Posts

Showing posts from November 27, 2011

ಡ್ಯಾಶಿಂಗ್ ಜೋಡಿ!

Image
ಅತ್ಯಂತ ಒಳ್ಳೆಯಚರ್ಚೆ.. ಚೀನಾಗೆ ಹಚ್ಚುವ ಚರ್ಚೆಯನ್ನು ಸಮಯ ವಾಹಿನಿ ನಿನ್ನೆ ಸಂಜೆ ಹಮ್ಮಿ ಕೊಂಡಿತ್ತು.ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರದಲ್ಲಿ ಅನೇಕ ಕಾಲದಿಂದಲೂ ಆಚರಣೆಯಲ್ಲಿ ಇರುವ ಮಡೆ ಸ್ನಾನದ ಬಗ್ಗೆ ಸಮಯೋಚಿತ ಚರ್ಚೆಯ ಹೊಣೆಯನ್ನು ವಾಹಿನಿಯ ಚೀಫ್ ಜಿ.ಎನ್. ಮೋಹನ್ ಅವರು ಹೊತ್ತಿದ್ದರು. ಕಾರ್ಯಕ್ರಮದಲ್ಲಿ , ಪ್ರೊ.ರಾಮಚಂದ್ರನ್,ಪ್ರೊ.ರಾಧ ಕೃಷ್ಣ,ಲೇಖಕಿ ನಾಗವೇಣಿ  ಭಾಗ ವಹಿಸಿದ್ದರು. ಅನೂಚಾನವಾಗಿ ನಡೆದುಬರುತ್ತಿರುವ ಮಡೆ ಸ್ನಾನ a ನ್ದ್ರೆ ಭಕ್ತರು ಉಂಡೆದ್ದ ಎಂಜಲು ಎಳೆಯ ಮೇಲೆ ಉರುಳಿ ತಮ್ಮ ಸೇವೆಯನ್ನು ಸಲ್ಲಿಸುವ ಪರಿ. ಆಸಕ್ತ ಭಕ್ತ ವೃಂದ  ಇದರಲ್ಲಿ ಪಾಲ್ಗೊಳ್ಳುವ ಪದ್ಧತಿ ಹಿಂದಿನಿಂದಲೂ ಇದೆ.


ಖಂಡಿತ ಒಬ್ಬರು ಉಂಡು ಎದ್ದ ಎಲೆಯ ಮೇಲೆ ಉರುಳುವುದು ಯಾವುದೇ ಕಾರಣಕ್ಕೂ ಒಳ್ಳೆಯ ಸಂಗತಿ ಅಲ್ಲವೇ ಅಲ್ಲ.ಆದರೆ ನಮ್ಮ ಭಾರತ ದೇಶ ಮಾತ್ರವಲ್ಲ ವಿಶ್ವದಲ್ಲಿ ಎಲ್ಲೇ ಹೋದರೂ ಅದರದೇ ಆದ ವಿಶಿಷ್ಟ ಹಾಗೂ ವಿಚಿತ್ರ ಆಚರಣೆಗಳು ಕಾಣಸಿಗುತ್ತದೆ.ಯಾವುದೇ ಆಚರಣೆಗಳು ವಯುಕ್ತಿಕ ಆಸಕ್ತಿಯ ಮೇಲೆ ಬೆಳೆದಿರುತ್ತದೆಯೇ ವಿನಃ ಯಾವುದೇ ಜಾತಿ -ಧರ್ಮದ ಬಲವಂತದ ಹೇರುವಿಕೆಯ ಕಾರಣದಿಂದ ಅಲ್ಲವೇ ಅಲ್ಲ.

ಕುಕ್ಕೆಯಂತಹ ದಂಡಕಾರುಣ್ಯದಲ್ಲಿ ಗಿಡ-ಮರಗಳ, ಪ್ರಕೃತಿ ಪ್ರಾಣಿಗಳ ಅಸ್ತಿತ್ವ ಹೊಂದಿದೆ. ಅಲ್ಲಿನ ಸ್ಥಳೀಯರು ಕಾಡಿನ ಸಂಸ್ಕೃತಿಗೆ ಜೋತು ಬಿದ್ದವರು. ಅದು ಅವರ ಅಸ್ತಿತ್ವ. ಸಾಮಾನ್ಯವಾಗಿ ವಿಶ್ವದ ಯಾವುದೇ ಮೂಲೆಗೆ ಹೋದರು ಆಚರಣೆಗಳು ಬುಡಕಟ್ಟು ಜನಾಂಗದ ಆ…