ಕನ್ನಡ ಕೇಳೋ ಹಂಗೆ ಇರುತ್ತೆ!


Image result for flower
ಅನೇಕ ಬಾರಿ ಯಾವ ಕಾರ್ಯಕ್ರಮಗಳ ಬಗ್ಗೆ ಬರೆಯೋದು ಅಂತ ಅನ್ನಿಸುತ್ತಿರುತ್ತದೆ. ಯಾಕೇಂದ್ರೆ ಸಾಮಾನ್ಯವಾಗಿ ನಾನು ಕೆಲವು ಕಾರ್ಯಕ್ರಮಗಳನ್ನು ಹೆಚ್ಚು ನೋಡಿರ್ತೀನಿ, ಅದರ ಬಗ್ಗೆ ಪದೇಪದೇ ಬರೆಯೋಕೆ ಆಗಲ್ಲ. ಈ ಎಲ್ಲಾ ಕಾರಣಗಳಿಂದ ಬರಿಯದೆ ಇರುವುದು ಹೆಚ್ಚು ಆರಾಮ ಎಂದು ಅನ್ನಿಸುತ್ತೆ. 

ಉದಯವಾಹಿನಿ ಅಂದ್ರೆ  ಬಹಳಷ್ಟು ವೀಕ್ಷಕರಿಗೆ ಅದರಲ್ಲೂ  ಮಹಿಳಾ ವೀಕ್ಷಕರಿಗೆ ಇಷ್ಟ ಆಗುತ್ತದೆ. ಅತಿರಂಜಕ ಧಾರಾವಾಹಿಗಳ ಪ್ರಸಾರ, ಅಲ್ಲದೆ ತನ್ನದೇ ಆದ  ಛಾಪು  ಒತ್ತಿರುವ ಕೆಲವು ರಿಯಾಲಿಟಿ ಷೋಗಳು... ! ಅದರಲ್ಲಿ ನನಗೆ ಶಾಲಿನಿ ನಡೆಸಿಕೊಡುವ ಕಾರ್ಯಕ್ರಮ ಅತಿ ಇಷ್ಟ. ಯಾಕೆ ಎನ್ನುವುದು ವಿವರಿಸಿ ಹೇಳ ಬೇಕಿಲ್ಲ. ಮಕ್ಕಳೇ ಮಾಣಿಕ್ಯ, ಅವರ ಮಾತುಗಳ, ಕಲ್ಪನಾ ಲಹರಿ ಅಮೋಘ. ಅದರ ಜೊತೆ ಶಾಲಿನಿಯ ಮಾತಿನ ಶೈಲಿ  ಅದ್ಭುತ. ಭಾನುವಾರ ಆ ಕಾರ್ಯಕ್ರಮ ನೋಡಲು ಕಾತುರದಿಂದ ಕಾಯುವಂತಾಗುತ್ತದೆ.

@ ಉದಯ ನ್ಯೂಸ್ ಯಾವ ಕಾರಣದಿಂದ ಇಷ್ಟ ಆಗುತ್ತೆ ಅಂದ್ರೆ ಅದರಲ್ಲಿ ವಾರ್ತೆ ಓದುವವರು ಸ್ಫುಟವಾದ ಕನ್ನಡದಲ್ಲಿ ವಾರ್ತೆ ಓದುತ್ತಾರೆ. ಆದರೆ ಬಹಳಷ್ಟು ಕನ್ನಡ ವಾಹಿನಿಗಳಲ್ಲಿ ವಾರ್ತೆ  ಕೇಳೋದೇ ಹಿಂಸೆ ಆಗುತ್ತೆ. ಕೆಲವರಂತೂ ಬ್ಯಾಡ ಬಿಡಿ ನನಗ್ಯಾಕೆ !! 

