Posts

Showing posts from December 25, 2011

ಇನ್ವಾಲ್ವ್

Image
Then Jesus said to him, "Put your sword back into its place;  for those who live by the sword, die by the sword.

ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ -ಸಂತ ಎಲ್ಲರ ಮಾತು ಒಂದೇ ಅದು ಶಾಂತಿ ...! ಸರ್ವೇಜನೋ ಸುಖಿನೋ ಭವಂತು. ಆದರೆ ಆದದ್ರೆ ಮಾನವ ಮಾತ್ರರು ನಾವು ಮಾಡುವುದು ವಿರುದ್ಧದ ಕೆಲಸ.

ಇತ್ತೀಚೆಗೆ ಉದಯ ನ್ಯೂಸ್ ನಲ್ಲಿ ದೀಪಕ್ ತಿಮ್ಮಯ್ಯ ಅವರ ಷೋ ನಲ್ಲಿ ಡಾ. ರುದ್ರೇಶ್ ಅವರ ಜೊತೆ ಮಾತುಕತೆ ಇತ್ತು. ಅತ್ಯುತ್ತಮ ಹೋಮಿಯೋ ವೈದ್ಯರು ರುದ್ರೇಶ್ ಅವರು. ಅಷ್ಟೆ ಅಲ್ಲದೆ ಅವರು ವೈದ್ಯ ಸಾಹಿತಿ. ಅವರ ಬರಹಗಳು ಸಹ ವೆರಿ ಇಂಟರೆಸ್ಟಿಂಗ್. ಅವರ ಬಳಿ ಚಿಕಿತ್ಸೆ ಪಡೆದ ಅಸಂಖ್ಯಾತರಲ್ಲಿ ನನ್ನ ಸಂಖ್ಯೆಯು ಸೇರಿದೆ :-) . ಆದರೆ ಒಳ್ಳೆಯ ಫಲಿತಾಂಶ ದೊರೆತಿದೆ ಅಷ್ಟು ಹೇಳಬಲ್ಲೆ.

ಅವರು ಮಾತಾಡುವಾಗ ಸ್ವಲ್ಪ ಹೆಚ್ಚೇ ಜಿಗಿದಾಡುತ್ತಾರೆ ಅದೇ ಅವರ ವಿಶೇಷತೆ. ನೀವು ಸ್ವಲ್ಪ ಆತ್ಮೀಯರಾಗಿದ್ದರೆ  , ಇಲ್ಲವೇ ಹಳೆ ರೋಗಿ ಆಗಿದ್ರೂ ಸಹ ಇವರ ಈ ಜಿಗಿಯುವ- ಸ್ವಲ್ಪ ರೇಗುವ ವರ್ತನೆ ಕಂಡು ಬರುತ್ತದೆ. ಪುಣ್ಯಾತ್ಮ ಆ ಗುಣವನ್ನು ಇತ್ತೀಚೆಗೆ ಪ್ರಸಾರ ಆದ ಲೈವ್ ಷೋ ನಲ್ಲೂ ಪ್ರಕಟಪಡಿಸಿದರು . ದೀಪಕ್ ಸ್ವಲ್ಪ ಹೆಚ್ಚೇ ಮಾತಾಡುವ ನಿರೂಪಕರು!!  ಅವರನ್ನು ತಡೆದು ಡಾಕ್ಟರ್ ಸಾಹೇಬರು  ವೀಕ್ಷಕರ ಜೊತೆ ಮಾತಾಡಿದ್ರು ಅಂದ್ರೆ ಅವರ ಮಾತಿನ ಕೆಪ್ಯಾಸಿಟಿ ಬಗ್ಗೆ ಹೇಳೋಷ್ಟೇ ಇಲ್ಲ :-) ಏನೆ ಹೇಳೇ ವೈದ್ಯರಾಗಿ ಅವ…

ಯಪ್ಪಾ ಛೀ !

