Posts

Showing posts from April 29, 2012

ಧೈರ್ಯ

Image
ಇತ್ತೀಚಿನ ಪೋಸ್ಟ್ ನಲ್ಲಿ ನಾನು ಕಸ್ತೂರಿ ವಾರ್ತಾ ವಾಹಿನಿಯ ಮನೋಜ್ ಅವರ ಬಗ್ಗೆ ಬರೆದಿದ್ದೆ. ಆಗ ಒಬ್ರು ನೀವು ಈ ಪಾಟಿ ಹೊಗಳಿರುವುದನ್ನು ಕಂಡ್ರೆ ಆ ಸಂಸ್ಥೆಗೆ ಕೆಲಸಕ್ಕೆ ಸೇರುವ ಉದ್ದೇಶ ಇದೆ ಅಂತ ಕಾಣುತ್ತೆ ಅಂದಿದ್ದರು. ಕಳೆದ ಕೆಲವು ವರ್ಷಗಳಿಂದ ನಾನು ಟೀವಿಯವರ ಬಗ್ಗೆನೇ ಬರಿತಾ ಇದ್ದೀನಿ ಹಾಗೇನು ನಡೆದು ಇದ್ದಿದ್ದಿದ್ರೆ ಯಪ್ಪಾ ನಾನು ಎಲ್ಲಾ ದೊಡ್ದ ದೊಡ್ದ ಕಂಪನಿಗಳಲ್ಲಿ ಕೆಲಸ ಮಾಡಿ ಮಾಡಿ.. ಬಿಟ್ಟು ಬಿಸಾಡ್ತಾ ಇದ್ದೆ.. ಆದ್ರೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಯಾವುದೇ ರೀತಿಯ ಆಸೆ -ಆಕಾಂಕ್ಷೆ ಯಿಂದ  ಬರಿತಾ ಇಲ್ಲ. ಸಿಕ್ಕ ಸಮಯ- ಇಷ್ಟವಾದ ಸಂಗತಿ ಹೇಳ್ತೀನಿ. ನೇರವಾಗಿ ಒಂದು ಕಾರ್ಯಕ್ರಮ ಆಗಿರಲಿ- ವಾಹಿಯಲ್ಲಿನ ಸಂಗತಿಗಳ ಬಗ್ಗೆ ಒಳ್ಳೆಯ ಕ್ರಿಟಿಸಿಸಂ ಬರಿಯ ಬಲ್ಲೆ ಆದರೆ ಅದರ ಬಗ್ಗೆ ಹೆಚ್ಚಿನ ಆಸಕ್ತಿ- ಬರಿಯಲೇ ಬೇಕೆಂಬ ಮಹತ್ತರವಾದ ಆಸೆ ಇಲ್ಲದೆ ಇರೋದ್ರಿಂದ ಉಹುಂ ಬರೆಯಲ್ಲ ... :-)
ಪಬ್ಲಿಕ್  ಟೀವಿ ಯಲ್ಲಿ ಕೆಂಪು ಬಣ್ಣದ ಬಗ್ಗೆ ಒಂದು ಕಾರ್ಯಕ್ರಮ ಪ್ರಸಾರ ಆಯ್ತು. ಅದರ ಮಹತ್ವ- ಹೀರೋಯಿನ್ ಗಳ ಹಾಟ್ ಫೆವರಿಟ್ ಕಲರ್.. ಅದನ್ನು ಧರಿಸಿದವರನ್ನು   ಕಂಡಾಗ ಆಗುವ  ಮನದ ಬದಲಾವಣೆಗಳು .. ಎಲ್ಲಾ ಹೇಳಿ ಬಿಟ್ರು ಫ್ರಾನ್ಸ್ ದೇಶದ ಯುನಿವರ್ಸಿಟಿ ಮಾಡಿದ ಪ್ರಯೋಗದ ಫಲಿತಾಂಶ. ಅದರ ಬಗ್ಗೆ ಓದಿದ್ದೆ ನಾನು .. ದೃಶ್ಯ ರೂಪದಲ್ಲಿ ಕಾಣುವ ಸುಯೋಗ. ಚೆನ್ನಾಗಿತ್ತು ಬಿಡಿ.  ಈ ಬಣ್ಣದ ಬಗ್ಗೆ ಪ್ರಯೋಗ ಮಾಡಿದಷ್ಟು ಹೊಸದು ಗೊತ್ತಾಗ್ತಾನೆ ಇ…