Posts

Showing posts from July 8, 2012

ಗೆರೆ- ರಾಜಕಾರಣ

Image
ನಿಮಗೆ ನಮ್ಮ ಹಾಸ್ಯ ಚಿತ್ರಗಾರರ ಚಿತ್ರಗಳನ್ನು ಆಗಾಗಾ ಪ್ರದರ್ಶಿಸಲೇ ಬೇಕಾಗಿದೆ. ಯಾಕೆಂದ್ರೆ ಅಷ್ಟೊಂದು ಚೆನ್ನಾಗಿದೆ ಮಾರಾರ್ರೆ ! ಅವರೆಲ್ಲರ ಗಮನ  ರಾಜ್ಯ ರಾಜಕಾರಣದತ್ತ ... ಪ್ರತಿಯೊಂದು ಗೆರೆಯು ಅನೇಕ ವಾಸ್ತವತೆ ಬಿಚ್ಚಿಡುತ್ತಿದೆ .. ಸತೀಶ್ ಆಚಾರ್ಯ ರಘುಪತಿ ಶೃಂಗೇರಿ , ಡಾ. ಸತೀಶ್ ಶೃಂಗೇರಿ, Sridhar Comaravalli , ಪಿ .ಮಹಮ್ಮದ್ .ರೇಖಗಳ ಸವಿ ಹೀಗಿದೆ ..!

ಹಳ್ಳಿ ಹೈದ ಪ್ಯಾಟೆಗ್ ಬಂದ '

Image
ಒಂದೇ ಸಮನೇ ನಿಟ್ಟುಸಿರು, ಪಿಸುಗುಡುವ ತೀರದ ಮೌನ ತುಂಬಿ ತುಳುಕೊ ಕಂಗಳಲಿ, ಕರಗುತಿದೆ ಕನಸಿನ ಬಣ್ಣ ಎದೆಯಾ ಜೊಪಡಿಯಾ ಒಳಗೆ, ಕಾಳಿಡದೆ ಕುಲುಕಿದೆ ಒಲವು ಮನದ ಕಾರ್ಮುಗಿಲಿನ ತುದಿಗೆ, ಮಳೆಬಿಲ್ಲಿನಂತೆ ನೋವು ಕೊನೆಯಿರದ ಏಕಾಂತವೆ ಒಲವು 

ಒಂದೇ ಸಮನೇ ನಿಟ್ಟುಸಿರು, ಪಿಸುಗುಡುವ ತೀರದ ಮೌನ ತುಂಬಿ ತುಳುಕೊ ಕಂಗಳಲಿ, ಕರಗುತಿದೆ ಕನಸಿನ ಬಣ್ಣ 

ಜೀವ ಕಳೆವ ಅಮೃತಕೆ, ಒಲವೆಂದು ಹೆಸರಿಡಬಹುದೆ ಪ್ರಾಣ ಉಳಿಸೋ ಕಾಯಿಲೆಗೆ, ಪ್ರೀತಿ ಎಂದೆನ್ನಬಹುದೆ ಹೊಂಗನಸಾ ಚಾದರದಲ್ಲಿ, ಮುಳ್ಳಿನ ಹಾಸಿಗೆಯಲಿ ಮಲಗಿ ಯಾತನೆಗೆ ಮುಗುಳ್ನಗು ಬರಲು, ಕಣ್ಣಾ ಹನಿ ಸುಮ್ಮನೆ ಒಳಗೆ ಅವಳನ್ನೆ ಜಪಿಸುವೆದೆ ಒಲವೆ

