ಹೀಗಿದೆ ಕಥೆ

ಆತ್ರಾಡಿ ಸುರೇಶ ಹೆಗ್ಡೆ  ವಿಶ್ಲೇಷಣೆಯ ಸ್ವಭಾವದವರು. ವಿಮರ್ಶೆ ಮಾಡುವವರ ಬಗ್ಗೆ ಜನಕ್ಕೆ ಜಾಸ್ತಿ ಬೇಸರ. ಅದಕ್ಕೇನು ಮಾಡಲಾಗದು. ಆದರೆ ವಿಮರ್ಶೆ ಮಾಡುವವರು ಸಹ ಒಮ್ಮೆ ಯೋಚಿಸ ಬೇಕಾದ ಸಂಗತಿ ಏನಂದರೆ  ಸಿದ್ಧವಾದ ಮಡಕೆಯನ್ನು ಒಡೆಯುವುದು ಸುಲಭ, ಆ ಮಡಕೆಯ ನಿರ್ಮಾಣಕ್ಕೆ ಎಷ್ಟೊಂದು ಪ್ರಯತ್ನ, ಶ್ರಮ ವ್ಯಯಿಸಿರುತ್ತಾರೆ ಅಂತ.. !
ಒಟ್ಟಾರೆ ಅತ್ರಾಡಿಯವರು ಸಮಯ ಸಿಕ್ಕಾಗ ಸುದ್ದಿ ವಾಹಿನಿಗಳ  ಕಣ್  ತಪ್ಪು ಗಳನ್ನು ತಮ್ಮ ಕಣ್ಣಿನಿಂದ ನೋಡಿ ಸ್ಕ್ರೀನ್ ಶಾಟ್ ಮೂಲಕ  ಅವರ ಎಫ್ ಬಿ ಗೋಡೆಯಲ್ಲಿ ಅಂಟಿಸುತ್ತಿರುತ್ತಾರೆ. ಅಂತಹ ಕೆಲವು ಸ್ಕೀನ್ ಶಾಟ್ ಗಳು ಇಲ್ಲಿವೆ. ಇದರಿಂದ ನಿಮಗೆ ಉಪಯೋಗ ಆಗಬಹುದು ಎನ್ನುವ ಆಶಯ ನನ್ನದು 

ಆತ್ಮಕ್ಕೆ  ಅಥವಾ..?

                                                                ಎಲ್ಲಿಂದ ಈಶಾನ್ಯ?


                                                    ದಟ್ಟ ಹೊಗೆ ಕಾಣಿಸಿದ "ಹಿನ್ನೆಲೆ" ಏನು?

                                                                ಏನ್ರೀ ಅಷ್ಟೊಂದು ತರಾತುರಿ?

                                                         ಹಾಲು ಮತ ಸಮಾಜ "ದರಿಂದಾ"!?

"ಹಿನ್ನೆಲೆ" ನೆಲೆಯೂರಿದೆ.


                                                              "ಮೂಲ" ವ್ಯಾಧಿ!

"ನಿಧನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು!?"



                           ಸುರಕ್ಷತೆಯ ಕಾರಣದಿಂದಾಗಿ ಮಂತ್ರಿಗಳ ಹೆಸರನ್ನು ಬದಲಾಯಿಸಲಾಗಿದೆ.


ಈಗಲೂ "ತಪ್ಪು ಹುಡುಕುವ ನಮ್ಮದೇ" ತಪ್ಪು ಅಂತೀರಾ?

