Posts

Showing posts from July 1, 2012

ಹೀರೋ --ಹೀರೋಯಿನ್

Image
ಸಾಮಾನ್ಯವಾಗಿ ಅನೇಕ ಸಂಗತಿಗಳು ನಾವು ಅಂದುಕೊಂಡಂತೆ ಆಗಲ್ಲ ಬಿಡಿ ಇದು ಬದುಕು.. ಇತ್ತೀಚಿಗೆ ಒಂದು ಪತ್ರಿಕೆ ಬಿಡುಗಡೆ ಆಯಿತು.. ಸಂಪೂರ್ಣ ಟೀವಿ ಮಾಧ್ಯಮಕ್ಕೆ ಸಂಬಂಧಿಸಿದ ಪತ್ರಿಕೆ ಅದು.. ಅದಕ್ಕೆ ಸಂಬಂಧಿಸಿದಂತೆ ನನ್ನ ಶ್ರಮ,, ,ಪ್ರಾಮಾಣಿಕತೆ ನಿಸ್ವಾರ್ಥ ಸೇವೆ ಎಲ್ಲವು ಮೀಸಲಾಗಿಟ್ಟಿದ್ದೆ . ಅದು ಹಳೆಯ ಕಥೆ..  ಪತ್ರಿಕೆ ಬಿಡುಗಡೆ ಆಗುವುದಕ್ಕೆ ಒಂದೆರಡು ದಿನಗಳ ಮುನ್ನ ನಡೆದ ಒಂದು ಘಟನೆ ನನ್ನ ಮನಸ್ಸಿನ ಸ್ವಾಸ್ಥ ಕೆಡಿಸಿತು . ಅದು ಸರಿಯಾಗುವಷ್ಟರಲ್ಲಿ ಮತ್ತೊಮ್ಮೆ ಆಘಾತ ಆಗುವ ಸಂಗತಿ ನಡೆಯಿತು.. ಬಿಡಿ ಅದೊಂದು ದೊಡ್ಡ ಕಥೆ.. ಪತ್ರಿಕೆ  ಬಿಡುಗಡೆ  ದಿನದಂದು ಟೀವಿ ಹಾಗೂ ರೇಡಿಯೋ ಮಾಧ್ಯಮದಲ್ಲಿ  ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವಿತ್ತು.. ಅಂದು ಆ ಸನ್ಮಾನಕ್ಕೆ ಆಯ್ಕೆ ಆದವರು 91.1 ಆರ್ಜೆ ಸೌಜನ್ಯ,98.5 ಬೀಟ್ ರಾಜ,93.5 ಪ್ರದೀಪ್ ಮತ್ತು 92.7 ಶ್ರುತಿ .

ಅಂದಿನ ಕಾರ್ಯಕ್ರಮದಲ್ಲಿ ನಾನು ಇರಲಿಲ್ಲ..ಆದರೆ ನನಗೆ ಹೆಚ್ಚು ಖುಷಿ ಕೊಟ್ಟ ಸಂಗತಿ ಅಂದ್ರೆ ಆ ಪ್ರಶಸ್ತಿ ಪಡೆದ ರೇಡಿಯೋ ಮಿತ್ರ--ಮಿತ್ರೆಯರ ಕರೆ. ಅವರು ನಾನು ಬರೆದೆ ಇದ್ದ ಕಾರಣ ಕೇಳಿ ಹೃತ್ಪೂರ್ವಕವಾಗಿ ಥ್ಯಾಂಕ್ಸ್ ಹೇಳಿದರು.. ಅಷ್ಟೇ ಅಲ್ಲ ತಾವು ತುಂಬಾ ಮಿಸ್ ಮಾಡಿಕೊಂಡಿರುವ ಬಗ್ಗೆ ಹೇಳಿದರು.. ಹಲವಾರು ಘಟ ನೆಗಳಿಂದ ಬೇಸರವಾಗಿದ್ದ ಮನಕ್ಕೆ 91.1 ಜಾಕಿ ಪ್ರದೀಪ್, ರೆಡ್ ಎಫ್ ಎಂ ಪ್ರದೀಪ್ , ಸೌಜನ್ಯ,, ಬಡೆಕ್ಕಿಲ ಪ್ರದೀಪ್ , ಕಲಾವಿದೆ ಮೇ…