Posts

Showing posts from November 6, 2011

ಟಾಕ್ ಷೋ!

Image
ಕಲರ್ ವಾಹಿನಿಯಲ್ಲಿ ಬಿಗ್ ಬಾಸ್ ರಿಯಾಲಿಟಿ ಷೋ ಅದರ ಪಾಡಿಗೆ ಅದು ನಡಿತಾ ಇದೆ. ಅದನ್ನು ಜಗಳಗಳ ಮೂಲಕ ಹೆಚ್ಚು  ಜನಪ್ರಿಯ ಮಾಡ್ತಾ ಇದ್ದಾರೆ ಸ್ಪರ್ಧಿಗಳು. ಅಗ್ನಿವೇಶ್ ಎಂಟ್ರಿ ಆಗಿದೆ. ಕಾವಿ ಹಾಗೂ ಕಾಮಿನಿಯರು  ಅಲ್ಲಲ್ಲಿ ಕೆಚ್ಚದೆಯ ಯುವಕರು ಈಗ ಆ ಷೋ ಪ್ಲಸ್ ಪಾಯಿಂಟ್ .
ಸ್ವಾಮಿ ಅಗ್ನಿವೇಶ್ ಬರ್ತಾರೆ ಅಂಬೋ ಸುದ್ದಿ ಸುವರ್ಣ ನ್ಯೂಸ್ , ಟೀವಿ ನೈನ್ ಬಾಳ ಜೋರಾಗಿ ಹೇಳಿತು. ಎರಡೂ ಚಾನೆಲ್ ಗಳು ಸಹ ಈ ವಿಷಯದ ಬಗ್ಗೆ ರವಷ್ಟು ಜಾಸ್ತೀನೆ ಹೇಳಿದವು. ಬಿಡ್ರಿ  ಆ ಕಥೆ.

ಆದರೆ ಫೋಟೋಗಳನ್ನು ತೋರಿಸಿ ಇವರು ಇಂತಿತಿಂತಹವರು ಅಂಬೋ ಮಾತು ಎಲ್ಲಾ ವೀಕ್ಷಕರಿಗೂ ಹೇಳಿದ್ರೂ ಈ ವಿಷಯದಲ್ಲಿ  ಟೀವಿ ನೈನ್ ಸ್ವಲ್ಪ ಜಾಸ್ತೀನೆ ಹೇಳ್ತು ಬಿಡ್ರಿ. ಯಾಕೆ ಹಳೆ ಕ್ಯಾಸೆಟ್ ಪ್ರಸಾರ ಮಾಡಿದ್ರು ಅದೂ ಹೋಗ್ಲಿ ಅಂದ್ರೆ ಆ  ಶೋನಲ್ಲಿ ಭಾಗವಹಿಸಿರುವ ಸ್ಪರ್ಧಿಗಳ ಫೋಟೋ  ಪ್ರಸಾರಿಸುವ ಸಿದ್ಧಾರ್ಥ್ ಭಾರದ್ವಾಜ್ ಹೆಸರು ಹೇಳಿ ಎಂ ಟೀವಿ  ನಿರೂಪಕ  ನಿಕಿಲ್ ಚಿನ್ನಪ್ಪ ಅವರ ಫೋಟೋ ತೋರಿಸಿದರು. ಅಯ್ಯೋ ನಮಗೆ ಫೋಟೋ ಜನರಲ್ ನಾಲೆಜ್ ಕಡಿಮೆ ಇದೆ ನಿಜ ಆದ್ರೆ ಇಷ್ಟಲ್ಲ ಬಿಡ್ರಿ :-)

ಟೀವಿ ನೈನ್ ವಾಹಿನಿಯಲ್ಲಿ  ಮೈಕೆಲ್ ಜಾಕ್ಸನ್ ಸಾವಿನ ಬಗ್ಗೆ ಹಾಗೂ ಅದಕ್ಕೆ ಪೂರಕವಾಗಿ ಬಂದ ಬೆಚ್ಚಿ  ಬೀಳಿಸುವ ವಿಷಯಗಳ ಬಗ್ಗೆ  ತಿಳಿಸಿದ ಕಾರ್ಯಕ್ರಮ ಆ ವಾಹಿನಿಯ ಕ್ಯೂಟ್ ಗಲ್ ಶೀತಲ್ ನಿರೂಪಿಸಿದರು. ಜಾಕೋ ನನ್ನ ಪ್ರಿಯವಾದ ಗಾಯಕ- ಸಾಧಕ. ಆತನ ಮರಣವು ಎಂತಹ ರೀಯಲ್ಲಿ ಆಯ್ತು…

ಆಹಾ ಅದ್ಭುತ!