ಆದರೆ ಈವರೆಗೂ ಅಂತಹ ಬೇಸರ ಆಗಿಲ್ಲ ಉದಯ ನ್ಯೂಸ್ ನವರ ಬಗ್ಗೆ ಹೇಳುವುದಾದರೆ!   ಸಾಕಷ್ಟು ಬದಲಾವಣೆಗಳು ಆಗಿವೆ ಉದಯ ನ್ಯೂಸ್ ನಲ್ಲೂ ಸಹಿತ.ತೀರ ಬ್ರೆಕಿಂಗ್ ನ್ಯೂಸ್ ಹಾವಳಿ ಇಲ್ಲ ಅಂದ್ರೂ ಇರುವ ನ್ಯೂಸ್ ಅಚ್ಚುಕಟ್ಟಾಗಿ ಹೇಳುತ್ತಾರೆ. ಚಂದನ ವಾಹಿನಿ ಬಳಿಕ   ಜಾಗ ಪಡೆದ ಚಾನೆಲ್ ಅಂದ್ರೆ ಇದು. ಕನ್ನಡ ಕೇಳೋ ಹಂಗೆ ಇರುತ್ತೆ ! 
@ ಉದಯ ಮ್ಯೂಸಿಕ್  ವಿಷಯಕ್ಕೆ ಬರುವುದಾದರೆ ಹೊಸ ಹುಡುಗ ಹುಡುಗಿಯರು ಎಷ್ಟು ಸುಂದರವಾಗಿ ಕನ್ನಡ ಮಾತಾಡ್ತಾರೆ.  ಇಲ್ಲಿ ನಾನು ಖುಷಿಯಿಂದ ಈ ಮಾತು ಹೇಳ್ತಾ ಇದ್ದೀನಿ ಏಕೆಂದರೆ ಸಾಮಾನ್ಯವಾಗಿ ಅತಿಯಾದ ಕಂಗ್ಲೀಷ್ ಇರುವಾಗ ಕನ್ನಡವೂ ಚೆನ್ನಾಗಿ ಮಾತಾಡೋದು, ಮುಖ್ಯವಾಗಿ  ವೀಕ್ಷಕರಿಗೆ ಅರ್ಥ ಆಗುವಂತೆ ಕನ್ನಡ ಮಾತಾಡ್ತಾರೆ. ಸಿನಿ ತಾರೆಯರ  ಸಂದರ್ಶನ ಸಹ ಅಷ್ಟೇ ಚಂದ ಮಾಡ್ತಾರೆ. ಲೈಕ್ ಆಗುವಂತೆ... ನ್ಯೂಸ್ ಚಾನೆಲ್ ಗಳ ವಾರ್ತಾ ವಾಚಕರಿಗಿಂತ ಈ ಬಾಲಕ ಬಾಲಕಿಯರ ಮಾತು  ಕಿವಿಗೆ ಹಿತವಾಗಿರುತ್ತದೆ. 

ಅಜ್ಞಾತ ಕವಿಗಳು

Image result for red and green flower
ನನಗೆ ಮೊದಲಿನಿಂದಲೂ ಕನ್ನಡ ಸ್ವಲ್ಪ ಚೆನ್ನಾಗಿ ಬರೀತಿನಿ ಅನ್ನುವ ಹೆಮ್ಮೆ, ಆತ್ಮವಿಶ್ವಾಸ ಏನ್ ಬೇಕಾದ್ರೂ ತಿಳಿಯ ಬಹುದು. ಆದರೆ ಇಬ್ಬರು ವ್ಯಕ್ತಿಗಳು ನನ್ನ ಈ ನಂಬಿಕೆಯನ್ನು ಸುಳ್ಳು ಮಾಡಿ ಬಿಟ್ಟಿದ್ದಾರೆ. ಮೊದಲನೆಯವರು ಬರಹಗಾರರು . ಅವರು ಒಮ್ಮೆ ನಾನು ಬಳಸಿದ ಪದದ ಬಗ್ಗೆ ತಪ್ಪು ಕಂಡು ಹಿಡಿದರು, ನಾನು ಯಾವುದೋ ಮೂಡ್ ನಲ್ಲಿ ಇದ್ದವಳು ನಾನು ಬರೆದದ್ದು ಸರಿ ಎಂದೇ.. ಆತ ತಕ್ಷಣ  ಕೆಂಡಗಣ್ಣನಾಗಿ ನನ್ನ ಕಡೆ ಬಿಸಿ ಗಾಳಿ ತೋರಿ  ಇನ್ನುಮುಂದೆ ನಿಮ್ಮ ತಪ್ಪು ತಿದ್ದಲ್ಲ ಎಂದು ಬಿಟ್ಟರು. ಆದರೆ ತಮಾಷೆ ಅಂದ್ರೆ  ಆ ಸಂಗತಿಯನ್ನು ಅವರ್ಯಾಕೆ ಅಷ್ಟೊಂದು  ಗಂಭೀರವಾಗಿ ಅದನ್ನು ಪರಿಗಣಿಸಿದರು ಎನ್ನುವ ಬಗ್ಗೆ ಸಾಕಷ್ಟು ದಿನ ಬೇಸರ ನನ್ನನ್ನು ಕಾಡಿತ್ತು. ಅದಾದ ಬಳಿಕ ನಾನು ಅವರ ಪುಸ್ತಕಗಳನ್ನು ಓದುವುದು,  ಅಕ್ಷರಪ್ರಿಯರಿಗೆ ಅದನ್ನು ಕೊಡುವುದನ್ನು ಬಿಟ್ಟೆ. ನಾವು ಸಾಮಾನ್ಯರು ದೊಡ್ಡವರ ಉಸಾಬರಿ ಯಾಕೆ ಅಂತ!