ಹೃದಯ ಕದ್ದಿದೆ

Image result for nature
ಧನುರ್ಮಾಸ ಯಪ್ಪಾ ಅನ್ನೋಷ್ಟು ಚಳಿ .. ಬೆಳಗಿನ ಆರಂಭವಾಗುವುದು ಭಜನೆ, ಹಾರ್ಮೋನಿಯಂ, ಗಂಟೆ, ಜಾಗಟೆಗಳ ಸದ್ದಿನಿಂದ
. ಹೆಣ್ಣುಮಕ್ಕಳಿಗೆ ಹೆಚ್ಚು ಪ್ರೀತಿಯ ತಿಂಗಳು ಇದು (ನನ್ನಂತಹವರನ್ನು ಹೊರೆತುಪಡಿಸಿ ).  ಅಯ್ಯಪ್ಪ ಸ್ವಾಮಿ ಸೀಸಜನ್ ಸಹ ಇದು. ಮುಂಜಾನೆ -ಸಂಜೆ  ಭಜನೆ ಭಜನೆ. ಒಂದಂತು ಸತ್ಯ ಅನೇಕ ಹಾಡುಗಳನ್ನು ಈಗ ಕೇಳುವ ಸದವಕಾಶ.. ಮೆಲೋಡಿಯ ಮೂಲಕ ಮನಗೆಲ್ಲುವ ಹಾಡುಗಳು . ಸಂಸ್ಕೃತಿ, ಆಚರಣೆ ಎಲ್ಲವನ್ನು ಪ್ರೀತಿಯಿಂದ ನೋಡಿದರೆ ಇಷ್ಟವಾಗುತ್ತದೆ. ಇಲ್ಲದೆ ಹೋದರೆ ಕಷ್ಟವಾಗುತ್ತದೆ .

@ಜೀ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಎರಡನೆಯ ಅವತರಣಿಕೆ ಆರಂಭವಾಗಿದೆ. ಒಳ್ಳೆಯ ಒಪನಿಂಗ್ಸ್ . ಯಾಕೆ ಈ ರೀತಿ ಹೇಳ್ತಾ ಇದ್ದೀನಿ ಅಂದ್ರೆ ಈ ಬಾರಿ ವಿಜಯ್ ಪ್ರಕಾಶ್ ಅವರನ್ನು  ಜನರ ಮುಂದೆ ಕರೆತಂದರು  ರಮೇಶ್ ಅರವಿಂದ್. ಬಹಳ ಸುಂದರ ನಿರೂಪಣಾ ಶೈಲಿಯನ್ನು ಕರಗತ ಮಾಡಿಕೊಂಡಿರುವ ಸ್ಫುರದ್ರೂಪಿ  ರಮೇಶ್ ಅವರು ತಮ್ಮ ಈ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳಿಗೆ ಹೆಚ್ಚು ಮಾತಾಡಲು ಅವಕಾಶ ನೀಡುತ್ತಾರೆ. ಅದೇ ಅವರ ಕಾರ್ಯಕ್ರಮದ ಪ್ಲಸ್ ಪಾಯಿಂಟ್. ಈ ಬಾರಿ ವಿಜಯ್ ಪ್ರಕಾಶ್ ಅವರ ಮಾತುಕತೆ ಮನಸೆಳೆಯಿತು. ನಾನು ಕಂಡಂತೆ ಕೆಲವರ ಬಗ್ಗೆ ಮಾತ್ರ ಅವ್ಯಾಹತವಾಗಿ ಫೇಸ್ಬುಕ್ ನಲ್ಲಿ ಅಭಿಪ್ರಾಯಗಳು ಹೊರ ಹೊಮ್ಮಿಸುತ್ತಾರೆ. ಅಂತಹ ಸಾಲಿಗೆ ವಿಜಯ್ ಪ್ರಕಾಶ್ ಅವರ ಬಗೆಗಿನ ವೀಕೆಂಡ್ ಹೆಚ್ಚು ಹರಡಿತು. ಎಲ್ಲರ ಮಾತಿನ ಕೊನೆಯ ಸಾಲು ಎಷ್ಟು ಚಂದ ಇತ್ತು.
