Posts

Showing posts from November 18, 2012

ರಿಟರ್ನ್ಸ್

Image
ನಮ್ಮ ವಾಹಿನಿಗಳು ಕಾರ್ಯಕ್ರಮಗಳಿಗೆ ಒಳ್ಳೊಳ್ಳೆಯ ಟೈಟಲ್  ಕೊಡುವ ಒಂದೊಳ್ಳೆ ಅಭ್ಯಾಸ ಹೊಂದಿದೆ. ಅನೇಕ ಕಾರ್ಯಕ್ರಮಗಳಲ್ಲಿ ಹುರುಳು ಇಲ್ಲದೆ ಇದ್ರೂ ಟೈಟಲ್ ನೋಡಿ ವೀಕ್ಷಿಸುವ ಆಸೆ ಉಂಟಾಗುತ್ತದೆ.ನ್ಯೂಸ್ನಲ್ಲೂ ಸಹ  ಮಜಾ ಕೊಡುವಂತಹ ಬರಹಗಾರ ತುಂಟ -ಬುದ್ಧಿವಂತ ಆಗಿದ್ರೆ ಆಕಾಶರಗಳ ಸದುಪಯೋಗ ಮಾಡಿಕೊಳ್ತಾನೆ ಅನ್ನುವುದಕ್ಕೆ ಇಂತಹ ಟೈಟಲ್ ಗಳೆ  ಸಾಕ್ಷಿ .ಕೆಲವೊಂದು ಒಂದು ರೀತಿ ಗಾಬರಿ ಹುಟ್ಟಿಸುತ್ತೆ ಅದರ ಬಗ್ಗೆ ಹೇಳ್ತೀನಿ...

ಇತ್ತೀಚಿಗೆ ಕಸ್ತೂರಿ ನ್ಯೂಸ್ ನಲ್ಲಿ ನಿರೂಪಕ ವಸಂತ್ ಕುಮಾರ್ ಅವರ ನಿರೂಪಣೆ ಯಲ್ಲಿ ಮಮ್ಮಿ ರಿಟರ್ನ್ಸ್ ಅನ್ನುವ ಪಿರಮಿಡ್  ಕುರಿತಾದ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಪಿರಮಿಡ್ ನಲ್ಲಿ ಇರುವ ಸಂಖೆತಗಳು, ಪ್ರಳಯದ ಮುನ್ಸೂಚನೆ ಹೀಗೆ ಹಲವಾರು ಸಂಗತಿಗಳ ಬಗ್ಗೆ ತಿಳಿಸ್ತಾ ಇದ್ರೂ. ಕಸ್ತೂರಿ ನ್ಯೂಸ್ ನಲ್ಲಿ ಹೆಣ್ಣು ಮಕ್ಕಳು ಶಾನೆ ಚನ್ನಾಗಿ ಮಾತಾಡ್ತಾರೆ ಆದರೆ ಹೆಚ್ಚು ಬೆಳಕಿಗೆ ಬಂದಿಲ್ಲ ಅದೇ ರೀತಿ ಈ ವಾಹಿನಿಯ ವಸಂತ್ ಕುಮಾರ್ ಸಹ ಒಳ್ಳೆ ನಿರೂಪಕ.. ಮಾತಾಡುವ ಅಂದ್ರೆ ಪದ ಬಳಕೆಯಲ್ಲಿ ಹೆಚ್ಚು ಪ್ರಶರ್ಗೆ  ಆದ್ಯತೆ ಕೊಡ್ತಾರೆ.. ಉದಾಹರಣೆ : ಆಗ ಅನ್ನುವ  ಕೊಟ್ರೆ ಅದನ್ನು ಪದವನ್ನು ಒತ್ತಿ  ಹೇಳ್ತಾರೆ . ಮಮ್ಮಿ ರಿಟರ್ನ್ಸ್ ಕಾರ್ಯಕ್ರಮ ರೋಚಕ ಯಾಕೆಂದ್ರೆ ಆ ಸಿನಿಮಾವನ್ನು ನಾನು ವೀಕ್ಷಿಸಿದ್ದೇನೆ ಸಖತ್ತಾಗಿದೆ.. ಹಾಗೆ ಈ ಕಾರ್ಯಕ್ರಮ..
ರಿಟರ್ನ್ಸ್ ಅನ್ನುವ ಪದ ಮತ್ತೆ ಕಣ್ಣಿಗೆ ಬಿದ್ದದ್ದು ಪಬ್ಲಿಕ್ ವಾಹಿನಿಯಲ್ಲಿ …