ಕಳೆದ ಎರಡು ಮೂರು ದಿನಗಳಿಂದ ಒಬ್ಬಾತ ನನ್ನ ಕನ್ನಡದ  ಬಗ್ಗೆ ಟೀಕಾಪ್ರಹಾರ ಮಾಡ್ತಾ ಇದ್ದಾನೆ. ಅದರ ಬಗ್ಗೆ ನನಗೆ ಬೇಸರ ಇಲ್ಲ. ಆದರೆ ಒಂದಂತೂ  ಮನದಟ್ಟಾಯ್ತು  .. ಜಯಶ್ರೀ ನಿನಗೇನೂ ಬರಲ್ಲ. ಮಿಸ್ಫಿಟ್, ಕನ್ನಡ ಬರುತ್ತೆ ಎನ್ನುವ ನಿನ್ನ ನಂಬಿಕೆ, ಆತ್ಮ ವಿಶ್ವಾಸ ಎಲ್ಲವನ್ನು ಬಿಟ್ಟುಬಿಡು ಎಂದು ಹೇಳಿಕೊಂಡೆ..  ಕನ್ನಡ ಬರದ ನಾನು ತಪ್ಪು ಮಾಡಿದರೆ ದಯಮಾಡಿ ಪ್ರಿಯ ರೀಡರ್ಸ್ ಒಪ್ಪಿಕೊಳ್ಳಿ..ಇದು ನನ್ನ ರಿಕ್ವೆಸ್ಟ್.


@@ ಸಂಗೀತ ಪ್ರಿಯರಿಗೆ, ಭಕ್ತಿ, ದೇವರು ದಿಂಡರು, ಸಂಪ್ರದಾಯ , ಪುರಾತನ ಸಂಗತಿಗಳ ಬಗ್ಗೆ ಆಸ್ಥೆ ಇರುವವರಿಗೆ ಇಷ್ಟ ಆಗುವ ಚಾನೆಲ್ಗಳಲ್ಲಿ   svbc  ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್  ಸಹ ಒಂದು. ಈ ತೆಲುಗು  ಚಾನೆಲ್ ನಲ್ಲಿ ಆಗಾಗ ಕನ್ನಡ ಸಹ ಕೇಳಿ ಬರುತ್ತೆ. ಟಿಟಿಡಿಯ  ಈ ವಾಹಿನಿಯಲ್ಲಿ  (ದೇವರು- ದಿಂಡರು ಅಂತ ನಂಬುವ ನನ್ನಂತಹ ಅತಿ ಸಾಮಾನ್ಯರಿಗೆ )  ಸಾಮಾನ್ಯವಾಗಿ ತಿರುಪತಿಯ ದೇಗುಲ, ಸುತ್ತಮುತ್ತಲ ದೇವಾಲಯಗಳಲ್ಲಿ ನಡೆಯುವ ಕಾರ್ಯಕ್ರಮ ಪ್ರಸಾರವಾಗುತ್ತದೆ.   ಅಲ್ಲದೆ, ಈ ಚಾನೆಲ್ ನಲ್ಲಿ ಇಷ್ಟ ಆಗುವ ಕಾರ್ಯಕ್ರಮ ಮತ್ತೊಂದಿದೆ. ಅದು ಅಜ್ಞಾತ ವಾಗ್ಗೇಯಕಾರರ  ಕಾರ್ಯಕ್ರಮ. ನಾವು ಸಾಮಾನ್ಯವಾಗಿ ಕೆಲವು ವಾಗ್ಗೇಯಕಾರರ ಬಗ್ಗೆ ಕೇಳಿದ್ದೇವೆ. ಆದರೆ  ಬಹಳಷ್ಟು ಅಜ್ಞಾತ ಕವಿಗಳು ಬಿಟ್ಟು ಹೋಗಿರುವ ಅಪಾರ ಸಂಗೀತ ಸಂಪತ್ತನ್ನು ಆ ವಾಹಿನಿಯವರು ಪ್ರಸಾರ ಮಾಡುತ್ತಿದ್ದಾರೆ. ಸಂಗೀತಪ್ರಿಯರಿಗೆ ಇಷ್ಟ ಆಗುವ ಕಾರ್ಯಕ್ರಮ.. ಸಾಧ್ಯವಾದರೆ ವೀಕ್ಷಿಸಿ ಆನಂದಿಸಿ. (ರಾತ್ರಿ 10 ಗಂಟೆಗೆ ಪ್ರಸಾರ ಆಗುತ್ತದೆ.)