ಇಂತಹ ಅಭಿಪ್ರಾಯಗಳು ಬರುವಾಗ ಆ ಸಾಧಕನಿಗೆ ಈವರೆಗೂ ಗೆದ್ದ ಗೆಲುವಿನ ಆನಂದಕ್ಕಿಂತ ಮತ್ತಷ್ಟು ವಿಶಿಷ್ಟ ಖುಷಿಯನ್ನು ನಿಸ್ಸಂದೇಹವಾಗಿ ಕೊಡಮಾಡುತ್ತದೆ  . ಎರಡು ದಿನದ ಕಾರ್ಯಕ್ರಮ ಇದಾಗಿದ್ದರು ಒಂದಿನಿತೂ ಬೋರ್ ಉಂಟು ಮಾಡಲಿಲ್ಲ.ಶುದ್ಧಾನು ಶುದ್ಧ ಕನ್ನಡ , ಸರಳತೆ, ತೀರ ನಮ್ಮ ಪರಚಿತ ವ್ಯಕ್ತಿ ಎನ್ನಿಸುವಂತೆ  ಹರಟುವ ರೀತಿ ಪ್ರಾಯಶಃ ಕನ್ನಡಿಗರಗರ ಹೃದಯ ಕದ್ದಿದೆ  ಎನ್ನುವುದು ಸತ್ಯ.. ತುಂಬಾ ಇಷ್ಟ ಆಯ್ತು..
@ ಸುವರ್ಣ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುವ ಬೆರಗು ಅತಿ ವಿಶೇಷವಾದ ಕಾರ್ಯಕ್ರಮಗಳಲ್ಲಿ ಒಂದು. ನಿನ್ನೆ ಬಹಳ ದಿನಗಳ ನಂತರ ವೀಕ್ಷಿಸಿದೆ. ಉತ್ತಮ ನಿರೂಪಕಿ ಭಾವನ ಅವರು ಕಾರ್ಯಕ್ರಮ ನಿರೂಪಣೆ  ಮಾಡ್ತಾ ಇದ್ದರು.. ವಿಷಯ, ಸಂಗ್ರಹ ಬರಹ ಮಾಡಿದ ಎಲ್ಲರು ಕರೆಕ್ಟಾಗಿ ನೀಟ್ ವರ್ಕ್ ಮಾಡಿ ಜನರ ಮುಂದೆ ನೀಡಿದ್ದರು. ಪ್ರಾಣಿಗಳು ತಮ್ಮ ಶತ್ರುವನ್ನು ಎದುರಿಸುವ ಬಗ್ಗೆ ಎಲ್ಲದರ ಬಗ್ಗೆ ಇದ್ದು ಪುಟ್ಟ ಬೆರಗು ಕಾರ್ಯಕ್ರಮ  ಹೆಚ್ಚು ಮಾಹಿತಿ ಮೂಲಕ ವಿವರಿಸ್ತಾ ಇತ್ತು .
.ಜೀವ ಜಗತ್ತು, ಖಗೋಳ ಇಂತಹ ಸಂಗತಿಗಳು ಹೆಚ್ಚು ಆಸಕ್ತಿ ಉಂಟು ಮಾಡುವ ವಿಷಯಗಳು.. ಆದರೆ ಅದರ ನಿರೂಪಣೆ , ಬರಹ, ವಿವರವು ಸಹ ಅಷ್ಟೇ ಚಂದ ಇದ್ದಾಗ ಮಾತ್ರ...ಆಕರ್ಷಿಸುತ್ತೆ..