ಹೊಡಿಮಗ,

Image
ಹಾಸ್ಯ ಧಾರವಾಹಿ ವಾಹಿನಿಯ ಮುಖ್ಯ ಭಾಗ,ಅಂಶ ಏನಂದರೂ ಸರಿಯೇ ಒಟ್ಟಾರೆ ಹಾಸ್ಯಕ್ಕೆ ಆದ್ಯತೆ ನೀಡಲೇ ಬೇಕು.ಕಸ್ತೂರಿ ವಾಹಿನಿಯು ಸಹ ಎಲ್ಲ ವಾಹಿನಿಯಂತೆ ಅದಕ್ಕೆ ಪ್ರಾಮುಖ್ಯತೆ ನೀಡಿದೆ. ಆದರೆ ಅನೇಕ ಸರ್ತಿ ಸೋತಿದೆ..ನಗು ಬರುವ ಕಡೆ ಮೈ ಪರಚಿ ಕೊಳ್ಳುವ ಹಾಸ್ಯ ಕಂಡಿದೆ .. ಬಿಡಿ ವಾಹಿನಿ ತಪ್ಪಲ್ಲ, ಅಂತಹ ಕಾರ್ಯಕ್ರಮ ನಿರೂಪಿಸುವವರ ತಪ್ಪು.. ಆರಂಭಿಕ ಹಂತದಲ್ಲಿಇಲ್ಲಿ ಕೆಲವು ಹಾಸ್ಯ ಧಾರಾವಾಹಿಗಳು ಪ್ರಸಾರ ಆಗ್ತಾ ಇತ್ತು. ಎಂ.ಏನ್. ಜಯಂತ್ ನಿರ್ದೇಶನದ ಧಾರವಾಹಿ ಹಾಸ್ಯದಿಂದ ಕೂಡಿತ್ತು..ಅತಿರೇಕದ ಆಂಗಿಕ ಅಭಿನಯ ಇಲ್ಲದ ಶುದ್ಧ ಹಾಸ್ಯ ಕಥಾವಸ್ತು ಇತ್ತು ಅದರಲ್ಲಿ.
ಟೀ ಆರ್ಪಿ  ಇಲ್ಲ ಅಂತ ಅದನ್ನು ಮನೆಗೆ ಕಳಿಸಿತ್ತು ವಾಹಿನಿ..ಸಾಮಾನ್ಯವಾಗಿ ನಾನು ನನ್ನಂತಹ ಅನೇಕರು ಆಸಕ್ತಿಯಿಂದ ಆ ದಿನಕ್ಕಾಗಿ ಕಾಯ್ತಾ ಇದ್ವಿ.. ಶುದ್ಧ ಶಾಖಾಹಾರಿ ಹಾಸ್ಯ.. 
ಆ ಬಳಿಕ ಹಾಸ್ಯಗಾರರನ್ನು ಗುರುತಿಸುವ ಸ್ಪರ್ಧೆ ಬಂತು ಚಂದ್ರು- ದಯಾನಂದ್ ಜಡ್ಜ್ ಗಳಾ ಗಿದ್ರು  . ಬಳಿಕ ಇನ್ನೊಂದು ಮತ್ತೊಂದು ಬಂದೆ ಬಂತು ಆದರೆ  ಅಷ್ಟೊಂದು ಗಮನ ಸೆಳೆಯುವಂತೆ ಇರಲಿಲ್ಲ. ಈಗ ಮತ್ತೊಮ್ಮೆ ಹಾಸ್ಯಗಾರರನ್ನು ಗುರುತಿಸಿ ಬೆಳೆಸುವತ್ತ ಗಮನ ಕೊಟ್ಟಿದೆ ವಾಹಿನ,ದಯಾನಂದ್  ಜಡ್ಜ್..ಅವರ ಮಾತು ಅಂದ್ರೆ ಮಾಣಿಕ್ಯ.. ಇತ್ತಿಚೆಗೆ  ಕಸ್ತೂರಿ ವಾಹಿನಿಯಲ್ಲಿ ಅವರ ಮಾತು  ಕೇಳೋ ಅವಕಾಶ್..ಅವರು ಹೊಡಿ ಮಗ ಹೊಡಿಮಗ ಅನ್ನುವ ಮಾತ್ರದ ಬಗ್ಗೆ ಮಾಡಿದ ವಿವರಣೆ ಅದ್ಭುತ.. ಆಸೆಗಳ ಹೊಡಿಮಗ, ಕೆಟ್ಟತನ ಹೊಡಿಮಗ.. …

