Posts

Showing posts from April 8, 2012

ರೇಡಿಯೋ ಸರದಾರರು

Image
ಎಂತಹ ಪರಿಸ್ಥಿತಿಯಲ್ಲೂ  ಬೇಜಾರು ಆಗದೆ ಇರುವಂತೆ ಮಾಡುವ ಮಾಧ್ಯಮ ರೇಡಿಯೋ..ಸಾಮಾನ್ಯವಾಗಿ ರೇಡಿಯೋ ಒಂದೊಳ್ಳೆಯ ಫ್ರೆಂಡ್ ಆಗಿ ಪರಿಣಮಿಸಿದೆ ನಮಗೆ. ಇದರಲ್ಲಿ ಮಾತಾಡುತ್ತಾ ನಮ್ಮ ಮನಕ್ಕೆ ಮುದ ನೀಡುವ ರೇಡಿಯೋ ಜಾಕಿಗಳು..ಸಾಧ್ಯವಾದಷ್ಟು ಮಾಹಿತಿ ಜೊತೆಗೆ ಮನೋರಂಜನೆಯನ್ನು ಕೊಡ್ತಾರೆ.ವೀಕ್ಷಕರಿಗೆ ನೋಡುವುದು ಬೇಡ ಅನ್ನಿಸುವಂತೆ ಮಾಡುವ ಟೀವಿ  ಕಾರ್ಯಕ್ರಮಗಳ ಮುಂದೆ ರೇಡಿಯೋ ಆರ್ಜೆಗಳು ಮತ್ತೆ ಮತ್ತೆ ಆಲಿಸುವಂತೆ  ಸುಂದರವಾಗಿ  ಮಾತಾಡ್ತಾರೆ. ರೆಡ್ ಎಫೆಮ್ ಆರ್ಜೆ ಪ್ರದೀಪ್ . ಈ ಫೋಟೋದಲ್ಲಿ ಇಣುಕಿ ನೋಡ್ತಾ ಇದ್ದಾರಲ್ಲ ಅವರೇ :-) ಅತ್ಯುತ್ತಮ ಮಾತುಗಾರ. ಜೊತೆಗೆ ಅಪರೂಪದ ಆಪ್ತ ಸಮಾಲೋಚಕ. ರೆಡ್ ಎಫೆಮ್ ನಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸ್ತಾ ಇರುವಾ ಪ್ರದೀಪ್ ಅವರ ವಿಶೇಷ ಕಾರ್ಯಕ್ರಮ ಸವಿಸವಿ ನೆನಪು. ಪ್ರತಿದಿನ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರ ಆಗುತ್ತದೆ. ವಿಶೇಷ ಅನ್ನಿಸುವ ಮೃದು ಮಧುರ ಮಾತಿನ ಶೈಲಿ. ಪ್ಲೀಸಿಂಗ್ ಧ್ವನಿ ಇವರ ವಿಶೇಷತೆ.( 93.5)
91  .1  ಆರ್ಜೆ ಪ್ರಾದೀಪಾ.. ಪ್ರತಿದಿನ ಸಂಜೆಯ ಸಿಟಿ ಮಾತಿನ ಚಟಪಟ ಮಾತಿನ ಆರ್ಜೆ. ಹೆಚ್ಚು ಜಗ್ಗೇಶ್ ಫ್ಯಾನ್..ಮಾತಿನ ಮೋಡಿ ಹಾಕುವುದರಲ್ಲಿ A1 .ಜಗ್ಗೇಶ್ ರೀತಿಯಲ್ಲೇ ಮಾತಿನಮಲ್ಲ ಈ ಆರ್ಜೆ. ಪ್ರತಿದಿನ ಎಗ್ಜಾಕ್ಟ್ ಲಿ ಗಾಳಿಯ ಮೂಲಕ ಬಂದು ಕೇಳುಗರ ಮನ ಖುಷಿ ಪಡಿಸ್ತಾರೆ..ಮಾತು ಕೇಳಿ ಆವ್ ಎಂಜಾಯ್ ಮಾಡಿ  !

ಟೀವಿ ನೋಡುಗರಿಗೆ ಪರಿಚಿತ ಹುಡ್ಗ.. ಏನ್ರಿ ನಾನು ಕಣ್ರೀ ನಿಮ್ಮಾ ನಿ..ರ..…

ಇದ್ದದ್ದೇ..!