ಜೀವ ಕಳೆವ ಅಮೃತಕೆ,ಒಲವೆಂದು ಹೆಸರಿಡಬಹುದೆ ಪ್ರಾಣ ಉಳಿಸೋ ಕಾಯಿಲೆಗೆ, ಪ್ರೀತಿ ಎಂದೆನ್ನಬಹುದೆ

ನಾಲ್ಕು ಪದದ ಗೀತೆಯಲಿ, ಮಿಡಿತಗಳ ಬಣ್ಣಿಸಬಹುದೆ ಮೂರು ಸ್ವರದ ಹಾಡಿನಲಿ, ಹೃದಯವನು ಹರಿಬಿಡಬಹುದೆ ಹುಕ್ಕಿಬರುವಾ ಕಂಠದಲಿ, ನರಳುತಿದೆ ನಲುಮೆಯ ಗಾನ ಬಿಕ್ಕಳಿಸುವಾ ಎದೆಯೊಳಗೆ, ನಗುತಲಿದೆ ಮಡಿದಾ ಕವನ ಒಂಟಿತನದ ಗುರುವೇ ಒಲವೇ...!!
ಎಫ್ಬಿಯಲ್ಲಿ ಅನೇಕರು ಅನೇಕ ಹೆಸರೂಗಳಿಂದ ನನಗೆ ಫ್ರೆಂಡ್ ಆಗಿದ್ದಾರೆ. ಕೆಲವು ಫೇಕ್ , ಆದಷ್ಟು ನಿಜ, ಮಗದಷ್ಟು ಕಾವ್ಯನಾಮ ಹೀಗೆ ಹತ್ತು ಹಲವಾರು.ಮೇಲೆ ನೀಡಿರುವ ಕವನ ಮಿತ್ರರೊಬ್ಬರ ಮನದ ಮಾತು. ಅವರ ಅನುಮತಿ ಪಡೆದು ಇಲ್ಲಿ ಅಂಟಿಸಿದ್ದೇನೆ. ಓದಿಕೊಳ್ಳಿ.


ಮನುಷ್ಯ ನಡೆಯುವ ದಾರಿಯಲ್ಲಿ ಹುಲ್ಲು  ಬೆಲೆಯಲ್ಲ ಅಂತಾರೆ ಅನುಭವಸ್ಥರು. ನಿಜ ಇರ ಬಹು…

ಕಾರ್ಟೂನಿಸ್ಟ್- ಜಾತಿ-ಜಗಳ

Image
ಸರ್ಕಾರದ ರಚನೆ ಜಾತಿ-ಜಗಳ ಸಿಎಂ -ಡಿಸಿಎಂ ಗಳ ಬಗ್ಗೆ  ಕಾರ್ಟೂನಿಸ್ಟ್ ಗಳಾದ  ಸತೀಶ್ ಆಚಾರ್ಯ,ರಘುಪತಿ ಶೃಂಗೇರಿ ,ಕೇಶವ್ ಸಸಿಹಿತ್ಲು,ಹರಿಶ್ಚಂದ್ರ ಶೆಟ್ಟಿ  ಈ ರೀತಿ ತಮ್ಮ ಗೆರೆಗಳ ಮೂಲಕ ವ್ಯಕ್ತ ಪಡಿಸಿದ್ದಾರೆ.. ಹಂಗೆ ಓದಿ ಹಿಂಗೆ ನಕ್ಕು ಬಿಡಿ !ಬೇಕಾದ್ರೆ ಯಾರಿಗೆಳೋಣ ನಮ್ಮ ಪ್ರಾಬ್ಲಮ್ಮು ಅಂತ ಬೇಕಾದ್ರೆ ಹಾಡಿ ಕೊಳ್ಳ ಬಹುದು !
ಜನಾಸಕ್ತಿ

