ಒಂದು ಕಡೆ ಓದಿದ ನೆನಪು.. ಯಾವುದೇ ಆಗಲಿ ಮನುಷ್ಯನಿಗೆ ಹೆಚ್ಚು ಪರಿಚಿತ ಆಗಬಾರದು. ಆರಂಭದಲ್ಲಿ ಆ ವಾಕ್ಯ ಓದಿದಾಗ ಅತ್ಯಂತ ಆಶ್ಚರ್ಯ ಆಗಿತ್ತು.. ಹಾಗೆ ಮುಂದುವರೆದ ಸಂಗತಿ ಕೊನೆಗೊಂದು ಅದ್ಭುತ ತೆರೆದಿಟ್ಟಿತ್ತು. ನನಗೆ ಅದು ಅದ್ಭುತ ಎಂದು ಅನ್ನಿಸಿದರು ಬೇರೆಯವರಿಗೆ ಅನ್ನಿಸದೆ ಇರುತ್ತದೆ ಆ ವಿಷ್ಯ ಬೇಡ !
ಯಾರಿಗೆ ಆಗಲಿ ಕೆಲವು ವಸ್ತುಗಳು, ಅಂಶಗಳು, ತುಂಬಾ ಪರಿಚಿತ ಆಗಬಾರದು.. ಈ ಒಂದು ಅಂಶದ ಅಡಿಯಲ್ಲಿ ಅವರೊಂದು ವಿಷಯ ತಿಳಿಸುತ್ತಾರೆ..
ಕಾಡೊಂದರಲ್ಲಿ ನೆಲೆಸಿರುವ ಬುಡಕಟ್ಟು ಜನರಿಗೆ ಕಣ್ಣಿಗೆ ಕಾಣುವ ಅತಿ ಹೆಚ್ಚಿನ ಮರಗಳು ಶ್ರೀಗಂಧದ್ದು, ಆದ ಕಾರಣ ಅವರಿಗೆ ಅದರ ಬಗ್ಗೆ ಹೆಚ್ಚೇನೂ ವಿಶೇಷ ಇರಲಿಲ್ಲ. ಅದೆಷ್ಟರಮಟ್ಟಿಗೆ ಅದರತ್ತ ನೆಗ್ಲೆಕ್ಟ್ ಇತ್ತು ಅಂದ್ರೆ ಆ ಗಂಧದ ಕಟ್ಟಿಗೆಗಳು ಅವರ ದಿನನಿತ್ಯದ ಅಡುಗೆ ಮಾಡಲು ಬಳಕೆ ಆಗುತ್ತಿತ್ತು. ಅದೇ ಶ್ರೀಗಂಧದ ಒಂದು ಪುಟ್ಟ ತುಂಡು ನಮ್ಮ ಬಳಿ ಅದೆಷ್ಟು ವ್ಯಾಲ್ಯೂ ಹೊಂದಿದೆ ! ಆದ್ದರಿಂದ ಜಾಸ್ತಿ ಪರಿಚಿತ ಇರಬಾರದು..ಬದುಕಲ್ಲಿ ಬಹಳಷ್ಟು ಅಂಶಗಳಿಗೆ ಈ ಒಂದು ಪರಿಚಿತ ಅಪ್ಲೈ ಆಗುತ್ತೆ ಅಲ್ವೇ !
@ಈ ಅಂಶ ಯಾಕೆ ಹೇಳೋಕೆ ಹೊರಟೆ ಅಂದ್ರೆ ಇತ್ತೀಚೆಗೆ ವಾಹಿನಿ ಒಂದು ಗಾಂಧಿಜಿ ಅವರ ಉಪ್ಪಿನ ಸತ್ಯಾಗ್ರಹದ ಬಗ್ಗೆ ಕಾರ್ಯಕ್ರಮ ಪ್ರಸಾರ ಮಾಡ್ತಾ ಇತ್ತು.ಅಲ್ಲಿ ರಾಶಿ ರಾಶಿಯಾದ ಉಪ್ಪಿನ ಗುಡ್ಡಗಳನ್ನು ನೋಡಿ ಇವರಿಗೆ ಉಪ್ಪು ಅದೆಷ್ಟು ಪರಿಚಿತ ಅಂತ ಅನ್ನಿಸಿತ್ತು. ಬರಿ ಪಾಕೆಟ್ ಉಪ್ಪು ನೋಡಿದವರಿಗೆ ಆ ಗುಡ್ಡಗಳಷ್ಟು ಉಪ್ಪಿನ ದರ್ಶನ ಆಹಾ ಅನ್ನಿಸುವಂತೆ ಮಾಡಿತ್ತು..