ಸಿಟ್ಟಾದ ಪಬ್ಲಿಕ್ ಟೀವಿ ರಂಗಣ್ಣ

Image
ಆಪರೇಶನ್ ಎಕ್ಸ್ ಮೂಲಕ ಉಗ್ರ ಕಸಬ್ನನ್ನು ಗಲ್ಲಿಗೇರಿಸಿದ್ದು ಭಾರತೀಯರೆಲ್ಲರಿಗೂ ಖುಷಿ ಕೊಟ್ಟಿದೆ ಆ ಮೂಲಕ ನಾವು ಒಂದು ಮಟ್ಟದಲ್ಲಿ ನ್ಯಾಯ ದೊರಕಿಸಿ ಕೊಟ್ಟೆವು ಅನ್ನುವ ಸಮಾಧಾನ ನೀಡಿದೆ ಸರ್ಕಾರ. 
ಸರ್ಕಾರ, ನ್ಯಾಂಗ ವ್ಯವಸ್ಥೆಯ ಬಗ್ಗೆ ಎಂದಿಗೂ ನಾವು ಕೋಪ ಮಾಡಿಕೊಳ್ಳುವುದಕ್ಕೆ ಸಾಧ್ಯ ಇಲ್ಲ-ಮಾಡಿಕೊಳ್ಳ ಬಾರದು ಇಲ್ಲಿ ಕುಳಿತು ಹೇಳಿದಷ್ಟು ಸುಲಭವಲ್ಲ ಜಾರಿಗೆ ತರೋದು..ಅದರಲ್ಲೂ ಇಂಡಿಯ ದಲ್ಲಿ ಕಷ್ಟ ಕಷ್ಟ!
ಕಸಬ್  ಗಲ್ಲಿಗೇರಿದ ಬಗ್ಗೆ ಎಲ್ಲ ವಾಹಿನಿಗಳು ಪ್ರಸಾರ ಮಾಡ್ತಾ ಇತ್ತು, ಪಬ್ಲಿಕ್ ಟೀವಿ ಯಲ್ಲಿ ಕ್ಯಾಪ್ಟನ್ ರಂಗಣ್ಣ ತಾವೇ ನ್ಯೂಸ್ ಓದೋಕೆ ಕೂತು ಬಿಟ್ಟಿದ್ರು.. ಒಂದರ್ಥದಲ್ಲಿ ಅದು ಸರಿಯಾದ ನಿರ್ಧಾರ . ಯಾಕೆ ಅಂದ್ರೆ ಅವರ ಸಬಾರ್ಡಿ ನೆಟ್  ಗಳಿಗಿಂತ  ರಂಗಣ್ಣ ನ್ಯೂಸ್ ಓದೋಕೆ, ವಿಚಾರ ವಿಮರ್ಶೆಗೆ ಕೂತಿದ್ದು ಒಳ್ಳೆ ಸಂಗತಿ.. ಕಾರಣ ಇಷ್ಟೇ ಅಂ ಹಂ ಅ..ಆ ಅನ್ನುವ ರಾಗ ಗಳಿಗಿಂತ  ಬುಲೆಟ್ಟಿ ನಂತೆ ಮಾತಾಡುವವರ ಅಗತ್ಯ ಈಗಿತ್ತು,,ರಂಗಣ್ಣ ಆ ಕೆಲಸ ಸಮರ್ಥವಾಗಿ ಮಾಡಿದ್ದಾರೆ. ನ್ಯೂಸ್ ಓದುವಾಗ ವರದಿಗಾರ ಅರುಣ್ ಬಡಿಗೇರ ವರನ್ನು ಸಂಪರ್ಕಿಸಿದರು ರಂಗನಾಥ್..ಆತ  ವಿಷಯ ಹೇಳುವಾಗ ಕಸಬ್ ನನ್ನು ಅಭ್ಯಾಸದಂತೆ ಅವರು ಎಂದು ಸಂಬೋಧಿಸಿದರು.. ರಂಗ ಸರ್ ಉಗ್ರ ನರಸಿಂಹ.. :-) ಕಾರಣ ಇಷ್ಟೇ.. ಕಸಬ್ ಬಹುವಚನಕ್ಕೆ ಗೌರವಕ್ಕೆ ಅರ್ಹನಲ್ಲ..!ರಂಗ ಸರ್ ಕೋಪಕ್ಕೆ  ಅರುಣ್ ಒಂದು ಕ್ಷಣ ತಬ್ಬಿಬ್ಬು ! 
ಏನೇ ಹೇಳಿ ರಂಗ ಸರ್ ಈಗ ರಹಸ್ಯ ಕಾರ್ಯಾಚರಣೆ  ಯಿಂದ ಆದ …