Posts

Showing posts from February 5, 2012

ಆ ನದಿ!

Image
ಸಿನಿಮಾದವರ ಪರಿಚಯ ಒಂದು ಕಡೆ ಆಗ್ತಾ ಇರುತ್ತೆ ವೃತ್ತಿಗೆ ಸಂಬಂಧಿಸಿದಂತೆ, ಆದರೆ ಅದೇ ರೀತಿ ಟೀವಿ  - ರೇಡಿಯೋ ಅವರನ್ನು ಪರಿಚಯ ಮಾಡಿಕೊಂಡು ಬರೆಯುವ ಕೆಲಸ ಆರಂಭ ಆಗಿದೆ . ಒಂದು ರೀತಿ ಚೆನ್ನಾಗಿದೆ. ಸಮಯ ವಾಹಿನಿಯಜಿ. ಎನ್. ಮೋಹನ್ನನ್ನ ಪರಮಾಪ್ತ ಮಿತ್ರರು, ಸೊ ಅವರ ಪರಿಚಯ ಬೇಕಿಲ್ಲ ನನಗೆ. ಆದರೆ ಇತ್ತೀಚೆಗೆ ಸಮಯ ವಾಹಿನಿಗೆ ಹೋಗಿದ್ದೆ, ಅದೂ ಅವರು ದೊಡ್ದ ಹುದ್ದೆಯನ್ನು ಅಲಂಕರಿಸಿದ ಮೊದಲ ಬಾರಿ. ಇದ್ದ ಅರ್ಧ ಗಂಟೆಯಲ್ಲಿ ಅದೇ ಮಾತು-ನಗು ಚರ್ಚೆ..! ಚೆಂದಿತ್ತು  ಸಮಯದಲ್ಲಿ ಕಳೆದ ಸಮಯ. ಟೀವಿ ಮಂದಿಗಳ ಜೊತೆ ಮಾತುಕತೆಯ ಒಂದು ಲಹರಿ ಆರಂಭ ಆಗಿದೆ. ಆ ದಾರಿಯಲ್ಲಿ ಸಾಕಷ್ಟು ಮಂದಿ ಸಿಕ್ಕರು. ಮತ್ತಷ್ಟು ಮಂದಿಯ ಜೊತೆಯಲ್ಲಿ ಕಳೆದ ಸಮಯವನ್ನು ಡಾಕ್ಯುಮೆಂಟ್ ಮಾಡುವ ಕೆಲಸ ಭರದಿಂದ ಸಾಗಿದೆ.  ಅದೇ ರೀತಿ ಹೆಚ್ಚು ಹರಟಿದ್ದು ಅಂದ್ರೆ 91.1 ಎಫೆಮ್  ಆರ್ಜೆ ಗಳಾದ ಪ್ರದೀಪ್  (ಪ್ರಾ ದೀ ಪಾ ) ಮತ್ತು ಸೌಜನ್ಯ . ಪ್ರದೀಪಾ ಬುದ್ಧಿವಂತ  ಆರ್ಜೆಗಳಲ್ಲಿ   ಒಬ್ರು. ಅವರ ಸೆನ್ಸ್ ಆಫ್ ಹ್ಯೂಮರ್ ಅದ್ಭುತ!
ಒ೦ದು ವರ್ಗದ ಜನರನ್ನು ಆಕರ್ಷಿಸಿರುವ ಧಾರವಾಹಿ ಅಂದ್ರೆ ಸುವರ್ಣ ವಾಹಿನಿಯ ಗುರು ರಾಘವೇಂದ್ರ ವೈಭವ. ಅದರಲ್ಲಿ ಗುರು ರಾಯರು ಬೃಂದಾವನ ಸೇರುವ ಎಪಿಸೋಡ್ ಮತ್ತು ಅವರ ವಿಶೇಷ ಭಕ್ತರಾದ ಅಪ್ಪಣ್ಣಾ ಚಾರ್ಯರ ಶ್ರೀ ಪೂರ್ಣಭೋದ ಶ್ಲೋಕ ರಚನೆಯ ಸನ್ನಿವೇಶಗಳಲ್ಲಿ ಕೆಲವು ಆಭಾಸಗಳು ಕಾಣ ಸಿಕ್ತು. ಮುಖ್ಯವಾಗಿ ರಾಯರು ಬೃಂದಾವನ ಸೇರುವಾಗ ಹತ್ತಿರದಲ್ಲಿ ತುಂಗೆ ಹರಿ…