Posts

Showing posts from March 18, 2012

ಕೊಯ್ಯಂ !

Image
ನ್ಯೂಸ್ ಚಾನೆಲ್ ನಲ್ಲಿ ನ್ಯೂಸ್ ಮಾತ್ರ ಪ್ರಸಾರ ಆಗ ಬೇಕು, ಇಲ್ಲದೆ ಇದೆ ಹೋದರೆ ಹೋಗ್ಲಿ ಸ್ವಲ್ಪ  ತಮಾಷೆ, ಸ್ವಲ್ಪ ಸಿನಿಮಾ ಎಲ್ಲವೂ ಮಿಕ್ಸ್ ಆಗಿದ್ರೆ ಚಂದ. ನಮ್ಮ ಚಾನೆಲ್ಗಳು ಅದೇ ಕೆಲಸ ಮಾಡ್ತಾ ಇವೆ. ಆದರೆ ಜನಶ್ರೀ ವಾಹಿನಿಯಲ್ಲಿ  ಇವೆಲ್ಲದರ ಜೊತೆಗೆ ನಾವು ಸೀರಿಯಲ್ ಸಹ ಪ್ರಸಾರ ಮಾಡ್ತಿವಿ ಅಂದಾಗ  ಮಾತ್ರ ಸಾಕಷ್ಟು ಆಶ್ಚರ್ಯ ಆಗಿತ್ತು. ಮುಖ್ಯವಾಗಿ ಅವರು ಹಾಗೆ ಹೇಳಿದಾಗ ಯಾಕೋ ಚಾನೆಲ್ ಎತ್ತ ಕಡೆ ಸಾಗುತ್ತಿದೆ ಎನ್ನುವ ಸಂಗತಿ ಎಲ್ಲ ಮನದಲ್ಲಿಯೂ ಮೂಡಿತ್ತು. ಈ ವಾಹಿನಿ ಗಿರೀಶ್ ಕಾಸರವಳ್ಳಿ ಅವರ ತಾಂತ್ರಿಕ ನಿರ್ದೇಶನದ ಅಂದ ಕಾಲತ್ತಿನ ಗುಡ್ಡದ ಭೂತ ಪ್ರಸಾರ ಮಾಡುವ ಧೈರ್ಯ ತೋರಿದಾಗ  ಆರಂಭದಲ್ಲಿ ತಾಳು ಹೆಂಗಿದೆ ಎಂದು ವೀಕ್ಷಿಸಿದರು ಈಗೀಗ ಹೆಚ್ಚು ಆಸಕ್ತಿ ಮೂಡಿಸ್ತಾ ಇದೆ.

ನನ್ನ ಎಫ್ಬಿ ಮಿತ್ರ ಸುನೀಲ್   ಅಕ್ಕೊಯ್ ಇದ್ಯಾರು ಬರೆದಿದ್ದು   ನನಗೆ ಈ ಪುಸ್ತಕ ಬೇಕು, ಮತ್ತೆ ಮತ್ತೆ ಗುಡ್ಡದ ಭೂತ ನೆನಪಿಗೆ ಬಂದಾಗ ಅದನ್ನು ಓದ ಬಹುದು ಎನ್ನುವ ಮನದಿಚ್ಛೆ  ಪ್ರಕಟಿಸಿದಾಗ, ಇಲ್ಲ ಮರಿ ನನಗೆ ಗೊತ್ತಿಲ್ಲ ತಿಳಿದುಕೊಂಡು ಹೇಳ್ತೀನಿ ಅಂದಿದ್ದೆ.  ಆದರೆ ಅವೆಲ್ಲಕ್ಕಿಂತ ಈ ಸೀರಿಯಲ್ ನ್ಯೂಸ್ ಚಾನೆಲ್ನಲ್ಲಿ ಬರುವುದಕ್ಕೆ ಓಡಾಡಿದ ಸಾಹಸಿ ಬಗ್ಗೆ ಹೇಳ್ತೀನಿ. ಅವರ ಹೆಸರು ಪುನೀತ್ ಬಾರ್ಕೂರ್. ಎಂತಹ ಸಮಯದಲ್ಲೂ ಕೋಪ ಮಾಡಿಕೊಳ್ಳದ ಸಂಯಮಿ. ಏನೇ ಹೇಳಲಿ - ಕೇಳಲಿ ಅಡ್ಡಿ ಇಲ್ಲ ಮೇಡಂ ಅನ್ನುವ ಮಾತು ರೆಡಿಯಾಗಿರುತ್ತದೆ. ಟೀವಿ ಮಂದಿಯಲ್ಲಿ ಇರುವಂತಹ ಕೆಲವ…

ಆಂಟಿಗಳು !

