ಜನಶ್ರೀ ದೀಕ್ಷಿತರ ಬ್ರೇಕ್ !


ನಿನ್ನೆ ಎರಡು ಕಾರ್ಯಕ್ರಮಗಳು ತುಂಬಾ ಗಮನ ಸೆಳೆಯಿತು. ಒಂದು ಜನಶ್ರೀ ವಾಹಿನಿಯಲ್ಲಿ ಪ್ರಸಾರ ಆದ ಕಾಲಗರ್ಭ , ಮತ್ತೊಂದು  ಟೀವಿ ನೈನ್   ವಾಹಿನಿಯಲ್ಲಿ ಪ್ರಸಾರ ಆದ ವೀರಪ್ಪನ್  ಕುರಿತಾದ ಕಾರ್ಯಕ್ರಮ. ನಿರೂಪಕ ಶಿವಪ್ರಸಾದ್  ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಪ್ರಸಾರ ಆಯ್ತು. ಒಟ್ಟಾರೆ ಹೇಳ ಬೇಕೂಂದ್ರೆ ನಿವೃತ್ತ ಪೋಲೀಸ್ ಅಧಿಕಾರಿಗಳಾದ ಅಶೋಕ್ ಕುಮಾರ್ ಹಾಗೂ ಬಾವ ಅವರ ಜೊತೆಗೆ ನಡೆಸಿದ ಮಾತುಕತೆ, ಪ್ರಶ್ನೆಗಳನ್ನೂ ಕೇಳಿದ ಪರಿ ಎಲ್ಲವೂ ಅದ್ಭುತ .
ದಂತಚೋರ ವೀರಪ್ಪನ್ ಬಗ್ಗೆ ಸಾವಿರವಾಗಿ ಹಾಗೂ ಆ ಸಮಯದಲ್ಲಿ ಹತರಾದ ಅಧಿಕಾರಿಗಳಾದ ಶ್ರೀನಿವಾಸ್, ಹರಿಕೃಷ್ಣ ಸೇರಿದಂತೆ ಇನ್ನು ಅನೇಕರ ಬಗ್ಗೆ ಅಲ್ಲದೆ ಯಾವ ರೀತಿ ವೀರಪ್ಪನ್ ಮನಸ್ಥಿತಿ ಹಾಗೂ ವ್ಯಕ್ತಿತ್ವ  ಹೊಂದಿದ್ದ ಎನ್ನುವುದರ ಬಗ್ಗೆ ಕುರಿತಾದ ಮಾಹಿತಿ ಕೇಳುತ್ತಿದ್ದಾಗ.. ಸಾಕಷ್ಟು ಸರ್ತಿ ನನಗೆ ಕಣ್ಣೀರು ಬಂತು ಕಣ್ರೀ , ಆತನ ಕ್ರೌರ್ಯಕ್ಕೆ ಬಲಿಯಾದವರ
ಹಗಲೂ ರಾತ್ರಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಆ ಕಳ್ಳನನ್ನು ಹಿಡಿಯಲು ಒದ್ದಾಡಿದ ಪೊಲೀಸರು, ಅವನಿ0ದ ಹತರಾಗಿ ರು0ಡ  ಬೇರೆಯಾದ ಶವಗಳನು ಕಂಡಾ ಗಿನ ಪರಿಸ್ಥಿತಿ , ವೀರಪ್ಪನ್ ಹೆಂಡ್ತಿ ಮುತ್ತುಲಕ್ಷ್ಮಿ ಶ್ರೀನಿವಾಸ್ ರಂತಹ ನಿಷ್ಟಾವಂತ ಅಧಿಕಾರಿಯ ತಲೆಯನ್ನು ಫುಟ್ಬಾಲ್ ನಂತೆ ಒದ್ದು ... ಅಯ್ಯೋ ಆ ಕಾರ್ಯಕ್ರಮವಿಡಿ ಮಾತೆ ಹೊರಡ ದಷ್ಟು ಮಗ್ನತೆಯನ್ನು ನೀಡಿತ್ತು .
ತಮಗೆ ಕೊಟ್ಟ ಎರಡು ಒಣ ಚಪಾತಿಯನ್ನು ಕೆಟ್ಟ ಕೊಳ್ತ ನೀರಲ್ಲಿ ಅದ್ದಿ   ತಿನ್ನುತ್ತಿದ್ದ ಪರಿಸ್ಥಿ ತಿ, ವೀರಪ್ಪನ್ ಗೆ ಇದ್ದ
ಶತ್ರುಗಳಿಗೆ ಸುಳಿವು ನೀಡದ  ನೀತಿ..ಎಲ್ಲವೂ ತುಂಬಾ ತುಂಬಾ ವಿಶೇಷವಾಗಿತ್ತು. ನಿಜ ವೀರಪ್ಪನ್ ಸತ್ತಾಗ ಎಲ್ಲ ವಿಷಯಗಳು ಗೊತ್ತಿದ್ದವೂ ಆದರೆ ಅವೆಲ್ಲವನ್ನು ಮೀರಿ ಇನ್ನು ಅನೇಕ ಸಂಗತಿಗಳನ್ನು ಅಶೋಕ್ ಕುಮಾರ್ , ಬಾವ  ಅವರು ಹೇಳಿದ್ರು.. ಟೀವಿ ನೈನ್  ಮತ್ತೊಮ್ಮೆ ಪ್ರಸಾರ ಮಾಡಿದ್ರೆ ತಪ್ಪದೆ ನೋಡ್ರಿ .


