮಾಡಿತು. ಸಾಕಷ್ಟು ಸರಳ ಪದಗಳ ಬಗ್ಗೆ  ನಮಗೆ ಸರಿಯಾಗಿ ತಿಳಿದಿರುವುದಿಲ್ಲ ಅಂತಹ ಸಮಯದಲ್ಲಿ ಈ ರೀತಿಯ ಪ್ರಯತ್ನ ಉತ್ತಮ .
ಜನಶ್ರೀ ವಾಹಿನಿಯು ಈ ರೀತಿಯ ಕೆಲಸಕ್ಕೆ ಮುಂದಾಗಿತ್ತು.ಕನ್ನಡದಲ್ಲೇ ಮಾತಾಡುವ, ವಾರ್ತೆ ಓದುವ, ಕಾರ್ಯಕ್ರಮ ನಿರೂಪಣೆ ಮಾಡುವ ಕೆಲಸದಲ್ಲಿ ಮುಂದೆ ಇದ್ದುದು ಸುವರ್ಣ ಸುದ್ದಿ ವಾಹಿನಿ. ಆದರೆ ... ಆದರೆ ಸಂಜೆ ಸಮಯದಾಗ ನಮ್ ರಂಗನಾಥ್ ಭಾರದ್ವಾಜ್ ರವರು ಹಳಿ ರೀತಿಯಾಗಾ  ಮಾತಾಡ್ಲಿಕ್ಕ ಸುರು ಹಚಗೊಂದ್ರು... ಹ್ಯಾಂಗಪಾ ಅಂದ್ರ ಅವರ ಪದ 'ಗೋಳು' ಕಾರ್ಯಕ್ರಮ ಸುರು ಮಾಡೋಕೆ ಮೊದಲ  ವಾರ್ತಾ ಪ್ರಮುಖಾಂಶ ಅಂತ ಹೇಳೋದು ಬಿಟ್ಟು ನ್ಯೂಸ್ ಹೆಡ ಲೈನ್ಸ್ ಅಂದ್ರು. ಸೊ ಅನ್ನೋ ಪದದ ಬಳಕಿ ಮಾಡ್ತಾನೆ ಇದ್ರು... ಅಯ್ಯೋ ಸಿವನೇ   ಹಿಂಗಾತಪ  :-)

ಎಷ್ಟು ಕನ್ನಡ, ಎಷ್ಟು ತಮಾಷಿ, ಎಷ್ಟು ಆಡಿಕೊಂಡಿದ್ದು ಕನ್ನಡ ಮಾತಾಡುವ ಮಂದಿಯನ್ನ ( ಥರ ಥರ ಖನ್ನಡ) ಆದ್ರ ಬುದ್ಧಿ ನೀವು ಸಮಸ್ತ ವೀಕ್ಷಕರಿಗೆ ಮಾಡಿದ ವಿಶ್ನಲ್ಲಿ ಅಂದ್ರ ಪದದಲ್ಲಿ ತಪ್ಪು ನಮ್ಮಂತಹ ಮಾಮೂಲಿ ವೀಕ್ಷಕರ ಕಣ್ಣಿಗೆ ರಾಚ್ತಾ ಇತ್ತು... ಅದು ಹ್ಯಾಂಗೆ ಅಂತೀರಾ .. ನೀವು ಶುಭಾಶಯ ಅನ್ನುವ ಪದವನ್ನು ಶುಭಾಷಯ ಅಂತ ಬರೆದಿದ್ರಿ .ಹಾಂಗ್ ಬರಿ ಬಾರದು …

