Posts

Showing posts from November 4, 2012

ಜೀವದ ಹಂಗು

Image
ಟೀಆರ್ಪಿಗಾಗಿ ಎಲ್ಲ ಅನ್ನುವ ಮಾತನ್ನು ದೃಶ್ಯ ಮಾಧ್ಯಮದ ವಿಷಯದಲ್ಲಿ ಜನರ ನಂಬಿಕೆ. ಆದರೆ ಎಲ್ಲವೂ ಅಲ್ಲ, ಯಾಕೆಂದ್ರೆ ಮಾಧ್ಯಮ ಲೋಕದಲ್ಲಿ ಅತಿ ರಂಜಕತೆ ಇದ್ದದ್ದೇ.ಬರೆಯುವ ಪ್ರಪಂಚದ ಮೆಂಬರ್ಗಳು ನಾವು ಇಲ್ಲಿ ಸಹ ನಾವೇನು ಕಡಿಮೆ ಇಲ್ಲ.. ಕತ್ತೆ  ಅತ್ತೆ ಮಾಡ್ತೀವಿ .. ಅತ್ತೆಯನ್ನು.........! ಆದರೆ ಸದಾ ಆ ಅಂಶವನ್ನೇ  ಅದನ್ನೇ ಮುಂದಿಟ್ಟುಕೊಂಡು ಬದುಕೋಕೆ ಸಾಧ್ಯವಿಲ್ಲ..

ಕಸ್ತೂರಿ ನ್ಯೂಸ್ ವರದಿಗಾರ ನವೀನ್ ಸೂರಿಂಜೆ  ಅವರ ಬಂಧನದ ಬಗ್ಗೆ ಪತ್ರಕರ್ತಮಿತ್ರರ  ಪ್ರತಿಭಟನೆ ಸಮಯೋಚಿತ. ಅದರ ಬಗ್ಗೆ ಪ್ರತಿಯೊಬ್ಬರೂ ಖಂಡಿಸಲೇ ಬೇಕು.ಮಾಧ್ಯಮಗಳಲ್ಲಿ ಹೊಸತನ್ನು ನೀಡುವ ನಿಟ್ಟಿನಲ್ಲಿ ವರದಿಗಾರರು, ಕ್ಯಾಮರಾಮನ್, ಸಹಾಯಕರು ಒದ್ದಾಡ್ತಾನೆ  ಇರ್ತಾರೆ. ಅವರೆಲ್ಲ ಸಮಾಜದ ಒಂದು ಭಾಗ.. ನಮ್ಮನಿಮ್ಮಂಗೆ ಮನುಷ್ಯರು. ಕೆಲವೊಂದು ಕ್ಲಿಷ್ಟಕರ ಟಾಸ್ಕ್ ಮಾಡುವಾಗ ಜೀವದ ಹಂಗು ತೊರೆದು ಮಾಡಿರ್ತಾರೆ.  ಸದನದ ನೀಲಿ ಚಿತ್ರದ ಸಂಗತಿಗಳನ್ನು ಜಗತ್ತಿಗೆ ತೋರುವಾಗ ಸಮಯ,ಸುವರ್ಣ ನ್ಯೂಸ್ ಮತ್ತು ಟೀವಿ ನೈನ್ ವರದಿಗಾರ ಮಿತ್ರರ ಧೈರ್ಯ ಅಬ್ಬ! ತಮಾಷೆ ಅಂದ್ರೆ ಅಂತಹ ಕೆಲಸಗಾರ ಮೇಲೆ ಕೆಂಗಣ್ಣು ಬೀಳೋದು. ಅವರಿಗೆ ತೊಂದ್ರೆ ಆಗೋದು... ನಿಜಕ್ಕೂ ಧೈರ್ಯ ಅನ್ನೋದು ಇದ್ರೆ ಆ ಟೀವಿ ಕಂಪನಿಯ ಮಾಲಿಕರನ್ನು ಇಲ್ಲವೇ ಚೀಫ್ಗಳನ್ನೂ ಹಿಡೀ ಬೇಕು..ಅವರು ಕೊಟ್ಟ ಕೆಲಸವನ್ನು ವರದಿಗಾರರು ಮಾಡಿರ್ತಾರೆ... ಯಾಕೆಂದ್ರೆ  ಅವರಿಗೆ ಸದಾ ಹೊಸದು ಇರಲೇ ಬೇಕಲ್ಲ !

ಪಬ್ಲಿಕ್ ವಾಹಿನಿಯಲ್ಲಿ ಸೋಮಣ…