ಕನ್ನಡ ಸ್ಪರ್ಧಿ

Image result for pink flower
ಭಟ್ಟರ ವಾಸ್ತುಪ್ರಕಾರ ಬಂದಿದ್ದೆ ತಡ ಬ್ಯಾಡ ಬ್ಯಾಡಾಂದ್ರೂ ಸೋಷಿಯಲ್ ನೆಟ್ ವರ್ಕ್ ನಲ್ಲಿ ಮಂದಿ ತಮಗೆ ಇಷ್ಟ  ಬಂದ ಕಮೆಂಟ್ ಹಾಕಿ ಹಾಕಿ ಜಗ್ಗೇಶ್ ಅವರಿಗೆ ಕೋಪ ಬರಿಸಿದ್ದು ಸತ್ಯ. ಆದರೂ ವಾಸ್ತು ಪ್ರಕಾರದ ಬಗ್ಗೆ ಮಂದಿಗೆ ಕುತೂಹಲ ಇದ್ದೆ ಇದೆ ಬುಡಿ. 
 ವಾಸ್ತು ಪ್ರಕಾರದಲ್ಲಿ ಟಿ ಏನ್ ಸೀತಾರಾಮ್  ಮಾಡಿರುವ ಪಾತ್ರಕ್ಕೆ ಮೊದಲು ಬ್ರಹ್ಮಾಂಡ  ಗುರುಜೀ   ನರೇಂದ್ರ ಬಾಬು ಶರ್ಮ ಅವರನ್ನು ಆಯ್ಕೆ ಮಾಡಲಾಗಿತ್ತು, ಅವರು ತಿರಸ್ಕರಿಸಿದ ಬಳಿಕ ಆ ಜಾಗಕ್ಕೆ ಟಿ ಏನ್ ಎಸ್ ಬಂದ್ರು ಎನ್ನುವ ಸಂಗತಿ ನನ್ನ ಎಫ್ಬಿ ದೋಸ್ತ್ ಬಾಬ ಪ್ರಸಾದ್  ವೆಂಕಟೇಶ್ ಬರಕೊಂಡಿದ್ದರು.ಅದೇ ಆ ಪಾತ್ರ ಕಾಳಿ ಮಠ ಸ್ವಾಮಿ ಮಿಸ್ಟರ್ ಕೂಗುಮಾರಿಗೆ ನೀಡಿದ್ದರೆ ಆಹಾ ! ತಪ್ಪದೆ ಓಕೆ ಅಂದು ಬಿಡ್ತಾ ಇದ್ರೂ..
Image result for pink flower
@ಮಧುಸೂಧನ್  ಪ್ರಭಾಕರ್ ರಾವ್ ಎನ್ನುವ ವರದಿಗಾರ ಸುವರ್ಣ ನ್ಯೂಸ್ ನಲ್ಲಿ ಇದ್ದಾರೆ. ಸೀರಿಯಸ್ ಆಗಿರುವ ನ್ಯೂಸ್ ಸಹ ನಗುಮುಖದಲ್ಲಿ ಹೇಳುವ ಅಭ್ಯಾಸ ಇವರದ್ದು. ಅದೇರೀತಿ ಎಫ್ ಬಿಯಲ್ಲಿ  ಸೀರಿಯಸ್ , ಆ ವಿಷ್ಯ ಈ ವಿಷ್ಯ ಏನೇ ಹಾಕಲಿ ಅವರು ತಮ್ಮ ಪೋಸ್ಟ್ ಕೊನೆಯಲ್ಲಿ ನಿಮ್ಮ ಪ್ರೀತಿಯ ಅಂತ ಮುಕ್ತಾಯ  ಮಾಡ್ತಾರೆ.. 