ಬಹಳ ಹಿಂದೆ ನಾನು ನನ್ನ ಇನ್ನೊಂದು ಬ್ಲಾಗ್ ನಲ್ಲಿ ಪ್ರಾಣಿಗಳ ಆಹಾರದ ಬಗ್ಗೆ ಬರೆದಿದ್ದೆ .. ಅದರಲ್ಲಿದ್ದ ಸ್ವಲ್ಪ ಭಾಗ ಇಲ್ಲಿ ಪೇಸ್ಟ್ ಮಾಡಿದ್ದೇನೆ
ಚಿಂಪಾಂಜಿ ಗಳು ಇರುವೆ ,ಗೆದ್ದಲು ರೀತಿಯ ಹುಳು ಹುಪ್ಪಟೆಗಳನ್ನು ಹಿಡಿಯುವುದು ಹೇಗೆ ಗೊತ್ತೇ? ಸಣ್ಣ ಬಿಲದ ರೀತಿ ಇರುವ ಸ್ಥಳದ ಬಳಿ ಬಂದು ಒಂದು ಚಿಕ್ಕ ಕಡ್ಡಿ  ಅದರೊಳಗೆ ತೂರಿಸಿ ಇಡುತ್ತದೆ ಸ್ವಲ್ಪ ಹೊತ್ತಾದ ಬಳಿಕ ಇರುವೆಗಳು ಕಡ್ಡಿಗೆ ಅಂಟಿ ಕೊಳ್ಳುತ್ತದಲ್ಲ,ಆಗ ಅದನ್ನು ತೆಗೆದು  ಬಾಯಲ್ಲಿ ಇಟ್ಟು  ಕಚ ಕಚನೆ ಚಪ್ಪರಿಸುತ್ತಾ ತಿನ್ನುತ್ತದೆ.ವಾಟ್ ಅನ್ ಐಡಿಯ ಸರ್ ಜಿ!!