ಇಷ್ಟ ಪಡೋದು

Image
ಸಮಸ್ತ ಸರ್ವರಿಗೂ ಕರ್ನಾಟಕ ರಾಜ್ಯೋತ್ಸವದ  ಹಾರ್ದಿಕ ಶುಭಕಾಮನೆಗಳು ....
ಕನ್ನಡ ವಾಹಿನಿಗಳು ಕನ್ನಡ ಕಾರ್ಯಕ್ರಮಗಳ ಜೊತೆ ಜೊತೆಗೆ ಬೇರೆ ಭಾಷೆಯನ್ನೂ ಬೆಳೆಸುವ ಸಹೃದಯತೆಯನ್ನು ಹೊಂದಿದ್ದಾರೆ.ಅದು ನಮ್ಮ ಕನ್ನಡ ಮಣ್ಣಿನ ವಿಶೇಷತೆ.
ಆದರೆ ಯಾರು ಯಾವ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ ಎನ್ನುವ ಬಗ್ಗೆ ಗಮನಿಸಿದಾಗ ನಾನು ಕಂಡಂತೆ ಅತ್ಯಂತ ಹೆಚ್ಚು ಮಂದಿ ವೀಕ್ಷಿಸುವುದು ಹಾಡುಗಳನ್ನು, ಬಿಟ್ರೆ ಕ್ರೈಂ, ಅದಾದ ಬಳಿಕ ಹೆಚ್ಚು ಇಷ್ಟ ಪಡೋದು ಸಿನಿಮಾ, ಅಡುಗೆ ಗೊತ್ತ !

ಕಳೆದ ಒಂದೆರಡು ತಿಂಗಳಿಂದ ಹಲ್ಲಿನ ಚಿಕಿತ್ಸೆ ಯನ್ನು ತೆಗೆದು ಕೊಳ್ಳುವ ಸಂಭ್ರಮ ನನ್ನದಾಗಿತ್ತು. ಪಿನ್ನಿನಂತಹ ಸೂಜಿ, ಗರಗಸದಂತಹ ಸೂಜಿ, ಸೂಜಿಯಂತಹ ಸೂಜಿ, ದಬ್ಬಣದಂತಹಸೂಜಿ .... ! ಅದೆಲ್ಲ ಸಹಿಸಿಕೊಂಡರೂ ಆ ವೈದ್ಯರ ಮಾತು ಮಾತು ಮಾತು ...! ಆತ ಮಾತಾಡಿದ್ದು ನಮ್ಮ ವಾಹಿನಿ ಗಳ ಬಗ್ಗೆ. ಜೊತೆಗೆ ಆಗಾಗ ಹಿಂದಿ ಕಾರ್ಯಕ್ರಮಗಳ ಬಗ್ಗೆ.
ಆ ಕ್ಲಿ ನಿಕ್ ನಲ್ಲಿ ಆತ ಅತಿ ಹೆಚ್ಚು ವೀಕ್ಷಿಸ್ತಾ ಇದ್ದುದು ಉದಯ  ಮ್ಯೂಸಿಕ್ .. ಆ ಮೂಲಕ ನಾನು ಮ್ಯೂಸಿಕ್ ಚಾನೆಲ್ಗೆ ಅಡಿಕ್ಟ್ ಆದೆ . ಆ ಚಾನೆಲ್ನ ಕಾರ್ಯಕ್ರಮಗಳು, ಅದರಲ್ಲಿ ಭಾಗವಹಿಸುವ ನಿರೂಪಕರು ಎಲ್ಲವೂ ಲೈವ್ಲಿ. ಕಾರ್ಯಕ್ರಮದ  ಹೆಸರುಗಳು ಚೆನ್ನಾಗಿದೆ.
ಒಂದು ಸಂಗೀತ ವಾಹಿನಿಯ ಗೆಲುವಿಗೆ ಅಗತ್ಯ ಇರುವಂತ ಎಲ್ಲಾ ಬಗೆಯ ಆಹಾರವನ್ನು ಚಾನೆಲ್ ಒದಗಿಸಿದೆ. ಬೋರ್ ಹೊಡಿಸದ ಚಾನೆಲ್ಗಳ ಪಟ್ಟಿಗೆ ಉದಯ ಮ್ಯೂಸಿಕ್ ಸಹ ಸೇರ್ಪಡೆ ಆಗ…

ಮಾತು ಕಡಿಮೆ !

