Posts

Showing posts from July 22, 2012

ಕಾಲಗರ್ಭ

Image
2005 ರಲ್ಲಿ 'ಪ್ರಜಾಮತ' ವಾರ ಪತ್ರಿಕೆಯಲ್ಲಿ ಒಂದೇ ಸಂಚಿಕೆಯಲ್ಲಿ ಪ್ರಕಟಗೊಂಡಿದ್ದ
  ಗೆಳೆಯ ಕರವೆನಲ್ನುಡಿ ಪತ್ರಿಕೆಯಲ್ಲಿ  ಈಗ ಬದುಕ ಕಾಣುತ್ತಿರುವ ಮಿತ್ರ ಜ್ಞಾನೇಂದ್ರ ಕುಮಾರ್ ಬರೆದ ಹನಿಗವಿತೆಗಳಿವು. ಅವರು ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ರು.. ನೀವು ಓದಿ ಅಂತ ನಿಮ್ಮ ಮುಂದೆ ಇಟ್ಟಿದ್ದೀನಿ..

1.ಬದಲಾವಣೆ...!
ನಿನ್ನ
ಪ್ರೀತಿಗೆ
ಬದಲಾವಣೆ
ಬಯಸಿದ್ದೇ
ತಪ್ಪಾಯಿತು
ನೀನು
ನನ್ನನ್ನೇ
ಬದಲಾಯಿಸಿದೆ.

2.ಮಲ್ಲಿಗೆ...!

ಮಲ್ಲಿಗೆ
ನೀ-ಹೊರಟದ್ದು
ಎಲ್ಲಿಗೆ...?
ಎಂದ ಕವಿ ಪ್ರಶ್ನೆಗೆ
ಆ-ಮಲ್ಲಿಗೆ
ಉತ್ತರಿಸದೇ ಹೋಯಿತಂತೆ
ಎಲ್ಲಿಗೆಂದರೆ..?? ಎಲ್ಲಿಗೆಂದರೆ..???
ಕವಿ ಪತ್ನಿಯ ತುರುಬಿಗೆ

3.ಪ್ರಿಯೆ...!
ಅಪ್ಪಿ-ಮುದ್ದಾಡಬೇಕು
ಸಿಗುತ್ತೀಯಾ..??
ಪ್ರಿಯ-ಭಾರೀ ಹಿಂದುಳಿದಿದ್ದೀ
ಇದು ಐಟಿ-ಬಿಟಿ ಯುಗ...!
ಚಾಟಿಂಗ್ ನಲ್ಲೇ
ಅವೆಲ್ಲಾ ಮುಗಿಯಬೇಕು

4.ಭಾಷೆ....!

ಕನ್ನಡ-ಇಂಗ್ಲೀಷ್
ಹಿಂದಿ-ತಮಿಳು
ಹೀಗೆ...
ಯಾವ ಭಾಷೆಗಳ
ಗೊಡವೆ ಗೊತ್ತಿಲ್ಲದ
ಎದುರು ಮನೆ ಗುಂಡ
ಪಕ್ಕದ ಮನೆ ಪದ್ಮಳ
ಕಣ್ ಭಾಷೆ
ಅರ್ಥಮಾಡಿಕೊಂಡ

5.ವಿರಹ...!

ಪರಿಚಯದ
ರನ್ ವೇಯಿಂದ
ಪ್ರೀತಿ-ಇನ್ನೇನು
ಹಾರಬೇಕೆನ್ನುವಷ್ಟರಲ್ಲಿ
ಅದರ ಕನಸೆಂಬ ರೆಕ್ಕೆಗೆ
ಪಾರ್ಶ್ವವಾಯು

6.ಕನಸು..!

ಜಂಜಾಟಗಳಿಂದ
ದೂರಸರಿದು
ಸಂತನಾಗಬೇಕು
ಅಂದುಕೊಳ್ಳುತ್ತೇನೆ
ಏನು ಮಾಡಲಿ...?
ಅಷ್ಟರೊಳಗೆ
ಕನಸು ಮುಗಿದಿರುತ್ತದೆ
ಎಚ್ಚರವಾಗಿರುತ್ತೇನೆ

7.ಸುಂದರಿ..!