Image
ಕನ್ನಡ ಕನ್ನಡ ಹಾ ಸವಿಗನ್ನಡ... ! ಮಾತೃಭಾಷೆ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ , ಪ್ರೀತಿ ಇದ್ದೆ ಇರುತ್ತದೆ. ಇರಲೇ ಬೇಕು. ತೀರ್ ವಾಟಾಳ್ ನಾಗರಾಜ್ ರೀತಿಯ ಅಭಿಮಾನೋತ್ಸವ ಯಾರು ಆಚರಣೆ ಮಾಡ ಬೇಕಿಲ್ಲ ಬಿಡಿ. ಇತ್ತೀಚಿಗೆ ವಾಟಾಲ್ಜಿ ಅವರು ಕನ್ನಡಕ್ಕಾಗಿ ಗಾಡಿ ಹತ್ತಿ ಅದನ್ನು ಓಡಿಸಿದ ಬಗ್ಗೆ ನಮ್ಮ ವಾಹಿನಿಗಳು ಪ್ರಸಾರ ಮಾಡಿ ತಮ್ಮ ವಾಟಾಳ್ ಅಭಿಮಾನ ವ್ಯಕ್ತ ಪಡಿಸಿದರು. ಫೈನ್.  ನಮ್ಮ ರಾಜ್ಯದಲ್ಲೇ ಇದ್ದು ನಾವು ಕನ್ನಡದ ಬಗ್ಗೆ ತೋರುವ ಈ ಪರಿಯನ್ನು  ಎಷ್ಟು ಹೊಗಳಿದರೂ ಸಾಲದು.  ಬಿಡಿ ಆ ವಿಷ್ಯ ಆ ಲೆಕ್ಕದಲ್ಲಿ ಅತ್ಯಂತ ಇಷ್ಟ ಆಗುವ ಕನ್ನಡ ಹೋರಾಟಗಾರ .( ಅವರನ್ನು ಹೋರಾಟಗಾರ ಎಂದು ತುಂಬಾ ವಿಶ್ವಾಸ ಹಾಗೂ ಪ್ರೀತಿಯಿಂದ ಹೇಳಲು ಇಷ್ಟ ಪಡ್ತೀನಿ) ನಮ್ಮ ಟಿ.ಎ . ನಾರಾಯಣ ಗೌಡ್ರು. ಮಾತಿರಲಿ ಕೃತಿ ಇರಲಿ ಎಲ್ಲವೂ ಖಡಕ್ . ಇಷ್ಟ ಆಗುತ್ತದೆ. ಒಮ್ಮೆ ಹೀಗೆ ಕಾರ್ಯಕ್ರಮ ಒಂದರಲ್ಲಿ ಭೇಟಿ ಮಾಡಿದ್ದೆ. ಸ್ವಲ್ಪ ಕಾಲ ಮಾತನಾಡುವ ಸದವಕಾಶ ಸಿಕ್ಕಿತ್ತು. ಆ ಕಾರ್ಯಕ್ರಮ ಹೆಣ್ಣುಮಕ್ಕಳಿಗೆ ಸಂಬಂಧ ಪಟ್ಟಿದ್ದು. ಅಂದು ಗೌಡರಿಗೆ ತುಂಬಾ ಕೆಲಸ ಇದ್ರೂ ಹೆಣ್ಣುಮಕ್ಕಳಿಗೆ ಬೇಜಾರಾಗ ಬಾರದು ಅಂತ ಜಾಸ್ತಿ ಹೊತ್ತು ಕಾರ್ಯಕ್ರಮದಲ್ಲಿ ಇದ್ರೂ. ಅಂದು ಅವರು ಈ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಅಪಮಾನ ಆದ್ರೆ ನಾನು ಒಂದು ಕ್ಷಣ ಇರಲ್ಲ ಎಂದು ಹೆಣ್ಣುಮಕ್ಕಳ ಮುಂದೆ ಕಟ್ಟುನಿಟ್ಟಾಗಿ ಹೇಳಿದ್ರು. ಅಷ್ಟು ಖಡಕ್... ಹೆಣ್ಣುಮಕ್ಕಳು ಯಾವತ್ತಾದರೂ ಹಾಗೆಲ್ಲ ಮಾಡ್ತಾರ ನೆವರ್ ಅಂ…

ಕನ್ನಡ!

