Posts

Showing posts from January 15, 2012

ಈ ಪ್ರಯತ್ನ !

Image
ಹಿರಿಯ  ಕಲಾವಿದ  ದಿವಂಗತ ಕೆ.ಎಸ್. ಅಶ್ವಥ್ ಅವರ ಬಗ್ಗೆ  ಟೀವಿ ನೈನ್ ಮತ್ತು ಸುವರ್ಣ ನ್ಯೂಸ್ ಎರಡೂ ವಾಹಿನಿಗಳಲ್ಲೂ ಕಾರ್ಯಕ್ರಮ ಪ್ರಸಾರ ಆಯ್ತು ಅವರ ಪುಣ್ಯತಿಥಿ ಯಂದು. ಕಲಾವಿದ ಎಂದಿಗೂ ಸಾಯುವುದಿಲ್ಲ ಎನ್ನುವುದಕ್ಕೆ ಚಾಮಯ್ಯ ಮೇಸ್ತ್ರ ಈ ಕಾರ್ಯಕ್ರಮವೇ ಸಾಕ್ಷಿ. ಟೀವಿ ನೈನ್ ವಾಹಿನಿಯ ಉತ್ತಮ- ಕ್ಯೂಟ್  ನಿರೂಪಕಿಯರಲ್ಲಿ ಒಬ್ಬರಾದ  ಉಷಾ ( ಆದ್ರೆ ಹೇಮಾ ವೆರಿ ಕ್ಯೂಟ್ :-)] ಈ ಕಾರ್ಯಕ್ರಮದ ನಿರೂಪಕಿಯಾಗಿದ್ರು.ಇಂತಹ ಕೆಲವು ಕಾರ್ಯಕ್ರಮಕ್ಕೆ ಈಕೆ ಹೆಚ್ಚು ಸೂಟ್ ಆಗ್ತಾರೆ. 
ಆದರೆ ಹೆಚ್ಚು ಗಮನ ಸೆಳೆದದ್ದು ಕಾರ್ಯಕ್ರಮದ ತಿರುಳು. ಡಾ. ರಾಜ್ ಕುಮಾರ್ ಅವರ ಮೆಚ್ಚಿನ ಕಲಾವಿದ ಎನ್ನುವ ಮಾತು ಕೇಳಿ ಖುಷಿ ಅನ್ನಿಸಿತು.  ರಾಜ್ ಫ್ಯಾನ್ಸ್ ಸಂಖ್ಯೆ ತುಂಬಾ ದೊಡ್ಡದು. ಆದರೆ ಅವರು ಅಶ್ವಥ್ ಅವರ ಅಬಿಮಾನಿ ಅಂದ್ರೆ... ನಿಜಕ್ಕೂ ಆ ಮೇರು ಕಲಾವಿದರ ವ್ಯಕ್ತಿತ್ವ ಎಂತಹುದು ಎಂಬುದು ತಿಳಿದು ಬರುತ್ತದೆ. ಕಾರ್ಯಕ್ರಮದಲ್ಲಿ ಮರುಸೃಷ್ಟಿ ಮಾಡಿ ಶಂಕರ್ ಅಶ್ವಥ್ ಅವರ ಕೈಲೆ ಅಶ್ವಥ್ ಅವರ ಪಾತ್ರ ಮಾಡಿಸಿದರು.  ವಾವ್ ! ಅದ್ಬುತ ಪ್ರಯೋಗ ಟೀವಿ ನೈನ್ದು. ಎಲ್ಲರಿಗೂ ಸೂಟ್ ಆಗುವ ಮೈಕಟ್ಟು ಅಶ್ವಥ್ ಅವರು ಹೊಂದಿದ್ರು.. ಡಾ.ರಾಜ್ ಗೆ ತಂದೆ ಪಾತ್ರ ಮಾಡಿದ್ದ ಆ ನಟ ಶಿವಣ್ಣನಿಗೂ ತಂದೆ ಪಾತ್ರ ಮಾಡಿದ್ರು. ಹೆಣ್ಣಾಗಲಿ -ಗಂಡಾಗಲಿ ಇಂತಹ ಅವಕಾಶ ಸಿಗೋದು ಕಡಿಮೆ ಬಿಡಿ. ಮತ್ತೊಂದು ಸಂಗತಿ ಮನಸೆಳೆದದ್ದು ಅಂದ್ರೆ ಭಾಗ್ಯವಂತ ಸಿನಿಮಾಕ್ಕೆ ಪುನೀತ್ ರಾಜ್ ಕುಮಾರ್ ದೊಡ್ಡ…

