Posts

Showing posts from September 23, 2012

ಕಾರ್ಟೂನ್ .. ಕಾರ್ಟೂನ್

Image
ಮತ್ತೊಂದಷ್ಟು  ಕಾರ್ಟೂನ್ಗಳು .. ವಾಸ್ತವತೆಯ ಚಿತ್ರದ ಈ ರೇಖೆಗಳು ಸಮಾಜದ ಪ್ರತಿಬಿಂಬ.. ಡಾ. ಸತೀಶ್ ಶೃಂಗೇರಿ, ಸತೀಶ್ ಆಚಾರ್ಯ ,ಚಂದ್ರಶೇಖರ ಶೆಟ್ಟಿ, ರಘುಪತಿ ಶೃಂಗೇರಿ ಮತ್ತು ಕುಶಾಲ್ ಭಟ್ಟಾಚಾರ್ಯ ಅವರ ಒಂದಷ್ಟು ಕಾರ್ಟೂನ್ ಗಳು ನಿಮಗಾಗಿ :-)











ಮೇಗ ಸೀರಿಯಲ್ಲೂ.. ನಿರ್ದೇಶಕರೂ !

Image
ಸೀರಿಯಲ್ ಪ್ರಪಂಚ ಸಾಗರ ಇದ್ದಂತೆ. ಅದರಲ್ಲಿ ಆಶ್ರಿತರು ಅನೇಕಾನೇಕ ಮಂದಿ ಇದ್ದಾರೆ. ಅವರ ಬಗ್ಗೆ ಲೆಕ್ಕ ಹಾಕೋಕೆ ಹೋದರೆ ಅಬ್ಬಾ ಇಷ್ಟೊಂದು ಜನ  ಇದರ ಹಿಂದೆ ದುಡಿದಿದ್ದಾರೆ ಎಂದು ಆಶ್ಚರ್ಯ ಪಡುವಂತೆ ಆಗುತ್ತದೆ. ಇವರ ಬಗ್ಗೆ ಲಿಸ್ಟ್ ಹೇಳಿದ್ದು ನಿರ್ದೇಶ ಎ .ಜಿ.ಶೇಷಾದ್ರಿ. ಈಗ ಉದಯ ವಾಹಿನಿಯ ವಸುಧೈವ ಕುಟುಂಬ ಅನ್ನುವ ಧಾರಾವಾಹಿಯ ಪ್ರಧಾನ ನಿರ್ದೇಶಕರಾಗಿದ್ದಾರೆ. ಪುಣ್ಯಕೋಟಿ ಧಾರವಾಹಿ ಸಾರಥ್ಯವನ್ನು ಸಹ ಅವರೇ ನಡೆಸಿದ್ದು.

ಫೇಸ್ ಬುಕ್ ಸಾಗರದಲ್ಲಿ ಅವರು ಒಬ್ಬ ಗೆಳೆಯರು. ಕೇವಲ ಗೆಳೆಯರಲ್ಲ ಭಾವನೆಗಳಿಗೆ ಸ್ಪಂದಿಸುವ ಗೆಳೆಯರು. ಇವರ ಕೈಕೆಳಗೆ ಒಳ್ಳೊಳ್ಳೆಯ ನಿರ್ದೇಶಕರು ಜನ್ಮಿಸಿದ್ದಾರೆ, ಕಲಾವಿದರು ಬದುಕ ಕಂಡಿದ್ದಾರೆ. ನನಗೆ ಚಿತ್ರ ಪತ್ರಿಕೆಯಲ್ಲಿ ,ಸಿನಿ ಕಲಾವಿದರು,ಸಿನಿಮಾಗಳು ಮಾತ್ರವಲ್ಲದೆ  ಟೀವಿ ಕಲಾವಿದರ ಬಗ್ಗೆ ಬರೆಯುವ ಕೆಲಸ ನನ್ನದು. ಟೀವಿ ಕಲಾವಿದರ ಬಗ್ಗೆ ಬರೆಯುವಾಗ ಶೇಷಾದ್ರಿ ಅವರ ಹೆಸರು, ಸೂರಿ ಟೀಮ್ ಬಗ್ಗೆ ಅಭಿಮಾನದಿಂದ ಹೇಳ್ತಾರೆ. ಅನ್ನದಾತೋ ಸುಖಿ ಭವ  ಅಲ್ವ!

ನಾನು ಕಂಡಂತೆ ಶೇಷಾದ್ರಿ ಎಲ್ಲ ವಿಷಯಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಆ ಚರ್ಚೆ, ಈ ಚರ್ಚೆಯಲ್ಲಿ ಭಾಗವಹಿಸದೆ ಇದ್ರೂ ಅದರ ಸಾರದ ಬಗ್ಗೆ ಗೌರವ ಕೊಡುವ ಪದ್ಧತಿ. ಜಾಸ್ತಿ ಹೊಗಳೋಕೆ ಆಗಲ್ಲ ಬಿಡಿ ;-).
ಅನೇಕಾನೇಕ ಕಲಾವಿದರು ಮರೆಯಲ್ಲಿ ಇದ್ದಾರೆ ಅವರಿಗೆ ಅವಕಾಶ ಕಲ್ಪಿಸಿ ಕೊಡುವ ಮನಸ್ಸು ಶೇಷಾದ್ರಿ ಅಂತಹವರು ಮಾಡ ಬೇಕು. ಈ ಮೂಲಕ ಸೂರಿಗೂ ಹೇಳ್ತಾ ಇದ…