Posts

Showing posts from September 9, 2012

ಗೆರೆ ಮೇಲೆ ವಕ್ರದೃಷ್ಟಿ

Image
ಅಸಮಾನ್ಯ ಬುದ್ಧಿವಂತ ವರ್ಗದಲ್ಲಿ ವ್ಯಂಗ್ಯ ಚಿತ್ರಕಾರರು ಸೇರ್ಪಡೆ ಆಗಿದ್ದಾರೆ. ಅವರ ಗೆರೆಗಳಲ್ಲಿನ ಸೌಂದರ್ಯವನ್ನು ಸವಿಯದವರು ಯಾರೂ ಇಲ್ಲ ! ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಎಲ್ಲರ ಬಾಲ್ಯ  ಗೆರೆಗಳ ಆನಂದದ  ಸವಿಯಿಂದ ಆರಂಭ ಆಗುತ್ತದೆ. ಅಮರ ಚಿತ್ರಕಥ, ಫ್ಯಾಂಟ0 , ಅರೇಬಿಯನ್ ನೈಟ್ಸ್..ಹೀಗೆ ಭರಪೂರ ಖುಷಿ ಹಂಚುತ್ತಾ ಬಾಲ್ಯದ ಖುಷಿ ಹೆಚ್ಚಿಸುತ್ತೆ. ಓದುವ ಗೀಳನ್ನು ಉಂಟುಮಾಡುವ ಮಾಯಾಗಾರುಡಿಗ ಗೆರೆಗಳು. ಅದೇ ರೀತಿ ಬೆಳೆದಂತೆ ಪೂರಕ ಕಾರ್ಟೂನ್ಗಳು ನಮ್ಮ  ವಿಕಸನ ಹೆಚ್ಚಿಸುತ್ತೆ. ನನಗೆ ಅತ್ಯಂತ ಆಶ್ಚರ್ಯಕರ ಬುದ್ಧಿವಂತರಾಗಿ ಕಂಡವರು ಕಾರ್ಟೂನಿಸ್ಟ್ ಗಳು. ಅವರು ವಿಷಯವನ್ನು ಗ್ರಹಿಸಿ, ಅದಕ್ಕೆ ಗೆರೆ ರೂಪ ಕೊಡುತ್ತಾರೆ . ಆ ಗೆರೆಗಳು ಓದುಗನ ಮನಕ್ಕೆ ಉಲ್ಲಾಸ ನೀಡುವುದಲ್ಲದೆ ಸಮಾಜದ ವಸ್ತುಸ್ಥಿತಿಯನ್ನು  ನೇರವಾಗಿ ತಿಳಿಸಿ ಹೇಳುತ್ತದೆ.
ಈಗ ಅದೇ ಕಾರ್ಟೂನಿಸ್ಟ್ ಗೆರೆಗಳ ಮೇಲೆ ವಕ್ರ ದೃಷ್ಟಿ ಬಿದ್ದಿದೆ. ಇದು ಅತ್ಯಂತ ವಿಷಾದಕರ ಸಂಗತಿ.. ಅದರ ಬಗ್ಗೆ ಮತ್ತು ರಾಜಕೀಯ ಅಂಶಗಳ ಬಗ್ಗೆ ಕಾರ್ಟೂನಿಸ್ಟ್ ಗಳು ಹೇಗೆ ದೃಷ್ಟಿಕೋನ ಹೇಗಿದೆ ಅಂಬೋದನ್ನು  ಈ ಚಿತ್ರಗಳ  ಮೂಲಕ ನೋಡುವ ಬನ್ನಿ..
ಡಾ.ಸತೀಶ್ ಶೃಂಗೇರಿ , ಸತೀಶ್ ಆಚಾರ್ಯ, ರಘುಪತಿ ಶೃಂಗೇರಿ, ಕಾಂತೇಶ್ ಬಡಿಗೇರ್ ,ಕುಶಾಲ್ ಭಟ್ಟಾಚಾರ್ಯ ,ಬಿ.ವಿ. ಪಾಂಡುರಂಗರಾವ್  ಗೆರೆ ಬರಹಗಳು ಹೀಗಿವೆ.. 




