Image
ಕೆಲವು ಕಾರ್ಯಕ್ರಮಗಳ ಬಗ್ಗೆ ಬರೆದಾಗ ಸಿಗುವ ಪ್ರತಿಕ್ರಿಯೆ ಭಿನ್ನವಾಗಿ ಇರುತ್ತದೆ. ಅದೇ ರೀತಿ ಬರೆದಾಗ ಓದುವವರ ಸಂಖ್ಯೆಯೂ ಆ ಬರಹದ ವಿಶೇಷತೆಯನ್ನು ಎತ್ತಿ ತೋರುತ್ತದೆ. ಪ್ರಿಂಟ್ ಮೀಡಿಯಾದಲ್ಲಿ ಇರೋದು ನಾನು. ಬರೆಯುವ ಕೆಲಸ ಹೊಸದಲ್ಲ. ಯಾರ ಬಗ್ಗೆ ಬರೆದರೂ ಶ್ರದ್ಧೆಯಿಂದ ಮನನ ಮಾಡಿಕೊಂಡು ಬರೀತೀನಿ. ಇತ್ತೀಚಿಗೆ ಪತ್ರಿಕೆ ಒಂದಕ್ಕೆ ಟೀವಿ ನಟಿ ಮಣಿ ಯೊಬ್ಬರ  ಬಗ್ಗೆ ಸಂದರ್ಶನ ಮಾಡಿ ಬರೆಯುವ ಕೆಲಸ ಬಿತ್ತು. ಅವರ ಜೊತೆ ಮಾತಾಡಿ ಬರೆದಾಯ್ತು, ಅದೇ ರೀತಿ ಟೀವಿಯಿಂದ ಈಗ ಚಿತ್ರರಂಗದತ್ತ ಗಮನ ಹರಿಸಿ ಹೀರೋಯಿನ್ ಆಗಿರುವ ಮತ್ತೊಬ್ಬ ಹೆಣ್ಣುಮಗಳ ಬಗ್ಗೆ ಬರೆಯುವ ಅವಕಾಶ ಸಿಕ್ತು. ಇಬ್ಬರದು ಪಬ್ಲಿಶ್ ಆಯ್ತು .. ಸರಿ ಸಂಜೆ ನಾನು ನಮ ಅಮ್ಮನ ಜೊತೆ ವಾಕಿಂಗ್ ಮಾಡುವಾಗ ಟೀವಿ ಸೀರಿಯಲ್ ನಲ್ಲಿ  ಮಾಡುವ ಹೆಣ್ಣುಮಗಳ ಫೋನ್ ಬಂತು.. ಆಕೆ ಹಲೋ ಅಂದ ತಕ್ಷಣವೇ ನನ್ನನ್ನು ಮಾತಿನಿಂದ   ಜಡಿದು ಬಿಟ್ಲು..ಆಕೆ ಹೇಳಿದ್ದು ಎಲ್ಲವೂ ಬರೆದಿದ್ರು ಆಕೆಗೆ ತೃಪ್ತಿ ಆಗಿರಲಿಲ್ಲ.  ಸಣ್ಣ ಎಳೆಯ ತಬ್ಬಿಬ್ಬು ನನಗೆ!  ನಾನು  ರೇಗಿ ಫೋನ್ ಇಟ್ಟೆ. ನಾನು ಈ ವಿಷ್ಯ ಸಂಬಂಧಿಸಿದ ಪತ್ರಕರ್ತರ ಗಮನಕ್ಕೆ ತಂದೆ. ಅಂದು ನನಗೆ ಸಿಕ್ಕಾಪಟ್ಟೆ ನೋವಾಗಿತ್ತು.
ಆ ಟೀವಿ ಹೆಣ್ಣು ಮಗಳು ಇನ್ನು ಮಾಡಿರೋದು ಒಂದೆರಡು ಸೀರಿಯಲ್ನಲ್ಲಿ  .ಆದ್ರೆ ಆ ಅಹಂಕಾರ ಯಪ್ಪಾ.. ಮತ್ತೊಂದು ಸಂಗತಿ ಗೊತ್ತಾಗಿದ್ದು ಆಕೆಯ ಬಗ್ಗೆ ಪತ್ರಿಕೆಯಲ್ಲಿ ಪಬ್ಲಿಶ್ ಮಾಡ್ತೀನಿ ಅಂತ ದುಡ್ಡು (ಲೆಕ್ಕ ಬೇಡ ಬಿಡಿ ) ತಗ…