Posts

Showing posts from September 30, 2012

ಸಂಗೀತಧಾರೆ ..!

Image
ಅದ್ಭುತ ಅತ್ಯದ್ಭುತ ಸಂಗೀತಧಾರೆ ..! 


ಈ ಟೀವಿ ಕನ್ನಡ ವಾಹಿನಿಯ ಅತ್ಯಂತ ಪ್ರತಿಷ್ಠಿತ  ಕಾರ್ಯಕ್ರಮ ಎದೆ ತುಂಬಿ ಹಾದಿದೆನೆಉ. ಎಸ್. ಪಿ ಬಾಲ ಸುಬ್ರಮಣ್ಯಂ ಸರ್ ಇದರ ಮುಖ್ಯ ಆಕರ್ಷಣೆ. ಎಷ್ಟೇ ಭಿನ್ನ ತೀರ್ಪುಗಾರರು ಬಂದರು ಅವರು ತಮ್ಮ ಆಸಕ್ತಿಯನ್ನು ಕಳೆದುಕೊಂಡಿಲ್ಲ.ಈಗ ಅದರ ಸಮಯ ಬದಲಾಗಿದೆ. ವಾರಕ್ಕೆ ಎರಡು ದಿನ ಈ ಕಾರ್ಯಕ್ರಮ. ಒಂದೊಳ್ಳೆ ಕಾರ್ಯಕ್ರಮ ವಾರಕ್ಕೆ ಎರಡು ದಿನ ಇರ ಬೇಕು.ತೆಲುಗು ಪದಗಳನ್ನು ಮಜ್ಜದಲ್ಲಿ ಸೇರಿಸುತ್ತಾ ರಾಚ್ಚಸ ರೀತಿಯಲ್ಲಿ ಹಾಡುವ ಗಾಯನಿಗಳ  ;-) ಬಗ್ಗೆ ಎಸ್.ಪಿ.ಬಿ ಸರ್  ಮಾಡುವ ಕಮೆಂಟ್ ಹಾಗೆನ್ನುವುದಕ್ಕಿಂತ ತೋರುವ ಮಾರ್ಗದರ್ಶನ ಅನುಕರಣೀಯ. ನಿನ್ನೆ ನಾನು ವೀಕ್ಷಿಸಿದ ಸಂಚಿಕೆಯಲ್ಲಿ ಒಬ್ಬ ಸ್ಪರ್ಧಿ 'ನಾ ನಿನ್ನ ಆಸೆ ಕಂಡು ಬೆರಗಾಗಿ ಮೂಕಳಾದೆ.. 'ಎನ್ನುವ ಹಾಡು ಹೇಳಿದಳು. ಆಕೆಯ ಶಾರೀರ ಅಪರೂಪವಾಗಿತ್ತು. ಆಕೆಯ ಹಾಡನ್ನು ಆಲಿಸಿದ ಎಸ್ಪಿಬಿ ಸರ್  ಕೇಳುವ ಎರಡು ಕಿವಿಯ ನಡುವೆ ತಲೆ ಇರುವ ಅದರಲ್ಲಿ ಬುದ್ಧಿ ಇರುವ ಸಿನಿಮಾರಂಗದವರು ಯಾರಾದರೂ ಇದ್ರೆ ಅವರಿಗೆ ಈಕೆಗೆ ಅವಕಾಶ ನೀಡ್ತಾರೆ ಎಂದು ಹೇಳಿದರು. ಆ ಮಾತು ಅಬ್ಬ ಅನ್ನುವಂತೆ ಆಯ್ತು.ಯಾರಿಗೂ ನೇರವಾಗಿ ಹೇಳಲಿಲ್ಲ ..ಆದರೆ ಹೇಳಿದ ಪರಿ.. ಸಾರ್ ನೀವೇನ್ ಸಾರ್ ಹೀಗೆ ..ಬುದ್ಧಿ ಇರುವವರು  ಮಾಡಲಿ ಆ ಕೆಲಸ !!!
ಜೀ ಹಿಂದಿ ವಾಹಿನಿಯಲ್ಲಿ ಸ ರೆ ಗ ಮ ಪ ಆಡಿಶನ್ ಮುದ್ರಿತ ಕಾರ್ಯಕ್ರಮ ಪ್ರಸಾರ ಮಾಡ್ತಾ ಇದ್ದಾರೆ. ವಿಶೇಷ  ಕಂಠದ ಶಂಕರ್ ಮಹಾದೇವನ್ ಅವರು ತೀರ್…