Posts

Showing posts from December 18, 2011

ಕಷ್ಟಕ್ಕೆ ಬಂತಾ ?

Image
ಯಾಕೋ ಇತ್ತೀಚೆಗೆ ವಾಹಿನಿಗಳು ಸ್ವಲ್ಪ ಹೆಚ್ಚೇ ಸಂಸಾರಗಳನ್ನು ಸರಿ ಮಾಡೋಕೆ ಹೊರಟಿದೆ. ಇತ್ತಿಚೆಗೆ  ಪ್ರಸಿದ್ಧ ಜ್ಯೋತಿಷಿ ಜಯ ಶ್ರೀನಿವಾಸ್ ಮತ್ತು ಅವ್ರ ಬಳಿ ಕೆಲಸ ಮಾಡ್ತಾ ಇದ್ದ ಹೆಣ್ಣುಮಗಳು-ಆಕೆಯ ಗಂಡನ ಕಥೆ, ಆಮೇಲೆ ಸಾಫ್ಟ್ವೇರ್ ಎಂಜಿನೀರ್ ಮತ್ತು ಡಾಕ್ಟರ್ ಪತ್ನಿ ಕಥೆ..!

ಟೀವಿ ನೈನ್ ವಾಹಿನಿಯಲ್ಲಿ ನಿರೂಪಕ ರೆಹಮಾನ್ಜ್ಯೋತಿಷಿ  ಜಯ ಶ್ರೀನಿವಾಸ್ ಅವರ ಮೇಲೆ ಬಂದ ಅಪವಾದ ಕುರಿತ ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿಕೊಂಡಿದ್ರು. ಕಾರ್ಯಕ್ರಮವನ್ನು -ಮುಖ್ಯವಾಗಿ  ಪ್ರಶ್ನೆಗಳನ್ನು ನೀಟಾಗಿ ಕೇಳಿದ್ರು. ಎಲ್ಲೂ ಅತಿರೇಕದ ಮಾತುಗಳು ಇರಲಿಲ್ಲ. ಯಾಕೆ ಅಂದ್ರೆ ಇಂತಹ ಕಾರ್ಯಕ್ರಮಗಳಲ್ಲಿ ಸಂದರ್ಶಕನ  ಅಭಿಪ್ರಾಯಗಳಿಗಿಂತ ಸಮಸ್ಯೆ ಇರುವವರ ಅಭಿಪ್ರಾಯಗಳು ಬಹಳ ಮುಖ್ಯ. ಎಲ್ಲರಿಗೂ ಗೊತ್ತು ಜ್ಯೋತಿಷ್ಯ- ಭವಿಷ್ಯ ಹೇಳುವವರು ಈಗ ಅತ್ಯುತ್ತಮ ರೀತಿಯಲ್ಲಿ ಲೈಫ್ ಲೀಡ್ ಮಾಡ್ತಾ ಇದ್ದಾರೆ. ಅದು ಅವರ ವಿದ್ಯೆ ನೀಡಿದ ಬಹುಮಾನ. ಜಯ ಶ್ರೀನಿವಾಸ್  ಮಾತ್ರವಲ್ಲ ಯಾವುದೇ ರೆಪ್ಯುಟೆಡ್  ಜ್ಯೋತಿಷ್ಯ ಹೇಳುವ ಗುರುಜಿಗಳ ಜನಪ್ರಿಯತೆ ನೀವು ಹೊರಗಿನ ಪ್ರಪಂಚದಲ್ಲಿ  ನೋಡಬೇಕು. ಜಯಶ್ರೀನಿವಾಸ್ ಅವರು ಇಷ್ಟ ಆಗುವಂತೆ ಕಾರ್ಯಕ್ರಮ ನಡೆಸಿಕೊಟ್ಟು, ಭವಿಷ್ಯಾಸಕ್ತರಿಗೆ ಆಸಕ್ತಿ ಹುಟ್ಟುವಂತೆ  ಸುವರ್ಣ ನ್ಯೂಸ್ ನಲ್ಲಿ ಕಾರ್ಯಕ್ರಮ ಮಾಡ್ತಾ ಇದ್ರು. ಮನುಷ್ಯ ದುಡ್ಡಿಗಾಗಿ ಏನ್ ಬೇಕಾದರೂ ಮಾಡೋಕೆ ಸಾಧ್ಯ . ನೋಡಿ ಕೆಲಸ ಕೊಟ್ಟ ತಪ್ಪಿಗೆ ವಶೀಕರಣ ಮಾಡಿದ ಅಪವ…