ಭ್ರಷ್ಟಾಚಾರ ವಿರೋಧಿಸಿದ್ದಕ್ಕೆ ಕಾರ್ಟೂನಿಸ್ಟ್ ಬಂಧನ : ಈ ಲಿಂಕ್ ಕ್ಲಿಕ್ಕಿಸಿ ..http…

ಅಮ್ಮ -ಅತ್ತೆ

Image
ಟೀವಿ ನೈನ್  ವಾಹಿನಿಯಲ್ಲಿ ಜೀವನ ಚಕ್ರ ಅನ್ನುವ ಒಂದು ಕಾರ್ಯಕ್ರಮ ಪ್ರಸಾರ ಆಗುತ್ತದೆ. ಅದರಲ್ಲಿ ವಾಸ್ತವ ಸಂಗತಿಗಳ ಚಿಂತನ -ಮಂಥನದ ಭರಪೂರ ಸಾಮಗ್ರಿ ಅದರಲ್ಲಿದೆ.
ಇತ್ತೀಚಿಗೆ ಭಾರಿ ಗಲಾಟೆ ಎಬ್ಬಿಸಿದ್ದ ಸತ್ಯ ಮೇವ ಜಯತೆ ರೀತಿಯ ಷೋ ಇದು. ನಮ್ಮಲ್ಲಿ ಪಟ್ಟಣಗಳನ್ನು ಮಾತ್ರ ಕಂಡವರಿಗೆ, ಕೇವಲ ಒಳ್ಳೆಯದನ್ನು ಮಾತ್ರ ಕಂಡವರಿಗೆ  ದೀಪದ ಅಡಿಯ ಕತ್ತಲನ್ನು ತೋರಿಸುವ ಪ್ರಯತ್ನ ಈ ಕಾರ್ಯಕ್ರಮದಿಂದ ನಡೀತಾ ಇದೆ. ಆರೋಗ್ಯ, ಸಾಮಾಜಿಕ ಸ್ಥಾನಮಾನ, ವ್ಯವಸ್ಥೆಯಲ್ಲಿರುವ   ಏರುಪೇರು ಎಲ್ಲವೂ .. ಪ್ರತಿಯೊಂದು ಈ ಕಾರ್ಯಕ್ರಮದಲ್ಲಿದೆ.[ಪಿ ಸಾಯಿನಾಥ್ ಅವರ ಅನುವಾದಿತ ಕೃತಿ ಬರ ಅಂದ್ರೆ ಎಲ್ಲರಿಗೂ ಇಷ್ಟ  (ಪತ್ರಕರ್ತ ಜಿ .ಎನ್. ಮೋಹನ್ ಅನುವಾದ  ) ಓದಿದ ಬಳಿಕ ಈ ಕಾರ್ಯಕ್ರಮದ ಅನೇಕ ಸಂಗತಿಗಳಿಂದ ಮನಸ್ಸು ಬೇಸರ ಗೊಳ್ಳುತ್ತದೆ.. ವಾಸ್ತವ ತುಂಬಾ ಕಹಿ ಅಲ್ವ !]
ಜೀವನ ಚಕ್ರ ಕಾರ್ಯಕ್ರಮದ ನಿರೂಪಣೆ ಮಾಡುತ್ತಿರುವವರು ರಾಧಿಕ. ಈ  ಹಸನ್ಮುಖಿ ಕೈಲಿ ಇಂತಹ ಕಾರ್ಯಕ್ರಮಗಳು ತುಂಬಾ ಕೂಲ್ ಆಗಿ ಸಾಗುತ್ತದೆ. ಕಾರಣ ಇಷ್ಟೇ ಅವರು ಎಂದಿಗೂ ಆಟಿಟ್ಯೂಡ್  ಕಂಡು ಬರಲ್ಲ.
ಕಿರುತೆರೆಯ ಬಹುತೇಕ ಹೊಸ ನಿರೂಪಕರಿಗೆ ಈ ಹೆಣ್ಣುಮಗಳು ಅಮ್ಮನಂತೆ. ಅಂದ್ರೆ ಬಂದ ಹೊಸಬರನ್ನು ವಿಶ್ವಾಸದಿಂದ  ತಿದ್ದುವ, ಮಾರ್ಗದರ್ಶನ ಮಾಡುವ ಗುಣದ ಬಗ್ಗೆ ತುಂಬಾ ಒಳ್ಳೆಯ ಅಭಿಪ್ರಾಯಗಳು ಇವೆ. ಎಲ್ಲರಿಗೂ ಇರುವಂತಹ  ಗುಣವಲ್ಲ ಇದು.
ರಾಧಿಕ ಅವರನ್ನು ಅಮ್ಮ ಅಂತ ಕರೆದರೆ .. ಮತ್ತೊಬ್ಬರು ಅತ್ತೆ ಎನ್ನ…