ಕಾಲಗರ್ಭ ಜನಶ್ರೀ  ವಾಹಿನಿಯಲ್ಲಿ ಪ್ರಸಾರ ಆಗ್ತಾ ಇರುವ ಅತ್ಯಂತ ಸುಂದರ ಕಾರ್ಯಕ್ರಮಗಳಲ್ಲಿ ಒಂದು . ನಾಗರಾಜ್ ದೀಕ್ಷಿತ್ ಅವರು ಸಂದರ್ಶಿಸುವ, ಟಾಕಿಸುವ ಕೆಲಸ ಮಾಡಿದರೆ ಗಣೇಶಯ್ಯನವರು ಮಾಹಿತಿ ನೀಡುವ ಮೇಷ್ಟ್ರು.. ನಿನ್ನಿಎಪಿಸೋಡ್  ನಲ್ಲಿ  ಬೀಜಗಳು, ಹಣ್ಣುಗಳು, ನಾಣ್ಯಗಳು, ಸಾಗರೋತ್ತರ ಸಂಬಂಧಗಳ ಸಂಗತಿ.. ಸೀತಾಫಲ  ಯಾರೀತಿಯಲ್ಲಿ ವಲಸ ಬಂದಿರ ಬಹುದು, ಹಾಗೂ ರೋಮನ್ನರ ಜೊತೆಗಿನ ಬಾಂಧಯ ಯಾವ ಕಾಲದಲ್ಲಿ ಹೆಚ್ಚಾಗಿತ್ತು.. ಹೀಗೆ ಹತ್ತು ಹಲವಾರು ಸಂಗತಿಗಳು.ಆದರೆ ಈ ಕಾರ್ಯಕ್ರಮದಲ್ಲಿ  ಹೆಚ್ಚು ಖುಷಿ ಕೊಡುವ ಸಂಗತಿ ದೀಕ್ಷಿತರು ಬ್ರೇಕ್ ಹೇಳುವ ಸ್ಟೈಲೂ .. ನಾವ್  ಹೇಳೋದಕ್ಕಿಂತ.. ನೀವು ನೋಡಿ ಎಂಜಾಯ್ ಮಾಡಿ :-)


ವೀರಪ್ಪನ್ ಕಾರ್ಯಕ್ರಮದ ಬಗ್ಗೆ :
Prashanth Marla True jayashree..
I just cld not chng d channel..
still his wife needs justice frm karnataka govt..
Nice blog..

Comments