Posts

Showing posts from November 13, 2011

ಅವ್ ನೋ

Image
ಎಲ್ಲಾ ಕನ್ನಡ ವಾಹಿನಿಗಳು ಹಾಸ್ಯ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಟ್ಟಿದೆ. ಅದು ಅತ್ಯಂತ ಖುಷಿಯ ವಿಷಯ. ಆದರೆ ಕೆಲವುವಾಹಿನಿಗಳ ಹಾಸ್ಯಹೆಚ್ಚು ಕಷ್ಟ ಅನ್ನಿಸುವಂತೆ ಇರುತ್ತದೆ. ವೀಕ್ಷಕ ಎಂಜಾಯ್ ಮಾಡುವುದಕ್ಕಿಂತ ಬೇಸರ ಪಟ್ಟು ವೀಕ್ಷಿಸ ಬೇಕು.



ಜೀಕನ್ನಡ ವಾಹಿನಿಯ ವಿಷಯಕ್ಕೆ ಬರುವುದಾದರೆ ಪಾಂಡುರಂಗ ವಿಠಲ ಮತ್ತು ಪಾರ್ವತಿ ಪರಮೇಶ್ವರ ..ಈ ಎರಡೂ ಹಾಸ್ಯಧಾರವಾಹಿಗಳು ಭರಪೂರ ಖುಷಿ ನೀಡುವಂತಹದ್ದು. ಅದರಲ್ಲೂ ಪಾಂಡುರಂಗ ವಿಠಲ ಧಾರಾವಾಹಿಯ ಪದ್ದು ,ಚಂಪಾಕಲಿ ಪಾಂಡು ರಂಗ, ವಿಠಲ,ಲಂಗಮ್ಮ :-) ಇದೇನೂ ನಾಟಕಾನೋ ಇಲ್ಲನಿಜವಾಗ್ಲು ಯಾವುದೋ ಒಂದುಫ್ಯಾಮಿಲಿಯ ರಿಯಲ್ ಕಥೆಯನ್ನು ನಮಗೆ ಪ್ರಸಾರಿಸ್ತಾ ಇದ್ದರೋ ಅನ್ನುವಭಾವ ಉಂಟಾಗುವಂತೆ ಇರುತ್ತೆ ಪಂಚಿಂಗ್ ಮಾತುಗಳು. ಲೇಯ್ ಪದ್ದಪ್ಪ ನಾನು ಕಣೋ ಗಂಡುಗಲಿ ವಂಶದ ಕಟ್ಟ ಕಡೆಯ ತುಂಡು ಅದೆತ್ತಿದರೆ ಅದು ಇದೆತ್ತಿದರೆ ಇದು... ಇದೆ ಡೈಲಾಗ್ ಪ್ರತಿದಿನ ಇರ ಬೇಕು ಇಲ್ಲದೆ ಹೋದ್ರೆ ಆ ಧಾರವಾಹಿ ಖಾಲಿ ಖಾಲಿ. ಅಂತಹುದೇ ಕೆಲವು ಡೈಲಾಗ್ ಗಳು ಕಾಮನ್ನಾಗೆ ಬೇರೆ ಪಾತ್ರಗಳಿಗೂ ಫಿಕ್ಸ್ ಆಗಿದೆ. ಅವುಗಳು ಸಹ ಅತ್ಯಂತ ಖುಷಿ ನೀಡುತ್ತದೆ.



ಹಾಸ್ಯ -ವಿಡಂಬನೆಯ ಭರಪೂರ ಖುಷಿ ಹಂಚುವ ಕಾರ್ಯಕ್ರಮ ನೀವು ಹೇಳಿದ್ದು ನಾವು ಕೇಳಿದ್ದು. ಟೀವಿ ನೈನ್ ವಾಹಿನಿಯಲ್ಲಿ ಪ್ರಸಾರ ಆಗುವಕೆಲವು ನಿಮಿಷಗಳ ಈ ಕಾರ್ಯಕ್ರಮ ವಾಸ್ತವ ಸಂಗತಿಯನ್ನು  ತಿಳಿಸುವ ಪ್ರಯತ್ನ ಮಾಡುತ್ತಿದೆ.  ಸಿವನೇ ಸಂಬುಲಿಂಗ ಅನ್ನುವ ಹಿರೀಕ, ಆತನ ಜೊತೆಗೊಬ್ಬ ಮ…

ಕಂಠ !