ಇವಳು
ಮಿಸ್ ವರ್ಲ್ಡ್
ಆಗುವಷ್ಟು
ಅಪ್ರತಿಮ

ಮಳೆ-ವಾಹಿನಿಗಳು

Image
ಓ  ಸೂಪರ್ .. ಮಳೆ ನೋಡುವಾಗ.. ಆ  ಮಳೆಯನ್ನೂ ಆಸ್ವಾದಿಸುವಾಗ, ನೆನೆದಾಗ , ಒದ್ದೆಮುದ್ದೆಯಾದಾಗ ಉಂಟಾಗುವ  ಭಾವ. ಮಳೆ ಅಂದ್ರೆ ನಮ್ಮೂರು ಕಡೆ ಬರಬೇಕು ಮಾರಾರ್ರೆ ಅಂತ ನಮ್ಮ ಮಲೆನಾಡಿನ ಫ್ರೆಂಡ್ಸು ಹೇಳ್ತಾ ಇರ್ತಾರೆ ಅದು ಸತ್ಯ ಮಳೆ ಅಂದ್ರೆ ... ಯಪ್ಪಾ ಆಹಾ .. ಬ್ಯಾಡ ನಮ್ಮಂತಹ ಬೆಂಗಳೂರಿಗರ ಕಥೆ..! ನೆನೆದರೆ ಶೀತ..ನಿಂತರೆ ಕಾಲು ನೋವು, ಓಡಾಡಿದರೆ ಇನ್ನೇನೋ ಅನ್ನುತ್ತ ಗೊಣಗಿದರು ಮಳೆಯನ್ನೂ, ಅದರ ಸೊಬಗನ್ನು ಸವಿಯುವುದಲ್ಲಿ ನಾವೇನು ಹಿಂದೆ ಉಳಿದಿಲ್ಲ :-)

ಆದರೆ ಅದ್ಯಾಕೋ ಗೊತ್ತಿಲ್ಲ ವರುಣ ನಮ್ಮ ಊರತ್ತ ಹೆಚ್ಚು ಗಮನ ಕೊಟ್ಟಿಲ್ಲ. ಆತನ ರೌದ್ರಕ್ಕೆ ಬೆಂಗಳೂರಿನಲ್ಲಿ ಕನಿಷ್ಠ ಹತ್ತು ಮರ ಉರುಳಿರ  ಬೇಕಿತ್ತು.. ಬೇಕಾದಷ್ಟು ಕಾರುಗಳು ಝಕಂ ಆಗಿರ ಬೇಕಿತ್ತು.. ಅದ್ಯಾವುದೂ ಆಗಿಲ್ಲ ಅಂದ್ರೇನು ?? ಏನ್ ಕಥೆ ... ? ಶಿವ ಶಿವ  ವಾಟ್ ಹ್ಯಾಪನ್? ಅಂತ ಕಾರಣ ಹುಡುಕಿದಾಗ.. ಅವ್  ..ನಮಗೆ ತಿಳಿದುಬಂದ ಸಂಗತಿ ನಮ್ಮ ವಾಹಿನಿಯರ ನ್ಯೂಸ್ ಅಬ್ಬರ..!
 ಛೆ ! ಛೆ ! ಛೆ! ಇದೇನು ಅನ್ಯಾಯ.. ಘೋರ ಅಪವಾದ ಅಂತ ಮಹಾಜನತೆ ರೇಗಬೇಡಿ.. ನಮ್ಮ ವಾಹಿನಿಗಳು ಕೋಪ ಮಾಡಿಕೊಳ್ಳ ಬಾರದು..ನಿಜ ಹೇಳ್ತೀನಿ ಬುದ್ದಿ .. ನಮಗೆ ಸಿಕ್ಕ ವರದಿ, ನಮ್ಮ ಟೀವಿ ನೋಡಿದ ಅನುಭವ ಎಲ್ಲವನ್ನು ಜತೆಯಾಗಿಟ್ಟು ಕೊಂಡು  ಹೇಳೋದಾದ್ರೆ  ಈ ಸಮಸ್ಯೆಗೆ ಕಾರಣ ನಮ್ಮ ವಾಹಿನಿಯವರು..!
 ಹೆಂಗೆ ಅಂತೀರಾ... ಮಳೆಗಾಲ ಶುರು ಆದ ತಕ್ಷಣ ಅದರ ಪಾಡಿಗೆ  ಅದು ಅಂದ್ರೆ ಮಳೆ ಸುರಿಯುತ್ತೆ. ಆದ್ರ…

ವ್ಯಂಗ್ಯ ರೇಖೆ-ದೇಶ-ರಾಜ್ಯ

Image
ಮತ್ತೊಂದಷ್ಟು ವ್ಯಂಗ್ಯ  ರೇಖೆಗಳು ನಿಮಗಾಗಿ. ಕೇವಲ ರಾಜ್ಯ    ರಾಜಕಾರಣವಲ್ಲ   ದೇಶದ ರಾಜಕೀಯ ಬಗ್ಗೆ ಗೆರೆಗಳ ಮೂಲಕ ವಸ್ತುಸ್ಥಿತಿಯನ್ನು ತೋರಿಸಿದ್ದಾರೆ.. ಡಾ.ಸತೀಶ್ ಶೃಂಗೇರಿ, ಸತೀಶ್ ಆಚಾರ್ಯ ,ರಘುಪತಿ ಶೃಂಗೇರಿ, ಚಂದ್ರ ಶೇಖರ ಶೆಟ್ಟಿ,,ಜೀವನ್  ಶೆಟ್ಟಿ,, ಕುಶಾಲ್ ಭಟ್ಟಾಚಾರ್ಯ ...

