Posts

Showing posts from February 26, 2012

ನಿಮ್ಮ ಉತ್ರ.... ?

Image
ನಾನು ಬರೆದ ಅಗ್ಲಿ, ಬ್ಯಾಡ್, ಗುಡ್  ಪೋಸ್ಟ್ ನ ಬಗ್ಗೆ - ನಿಮ್ಮ ಬಗ್ಗೆ ಬಂದಿರುವ ಒಂದೊಳ್ಳೆಯ ಪ್ರತಿಕ್ರಿಯೆ.. ಇದಕ್ಕೇನು ನಿಮ್ಮ ಉತ್ರ.... ?
satya mitra has left a new comment on your post "ಅಗ್ಲಿ , ಬ್ಯಾಡ್, ಗುಡ್ !": 

ಟೀವಿ ವಾಹಿನಿಯವರು ನಡೆದುಕೊಂಡ ರೀತಿಯ ಬಗ್ಗೆ ಇಷ್ಟೊಂದು ಬಹು ಪರಾಕ್ ಹೇಳುತಿದ್ದೀರಲ್ಲ. ನಿನ್ನೆ ನಡೆದ ಘಟನೆಗಳ ಬಗ್ಗೆ ಅದರ ಹಿನ್ನೆಲೆಯನ್ನು ಸ್ವಲ್ಪವಾದರೂ ಮನುಷ್ಯತ್ವದಿಂದ ಯೋಚಿಸಿದ್ದೀರ. ವಸ್ತು ನಿಷ್ಠೆ ಮೆರೆವ ಮಾಧ್ಯಮದವರು ನಿನ್ನೆ ಮಾಡಿದ್ದು ಏನು. ಪೋಲೀಸಿನವರು ಕೋರ್ಟ್ ಹಾಲ್ ಗಳಿಗೆ ನುಗ್ಗಿ ವಕೀಲರನ್ನು ಮನ ಬಂದಂತೆ ತಳಿಸುತಿದ್ದರೆ ಮಾಧ್ಯಮದವರು ಅದನ್ನು ಏಕೆ ಪ್ರಸಾರ ಮಾಡಲಿಲ್ಲ. ವಕೀಲ ಸಿಂಬಲ್ ಇರುವ ಕಾರು ಬೈಕ್ಗಳನ್ನು ಎಲ್ಲರ ಮುಂದೆಯೇ ಸುಡುತಿದ್ದ ಪೋಲೀಸಿನವರ ಕೃತ್ಯವನ್ನು ಏಕೆ ಮಾಧ್ಯಮದವರು ಪ್ರಸಾರ ಮಾಡಲಿಲ್ಲ. ಮಾರಣಾಂತಿಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರುವ ವಕೀಲರನ್ನು ಯಾವೊಬ್ಬ ಮಾಧ್ಯಮದವರು ಏಕೆ ತೋರಿಸಲಿಲ್ಲ. ಮೊದಲು ಮಾಧ್ಯಮದವರೇ ಪೋಲೀಸೀವರಿಗೆ ಧಿಕ್ಕಾರ ಕೂಗುತಿದ್ದವರು, ರೆಡ್ಡಿ ಬೆಂಬಲಿಗರೆಂದು ಬಂದಿದ್ದ ಕರಿ ಕೋಟು ದರಿಸಿದ್ದ ಕೆಲವು ವಕೀಲರು ತೆಗೆದ ಜಗಳಕ್ಕೆ ಇಡೀ ವಕೀಲ ಸಮುದಾಯವನ್ನು ಭಯೋತ್ಪಾದಕರ ರೀತಿ ಚಿತ್ರಿಸುತಿದ್ದೀರಲ್ಲ ಏಕೆ. ಬಾರ್ ಅಸೋಸಿಯೇಶನ್, ಕ್ಯಾಂಟೀನ್, ನ್ಯಾಯಾಲಯದ ಒಳ ಹೊಕ್ಕು, ಕುಳಿತಿದ್ದ ವಕೀಲರನ್ನು ನಾಯಿಗೆ ಬದಿದಂತ…

ಅಗ್ಲಿ , ಬ್ಯಾಡ್, ಗುಡ್ !

