Posts

Showing posts from September 16, 2012

ಹರಸಿ.. ಹಾರೈಸಿ...!

Image
Thanks to all :-)


ವರುಷಕೊಂದು ಹೊಸತು  ಜನ್ಮ  ಹರುಷಕೊಂದು  ಹೊಸತು  ನೆಲೆಯು  ಅಖಿಲ  ಜೀವಜಾತಕೆ ನೆನಪಲ್ಲಿ ಅಳಿಯದೆ ಉಳಿದಿರುವ ಸಾಲುಗಳು. ಮನುಷ್ಯನಿಗೆ ಆ ಸೌಭಾಗ್ಯ ಇಲ್ಲ ಆದರು  ಅನುಭವಿ ಬದುಕನ್ನು ನೆನಪಿಸಿಕೊಳ್ಳುತ್ತಾ ಜನ್ಮದಿನ ಆಚರಣೆ ಮಾಡಿಕೊಳ್ಳುವುದು  ಅನೂಚಾನ ! ನನ್ನ ಬ್ಲಾಗ್ ಗೆ ಮತ್ತೊಂದು ಜನ್ಮದಿನ. ಸೆಪ್ಟೆಂಬರ್ 10ಕ್ಕೆ ಹುಟ್ಟಿದ ಬ್ಲಾಗ್ ಈ ವರ್ಷ ಆ ದಿನ ಆಚರಿಕೊಳ್ಳಲು ಆಗದ ಕಾರಣ ವೈಯುಕ್ತಿಕ ಕೆಲಸಗಳು..ಜನ್ಮದಿನವನ್ನು ಹೆಚ್ಚಿಸಿ ಮಾಡಿದರೆ ಒಳ್ಳೆಯದು ಅನ್ನುವ ನಂಬಿಕೆಗೆ ಬದ್ಧಳಾಗಿ ವಾಸುದೇವ ಬರ್ತಡೇ ಯನ್ನು ಇಂದು ಆಚರಿಸುತ್ತಾ ಇದ್ದೇನೆ.. ಹರಸಿ.. ಹಾರೈಸಿ...!
ಅಪ್ಪನ ಹೆಸರು ವಾಸುದೇವ. ಚಿಕ್ಕಂದಿನಲ್ಲೇ ನಮ್ಮನ್ನು ಶಾಶ್ವತವಾಗಿ  ಅಗಲಿದ ಅಪ್ಪನ ನೆನಪು ಸದಾ ಜೊತೆ ಜೊತೆಯಲ್ಲೇ.. ಆದ್ದರಿಂದ ನನ್ನ ಬ್ಲಾಗ್ ವಾಸುದೇವ ಹೆಸರಿನಿಂದ ಹೊರ ಬಂದಿತು. ಬ್ಲಾಗಿಗೆ ಇಡುವ ಅನೇಕಾನೇಕ ಸುಂದರ , ಯೂನಿಕ್ ಹೆಸರಿಗಿಂತ ಈ ಪರಮಾಪ್ತ, ಆಪ್ಯಾಯ ಹೆಸರು ಸೂಕ್ತ ಅನ್ನಿಸಿತ್ತು.  ಒಮ್ಮೆ ಆರಂಭಿಸಿದ ಬ್ಲಾಗ್ ನಡೆಸಲು ಅಸಾಧ್ಯ ಅಂತ ಅನ್ನಿಸಿತು . ಆಗ ಆದನ್ನು ಬಿಟ್ಟು ಮೌನವಾದೆ ಒಂದು ವರ್ಷ . ಯಾಕೋ ಮನದ ಮೂಲೆಯಲ್ಲಿ ಬೇಜಾರಿತ್ತು . ಮತ್ತೆ ವಾಸುದೇವ ಪುನರ್ಜನ್ಮ ತಾಳಿ ಜನಗಳ ಮುಂದೆ ಬಂದಿದ್ದು ಟೀವಿ ಕಾರ್ಯಕ್ರಮಗಳ ವಿಶ್ಲೇಷಣೆಯೊಂದಿಗೆ.ನನ್ನ ಈ ಕನಸಿಗೆ ಬೆಂಬಲ ನೀಡಿದವರು ಅಮ್ಮ ಮತ್ತು ಅಣ್ಣ  ರವಿ :-)  ಬರೆಯುವುದು ನನಗೆ ಎಂದಿಗೂ ಕಷ್ಟ ಕೆಲಸವಲ್ಲ . …