Image
ಕನ್ನಡ ಕೋಟ್ಯಾಧಿಪತಿ ಕಾರ್ಯಕ್ರಮ ಹೆಚ್ಚು ಜನಾಸಕ್ತಿ ಪಡೆದ  ಕಾರ್ಯಕ್ರಮ. ಆವರೆಗೂ ಒಂದು ರೂಪದಲ್ಲಿ ಪುನೀತ್ ರನ್ನು ಕಂಡಿದ್ದ ವೀಕ್ಷಕ ಸಮುದಾಯ ಈಗ ಮತ್ತೊಂದು ರೂಪದಲ್ಲಿ ಕಾಣುವ ಅವಕಾಶ.ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುವ  ರಿಯಾಲಿಟಿ ಶೋಗಳಲ್ಲಿ ಜನಕ್ಕೆ ಹೆಚ್ಚು ಇಷ್ಟ ಆಗಿದ್ದು ಹಾಡಿನ ರಿಯಾಲಿಟಿ ಷೋ ಅದರಲ್ಲೂ ಸೀಸನ್-1 ಬಳಿಕ ಕಾಡಿಗೆ ಹೋದ ಪಡ್ಡೆ ಹೈಕಳುಗಳದ್ದು . ಅದರಲ್ಲಿ ನನ್ನ ಗಮನಕ್ಕೆ ಬಂದಿರುವಂತೆ ಎಲ್ಲ ರಿಯಾಲಿಟಿ ಶೋಗಳು ಹೆಚ್ಚು ಇಷ್ಟವೇನೂ ಆಗಲಿಲ್ಲ . ಸಾಮಾನ್ಯವಾಗಿ ಯಾವುದೇ ಆಗಲಿ ಸೀಸನ್ -1 ಇರುವಷ್ಟು ಆದ್ಯತೆ ನಂತರದಕ್ಕೆ ಇರಲ್ಲ. ಚಾನೆಲ್ನವರು  ನಮಗೆ ಟೀಆರ್ಪಿ ಸಖತ್ತಾಗಿದೆ ಅಂತ ಹೇಳಿದ್ರು ನೋಡುಗರು ಕಡಿಮೆ ಇರ್ತಾರೆ ಅಂಬೋದು ಖಂಡಿತ ಸತ್ಯವಾದ ಸಂಗತಿ.
ಆದರೆ  ಪುನೀತ್ ರಾಜ್ ಕುಮಾರ್ ಅವರ ಕೋಟ್ಯಾಧಿಪತಿ ಕಾರ್ಯಕ್ರಮ ಹೆಚ್ಚು ಆಕರ್ಷಿಸುತ್ತಲೇ ಬಂದಿದೆ. ಹಿರಿಯರ ಸ್ಪರ್ಧೆ ಆಯ್ತು ಈಗ ಕಿರಿಯರದ್ದು. ಶಾಲಾ ಮಕ್ಕಳ ಸ್ಪರ್ಧೆ ನಡಿತಾ ಇದೆ. ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ. ಪುನೀತ್ ರಾಜ್ ಕುಮಾರ್  ಅವರಿಗೆ ಇದು ಒಳ್ಳೆ ಅನುಭವ ಕೊಡುತ್ತದೆ.


ಪುನೀತ್ ರಾಜ್ ಕುಮಾರ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದ ನಟ. ಅವರ ಬಗ್ಗೆ ಅದೆಷ್ಟು ಪ್ರೀತಿ ಇದೆ ಅಂದ್ರೆ ವರ್ನಿಸೋಕೆ ಆಗಲ್ಲ ಬಿಡಿ. ಸಾಮಾನ್ಯವಾಗಿ ಸಿನಿಮಾ ಮ್ಯಾಗಜೈನ್ ಗಳಲ್ಲಿ  ಕೆಲವು ಹೀರೋ - ಹಿರೋಯಿನ್ ಗಳ ಬಗ್ಗೆ ಬರೆದಾಗ ಓದುವ ರೀತಿ ವರ್ಣಿಸೋಕೆ  ಆಗಲ್ಲ. ಅಂತಹ ಕೆಲವರ ಪಟ…

ಪ್ರತಿಭೆ

Image
ನಾನು ಸ್ವಲ್ಪ ದಿನಗಳಿಂದ ಸೋಮಾರಿತನ ಹಾಗೂ ಹಲವಾರು ಕಾರಣಗಳಿಂದ ಬ್ಲಾಗ್ ಕಡೆಗೆ ಗಮನ ಕೊಡುವುದನ್ನು ಬಿಟ್ಟಿದ್ದೆ.. ಆದರೆ ನಾನು ಬರೆದ ಬರಹಗಳನ್ನು ಓದುಗ ಮಿತ್ರ--ಮಿತ್ರೆಯರು ತಪ್ಪದೆ ಓದುವ ಪರಿಪಾಟ ಇಟ್ಟುಕೊಂಡಿದ್ದಾರೆ,ಪ್ರತಿಯೊಂದು ಬರಹಕ್ಕೂ ಒಳ್ಳೆಯ ಹಿಟ್ಸ್ ಸಿಗುತ್ತದೆ.. ಧನ್ಯವಾದಗಳು ನಿಮ್ಮ ಈ ವಿಶ್ವಾಸಕ್ಕೆ..:-)
ಸುವರ್ಣ ಸುದ್ದಿಯಾಹಿನಿಯಲ್ಲಿ ಪ್ರಸಾರ ಆಗುವ ಕೊಳಕು--ಬೆಳಕು ಕಾರ್ಯಕ್ರಮದ ಬಗ್ಗೆ ಬರೆದಾಗ ಮಿಶ್ರ ಅಭಿಪ್ರಾಯಗಳು ಪ್ರಕಟವಾಯಿತು.. ನನ್ನ ಓದುಗರು ಹೆಸರಿನ ಬಗ್ಗೆ ಮೂಗುಮುರಿದರು  ಸಚ್ಚಿ!! ಯಾರಿಗೂ ಈ ಹೆಸರು ಉಹುಂ ಇಷ್ಟ ಆಗ್ಲೇ ಇಲ್ಲ..