ಪರಿಚಿತ !

Image result for blue flower
ಒಂದು ಕಡೆ ಓದಿದ ನೆನಪು.. ಯಾವುದೇ ಆಗಲಿ ಮನುಷ್ಯನಿಗೆ ಹೆಚ್ಚು ಪರಿಚಿತ ಆಗಬಾರದು.  ಆರಂಭದಲ್ಲಿ  ಆ ವಾಕ್ಯ ಓದಿದಾಗ ಅತ್ಯಂತ ಆಶ್ಚರ್ಯ ಆಗಿತ್ತು.. ಹಾಗೆ ಮುಂದುವರೆದ ಸಂಗತಿ ಕೊನೆಗೊಂದು ಅದ್ಭುತ ತೆರೆದಿಟ್ಟಿತ್ತು. ನನಗೆ ಅದು ಅದ್ಭುತ ಎಂದು ಅನ್ನಿಸಿದರು ಬೇರೆಯವರಿಗೆ ಅನ್ನಿಸದೆ ಇರುತ್ತದೆ ಆ ವಿಷ್ಯ ಬೇಡ !
ಯಾರಿಗೆ ಆಗಲಿ ಕೆಲವು ವಸ್ತುಗಳು, ಅಂಶಗಳು, ತುಂಬಾ ಪರಿಚಿತ ಆಗಬಾರದು.. ಈ ಒಂದು ಅಂಶದ ಅಡಿಯಲ್ಲಿ  ಅವರೊಂದು ವಿಷಯ ತಿಳಿಸುತ್ತಾರೆ..
 ಕಾಡೊಂದರಲ್ಲಿ ನೆಲೆಸಿರುವ ಬುಡಕಟ್ಟು ಜನರಿಗೆ ಕಣ್ಣಿಗೆ ಕಾಣುವ ಅತಿ ಹೆಚ್ಚಿನ ಮರಗಳು ಶ್ರೀಗಂಧದ್ದು, ಆದ ಕಾರಣ ಅವರಿಗೆ ಅದರ ಬಗ್ಗೆ ಹೆಚ್ಚೇನೂ ವಿಶೇಷ ಇರಲಿಲ್ಲ. ಅದೆಷ್ಟರಮಟ್ಟಿಗೆ ಅದರತ್ತ ನೆಗ್ಲೆಕ್ಟ್ ಇತ್ತು ಅಂದ್ರೆ ಆ ಗಂಧದ ಕಟ್ಟಿಗೆಗಳು ಅವರ ದಿನನಿತ್ಯದ ಅಡುಗೆ ಮಾಡಲು ಬಳಕೆ ಆಗುತ್ತಿತ್ತು. ಅದೇ ಶ್ರೀಗಂಧದ ಒಂದು ಪುಟ್ಟ ತುಂಡು ನಮ್ಮ ಬಳಿ ಅದೆಷ್ಟು ವ್ಯಾಲ್ಯೂ  ಹೊಂದಿದೆ ! ಆದ್ದರಿಂದ ಜಾಸ್ತಿ ಪರಿಚಿತ ಇರಬಾರದು..ಬದುಕಲ್ಲಿ ಬಹಳಷ್ಟು ಅಂಶಗಳಿಗೆ ಈ ಒಂದು ಪರಿಚಿತ ಅಪ್ಲೈ ಆಗುತ್ತೆ ಅಲ್ವೇ !
Image result for blue flower
@ಈ ಅಂಶ ಯಾಕೆ ಹೇಳೋಕೆ ಹೊರಟೆ ಅಂದ್ರೆ ಇತ್ತೀಚೆಗೆ ವಾಹಿನಿ ಒಂದು ಗಾಂಧಿಜಿ ಅವರ ಉಪ್ಪಿನ ಸತ್ಯಾಗ್ರಹದ ಬಗ್ಗೆ ಕಾರ್ಯಕ್ರಮ ಪ್ರಸಾರ ಮಾಡ್ತಾ ಇತ್ತು.ಅಲ್ಲಿ ರಾಶಿ ರಾಶಿಯಾದ ಉಪ್ಪಿನ ಗುಡ್ಡಗಳನ್ನು ನೋಡಿ ಇವರಿಗೆ ಉಪ್ಪು ಅದೆಷ್ಟು ಪರಿಚಿತ ಅಂತ ಅನ್ನಿಸಿತ್ತು. ಬರಿ ಪಾಕೆಟ್ ಉಪ್ಪು ನೋಡಿದವರಿಗೆ ಆ ಗುಡ್ಡಗಳಷ್ಟು ಉಪ್ಪಿನ ದರ್ಶನ ಆಹಾ ಅನ್ನಿಸುವಂತೆ ಮಾಡಿತ್ತು..
ಮೊನ್ನೆ ಹಿಸ್ಟರಿ  ಚಾನೆಲ್ ನಲ್ಲಿ ರಾಷ್ಟ್ರಪಿತ  ಮಹಾತ್ಮ ಗಾಂಧಿ ಅವರ ಉಪ್ಪಿನ ಸತ್ಯಾಗ್ರಹದ ಬಗ್ಗೆ ಒಂದು ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ದಂಡಿಯಲ್ಲಿ ಉಪ್ಪಿನ ತಯಾರಿಕೆಯ ಬಗ್ಗೆ   ಪ್ರಸಾರಿಸುತ್ತಾ ಜೊತೆಗೆ ಗಾಂಧಿ ತಾತನ ಹಳೆಯ ಚಿತ್ರಗಳನ್ನು ಸಹ ಹಾಕ್ತಾ ಇದ್ರೂ ಆ ಮಂದಿ.. ಗಾಂಧೀಜಿ ಅವರ ಬಗ್ಗೆ  ಓದುವಾಗಲೆಲ್ಲಾ  , ಅವರ ಪಟ ನೋಡಿದಾಗ ನನಗೆ ಸಕತ್ ರೋಮಾಂಚನ ಆಗುತ್ತದೆ, ಅವರ ಆ ತಾಕತ್, ಆ ಆತ್ಮವಿಶ್ವಾಸ, ಆ ಗೆದ್ದ ವಿಧಾನ. ಯಾರು ಗಾಂಧಿ ಬಗ್ಗೆ ಏನೇ ಹೇಳಲಿ, ಏನೇ ಬರೆಯಲಿ ನನಗೆ ಮಾತ್ರ ಗಾಂಧಿ ತಾತನ ಬಗ್ಗೆ ಎಂದಿಗೂ ಎಂದೆಂದಿಗೂ ಗೌರವ, ಪ್ರೀತಿ ಹಾಗೂ ಅಭಿಮಾನವಿದೆ.