ಅವರು ಯಾರ ಪ್ರೀತಿಯವರು ಎನ್ನುವ  ಸಂಗತಿ ನಮಗೆ ಗೊತ್ತಾದರೆ ಮತ್ತೂ ಒಳ್ಳೆಯದು :-)
Image result for pink flower
@
ಜೀ ಹಿಂದಿ ವಾಹಿನಿಯಲ್ಲಿ ಡಿಐಡಿ  ಅಮ್ಮಂದಿರ ಸ್ಪೆಶಲ್ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಅದರಲ್ಲಿ ಸೌಮ್ಯಶ್ರೀ ಎನ್ನುವ ಕನ್ನಡ ಸ್ಪರ್ಧಿ ಇದ್ದಾರೆ. ಸಕತ್ ಎನರ್ಜಿ ಆಕೆಯ ಡ್ಯಾನ್ಸ್ ನಲ್ಲಿದೆ. ಖುಷಿ ಕೊಟ್ಟ ಸಂಗತಿ ಅಂದ್ರೆ ಆಕೆ ಕನ್ನಡದಲ್ಲಿ   ಮಾತಾಡಿದ್ದು. ಅವರ ತಾಯಿ ಪತಿ ಎಲ್ಲರು ಕನ್ನಡದಲ್ಲಿ ಮಾತಾಡಿದ್ದು.ಕರ್ನಾಟಕದಲ್ಲೇ  ನಾವಿದ್ದರೂ ಬೇರೆ ಭಾಷೆಯ ವೇದಿಕೆಯಲ್ಲಿ   ಮಾತೃ ಭಾಷೆ ಕೇಳಿದಾಗ ಸಕತ್ ಖುಷಿ ಅನ್ನಿಸುತ್ತೆ..
ಗೀತಾ-ಗೋವಿಂದ ಮತ್ತು ಟೆರೆನ್ಸ್  ತೀರ್ಪು, ಮುಖ್ಯವಾಗಿ ಅದರ ಎಂಜಾಯ್ ಮೆಂಟ್ ಎಲ್ಲವೂ ಆಹಾ! 
Image result for pink flower
@@
 ಸ್ಟಾರ್ ವಾಹಿನಿಯ ಮಾಸ್ಟರ್ ಶೆಫ್  ಕಾರ್ಯಕ್ರಮದ ಕೊನೆಯ ಆರ. ಸಾಕಷ್ಟು ಆಸಕ್ತಿಯಿಂದ ನಾನು ವೀಕ್ಷಣೆ ಮಾಡುತ್ತಿರುವ ಕಾರ್ಯಕ್ರಮಗಳಲ್ಲಿ ಇದೂ ಸಹ ಒಂದಾಗಿದೆ. ಅದು ಮುಗಿದರೆ ಸ್ವಲ್ಪ ಮಿಸ್ ಮಾಡಿಕೊಳ್ಳುತ್ತೇನೆ. ಯಾಕೇಂದ್ರೆ ಕೆಲವು ಕಾರ್ಯಕ್ರಮಗಳು ಮನಸ್ಸು ಸೆಳೆದು ಬಿಡುತ್ತದೆ. ಜೊತೆ ಅದರ ಗ್ಲಾಮರಸ್ ತೀರ್ಪುಗಾರರಾದ  ಕಾಮ್ ಸಂಜೀವ್, ಸ್ಟೈಲೀಶ್   ರಣವೀರ್ ಮತ್ತು  ಕೂಲ್ ವಿಕಾಸ್  ಒಂದರ್ಥದಲ್ಲಿ ಎಲ್ಲರನ್ನು ಮಿಸ್ ಮಾಡಿಕೊಳ್ತೇನೆ :-)