ಬೆಳಕು

Image
ಹಾಗೇ ಸುಮ್ ಸುಮ್ನೇ ಹುಟ್ಟದ್ದು:( ಅಸಲಿಗೆ ಶಶಿ, ರವಿ. ರಫೀ ನನ್ನ ಕ್ಲೋಸ್ ಫ್ರೆಂಡ್ಸ್)
ನಲ್ಲೆ ಇದೀಗ ತಾನೆ ಮನೆ ಸೇರಿದೆ
ನೀನಿಲ್ಲಿಲ್ಲವೆಂಬುದು ನಾಬಲ್ಲೆ ಬಿಡು
ಅರೆರೆ... ಈವತ್ತು ಶಶಿ ಕೂಡ ಜೊತೆಗಿಲ್ಲ ನೋಡು!
ರವಿ ತನ್ನ ಲೋಕದಲ್ಲಿ ತಾನು ಮುಳುಗಿ ಭಾಳ ಹೊತ್ತಾಗಿದೆ;
ಮಹ್ಮದ ರಫೀ ಗಾನವದೇಕೋ ಸಮಾಧಾನಿಸಲಿಲ್ಲ!
ಸದ್ಯ ನೀರವ ಮೌನ ಆವರಿಸಿದೆ
ನಿನ್ನ ಮೆಸೇಜ್ ನ ಝೇಂಕಾರವೇ ನನ್ನ ಜೀವಾಳವಾಗಿದೆ
ನಿನೀಗ ಮೆಸೇಜ್ ನಿಲ್ಲಿಸಿದರೆ ನನ್ನೀ ಮನೆ ಸ್ಮಶಾನ
ನಾನು ಸಮಾಧಿಯೊಳಗಿನ ಶವ!
ಹೇಗೂ ಸೂರ್ಯನೊಂದಿಗೆ ನಿನ್ನ ಸಂಜೀವಿನಿ ಸಂದೇಶ ಬಂದೇ ಬರುತ್ತದಲ್ಲ
ನನ್ನ ಬದುಕಿಸಲು....!ಬಸವರಾಜ್  ಮುದನೂರ್ ಟೀವಿ ನೈನ್ ವಾಹಿನಿಯ ವರದಿಗಾರ.. ಇದುಅ ಅವರು ಬರೆದ ಹನಿ ಗವನ. ಸಾಮಾನ್ಯವಾಗಿ ಫೆಸ್ ಬುಕ್ ಪ್ರಪಂಚದಲ್ಲಿ ತಮಗೆ ತೋಚಿದ್ದನ್ನು ಬರೆದು ಗೋಡೆಗೆ ಅಂಟಿಸಿ  ಬಿಡ್ತಾರೆ. ಕವಿ ಮನಸ್ಸುಗಳು-ಭಾವುಕ ಹೃದಯಗಳು, ಕಠಿಣ ಧ್ವನಿಗಳು, ಅಭಿಮಾನದ ಪ್ರತಿರೂಪಗಳು ಅಲ್ಲಿ ಕಾಣ ಸಿಗುತ್ತದೆ. ನಂಗೆ ಟೀವಿ ಮಂದಿಯೂ ತುಂಬಾ ಕಡಿಮೆ ಸ್ನೇಹಿತರಾಗಿದ್ದಾರೆ. ಇದನ್ನು ವಿಷಾದದಿಂದ ಹೇಳ್ತಾ ಇಲ್ಲ. ಆದರೆ ಆದವರು ಸ್ನೇಹವನ್ನು ಅದರಲ್ಲೂ ಫೆಸ್ ಬುಕ್ :-) ಸ್ನೇಹವನ್ನು ಚೆನ್ನಾಗಿ ನಿಭಾಯಿಸ್ತಾ ಇದ್ದಾರೆ. ಅವರು ಪ್ರತಿಕ್ರಿಯೆಗಳು, ಅಭಿಪ್ರಾಯಗಳು ಸ್ವೀಕೃತವಾಗಿರುತ್ತದೆ. ತಮ್ಮ ಮನಾಸ್ಸಿನ ಭಾವನೆ ಹೇಳದೆ ಇದ್ರೂ ಬಸವರಾಜ್ ತಪ್ಪದೆ ಆನ್ ಲೈನ್ಗೆ   ಬಂದಾಗ ಒಂದು ಲೈಕ್ ಕೊಡ್ತಾರೆ.ಕವಿ ಮನದ ಭಾವ…