 ಹಿಂದಿ  ಜೀ ವಾಹಿನಿಯ DID  l'il masters 2012-2 ಡ್ಯಾನ್ಸ್ ರಿಯಾಲಿಟಿ ಷೋ.. ಅದರ ಜಡ್ಜ್ ಗಳು ಗೀತ ಕಪೂರ್,ಮರ್ಜಿ , ಗ್ರ್ಯಾಂಡ್  ಮಾಸ್ಟರ್  ಮಿಥುನ್ ಚಕ್ರವರ್ತಿ,ಅಲ್ಲದೆ ನಿರೂಪಕ ಜೈ,, ಜೊತೆಗೆ ಮಕ್ಕಳ ಡ್ಯಾನ್ಸ್ ಮಾಸ್ಟರ್ಗಳು ನೀರವ್, ರಾಘವ್  ಹೀಗೆ ... !
ಇದರಲ್ಲಿ ಭಾಗವಹಿಸಿರುವ ಮಕ್ಕಳ ಪ್ರತಿಭೆಗ ಅಬ್ಬೋ ಅಬ್ಬ!! ಅನ್ನುವಷ್ಟು ಚೆನ್ನಾಗಿದೆ.. ದೇಶವಿಡೀ ಆಯ್ದು ತಂದು ಮಕ್ಕಳ ಪ್ರತಿಭೆಯ ಈ ಕಾರ್ಯಕ್ರಮ ಸಿದ್ಧ ಪಡಿಸಿದ್ದಾರೆ.. ದಕ್ಷಿಣಭಾರತ ಮಕ್ಕಳು ಕಣ್ಣಿಗೆ ಕಾಣಲಿಲ್ಲ ಬಿಡಿ ಆ ವಿಷ್ಯ ! ಆದ್ರೆ ಪಶ್ಚಿಮ ಭಾರತದ ಅನೇಕ ಪ್ರತಿಭೆಗಳನ್ನು ಕಾಣುವ ಖುಷಿ ವೀಕ್ಷಕರಿಗೆ.. ನಾನು ಈ ಕಾರ್ಯಕ್ರಮದ ಆಡಿಶನ್ ಸಹ ವೀಕ್ಷಿಸಿದ್ದೆ... ವಾವ್ ಬೊಂಬಾಟ್ .(ಶನಿವಾರ--ಭಾನುವಾರ ರಾತ್ರಿ 9…

ಕಾರ್ಟೂನಿಸ್ಟ್ ಗಳ ಕೈಯಲ್ಲಿ ರಾಜಕೀಯ !

Image
ಇಂದಿನ ರಾಜಕೀಯ ಹೀಗಿದೆ.. ಸತೀಶ್ ಆಚಾರ್ಯ ರಘುಪತಿ ಶೃಂಗೇರಿ , ಡಾ. ಸತೀಶ್ ಶೃಂಗೇರಿ, Sridhar Comaravalli , ಪಿ .ಮಹಮ್ಮದ್ ರಚಿಸಿರುವ ಪ್ರಸ್ತುತ ರಾಜ್ಯ ರಾಜಕಾರಣದ ವಿಡಂಬನೆಯ ರೇಖಾಭಿಪ್ರಾಯಗಳು  ಹೀಗಿವೆ .ಸಿಂಪ್ಲಿ ಎಂಜಾಯ್ ಮಾಡ್ತಾ ರಾಜ್ಯದ ಕಥೆ  ಇಷ್ಟೇ ಕಣ್ರಪ್ಪೋ  ಎಂದು ಹಾಡಿಕೊಳ್ಳಬಹುದು ...ಕೊಳಕು ಬೆಳಕು