ಮೊನ್ನೆ ಹಿಸ್ಟರಿ ಚಾನೆಲ್ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಉಪ್ಪಿನ ಸತ್ಯಾಗ್ರಹದ ಬಗ್ಗೆ ಒಂದು ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ದಂಡಿಯಲ್ಲಿ ಉಪ್ಪಿನ ತಯಾರಿಕೆಯ ಬಗ್ಗೆ ಪ್ರಸಾರಿಸುತ್ತಾ ಜೊತೆಗೆ ಗಾಂಧಿ ತಾತನ ಹಳೆಯ ಚಿತ್ರಗಳನ್ನು ಸಹ ಹಾಕ್ತಾ ಇದ್ರೂ ಆ ಮಂದಿ.. ಗಾಂಧೀಜಿ ಅವರ ಬಗ್ಗೆ ಓದುವಾಗಲೆಲ್ಲಾ , ಅವರ ಪಟ ನೋಡಿದಾಗ ನನಗೆ ಸಕತ್ ರೋಮಾಂಚನ ಆಗುತ್ತದೆ, ಅವರ ಆ ತಾಕತ್, ಆ ಆತ್ಮವಿಶ್ವಾಸ, ಆ ಗೆದ್ದ ವಿಧಾನ. ಯಾರು ಗಾಂಧಿ ಬಗ್ಗೆ ಏನೇ ಹೇಳಲಿ, ಏನೇ ಬರೆಯಲಿ ನನಗೆ ಮಾತ್ರ ಗಾಂಧಿ ತಾತನ ಬಗ್ಗೆ ಎಂದಿಗೂ ಎಂದೆಂದಿಗೂ ಗೌರವ, ಪ್ರೀತಿ ಹಾಗೂ ಅಭಿಮಾನವಿದೆ.
@ ಕಳೆದವಾರ ಹೆಚ್ಚು ಗಮನ ಸೆಳೆದ ಕಾರ್ಯಕ್ರಮಗಳಲ್ಲಿ ಡಿಸ್ಕವರಿ ಸೈನ್ಸ್ ನಲ್ಲಿ ಪ್ರಸಾರವಾದ ಫ್ಲೈಟ್ ಆಕ್ಸಿಡೆಂಟ್ ಕಾರ್ಯಕ್ರಮ. ಯಾವರೀತಿ ಯಂತ್ರ ಪಕ್ಷಿ ಆಗಸದ ಮೇಲಿಂದ ಕೆಳಗೆ ಉದುರಿ ಅಲ್ಲಿ ಇದ್ದವರ ಜೀವ ತೆಗೆಯಿತು ಎನ್ನುವುದರ ಬಗ್ಗೆ, ಆ ರೀತಿ ಅಪಘಾತ ಆಗಲು ಕಾರಣಗಳೇನು ಹೀಗೆ ಹಲವಾರು ಅಂಶಗಳನ್ನು ಒಳಗೊಂಡಿತ್ತು ಕಾರ್ಯಕ್ರಮ. ವಿಜ್ಞಾನ ಎಷ್ಟೇ ಸವಲತ್ತುಗಳನ್ನು ನಮಗೆ ನೀಡಿದ್ರು, ಅದರ ಜೊತೆಗೆ ಈ ರೀತಿಯ ತೊಂದರೆಗಳನ್ನು ಸಹ ನೀಡುತ್ತದೆ. ಹಾಗಂತ ಬಳಸದೆ ಇರೋಕೆ ಆಗಲ್ಲ!
No comments:
Post a Comment