Image
ನನ್ನ ಉತ್ತರ ಭಾರತದ ಕಂಪ್ಯೂಟರ್ ಪರಿಣಿತ ಗೆಳೆಯರಿಗೆ ಇದನ್ನು ಹೇಳಿದೆ. ಅವರೆಲ್ಲಾ ತುಂಬಾ ಹೊಗಳಿದರು. ಆ ವಿಡಿಯೊವನ್ನು ನೋಡಿದ ನಂತರ ಒಬ್ಬ ಕನ್ನಡ ಬಾರದ ತಂತ್ರಜ್ನ ಹೇಳಿದ್ದು ಹೀಗೆ- "ನನಗೆ ಈ ಭಾಷೆ ಬಾರದಿರಬಹುದು, ಆದರೆ ಒಂದು ಪ್ರಾದೇಶಿಕ ಭಾಷೆಯಲ್ಲಿ ಇಂತಹ ಮಾಹಿತಿಯನ್ನು ಕೊಡುತ್ತಿರುವ ಅವರಿಗೆ ನನ್ನ ಕಡೆಯಿಂದ ಒಂದು ಅಬಿನಂದನೆ ತಿಳಿಸಿಬಿಡಿ. ನನ್ನಂತ ಭಾಷೆ ಬಾರದವನಿಗೆ ಈ ಮಟ್ಟಿಗೆ ಅರ್ಥವಾಗಿದೆಯೆಂದರೆ, ಇನ್ನೂ ಆ ಭಾಷೆಯನ್ನೇ ಹೊದ್ದು ಮಲಗಿರುವವರಿಗೆ ಇನ್ನೂ ಚೆನ್ನಾಗಿ ಅರ್ಥವಾಗಿರುತ್ತದೆ. ಇಂಥ ಪ್ರಯತ್ನಗಳು ನಡೆಯುತ್ತಿರಲಿ."... ಆದೇಶ್ ಕುಮಾರ್ ( ಎಫ್ಬಿಯಕನ್ನಡ ಬ್ಲಾಗ್ ನಲ್ಲಿ ) ಸುವರ್ಣ ನ್ಯೂಸ್  ವಾಹಿನಿಯಲ್ಲಿ ಪ್ರಸಾರ ಆಗುವ ಕಟ್ಟೆಚ್ಚರ ಕಾರ್ಯಕ್ರಮದ ಬಗ್ಗೆ ಬಂದ ಅನೇಕ ಅನಿಸಿಕೆಗಳಲ್ಲಿ ನನಗೆ ಇದು ಇಷ್ಟ ಆಯ್ತು ಪ್ರಾಯಶಃ ಆ ಟೀಮ್ಗೂ  ಇಷ್ಟ ಆಗುತ್ತದೆ ಎನ್ನುವ ಅನಿಸಿಕೆ ನನ್ನದು.


ಅಡುಗೆ ಕಾರ್ಯಕ್ರಮ ಅಂದ್ರೆ ಮೂಗು ಮುರಿಯುವ ಮಂದಿ ಅನೇಕರು. ಆದರೆ ಅದರ ರಿಯಾಲಿಟಿ ಷೋ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಸ್ಟಾರ್ ಪ್ಲಸ್ ನಲ್ಲಿ ಪ್ರಸಾರ ಆಗುವ ಅಡುಗೆ  ರಿಯಾಲಿಟಿ ಷೋ ನಲ್ಲಿ ಕುನಾಲ್ , ಅಜಯ್ , ವಿಕಾಸ್ ಈ ಮೂರು ಜನ ತೀರ್ಪುಗಾರರು ಅತ್ಯುತ್ತಮ ಶೆಫ್ ಗಳೆಂದು ಹೆಸರು ಪಡೆದ ಮಾಸ್ಟರ್ಗಳು. ಆದರೆ ಅವರ ಮಾತು -ಹಾವಭಾವ ಯಾವುದೂ ಅಳತೆ ಮೀರಿಲ್ಲ, ಆದರೆ ಇದೆ ರೀತಿಯ ಮಾಸ್ಟರ್ ಶೆಫ್ ಕಾರ್ಯಕ್ರಮ ಸ್ಟಾರ್ ವರ್ಲ…