Image
ಛೆ .. ಛೆ ! ಹೀಗಾಗ ಬಾರದಿತ್ತು...!
ಮಾಧ್ಯಮ ಪ್ರತಿನಿಧಿಗಳ  ಮೇಲೆ ಮಾರಣಾಂತಿಕ   ಹಲ್ಲೆಯನ್ನು ನಾಗರಿಕ ಸಮಾಜದ ಬಹು ಮುಖ್ಯ ಭಾಗವಾದ ವಕೀಲವರ್ಗ... ಛೆ! ನೆನಪಿಸಿ ಕೊಳ್ಳುವುದಕ್ಕೂ ಸಾಧ್ಯ ಇಲ್ಲ .ಆ ವರ್ಗದ ಬಗ್ಗೆ ಸಾಮಾನ್ಯರಿಗೆ ಸಣ್ಣ ಎಳೆಯ ಹೇವರಿಕೆ ಇದ್ದೆ ಇದೆ.ಆದರೆ ಅದನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಅವರು ಮತ್ತಷ್ಟು ಹೊಸತನಗಳತ್ತ ಗಮನ ಹರಿಸಿರುವುದು ಖಂಡಿತ ಖಂಡನೀಯ.


ನಿಮಗೆ ಒಂದು ಸಂಗತಿ ಹೇಳ್ತೀನಿ. ಪ್ರಸಿದ್ಧ ವೈದ್ಯರೊಬ್ಬರು ತಾವು ಯಾವುದೇ ಕಾರಣಕ್ಕೂ ಎಂತಹುದೇ  ಪರಿಸ್ಥಿತಿ ಎದುರಾದರೂ  ವಕೀಲ ಎಂದು ತಿಳಿದರೆ ಸರ್ವೀಸ್ ಕೊಡಲ್ಲ ಎನ್ನುವ ಪಣ ತೊಟ್ಟಿದ್ದಾರೆ. ಅಂದ್ರೆ ಅದೆಷ್ಟರ ಮಟ್ಟಿನ   ಬೇಸರ ಅವರ ಬದುಕಲ್ಲಿ ಆಗಿರ ಬಹುದು. ಕರಿಕೋಟು ನ್ಯಾಯವನ್ನು ಎಲ್ಲಿ  ಎತ್ತಿ ಹಿಡಿಯುತ್ತದೆ ಎನ್ನುವ ಸಂಗತಿಯು ಸಾಮಾನ್ಯರ ಮನದಲ್ಲಿ ಚೆನ್ನಾಗಿ ಬೇರೂರಿದೆ ಅಂತಹ ಸಮಯದಲ್ಲಿ ಮತ್ತಷ್ಟು ತಪ್ಪುಗಳ ಮೂಲಕ .
ಮಾಧ್ಯಮಗಳು ಅಂದು ವಕೀಲರ ಉಪಟಳವನ್ನು ಅಷ್ಟು  ಡಿಟೈಲ್ ಆಗಿ ಪ್ರಸಾರಿಸಿದ್ದರ ಪರಿಣಾಮ ಇದು ಅಂತಾರೆ ಜನರು. ಅದೂ ಇರ ಬಹುದು, ರಾಜಕೀಯ ಕೈವಾಡ ಅಂತಾರೆ ಒಂದಷ್ಟು ಜನರು ಓಕೆ ಅದೂ ಇರ ಬಹುದು. ಆದರೆ ಕಾರಣಗಳು ಹಲವಾರು ಇದ್ದರೂ ಪೆಟ್ಟು ತಿಂದವರು, ಅದರಲ್ಲೂ ಅನಗತ್ಯವಾಗಿ ಏಟು ತಿಂದವರು ತಮ್ಮ ಕೆಲಸ ಶ್ರದ್ಧೆಯಿಂದ ಕೆಲಸ ಮಾಡಲು ಬಂದ ಕೆಲಸಗಾರರು! ಅದೇ ಸರಿಯಾದ ಪದ .ಹೊಡೆದ ಕರಿಕೋಟಿಗರ  ಈ ವರ್ತನೆ ಅಗ್ಲಿ.. ವೆರಿ ಅಗ್ಲಿ !