@ ಕಳೆದವಾರ ಹೆಚ್ಚು ಗಮನ ಸೆಳೆದ  ಕಾರ್ಯಕ್ರಮಗಳಲ್ಲಿ ಡಿಸ್ಕವರಿ ಸೈನ್ಸ್ ನಲ್ಲಿ ಪ್ರಸಾರವಾದ ಫ್ಲೈಟ್ ಆಕ್ಸಿಡೆಂಟ್ ಕಾರ್ಯಕ್ರಮ. ಯಾವರೀತಿ ಯಂತ್ರ ಪಕ್ಷಿ ಆಗಸದ ಮೇಲಿಂದ ಕೆಳಗೆ ಉದುರಿ  ಅಲ್ಲಿ ಇದ್ದವರ ಜೀವ ತೆಗೆಯಿತು ಎನ್ನುವುದರ ಬಗ್ಗೆ, ಆ ರೀತಿ ಅಪಘಾತ ಆಗಲು ಕಾರಣಗಳೇನು ಹೀಗೆ ಹಲವಾರು ಅಂಶಗಳನ್ನು ಒಳಗೊಂಡಿತ್ತು ಕಾರ್ಯಕ್ರಮ. ವಿಜ್ಞಾನ ಎಷ್ಟೇ ಸವಲತ್ತುಗಳನ್ನು ನಮಗೆ ನೀಡಿದ್ರು, ಅದರ ಜೊತೆಗೆ ಈ ರೀತಿಯ  ತೊಂದರೆಗಳನ್ನು ಸಹ ನೀಡುತ್ತದೆ. ಹಾಗಂತ ಬಳಸದೆ ಇರೋಕೆ ಆಗಲ್ಲ!

ವೆಲ್ ... ವೆಲ್


ಇಂತಹದ್ದೊಂದು ಘಟನೆ ನಡೆಯ ಬಹುದು ಎಂದು ನಾನು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ಕ್ರಿಸ್ಮಸ್ ದಿನ ನಮ್ಮ ಮನೆ ಒಟ್ಟು ನಮ್ಮ ಖಾನ್ದಾನ್ಗೆ ಸೇರಿದ ಇಬ್ಬರು ಬಾಲಕರ ಜನ್ಮದಿನ. ಇಬ್ಬರು ಅಣ್ಣಂದಿರ ಮಕ್ಕಳೇ. ಹಿಂದಿನ ದಿನ ಒಬ್ಬ ಅಣ್ಣನ ಮಗನ ಹುಟ್ಟು ಹಬ್ಬ ಆಗಿತ್ತು.ಇಪ್ಪತೈದರ  ರಾತ್ರಿ ಒಂಬತ್ತು ಗಂಟೆ ನನ್ನ ಅಣ್ಣನ ಮಗ ಬೈಕ್ ಆಕ್ಸಿಡೆಂಟ್ ನಲ್ಲಿ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದ. ಅವ ನನ್ನ ಕಸಿನ್ ಮಗ ಆದರು, ದೂರದ ಊರಲ್ಲಿದ್ದರು ಸಹ  ಸೋಶಿಯಲ್ ನೆಟ್ ವರ್ಕ್ ಕಾರಣದಿಂದ ಎಲ್ಲರೊಂದಿಗೆ ಹೆಚ್ಚಿನ ಬಾಂಧವ್ಯ ಬೆಳೆದಿದೆ ನನಗೆ. ಇಪ್ಪತ್ನಾಲ್ಕನೇ ತಾರೀಖು ಹುಟ್ಟುಹಬ್ಬ ಆಚರಿಸಿಕೊಂಡವನು ಇಪ್ಪತ್ತೈ ದರಂದು ಜೀವ ಕಳೆದುಕೊಂಡ ಅಂದ್ರೆ ಹೇಗಿರ ಬೇಡ ನಮ್ಮ ಮನಸ್ಥಿತಿ ?  ದೂರದ ಹಳ್ಳಿಯಲ್ಲಿ ಇರುವ ಅವರ ಕುಟುಂಬದಲ್ಲಿ ಇಂತಹದೊಂದು ಬರಸಿಡಿಲು.. ತೇಜು - ತೇಜಸ್ ಸತ್ತಿದ್ದಾನೆ ಎನ್ನುವ ಸುದ್ದಿ ತುಂಬಾ ದುಃಖ ನೀಡಿತು. ಎಲ್ಲವನ್ನು ಸ್ವೀಕರಿಸಿ  ಮತ್ತೆ ಕೆಲಸದಲ್ಲಿ ಮಗ್ನಳಾದರು  ಸಹ , ಎರಡು ದಿನ ಬ್ಲಾಗಿಂಗ್ ಮಾಡಿದ್ರು ಏಕಾಗ್ರತೆ ಹಾಳಾಗಿತ್ತು. ಈ ಸಾವು ನ್ಯಾಯವೇ ಎಂದು ಪದೇಪದೇ ಅನ್ನಿಸಿತ್ತು.  ಆ ನಿಸ್ಸಹಾಯಕ ತಾಯಿ ತಂದೆ ನೆನಪು.. ಅ ಪಾಪದವರ ಸಂಕಟ ವಿವರಿಸೋಕೆ ಆಗಲ್ಲ..