ಬೇವು- ಬೆಲ್ಲ !!

Image
He says he knows everything in Jyothishya which shows he is not completely learnt about jyothishya because the primary thing a person who says all these should kill NANU in him which Narendra Babu is not done so he is still a learner and he always be....... 
ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಬ್ರಹ್ಮಾಂಡ ಸ್ವಾಮಿ ಬಗ್ಗೆ ಬಂದ ಒಂದು ಅಭಿಪ್ರಾಯ. ಹೆಚ್ಚು ವಿವಾದಿತ ಹಾಗೂ ಅತಿ ಹೆಚ್ಚು ಜನಪ್ರಿಯ ಜ್ಯೋತಿಷಿ ನರೇಂದ್ರ ಬಾಬು. ಅವರ ಒಂದು ಮಹತ್ವದ ಮಾತು ನಾನು ... ಆ ನಾನು ಹೋದರೆ ಹೋದೆನು ಎನ್ನುವ ಮಾತಿಗೆ ಬೆಲೆಕೊಡದ ಅನೇಕ ಸಾಧಕರಲ್ಲಿ ಇವರು ಸಹ ಒಬ್ರು. ಬಿಡಿ ಯಾರೇ ಕೂಗಾಡಿದ್ರು ಇವರ ವಾದ ಪ್ರತಿವಾದ, ಅಭಿಪ್ರಾಯ ಭಿನ್ನಾಭಿಪ್ರಾಯ ಯಾವುದರಲ್ಲೂ ಬದಲಾವಣೆ ಕಂಡಿಲ್ಲ.
 ಸ್ವಾಮಿಜಿ, ಗುರುಗಳು ಹೀಗೆ ಮನುಷ್ಯ ಮಾತ್ರರು ಯಾರೇ ಆಗಿರಲಿ ಈ ನಾನು ಅನ್ನುವ ಅಂಶ ಎಂದಿಗೂ ಮರೆಯಾಗಲ್ಲ.
ನಾನು ಎನ್ನುವುದು ಅಹಂಕಾರದ ಪ್ರತೀಕ ಎನ್ನುವ ಮಾತಿದೆ. ಆದರೆ ನಿಮಗೆ ಗೊತ್ತಿದೆ ಎಂದು ತಿಳೀತೀನಿ ಮತ್ತೊಮ್ಮೆ ಹೇಳ್ತೀನಿ ಅನ್ನುವ ಮಾತು ಸಹ ಅಹಂಕಾರವನ್ನು ಸೂಚಿಸುತ್ತದೆ . ನಿಜ ಕಣ್ರೀ ! ಆದ್ದರಿಂದ  ನಾನು ಅಂತ ಹೇಳ್ತಾ ಇರ್ಲಿ..ಅವರ ಮಾತು ಕೇಳುವ ಅವರುಗಳ ಸಂಖ್ಯೆ ಹೆಚ್ಚಾಗಿರುವಾಗ 'ನಾವು ' ಗಳು ಸುಮ್ಮನಿರುವುದು ಒಳಿತು :-)

ನಾವು  ಯಾವುದೇ ಬಗೆಯ ಸಾಧನೆ, ಕೆಲಸ -ಕಾರ್ಯ ಏನೇ ಮಾಡಿದ…

ಗೊತ್ತಿರ ಬೇಕಲ್ವ ?

