Posts

Showing posts from October 21, 2012

ಬಿಗ್ ಬಿಗ್

Image
ಬಿಗ್ ಬಾಸ್ ರಿಯಾಲಿಟಿ ಷೋ ಅತ್ಯಂತ ಜನಪ್ರಿಯ ರಿಯಾಲಿಟಿ ಷೋ. ಸೀರಿಯಲ್ ಗಳಿಂದ ಬೋರೆದ್ದು ಹೋದವರಿಗೆ ಒಳ್ಳೆ ಮನೋರಂಜನೆ. ಎರಡು ಹಿಡಿ ಜನಗಳನ್ನು ಒಂದು ಮನೆಯಲ್ಲಿ ಬಿಟ್ಟು ಮನುಷ್ಯನ ಗುಣಗಳನ್ನು ಗಮನಿಸಿಸುವುದು. ಅಲ್ಲಿರುವವರು ಹಾಯಾಗಿ ತಿಂದುಂಡುಕೊಂಡು  ಓಡಾಡುವುದು ..! ಒಂದೇ ಮನೆಯವರ , ಒಂದೇ ವಾತಾವರಣದಲ್ಲಿ ನೆಲೆಸಿರುವವರಿಗೆ ಗಲಾಟೆ, ಕೋಪ ತಪ್ಪಿದ್ದಲ್ಲ, ಅಂತಹುದರಲ್ಲಿ ಬೇರೆ ಬೇರೆ ಮನಸ್ಥಿತಿ ಯವರು, ವಾತಾವರಣ ದಲ್ಲಿ ಇರುವವರು ಒಂದು ಕಡೆ ದಿನಗಟ್ಟಲೆ ಇರುವುದು ಅಂದ್ರೆ. 
ಈ ರಿಯಾಲಿಟಿ ಷೋ ಈಗ 6ನೆ ಸೀಸನ್ ನಲ್ಲಿದೆ.ಸಲ್ಮಾನ್  ಖಾನ್ ಸಹ ಈ ಷೋ ಮುಖ್ಯ ಆಕರ್ಷಣೆ.ಸೌಂದರ್ಯದ ಬಗ್ಗೆ ಒಂದು ಒಳ್ಳೆಯ ಮಾತಿದೆ ಯಾರು ಎಲ್ಲರಿಗೂ ಚೆನ್ನಾಗಿ ಕಾಣ್ತಾರೋ ಅವರೇ ನಿಜವಾದ ಸುಂದರ-ಸುಂದರಿ . ಸಲ್ಲು ವಿಷಯದ ಬಗ್ಗೆ ಹೇಳುವುದಾದರೆ ಈ ಹೀರೋ ಒಂದು ಕಾಲದಲ್ಲಿ ಅಮ್ಮಂದಿರಿಗೆ ಇಷ್ಟವಾಗಿದ್ದ ಹೀರೋ, ಈಗ ಅವರ ಹೆಣ್ಣುಮಕ್ಕಳಿಗೂ ಇಷ್ಟ ಆಗ್ತಾ ಇರೋ ಹೀರೋ.. :-) ನನಗೆ ಸಖತ್ ಇಷ್ಟ ಸಲ್ಲು ;-). ಬೇರೆ ಖಾನ್ಗಳಿಗಿಂದ ಈ ಖಾನ್ ಕಂಡ್ರೆ ರವಷ್ಟು ಜಾಸ್ತಿ ಪ್ಯಾರ್.  ದಿನೆದಿನೆ ಸಲ್ಲು ಸ್ಮಾರ್ಟ್ ಆಗ್ತಾನೆ ಇದ್ದಾರೆ. ಇನ್ನೊಂದು ಸಲ್ಮಾನ್ ವಿಷ್ಯ ಇಷ್ಟ ಆಗೋದು ಅಂದ್ರೆ ಅವರ ಸೆನ್ಸ್ ಆಫ್ ಹ್ಯೂಮರ್.ವಾತಾವರಣವನ್ನು ತಿಳಿ ಮಾಡುವ ವಿಷ್ಯ , ಬುದ್ಧಿ ಹೇಳುವ ವಿಷ್ಯ ಒಟ್ಟಾರೆ ಯಾವುದೇ ಸಂಗತಿ ಆಗಿರಲಿ ಐ  ಲೈಕ್ ಇಟ್ , ಐ ಲೈಕ್ ಇಟ್ ...:-)
ಕಲರ್ ವಾಹಿನಿಯಲ್ಲಿ ಪ್ರತಿದಿನ ಒಂಬ…