Image
ವಾಹಿನಿಗಳು ಅನೇಕ ಸೀರಿಯಲ್ ಗಳು, ಅನೇಕ ಕಾರ್ಯಕ್ರಮಗಳನ್ನು ಸಾವಿರದ ಗಡಿ ಅದಕ್ಕೂ ಮೀರಿ ನಡೆಯುವಂತೆ ಮಾಡುವಲ್ಲಿ ಸಫಲ ಆಗುತ್ತದೆ. ಆದರೆ ಧಾರಾವಾಹಿಗಳ ವಿಷಯಕ್ಕೆ ಬಂದರೆ ನೂರರ ಗಡಿಗೆ ವೀಕ್ಷಕರಿಗೆ ಸಾಕೆನ್ನಿಸಿ ಬಿಡುತ್ತದೆ ಆದರೂ  ವಾಹಿನಿಯವರು ಬಿಡದೆ ಅದನ್ನು ಸಾವಿರವಾಗಿಸಿ  ವೀಕ್ಷಕರ ಸ್ಥಿತಿಯನ್ನು  ಯಪ್ಪಾ ಅನ್ನುವಂತೆ ಮಾಡ್ತಾರೆ, ಅವರ ಆ ತಾಕತ್ತಿನ ಬಗ್ಗೆ ನಮೋ ನಮಃ

ಆದರೆ ಕೆಲವು ಕಾರ್ಯಕ್ರಮಗಳನ್ನು ಸೀಸನ್ ಗಳಂತೆ  ನೀಡುತ್ತಾರೆ ವೀಕ್ಷಕರಿಗೆ  ವಾಹಿನಿಯವರು .ಅದು  ಬೇಸರ ಎಂದಿಗೂ ಉಂಟು  ಮಾಡದು.  ಕೆಲವು ಪ್ರತಿ ದಿನ ಪ್ರಸಾರ ಆಗುವ ಕಾರ್ಯಕ್ರಮಗಳಿವೆ ಅವುಗಳು ಸಹ ಬೋರ್ ಉಂಟು ಮಾಡದು. ಚಂದನ  ವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮ ಒಂದಾಗಿದೆ. ಡಾ.ಸೋಮೇಶ್ವರ್ ಅವರ ಚಾರ್ಮ್ ಎಂದಿಗೂ ಕುಸಿದಿಲ್ಲ. ಉತ್ತಮ ರೀತಿಯ ಕಾರ್ಯಕ್ರಮ ನೀಡಿದ್ದಾರೆ ಚಂದನ ಟೀಮ್ ನವರು . ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ಥಟ್ ಅಂತ ಹೇಳಿ ಕಾರ್ಯಕ್ರಮ ಪ್ರಸಾರ ಆಗ್ತಾ ಇದೆ. ಅನೇಕ ಸಾಧಕರನ್ನು ಕಾಣುವ ಅವರ ವಿದ್ವತ್ ವೀಕ್ಷಿಸುವ ಸಂತೋಷ ವೀಕ್ಷಕರಿಗೆ. ಪ್ರತಿಯೊಂದು ಷೋ ಸಹ ತುಂಬಾ ಚೆನ್ನಾಗಿ ಇದೆ.

ಅದೇ ರೀತಿಯ ಕಾರ್ಯಕ್ರಮಗಳು ಅಂದ್ರೆ ಬೇರೆ ಬೇರೆ ವಿಷಯಗಳ ಬಗ್ಗೆ ಅನೇಕ ವಾಹಿನಿಗಳು ನೀಡಿವೆ. ಬೇರೆ ಬೇರೆ ಭಾಷೆಗಳಲ್ಲಿ ಪ್ರಸಾರ ಆಗುವ ಅನೇಕ ಕಾರ್ಯಕ್ರಮಗಳು ಸಾವಿರದ ಕಂತುಗಳನ್ನು ಕಂಡಿವೆ. ದರಲ್ಲೂ ಮಹಿಳೆಯರಿಗೆ ಸಂಬಂಧ ಪಟ್ಟ ಕಾರ್ಯಕ್ರಮಗಳು ಸ್ವಲ್…

ನಿಗೂಢ !

