ಕೆಲವು ಕಾರ್ಯಕ್ರಮಗಳು ಎಷ್ಟು ಖುಷಿ ಕೊಡುತ್ತದೆಯೋ ಅಷ್ಟೇ ಖುಷಿ
ನೀಡುತ್ತಾರೆ ಅವುಗಳ ನಿರೂಪಕರು. ನನ್ನನ್ನು ಅನೇಕ ನಿರೂಪಕರು ಆಕರ್ಷಿಸಿದ್ದಾರೆ, ಅದರಲ್ಲಿ ಅಮಿತಾಬ್ ಬಚ್ಚನ್, ಎಸ್ ಪಿ ಬಾಲ ಸುಬ್ರಮಣ್ಯಂ , ಸಲ್ಮಾನ್ ಖಾನ್,
ಖುಷ್ ಬೂ ಹೀಗೆ ಪಟ್ಟಿ ದೊಡ್ಡದಿದೆ.
ಅಮಿತಾಬ್ ಬಚ್ಚನ್ ಅವರು ನೆನಪಿಗೆ ಬಂದಾಗ
ನನಗೆ ಹೆಚ್ಚು ರೋಮಾಂಚಿತ ಮತ್ತು ಭಾವುಕತೆ
ಉಂಟಾಗುವುದು ಅವರ ಪಾ ಚಿತ್ರದ ನಟನೆಯ ಬಗ್ಗೆ. ಆ ಚಿತ್ರ ನನ್ನ ಮನದಲ್ಲಿ ಅಚ್ಚಳಿಯದೇ ನಿಂತಿದೆ.
ಒಬ್ಬ ಕಲಾವಿದ ಪ್ರೇಕ್ಷಕರ ಮನದಲ್ಲಿ ಹೇಗೆ ಜೀವಂತ ಆಗಿರುತ್ತಾರೆ ಎನ್ನುವುದಕ್ಕೆ ಇಂತಹ ಪಾತ್ರಗಳೇ
ಸಾಕ್ಷಿ.
ಸೋನಿ ಟೀವಿಯಲ್ಲಿ ಪ್ರಸಾರ ಆಗುವ ಅದೇ
ರೀತಿ ಅವರ ರಿಯಾಲಿಟಿ ಶೋ ಕೌನ್ ಬನೇಗಾ ಸಹ
ಅಷ್ಟೇ ಆಪ್ಯಾಯ ಅನ್ನಿಸೋದು ಅವರ ಮಾತಿನ ಶೈಲಿ ಮತ್ತು ಎಂಜಾಯ್ ಮಾಡುವ ರೀತಿಯಿಂದ. ಕಲಿಯುವವರಿಗೆ
ಸದಾ ಪಾಠಶಾಲೆಯಾಗಿ ಇರ್ತಾರೆ ಇಂತಹ ವ್ಯಕ್ತಿತ್ವಗಳು.
ಸಲ್ಮಾನ್ ಖಾನ್ ನಿರೂಪಣೆ ಸಹ ನನಗೆ ಸಕತ್ ಇಷ್ಟ. ಸಲ್ಮಾನ್ ವಿರುದ್ಧ ಯಾರಾದರೂ ಮಾತನಾಡಿದರೆ ಜಗಳ ಆಡುವಷ್ಟು ಜೋರಾಗಿದೆ ಹೆಣ್ಣು ಮಕ್ಕಳ ಟೀಂ. ಅಂತಹ ಟೀಮ್ ಒಂದರಲ್ಲಿ ನಾನೂ ಸಹ ಮೆಂಬರ್ .
No comments:
Post a Comment