Image
ಜನಶ್ರೀ ವಾಹಿನಿಯಲ್ಲಿ ಇಂದು ಮೋಸ ಹೋಗ ಬೇಡಿ ಎನ್ನುವ ಚರ್ಚೆಯ ಕಾರ್ಯಕ್ರಮ ರಾಘವೇಂದ್ರ ಕಾಂಚನ್ ನೇತೃತ್ವದಲ್ಲಿ ನಡೆಯಿತು. ಕಾನೂನು ತಜ್ಞ ಶಾಮ್ ಸುಂದರ್ ಅವರು ಈ ಬಗ್ಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿಸಿಕೊಟ್ರು .ಅಂದ್ರೆ ವಸ್ತುಗಳನ್ನು ಖರೀದಿ ಮಾಡಿದ ಬಳಿಕ ಮೋಸ ಹೋದರೆ ಯಾವ ರೀತಿಯಲ್ಲಿ ಗ್ರಾಹಕರ ವೇದಿಕೆಯ ಸಹಾಯಪಡೆಯ ಬಹುದು, ತನಗಾದ ಅನ್ಯಾಯಕ್ಕೆ ಯಾವ ರೀತಿ ಪರಿಹಾರ ಕಾಣ ಬಹುದು, ಹೀಗೆ ಹತ್ತು-ಹಲವಾರು ಅವರು ವಿಷಯವನ್ನು ಅತ್ಯಂತ ಸರಳ ರೀತಿಯಲ್ಲಿ ಹೇಳಿದರು.ವೀಕ್ಷರಿಗೆ ಸುಲಭವಾಗಿ ಅರ್ಥ ಆಗುವ ರೀತಿಯಲ್ಲಿ ತಿಳಿಸಿದರು. ಮುಖ್ಯವಾಗಿ ಈ ಮೊಬೈಲ್ ಕಂಪನಿಗಳವರು ಮಾಡುವ ಮೋಸ, ಅದರಿಂದಪರಿಹಾರ ಪಡೆಯುವ ಬಗ್ಗೆ ಹೀಗೆ ಪ್ರತಿಯೊಂದು ಐ ಲೈಕ್ ಇಟ್. ಆದರೆ ಗ್ರಾಹಕರ ವೇದಿಕೆ-ಕೋರ್ಟ್ ಬಗ್ಗೆ ಎಲ್ಲಾ ಜಿಲ್ಲೆಗಳ ಅಡ್ರೆಸ್ ಇಲ್ಲ ಅಂದ್ರೂ ಕನಿಷ್ಠ ಬೆಂಗಳೂರಿನ ವಿಳಾಸ-ಫೋನ್ ಪರದೆ ಮೇಲೆ ಡಿಸ್ ಪ್ಲೇ ಮಾಡಿದ್ರೆ ಚಂದಿತ್ತು. ಇದು ನನ್ನ ಅಭಿಪ್ರಾಯ




.

ಜನಶ್ರೀ ವಾಹಿನಿಯಲ್ಲಿ ಯುಕೆಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳದ ತುಣುಕುಗಳನ್ನು ಪ್ರಸಾರ ಮಾಡಿತು ಶನಿವಾರ ಹಾಗೂ ಭಾನುವಾರ. ಅತ್ಯಂತ ಸುಂದರ ಕಾರ್ಯಕ್ರಮ. ಗಾಯಕ ಬದರಿ ಅವರ ಧ್ವನಿಯಲ್ಲಿ ಜೇನಿನ ಹೊಳೆಯೋ ಹಾಡು ಕೇಳಿದ ಬಳಿಕ ಮತ್ತೆ ಮತ್ತೆ ಮತ್ತೆ ಗುನುಗುವಂತೆ ಮಾಡಿತು. ಅಷ್ಟೆ ಅಲ್ಲದೆ ಬದರಿ ಹಾಗೂ ಸುಮಲತಾ ಅವರ ಜೋಡಿ ಗಾಯನ ಸಹ ಖುಷಿ ಕೊಡ್ತು. ಆದರೆ... ಆದರೆ..ಆದರೆ ....! ಈ ಕಾರ್ಯಕ್ರಮದಲ್ಲಿ ಸ್ಪೆಷ…