Image
ವಾಹಿನಿಗಳು ಅತ್ಯತ್ತಮ ರೀತಿಯ ಕಾರ್ಯಕ್ರಮಗಳು ನೀಡಿದರು ಅದಕೆ ಬೇಕಾದ ಚಮಕ್ ಬೆರಸದೆ ಇದ್ರೆ ಅದು ಹೆಚ್ಚು ವೀಕ್ಷಕರನ್ನು ಆಕರ್ಷಿಸದು. ಅದು ಎಲ್ಲಾ ವಿಷಯಕ್ಕೋ ಅನ್ವಯವಾಗುತ್ತದೆ ಎನ್ನುವುದು ಒಪ್ಪುವ ಮಾತು. ಅಯ್ಯೋ ಇದೊಂದು ವಿಷಯವೇ ಎಂದು ತಿಳಿಯುವ ಅನೇಕ ವೀಕ್ಷಕರಿದ್ದರು ಅತ್ಯಂತ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದು ಅಡುಗೆ ಕಾರ್ಯಕ್ರಮ. ಸಾಮಾನ್ಯವಾಗಿ ಎಲ್ಲಾ ಭಾಷೆಯ ವಾಹಿನಿಗಳು ಈ ವಿಷಯಕ್ಕೆ ಆದ್ಯತೆ ನೀಡಿದ್ದಾರೆ. ಅದು ಮಹಿಳಾ ವೀಕ್ಷಕರನ್ನು ಮಾತ್ರವಲ್ಲದೆ ಪುರುಷ ವೀಕ್ಷಕರನ್ನು ಆಕರ್ಷಿಸುವ  ಅತ್ಯುತ್ತಮ ತಂತ್ರ.

ಸಾಮಾನ್ಯವಾಗಿ ಜೀಕನ್ನಡ  , ಈಟೀವಿ, ಸುವರ್ಣ, ಉದಯ, ಟೀವಿ ನೈನ್, ಕಸ್ತೂರಿವಾಹಿನಿ ಯಾವುದೇ ಆಗಿರಲಿ ಈ ಕಾರ್ಯಕ್ರಮ ಪ್ರಸಾರಿಸುವಾಗ ಸುಂದರ ಅದಕ್ಕಿಂತಲೂ ಫಳಫಳಿಸುವ ನಿರೂಪಕರನ್ನು ಆಯ್ಕೆ ಮಾಡಿ  ವೀಕ್ಷಕರ ಮುಂದೆ ಬಿಡ್ತಾರೆ. ಸಾಕಷ್ಟು ಅಡುಗೆಗಳು ಮಾಡುವುದಕ್ಕಿಂತ ವೀಕ್ಷಕರು ನೋಡಿ ಸಂತೋಷ ಪಡ ಬೇಕು ಆ ರೀತಿ ಇರುತ್ತದೆ ರೆಸಿಪಿಗಳು. ಹಾಗೆಂದು ಕಲಿಕೆ   ಸಾಧ್ಯವಿಲ್ಲ ಎಂದು ಇದರ ಅರ್ಥವಲ್ಲ. ಮತ್ತೊಂದು ಸಂಗತಿ ಅಂದ್ರೆ ಈ ಅಡುಗೆ ಕಾರ್ಯಕ್ರಮಗಳ ವಿಷಯದಲ್ಲಿ ಕಲಾವಿದ ಚಂದ್ರು ಅವರು ಸುವರ್ಣದಲ್ಲಿ ನಡೆಸಿ ಕೊಡುವ ನಿರೂಪಣೆ ಹಾಗೂ ಕುಕ್ಕಿಂಗ್ ವೆರೈಟಿಯಾಗಿ  ಇರುತ್ತದೆ  . ಜೀ ಸನ ಸಹ ಓಕೆ. ಯಾಕಾಗಿ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಮಾಡಿದ ತಿನಿಸು ಇನ್ನು ತುಟಿಯ ಬಳಿ ತಂದಿರುತ್ತಾರೆ ಅಷ್ಟರಲ್ಲಿ ವಾವ್ ಚೆನ್ನಾಗಿ…