ಚಂ ಚಂ ಚಂಪಾಕಲಿ

Image
ನನ್ನ ಅಪ್ಪ ಸದಾ ಹೇಳ್ತಾ ಇದ್ದ ಮಾತು ಏನು ಗೊತ್ತ ಮ್ಯಾಮ್ .. ನನಗೆ 1982ರಲ್ಲಿಯೇ  ಪದ್ಮಶ್ರೀ ಸಿಕ್ಕಿದೆ ಅಂತ .. ಯಾಕೆಂದ್ರೆ ನಮ್ಮ ಅಪ್ಪ -ಅಮ್ಮ ಮಾಡುವೆ  ಆದದ್ದು ಆಗ, ಅಮ್ಮನ ಹೆಸರು ಪದ್ಮಶ್ರೀ . ಹೀಗೆ ಮಾತಿಗೆ ಶುರುವಿಟ್ಟುಕೊಂಡ ಕಲಾವಿದೆ ಜೀ  ಕನ್ನಡ ವಾಹಿನಿ ಯಲ್ಲಿ ಪ್ರಸಾರ ಆಗ್ತಾ ಪಾಂಡುರಂಗ ವಿಠಲ ಧಾರಾವಾಹಿಯ ಮುಖ್ಯ ಪಾತ್ರಧಾರಿ ಮೇಘಶ್ರೀ  ಭಾಗವತರ್.
ಪತ್ರಿಕೆಯೊಂದಕ್ಕೆ ಮಾಡಿದ ಸಂದರ್ಶನದ ಸಮಯದಲ್ಲಿ ಆ ಹೆಣ್ಣುಮಗಳು ಹೆಚ್ಚು ಭಾವುಕರಾಗಿದ್ರು. ಅದು ಸಹಜ ಬಿಡಿ. ಹಾಸ್ಯ ಪಾತ್ರ ಮಾಡಿದ ತಕ್ಷಣ ಅವರು ಕಿಲಕಿಲ ಅಂತಾನೆ ಮಾತಾಡ ಬೇಕು ಅಂತೇನು ಇಲ್ಲ ಅಲ್ವ.. ಆದ್ರೆ ಈ ಹೆಣ್ಣುಮಗಳ ಮಾತುಗಳನ್ನು ಕೇಳಿದಾಗ ಬಣ್ಣದ ಲೋಕದಲ್ಲಿ ನಗುವಾಗ ಎಲ್ಲ ನೆಂಟರು ಅಳುವಾಗ ಯಾರು ಇಲ್ಲ ಅನ್ನುವಂತಹ ಪರಿಸ್ಥಿತಿಯನ್ನು ಈ ಕಲಾವಿದೆ ತನ್ನ ಬದುಕಲ್ಲಿ ಎದುರಿಸಿದ್ದರು. ಅಪ್ಪ ಭರತ್ ಭಾಗವತರ್ ಪೋಷಕ ನಟರಾಗಿಯೇ ತೃಪ್ತಿ ಪಟ್ಟು ಕೊಳ್ಳ ಬೇಕಾಯ್ತು. ಅಜ್ಜ ಹೊನ್ನಪ್ಪ ಭಾಗವತರ್- ಅಪ್ಪ ಭರತ್ ಭಾಗವತರ್, ಅಕ್ಕ ಲಕ್ಷ್ಮಿಶ್ರೀ ಭಾಗವತರ್  ಹಾದಿಯನ್ನು ಹಿಡಿದ ಕಲಾವಿದೆ  ಮೇಘಶ್ರೀ ಭಾಗವತರ್ ತಮ್ಮ ತಂದೆಯ ಮರಣದ ಸಮಯವನ್ನು ಜ್ಞಾಪಿಸಿಕೊಳ್ಳುತ್ತಾ.. ಅವರಿಗೆ ಒಮ್ಮೆ ಆಕ್ಸಿಡೆಂಟ್ ಆಯಿತು, ಅಲ್ಲಿಂದ ಅವರ ಬದುಕಲ್ಲಿ ಮುಟ್ಟಿದ್ದೆಲ್ಲ ಮಣ್ಣು. ಸದಾ ಅನಾರೋಗ್ಯ..

 ಅವರು ಆಸ್ಪತ್ರೆಯಲ್ಲಿ ಮರಣದ ಜೊತೆ ಹೋರಾಡುತ್ತಾ ಮಲಗಿದ್ದಾಗ ಚಾನೆಲಗಳು ಅವರು ಸತ್ತರು ಎನ್ನುವ  ನ್ಯೂಸ್ ಪ್ರ…