ಹಿಡಿದು , ಎಳೆದು…

ಕಲಿಕೆ

Image
ಕಳೆದ ಒಂದು ತಿಂಗಳಿಂದ ಟೀವಿ ಮಂದಿಯನ್ನು ಭೇಟಿ ಮಾಡ್ತಾ ಇದ್ದೀನಿ. ಭಿನ್ನ ರೀತಿಯ ಅನುಭವಗಳು, ನಾನು ನಿರೀಕ್ಷಿಯೇ  ಇಲ್ಲದಷ್ಟು ವ್ಯತ್ಯಾಸಗಳು   ಕಾಣ ಸಿಗ್ತಾ ಇದೆ. ತಮಾಷೆ ಅಂದ್ರೆ ನಾನು ಯಾರ ಬಗ್ಗೆ ಯಾವ ರೀತಿ ತಿಳಿದಿದ್ದೇನೋ ಅದು ಒಂದರ್ಥದಲ್ಲಿ ಉಲ್ಟಾ ಆಗಿದೆ. ಅಯ್ಯೋ ತೊಂದ್ರೆ ಇಲ್ಲ ಬಿಡಿ. ನಿನ್ನ ಕೆಲಸ ನೀನು ಮಾಡ್ತಾ ಇದ್ದೀಯ ಎಂದು ನನ್ನ ಸ್ನೇಹ ವಲಯ   ಹೇಳ್ತಾ ಇದೆ. ಸಾಮಾನ್ಯವಾಗಿ ಬರೆಯುವ ಈ ರಂಗ ನನಗೆ ಹೊಸದಲ್ಲ, ಜೊತೆಗೆ ಕಷ್ಟಕರವೂ ಅಲ್ಲ! ಯಾರ ಬಗ್ಗೆ ಬರೆದರೂ ಅದು ಅವರಿಗೆ ಆಪ್ತವಾಗಬೇಕು ಅನ್ನುವ ಶೈಲಿ ನನ್ನದು. ನನ್ನ  ಬಗ್ಗೆ ಜಾಸ್ತಿ ಹೇಳಿಕೊಂಡರೆ ಅಹಂಕಾರದ ಮಾತು ಆದೀತು. ಆದರೆ ಸಾಕಷ್ಟು ಸಂದರ್ಭಗಳಲ್ಲಿ  ಬರೆಸಿಕೊಳ್ಳುವ ಸಂಗತಿ ಬಂದಾಗ ನನ್ನನ್ನೇ ಪ್ರಿಫರ್  ಮಾಡ್ತಾರೆ ಅದೇ ಖುಷಿ- ಹಾಗೂ ತೃಪ್ತ ಭಾವ ಉಂಟು ಮಾಡುತ್ತದೆ.
ಕಳೆದ ವಾರ ಕಿರುತೆರೆಯ ಅಸಮಾನ್ಯ ಪ್ರತಿಭೆ ಶ್ರುತಿ ನಾಯ್ಡು ಅವರನ್ನು ಭೇಟಿ ಮಾಡಿದೆ. ಆಕೆಯ ಮಾತು- ನಡೆ ನುಡಿ ತುಂಬಾ ವಿಶೇಷ ಅನ್ನಿಸಿತು. ಎಲ್ಲಾ ವಿಷಯದಲ್ಲೂ ಪಕ್ಕಾ. ,ಮಾಡುವ ಕೆಲಸದ ಬಗ್ಗೆ ತುಂಬಾ ಗೌರವ. ಬೇರೆಯವರ ಬಗ್ಗೆ  ಗೌರವ ನೀಡುವ ಗುಣ. ನಿಜ ಅಂದ್ರೆ ಆಕೆ ಮಲ್ಟಿ ಟ್ಯಾಲೆ೦ಟೆಡ್    . ಆದರೆ ಹಾಗಂತ ಉಡಾಫೆಯಾಗಿ  ಎಂದೂ ಬಿಹೇವ್ ಮಾಡಿಲ್ಲ. ಸ್ವಲ್ಪ ಸಿಟ್ಟಿನ ಹೆಣ್ಣುಮಗಳು. ಆದರೆ ಆಕೆಯ ಗುಣ ಆಹಾ! ಖುಷಿ ಆಯಿತು.
ಅದೇ ರೀತಿ ನಾನು ತುಂಬಾ ಇಂಪ್ರೆಸ್ ಆದ ಮತ್ತೊಬ್ಬರು ಸಾಧಕ ಸಿಹಿಕಹಿ ಚಂದ್ರು. ಟೀವಿ ಲೋ…

ವಸಿ ನಕ್ಕು ಬಿಡಿ

Image
ಕೃಪೆ :ಸತೀಶ್ ಆಚಾರ್ಯಕೃಪೆ : ಜೀವನ್ ಶೆಟ್ಟಿ (ಉಡುಪಿ )