Posts

Showing posts from May 6, 2012

ಬ್ರೇಕಿಂಗ್- ಫ್ಲ್ಯಾಷ್ ನ್ಯೂಸ್

Image
ಮಿತ್ರರಾದ ಎಂ.ಎನ್. ಚಂದ್ರೇ ಗೌಡರು ಮಾಧ್ಯಲೋಕದಲ್ಲಿ ಸಾಕಷ್ಟು ನುರಿತ ಪತ್ರಕರ್ತ . ಟೀವಿಲೋಕದ ಚರ್ಚೆ ಗೌಡರು ಬರಹಗಳ ಲೋಕವನ್ನು ಸಹ ಅದ್ಭುತವಾಗಿ ಬೆಳೆಸಿದವರು.ಪ್ರಸ್ತುತ ಸ್ವಂತ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಗೌಡ್ರು ಚಾನೆಲ್ ಮಂದಿಗೆ ಒಂದಷ್ಟು ಸೂಕ್ಷ್ಮಗಳನ್ನು ಹೇಳಿದ್ದಾರೆ ಬರಹದ ಮೂಲಕ .. ಅವರು ಇತ್ತೀಚೆಗೆ ಈಗಿನ ಚಾನೆಲ್ಗಳ -ಅದರಲ್ಲಿ ಪ್ರಸಾರ ಆಗುತ್ತಿರುವ ನ್ಯೂಸ್ ಗಳ ಹಾವಳಿ -ತಪ್ಪುಗಳು ..ಎಲ್ಲದರ ಬಗ್ಗೆ ಸಖತ್ತಾಗಿ ತಿಳಿಸಿದ್ದಾರೆ.. ಓವರ್ ಟು ಚಂದ್ರೇ ಗೌಡ 


ಬ್ರೇಕಿಂಗ್ ನ್ಯೂಸ್ ಹಾಗೂ ಫ್ಲ್ಯಾಷ್ ನ್ಯೂಸ್ ನಡುವಿನ ವ್ಯತ್ಯಾಸ ಗೊತ್ತಿಲ್ಲದಿರುವವರು ಆಯಾ ವಿಭಾಗಗಳ ಮುಖ್ಯಸ್ಥರಾಗಿರುವುದರಿಂದಲೇ ಇಂಥಹ ಪ್ರಮಾದಗಳಾಗುತ್ತವೆ. ಸುದ್ದಿಗೆ ಬರ ಅಂಥ ಮುಖ್ಯಸ್ಥರು ಭಾವಿಸುತ್ತಾರೆ. ಆದ್ದರಿಂದಲೇ ಯಡಿಯೂರಪ್ಪ ಪೂಜೆ ಮಾಡಿದ್ದು ಬ್ರೇಕಿಂಗ್ ಆಗುತ್ತದೆ. ಸುದ್ದಿ ಸ್ಫೋಟ ಆಗುತ್ತದೆ. ಸಮೂಹ ಮಾಧ್ಯಮದ ಶಕ್ತಿ ಗೊತ್ತಿಲ್ಲದೇ ಇರುವವರು ನ್ಯೂಸ್ ಛಾನೆಲ್ಗಳಲ್ಲಿ ಹೆಚ್ಚು ಮಂದಿ ಇರುವುದರಿಂಲೇ ಇಂಥಹ ಸುದ್ದಿಗಳನ್ನು ಜನ ಕೇಳಬೇಕಾಗುತ್ತದೆ ಜತೆಗೆ ನೋಡಬೇಕಾಗುತ್ತದೆ. ಯಾವುದು ಸುದ್ದಿ ಅಂಥ ತಿಳಿದುಕೊಳ್ಳಬೇಕಾದರೆ ವರ್ಷಗಟ್ಟಲೆ ಹಿಡಿಯುತ್ತದೆ. ಕಾರಣ ಬಹುತೇಕ ಟಿವಿ ಚಾನೆಲ್ಗಳ ಸುದ್ದಿ ವಿಭಾಗಗಳಲ್ಲಿ ಕೆಲಸ ನಿರ್ವಹಿಸುವ ವರದಿಗಾರರು ಹಾಗೂ ಸಂಪಾದಕೀಯ ವಿಭಾಗದವರಿಗೆ ಒಂದು ಬೇಸಿಕ್ ತರಬೇತಿ ಆಗಿರುವುದಿಲ್ಲ.
 ಬಹುತೇಕ ಎಲ್ಲಾ ನ್ಯೂಸ್ ಪೇಪರ್ಗಳ…