Posts

Showing posts from February 12, 2012

ಹೌದ..ನಾವು ಸಾಧಕರ?

Image
ನಾನು ನಿರೀಕ್ಷಿಸಿಯೇ ಇರಲಿಲ್ಲ ಕೇವಲ ಒಂದು ಗಂಟೆಯೊಳಗೆ ಭಾರತ ಸೇರಿದಂದೆ  ವಿಶ್ವ ವಿಡಿ ಇರುವ  ಓದುವ ಬಳಗದಿಂದ ಇಷ್ಟೊಂದು ಓದಿನ ಪ್ರವಾಹ ಉಂಟಾಗುತ್ತದೆ ಎಂದು. ನಿನ್ನೆ ಎಫ್ಬಿಯಲ್ಲಿ ಕಣ್ಣಾಡಿಸುತ್ತ ಹಾಗೆ  ವಿಶೇಷ ಅನ್ನಿಸಿದ್ದನ್ನು ಓದುತ್ತಿದ್ದೆ  . ಆಗ ರಾಜು ವಿನಯ್ ದಾವಣಗೆರೆ ಅವರ ಬರಹ ಕಣ್ಣಿಗೆ ಬಿತ್ತು, ಅದನ್ನು ಕಾಪಿ ಪೇಸ್ಟ್ ಮಾಡಿದ್ದಷ್ಟೇ ನನ್ನ ಕೆಲಸ. ಪತ್ರಿಕೆಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ನನಗೆ ಒಳ್ಳೆಯ ಸಂಗತಿಗಳನ್ನು ಮರೆ ಮಾಚಿ ಕೆಟ್ಟದಾಗಿ ಬರೆಯು ಪತ್ರಿಕೆಗಳ ಪರಿಚಯ ಇದೆ, ಅದೇ ರೀತಿ ಹೊಮ್ಲಿ ಆಗಿರುವ ಪತ್ರಿಕೆಗಳ ಪರಿಚಯ ಇದೆ. ನಾನು ಮಾಡಿದ ಅಷ್ಟೂ ಪತ್ರಿಕೆಗಳು ಒಳ್ಳೆಯ, ಉತ್ತಮ ಸಂಗತಿಗಳ ಬಗ್ಗೆ ಗಮನ ನೀಡಿರೋದು. ಈಗ ನಾನಿರುವ ಪತ್ರಿಕೆಯೂ ಅಷ್ಟೇ ಒಳ್ಳೆಯ- ಉತ್ತಮ ಸಂಗತಿಗಳತ್ತ ಗಮನ ಕೊಟ್ಟಿರುವುದು. 


ಈ ಮಾಧ್ಯಮ ಲೋಕದಲ್ಲಿ ನಾವು ಮಾಡುವ  ಎಡವಟ್ಟುಗಳ ಬಗ್ಗೆ ಸಾಮಾನ್ಯನ ಪ್ರತಿಕ್ರಿಯೆ ಹೀಗೆ ಇರುತ್ತದೆ ಎಂದು ತಿಳಿಸುವ ಪ್ರಯತ್ನ ಮಾಡಿದ್ದು ಅಷ್ಟೇ,ಆದರೆ ಓದುಗರು   ಮಾತ್ರ ಸಿಕ್ಕಾಪಟ್ಟೆ  ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇಂತಹ ಸಂಗತಿಗಳು ನಮ್ಮ ದೃಷ್ಟಿಕೋನದ ಬದಲಾವಣೆ ಹಾಗೂ ನಮ್ಮ ಕಾರ್ಯಶೈಲಿಯ ವಿಷಯದಲ್ಲಿ ತೆಗೆದುಕೊಳ್ಳ ಬೇಕಾದ ಎಚ್ಚರಿಕೆಗಳನ್ನು   ತಿಳಿಸುತ್ತದೆ.ನಾವು ಮಾಧ್ಯಮದವರು ತುಂಬ ಕಡಿಮೆ ಸಂಖ್ಯೆಯಲ್ಲಿ ಇದ್ದೀವಿ, ಆದರೆ ವೀಕ್ಷಕರು ಮತ್ತು ಓದುಗರು...!


ಸುವರ್ಣ ನ್ಯೂಸ್ ಗೌರೀಶ್ ಅ…