Image
ನಂಗೆ ಟೀವಿ ಸೀರಿಯಲ್ ಮಾಡೋದು ಬಿಟ್ರೆ ಮತ್ತಿನ್ಯಾವುದೇ ಕೆಲಸ ಮಾಡೋಕೆ ಬರಲ್ಲ. ನನಗೆ ಇಷ್ಟ ಇರಲಿ ಬಿಡಲಿ ಆ ಕೆಲಸ ಮಾಡ ಬೇಕು ಸುಮ್ಮನೆ ಕುಳಿತರೆ ಬೇಡದ ಯೋಚನೆಗಳು ಬಂದು ಕಾಡುತ್ತದೆ ಎನ್ನುವ ಮಾತು ಹೇಳಿದ್ದು ಪ್ರಸಿದ್ಧ ಟೀವಿ ಧಾರವಾಹಿ ನಿರ್ದೇಶಕ ಟಿ.ಎನ್. ಸೀತಾರಾಂ . ಅವರು ಹೇಳಿದ ಈ ಮಾತು ಅವಧಿ ಮ್ಯಾಗ್ ನಲ್ಲಿ ಪ್ರಕಟ ಆಗಿತ್ತು. ಇದು ಕೇವಲ ಟಿ.ಎನ್.ಎಸ್ ಅವರ ಮನದ ಮಾತಲ್ಲ ಅನೇಕ ನಿರ್ದೇಶಕರು ಹೇಳುವ ಸತ್ಯ ಸಂಗತಿ. ಟೀವಿಲೋಕದಲ್ಲಿ ಹೊಸದೊಂದು ಭಾಷ್ಯ ಬರೆದ ನಿರ್ದೇಶಕ ಸೀತಾರಾಂ. ನಿರ್ದೇಶಿಸಿದ ಧಾರಾವಾಹಿಗಳು ಚಂದನ ಸೇರಿದಂತೆ ಬಹುತೇಕ  ಕನ್ನಡದ  ಎಲ್ಲ ವಾಹಿನಿಗಳಲ್ಲಿ ಪ್ರಸಾರ ಆಗಿದೆ. ಆ ವಾಹಿನಿಗಳಿಗೆ ಜೀವದಾನ ಮಾಡಿದೆ. ವಾಹಿನಿಗಳು ನಾವು ಗೆದ್ದಿದ್ದೆ ಬೇರೆಯ ರೀತಿ ಅಂತ ಅಂದ್ರೂ ಸಹ ವೀಕ್ಷಕರಿಗೆ ಗೊತ್ತು ಟಿಎನ್ಎಸ್  ಅವರ ಪ್ರತಿಭೆ.
ಸಾಕಷ್ಟು ಸರ್ತಿ ನಾವೇನು ಅನ್ನುವುದು ನಮಗೆ ಗೊತ್ತಾಗುತ್ತಾ ಹೋಗುತ್ತದೆ ಅನುಭಗಳ ಮೂಲಕ. ಸೀತಾರಾಂ ಅವರ ಮುಕ್ತ 1  ಹಾಗು ಮುಕ್ತ- 2   , ಮನ್ವಂತರ , ಮಾಯಾಮೃಗ ಎಲ್ಲ ಧಾರಾವಾಹಿಗಳು ಜನಮನ ತಲುಪಿದ್ದು ಅವರ ವಿಶಿಷ್ಟವಾದ ಕಥಾ ಹಂದರದಿಂದ.
ಸಾಕಷ್ಟು ಸರ್ತಿವೀಕ್ಷಕರು ಸ್ವಲ್ಪ ಬೋರೆದ್ದು ಹೋಗ್ತಾರೆ ಏಕತಾನತೆಯಿಂದ. ಅಂತಹ ಏಕತಾನತೆಯ ಪ್ರಭಾವ ಜಾಣ- ಕ್ರಿಯೇಟಿವ್ ನಿರ್ದೇಶಕರನ್ನು ಬಾಧಿಸದೇ  ಇಲ್ಲ, ಅದನ್ನು ಮೀರಿ ಹೊಸ ಪ್ರಯತ್ನ ಮಾಡಲೇ ಬೇಕು.
ಇತ್ತೀಚೆಗೆ ನಾನು ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಅವರ ಪ…