                                                          ........

ಕಳೆದವಾರದಲ್ಲಿ ಪ್ರಸಾರವಾದ ಬಿಗ್ ಬಾಸ್ ನಲ್ಲಿ ಕ್ಯಾಪ್ಟನ್ ಸ್ಥಾನಕ್ಕೆ ಸಂಬಂಧಪಟ್ಟ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಆ ಪರಿ ಇಡ್ಲಿ ತಿಂದ ಕಿಟ್ಟಿ ಮತ್ತು ಅಯ್ಯಪ್ಪ ಅವರ ವಿಷಯಕ್ಕಿಂತ ಅವರ ಜೊತೆ ಆ ರಾತ್ರಿ  ಮನೆಯಲ್ಲಿ ಮಲಗಿದ್ದವರ  ಕಷ್ಟ  ನೆನೆದು ಅಯ್ಯೋ ಪಾಪವೇ ಎಂದು ಅನ್ನಿಸಿತ್ತು ;-)
ನನ್ನ ಕಸಿನ್ ಗೋಪಾಲನಿಗೆ  ಬಿಗ್ ಬಾಸ್ ಸಕತ್ ಇಷ್ಟ. ನನ್ನ ನೇಟಿವ್ ನಲ್ಲಿ ಇರೋದು ಅವನು. ಮೊದಲ ಸೀಸನ್ ನಲ್ಲಿ ಅವನಿಗೆ ಹೆಚ್ಚು ಆಕರ್ಷಿಸಿದ್ದು ಚಂದ್ರಿಕಾ. ಚಂದ್ರಜ್ಜಿ ಅಂತ (ಕೀಟಲೆಗೆ ) ಹೇಳ್ತಾ ಇದ್ದ.. ಎರಡನೆಯ ಸೀಸನ್ ಗಿಂತ ಅವನಿಗೆ ಈಗ ಹೆಚ್ಚು ಇಷ್ಟ ಆಗಿದೆ ಅದಕ್ಕೆ ಕಾರಣ ಸುಷ್ಮಜ್ಜಿ ;-)..
ಲೇಯ್ ಅವರು ತುಂಬಾ ಗ್ಲಾಮರ್ ಹೆಣ್ಣುಮಕ್ಕಳು ಅವ್ರ ಬಗ್ಗೆ ಹೀಗ್ ಹೇಳಿದ್ರೆ ಅಷ್ಟೇ ಆಮೇಲೆ ಇಬ್ಬರು ಯಾರಿಗೂ ಕ್ಯಾರೆ ಅನ್ನದ ಹೆಣ್ಣುಮಕ್ಕಳು..ಎಚ್ಚರ ಇರಲಿ ಅಂದ್ರು ಅವನು ವಾಟ್ಸ್ ಅಪ್ ನಲ್ಲಿ ಇರುವ ನಮ್ಮ ಗ್ರೂಪ್ ನಲ್ಲಿ ಬಿಗ್ ಬಾಸ್ ರೀತಿಯಲ್ಲಿ ಚಾಟ್ ಮಾಡೋದು, ಅಂದು ಚಂದ್ರಜ್ಜಿ ಇಂದು ಸುಷ್ಮಜ್ಜಿ ತಪ್ಪದೆ ನೋಡಿ ಬಿಗ್ ಬಾಸ್  ಅಂತ ಹಾಕಿ ನೋಡದೆ ಇರುವವರು ಸಹ ನೋಡುವಂತೆ ಮಾಡಿದ್ದಾನೆ ....
ವೀಕ್ಷಕರು ಎಲ್ಲೇ ಇರಲಿ ಆದ್ರೆ ಬಿಗ್ ಬಾಸ್ ಬಗ್ಗೆ ಇಷ್ಟಪಟ್ಟಿದ್ದಾರೆ. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ .. ಕಳೆದವಾರ ನಮ್ಮ ಆಫೀಸಿಗೆ ಒಂದು ಫೋನ್ ಬಂತು.. ಮಾಡಿದವರು ಮುಂಬೈ ಕನ್ನಡಿಗ. ಆತನಿಗೆ ಬಿಗ್ ಬಾಸ್ ಇಷ್ಟ ಕಾರ್ಯಕ್ರಮವಂತೆ. ಮೇಡಂ ನೀವ್ಯಾಕೆ ಬಿಗ್ ಬಾಸ್ ಬಗ್ಗೆ ಲೇಖನ ಬರೆಯೋಲ್ಲ ಅಂದರು. ಆತನಿಗೆ ನಾನು ಈ ಮೊದಲು ಬರೆದ ಬಿಗ್ ಬಾಸ್ ಲೇಖನ ಹಿಡಿಸಿತ್ತು, ಅದು ಬಹಳ ಹಳೆಯ ಕಥೆ.. ಈಗ ನಾನು ಸಿನಿಮಾ ಪತ್ರಿಕೆಯಲ್ಲಿ ಬರೀತಾ ಇಲ್ಲ ಆದ್ದರಿಂದ ಈ ಬಗ್ಗೆಆಶ್ವಾಸನೆ ನೀಡಲಾರೆ ಎಂದೆ..ಆತನಿಗೆ ಅಯ್ಯಪ್ಪ ನ ಆಟಗಳು ಇಷ್ಟ.. ಹೆಣ್ಣು ಹೈಕಳ ಜೊತೆಯಾಟ.. ನಾವೆಲ್ಲಿ ಬರೆಯೋಣ ಅದರ ಬಗ್ಗೆ ??
Image result for question mark