Image
ಸಮಸ್ತ ಸರ್ವರಿಗೂ   ಎಳ್ಳು-ಬೆಲ್ಲ ಹಬ್ಬದ ಹಾರ್ದಿಕ ಶುಭಾಶಯಗಳು... ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎನ್ನುವ ಅತ್ಯುತ್ತಮ ಮಾತು ಹೇಳಿಕೊಟ್ಟಿದ್ದಾರೆ ಹಿರಿಯರು.ಒಳ್ಳೆ ಮಾತು- ಉತ್ತಮ ಯಶಸ್ಸು, ಸುಂದರ ನನಸಾದ ಕನಸುಗಳು ನಿಮ್ಮ ಬಾಳನ್ನು ಬೆಳಗಲಿ ಎಂದು ಹಾರೈಸುತ್ತೇನೆ... ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಕಾಮನೆಗಳು :-) ಯಶಸ್ಸು ಸದಾ ನಿಮ್ಮ ಜೊತೆಯಾಗಿರಲಿ.  ನಮ್ಮ ವಾಹಿನಿಗಳು ಎರಡು -ಮೂರು ದಿನದಿಂದ ಮಕರ ಸಂಕ್ರಾಂತಿಯ ಶುಭಾಶಗಳು, ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಸಿದ್ಧ ಮಾಡಿ ವೀಕ್ಷಕರ ಕೈಗೆ ಇಡ್ತಾ ಇದೆ. ಫೈನ್. ಅದೇ ರೀತಿ ಈಟೀವಿ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಸುಂದರ ಸೆಲೆಬ್ರಿಟಿ ಷೋ ರಾಜ-ರಾಣಿ -ರಮೇಶ್ ರಿಯಾಲಿಟಿ ಷೋ ನಲ್ಲೂ ನಿನ್ನೆ ಸ ಸಂಕ್ರಾಂತಿ ಹಬ್ಬದ್ದೆ ಕಾರು-ಬಾರು.ನಿರೂಪಕ ರಮೇಶ್ ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ. ಇನ್ನು ಕಾರ್ಯಕ್ರಮದ ಹೂರಣದ ಬಗ್ಗೆ ಗಮನ ನೀಡುವಾಗ ಒಂದು ಸಂಗತಿ ಹೇಳಲೇ ಬೇಕು .ಅದೇನೋ ಗೊತ್ತಿಲ್ಲಪ್ಪ.. ಈ ಪ್ರಶ್ನೆಗಳನ್ನು ಸಿದ್ಧ ಮಾಡುವವರುಅದರ ಕಡೆಗೆ ಇರಲ್ಲವಲ್ಲ ಎಂದು ಸಾಕಷ್ಟು ಸರ್ತಿ ಅನ್ನಿಸಿದೆ. ಯಾಕೆ ಅಂದ್ರೆ ಈ ಕಾರ್ಯಕ್ರಮದ ಪ್ರಶ್ನೆ ಸಂಕ್ರಾತಿ ಯಾವ ಮಾಸದಲ್ಲಿ ಬರುವ ಹಬ್ಬ ಎನ್ನುವ ಪ್ರಶ್ನೆ ಇತ್ತು. ಅದಕ್ಕೆ ನಾಲ್ಕು ಉತ್ತರ ಕೊಟ್ಟಿದ್ರು. ಪುಷ್ಯ ಮಾಸ ಸರಿಯಾದ ಉತ್ತರ. ಆದರೆ ಸ್ಪರ್ಧಿ ಅದನ್ನು ಮಾಘ ಮಾಸ ಎನ್ನುವ ಉತ್ತರ ನೀಡಿದರು. ಕಂಪ್ಯೂ ಟರ್ ನಲ್ಲಿ ಸಹ ಅದೇ ಉತ್ತರ ಫೀಡ್ ಆ…