Image
ದೇವರಿಲ್ಲ ಅಂತ ಎಷ್ಟೇ ಹೇಳಿದ್ರೂ ಹಬ್ಬಗಳ - ವ್ರತಗಳ ಆಚರಣೆಯು ವಿಶ್ವದಲ್ಲಿ ಕಡಿಮೆ ಆಗಿಲ್ಲ . ಅದೇ ರೀತಿಯಲ್ಲಿ ಮಠ ಮಾನ್ಯಗಳ ಬಗ್ಗೆ ಕೆಲವು ವರ್ಗ ಎಷ್ಟೇ ಕಿಡಿ ಕಾರಿದರೂ ಅವುಗಳ ಬಗ್ಗೆ ಸಾಮಾನ್ಯರಿಗೆ ಪ್ರೀತಿ ಕಡಿಮೆ ಆಗಿಲ್ಲ, ಮುಂದೆ ಆಗುವುದೂ ಇಲ್ಲ. ಆದರೆ  ವಿಸ್ಮಯ ಬರಿಸುವ ಸಂಗತಿಗಳು ಅಂದ್ರೆ ಇಷ್ಟೆಲ್ಲಾ ಮತಗಳು, ಅವರ ಆಚರಣೆಗಳು, ಅವರ ಸಮಾಜಮುಖಿ ಕಾರ್ಯಗಳು...!

ಜನಶ್ರೀ ವಾಹಿನಿಯಲ್ಲಿ ಮಠದ ಅಂಗಳ ಎನ್ನುವ ಒಂದು ಕಾರ್ಯಕ್ರಮ ಪ್ರಸಾರ ಆಗುತ್ತದೆ. ಸಾಮಾನ್ಯವಾಗಿ ಜನಶ್ರಿ ವಾಹಿ ಹಲವಾರು ಕಾರಣಗಳಿಂದ ನನಗೆ ಇಷ್ಟ ಆಗುತ್ತದೆ, ಆ ಚಾನೆಲ್ ಸದಾ ಅಬ್ಬರ ನ್ಯೂಸ್ಗಳನ್ನು ವೀಕ್ಷಕರ ಮೇಲೆ ಚಲ್ಲಲ್ಲ. ಮುಖ್ಯವಾಗಿ ಸಾಕ್ಷ್ಯ ಚಿತ್ರ ತೋರಿಸುವ ಚಾನೆಲ್ ಇದು ಎನ್ನುವ ನಗು ಆಗ ತರಿಸಿದರು ಸಾಕಷ್ಟು  ಕಂಫರ್ಟಬಲ್ ಕಾರ್ಯಕ್ರಮ ನೀಡುತ್ತದೆ. ಹಲೋ ಮ್ಯಾಡಂ, ಅಚ್ಚರಿ, ಮಾಯಾ ಬಜಾರ್ ಹೀಗೆ...!

ಇತ್ತೀಚೆಗೆ ಪರಿಚಿತ ಹಿರಿಯ ಹೆಣ್ಣು ಮಗಳೊಬ್ಬರು ಈ ವಾಹಿನಿಯನ್ನು ವೀಕ್ಷಿಸುತ್ತಾ   ಟೆನ್ಶನ್ ಫ್ರೀ ಆಗಿ ಈ ವಾಹಿನಿ ವೀಕ್ಷಿಸ ಬಹುದು , ಅದೇ ಗಡ್ಡ ಪಾರ್ಟಿ  [ ಅನಂತ್ ಚಿನಿವಾರ್  ಬಗ್ಗೆ ಹಾಗೆ ಹೇಳಿದ್ದು :-) ] ಚೆನ್ನಾಗಿ ಮಾತಾಡ್ತಾರೆ, ಎಷ್ಟು ಬುದ್ಧಿವಂತರು ಅಲ್ವ ಅಂದ್ರು. ಆದ್ರೆ ಇತ್ತೀಚೆಗೆ ಯಾಕೋ ಮಾತು ಕಡಿಮೆ ಮಾಡಿದ್ದಾರೆ ಅಂದ್ರು ನನ್ನ ಅಮ್ಮ !
ನನ್ನ ಕೀಟಲೆ ಬುದ್ಧಿ ಜಾಗೃತಗೊಂಡು ಹೌದು ಸ್ವಲ್ಪ ದಿನ ಸ್ವತಂತ್ರವಾಗಿ ಕಾರ್ಯಕ್ರಮ ನಡೆಸಿ…