ವೆಲ್  ಸುದೀಪ್ ... ದೀಪ್.. ಕಿಚ್ಚ  ಹ್ಯಾಪಿ ನ್ಯೂ ಇಯರ್ ...
ನಾನ್ಯಾಕೆ ಇವತ್ತು ವಿಶ್ ಮಾಡ್ತಾ ಇದ್ದೀನಿ ಅಂದ್ರೆ ಪ್ರತಿ ಬಾರಿ ಮಾತು ಮಾತಿಗೂ ಅಷ್ಟು ಸರ್ತಿ ವೀಕ್ಷಕರಿಗೆ, ಬಿಗ್ ಬಾಸ್ ಮನೆಯಲ್ಲಿ ಇರುವ ಎಲ್ಲರಿಗೂ ಹ್ಯಾಪಿ ನ್ಯೂ ಇಯರ್ ಅಂತ ಹೇಳ್ತಾನೆ  ಇದ್ರಲ್ಲ ಸುದೀಪ್ . ಅವತ್ತು ನಿಮಗೆ  ಹೇಳೋಕೆ ಸಾಧ್ಯ ಇರಲಿಲ್ಲ ಅಲ್ವೇ ಅದಕ್ಕೆ ಈಗ ಹೇಳಿದ್ದೇನೆ ..ಅಷ್ಟು ಸರ್ತಿ ಹ್ಯಾಪಿ ನ್ಯೂ ಇಯರ್ ಅಂತ ಹೇಳ್ತಾನೆ ಇದ್ರಲ್ಲ ಯಾಕ್ ಹಿಂದಿನ ದಿನದ  ಎಫೆಕ್ಟ್ ಹಂಗೆ ಉಳಿದು ಕೊಂಡಿತ್ತಾ .. ಛೇ! ನನ್ನದಲ್ಲ ಈ ಡೌಟ್ ನಿಮ್ಮ ಅಭಿಮಾನಿಗಳದ್ದು ... ಹ್ಯಾಪಿ ನ್ಯೂ ಇಯರ್   ;-)
ವೆಲ್ ತುಂಬಾ ಚಂದ ಕಾಣಿಸ್ತಾ ಇದ್ರಿ  ಸಂಡೆ ದಿನ.. ಲೈಕ್ ಇಟ್ ಯಾ