Image
ಸುವರ್ಣ 24x7 ವಾಹಿನಿಯು ಸಾಕಷ್ಟು ಉತ್ತಮ ಕಾರ್ಯಕ್ರಮಗಳನ್ನು ನೀಡಿದೆ.ಅಷ್ಟೇ ಅಲ್ಲದೆ ವೀಕ್ಷಕ ಪ್ರಭಾಗಳಿಗೆ ಬೇಕಾದಂತೆ  ಕಾರ್ಯಕ್ರಮಗಳಲ್ಲೂ ಸಿದ್ಧ ಪಡಿಸಿ ವೀಕ್ಷಕ ಪ್ರಭುಗಳ ಮನ ಗೆದ್ದಿರುವುದು ಹಳೆಯ ಸಂಗತಿ.. ಆರಂಭದ ಚೀಫ್ ಆಗಿದ್ದ ಶಶಿಧರ್ ಭಟ್  ಅವರ ಸಾಧನೆ,, ನಂತರ ರಂಗನಾಥ್ ಸಾರ್ ಬಂದ ಬಳಿಕ ಆದ ಬದಲಾವಣೆ  ವೀಕ್ಷಕರಿಗೆ ತಲಪುವಂತೆ ಮಾಡಿದ್ದು ಹಳೆಯ ಕಥೆ.. ಆದ್ರೆ ಆ ಚಾನೆಲ್ ಅದ್ಯಾಕೋ ಕಳೆದ ಕೆಲವು ತಿಂಗಳಿಂದ ತನ್ನ ರುಚಿ ಕಳೆದುಕೊಂಡಿದೆ.. ಆ ಚಾನೆಲ್ ಬಿಟ್ಟು ಬೇರೆ ಕಡೆ ಕಣ್ಣು ಹಾಕುವ ಪರಿಸ್ಥಿತಿ..!
ಈ ಇರಿಟೆಶನ್  ದೂರ ಮಾಡಿದ್ದು ಕೊಳಕು ಬೆಳಕು ಕಾರ್ಯಕ್ರಮ.. ಮದನ್ ಮಲ್ಲು ಅವರ ಈ ಹೊಸ ಪ್ರಯತ್ನ ತುಂಬಾ ಚೆನ್ನಾಗಿದೆ.. ಆದರೆ ಹೆಸರು ಉಹುಂ!! ಇಷ್ಟ ಆಗಲಿಲ್ಲ.. ಯಾಕೆಂದ್ರೆ ಕತ್ತಲಿಂದ ಬೆಳಕಿಗೆ ತರುವುದು ನಮ್ಮ ಪ್ರಯತ್ನ ಅನ್ನುವ ಉದ್ದೇಶದಲ್ಲಿ ಹೀಗೆ ಹೆಸರು ಇಟ್ಟಿರ ಬಹುದು ಆದರೆ ಬೆಳಕಿನಲಿ ಕಾಣುವ ಮುಖಗಳ ಮನಸ್ಸುಗಳು ಅದೆಷ್ಟು ಕತ್ತಲಿನಿಂದ  ತುಂಬಿರುತ್ತದೆ ಎನ್ನುವ  ನಿಚ್ಚಳ ಸತ್ಯ ಅವರಿಗೆ ಗೊತ್ತಾದಾಗ ! ಬಿಡಿ ಸಿನಿಕತನ ಬಿಟ್ಟು ಹೇಳೋದಾದರೆ  ಒಳ್ಳೆಯ ಪ್ರಯತ್ನ. ಯಾವ ಪ್ರತಿಭೆಗಳ ಮನದಲ್ಲಿ ಆಸೆ ಹುಟ್ಟಿಸಿದ್ದಿರೋ  ಅವರಿಗೆ ಅವಕಾಶ ಮರಿಯದೆ ಕಲ್ಪಿಸಿಕೊಡಿ ಮದನ್ ಮಲ್ಲು . ಅವರ ಬಾಳು ಭವ್ಯ ವಾಗುತ್ತದೆ ..ನಿಮ್ಮ ಈ ಪ್ರಯತ್ನ ತುಂಬಾ ಚೆನ್ನಾಗಿದೆ..

ಹೊನ್ನಪ್ಪ ಭಾಗವತರ್ ಮೊಮ್ಮಗಳು  ಭರತ್ ಭಾಗವತರ್ ಮಗಳು ಮೇಘಶ್ರೀ ಭಾಗವತರ್.. ಕನ…