ದ್ವಂದ್ವ ಮನಸ್ಥಿತಿ

 

ಈಗಷ್ಟೇ ಒಂದು ತಮಾಷೆ ಪ್ರಶ್ನೆ ಓದಿದೆ ತೆಲುಗು ಗ್ರೂಪ್ ಒಂದರಲ್ಲಿ , ಹೀಗೆ ಒಂದು ಸರ್ತಿ ಒಬ್ಬ ಹುಡುಗನ ಹೆಸರು ಕೇಳಿದಾಗ ಅವನು  6ಜೂನ್  ಎಂದು ಉತ್ರ ಕೊಟ್ಟನಂತೆ , ಹಾಗಾದ್ರೆ ಅವನ ಹೆಸರೇನು ಎಂದು ಕೇಳಿದ್ದರು . ಅದನ್ನು ನಾನು ಇಲ್ಲಿ ಬರೆಯ ಬೇಕಿಲ್ಲ  ನಿಮಗೆ ಉತ್ರ  ಗೊತ್ತಿರುತ್ತೆ , ಇಂತಹ ಸದಭಿರುಚಿಯ ಜೋಕ್  ಗಳು ಮಾತುಗಳು ಮನಕ್ಕೆ ಹೆಚ್ಚು ಖುಷಿ ಕೊಡುತ್ತದೆ ,ಅದೇ ರೀತಿ ದಡ್ಡ ಉತ್ತರಗಳು ಮನಸ್ಸಿಗೆ ಮುದ ನೀಡದಿದ್ದರೂ   ನಗುವುದಕ್ಕೆ ಸಹಾಯ   ಮಾಡುತ್ತದೆ , ಕೆಲವು ಬಾರಿ ಖೇದ ಸಹ ಅನ್ನಿಸುತ್ತದೆ .ಕನ್ನಡ ಕಲರ್ ವಾಹಿನಿಯ  ಬಿಗ್ ಬಾಸ್ ನಲ್ಲಿರುವ ಸ್ಪರ್ಧಿ ಆರ್ಯವರ್ಧನ್ ಬಗ್ಗೆ , ಅವರು  ಆಡಿದ ಮಾತ ನ್ನು ಬದಲಾಯಿಸುವ ಬಗ್ಗೆ , ಸಂಖ್ಯಾ ಶಾಸ್ತ್ರದ ಹೆಸರು ಹೇಳುತ್ತಾ   ತಮ್ಮ ತಪ್ಪು ಮುಚ್ಚಿಕೊಳ್ಳುವ ರೀತಿ , ಸುದೀಪ ಕ್ಲಾಸ್  ತೆಗೆದುಕೊಳ್ಳುವಾಗ ಅವರಿಗೆ ನೇರವಾಗಿ ಹೇಳುತ್ತಿದ್ದರು ತಮಗೆ ಅಲ್ಲ ಅನ್ನುವಂತಹ ಪೆದ್ದತನ ಇವೆಲ್ಲ  ಕಂಡಾಗ ಇವರ  ಫ್ಯಾನ್  ಕ್ಲಬ್ ನೆನೆದು ದುಃಖ   ಆಗುತ್ತದೆ . ಇವರ ಮಾತನ್ನು ನಂಬಿ ಅದೆಷ್ಟು ಮಂದಿ ಪಾಪ .....! ಮುಖ್ಯವಾಗಿ   ಸುದೀಪಾ ನನಗೆ ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಕಂಡಾಗ.... 

ಅವರಿಬ್ಬರಿಗೂ ತಮ್ಮನ್ನು ತಾವು ಹೆಚ್ಚು ತಿಳಿದವರು ಮತ್ತು ತಮ್ಮ  ಮಾತೇ ಅಂತಿಮ  ಎನ್ನುವ ಮನೋ ಭಾವ ಹೊಂದಿರುವವರು ಎನ್ನುವ ಹೆಮ್ಮೆ ಇದೆ . ಚಿಕ್ಕ -ದೊಡ್ಡ ಎನ್ನದೆ ಹೊರ ಪ್ರಪಂಚದಲ್ಲಿ ಅವರು ಮಾತನ್ನು ಕೇಳುವ ಕೆಲವು ಮಂದಿ ಹಿಂಬಾಲಕರನ್ನುಹೊಂದಿರುವ  ಇವರು ಇಲ್ಲೂ ತಮ್ಮ  ಕೇಳಲಿ ಅನ್ನುವ ಆಸೆ ಹೊಂದಿದ್ದಾರೆ. ಮುಖ್ಯವಾಗಿ ಈ ಆಟಕ್ಕೆ ಬೇಕಾಗಿರುವುದು ಬಾಸಿಸಂ ಅಲ್ಲ ಎನ್ನುವುದು ಅರ್ಥ ಮಾಡಿಕೊಂಡರೆ  ಅದರಲ್ಲೂ  ಮುಖ್ಯವಾಗಿ ರೂಪೇಶ್ ರಾಜಣ್ಣ ತಿಳಿದರೆ ಆಗ  ಅವರಲ್ಲಿರುವ ದ್ವಂದ್ವ  ಮನಸ್ಥಿತಿ ದೂರ ಆಗುತ್ತದೆ 

ಹೈರಾಣಾದರ

 

ಕಲರ್ ಹಿಂದಿ ವಾಹಿನಿಯಲ್ಲಿ  ಪ್ರಸಾರ ಆಗುವ ಬಿಗ್ ಬಾಸ್ ಹಿಂದಿ ನೋಡೋಕೆ ಮುಖ್ಯ ಕಾರಣ ಸಲ್ಮಾನ್ ಖಾನ್ . ಪ್ರತಿ ಬಾರಿ ಬಿಗ್ ಬಾಸ್ ಶುರು ಆಗುವ ಮುನ್ನ ಹಬ್ಬುವ ಸುದ್ದಿ ಅಂದ್ರೆ 'ಸಲ್ಮಾನ್ ಖಾನ್ ಈ ಸರ್ತಿ ನಿರೂಪಣೆ ಮಾಡಲ್ವಂತೆ .. ಅದಕ್ಕೆ ಕಾರಣ ಇದಂತೆ .. ಹೀಗೆ ಆಗಿದೆಯಂತೆ' . ಇಂತಹ  ನ್ಯೂಸ್ ಗಳು ಇತ್ತೀಚೆಗೆ  ಹೆಚ್ಚಾಗಿ ಕಾಣುವುದು ರಾಶಿ ರಾಶಿ ಸಂಖ್ಯೆಯಲ್ಲಿ ಹುಟ್ಟಿರುವ ವೆಬ್ ಪೇಜ್ ಗಳಲ್ಲಿ . ಸಾಕಷ್ಟು ಸಂಗತಿ ಖುದ್ದು ಸಲ್ಮಾನ್ ಗೆ ಗೊತ್ತಿರಲ್ಲ ಅದನ್ನು ವೆಬ್  ನವರು ಹಾಕಿರುತ್ತಾರೆ . ಒಟ್ಟಿನಲ್ಲಿ ಸದಾ ಸುದ್ದಿಯಲ್ಲಿ ಇರುವ ಹೀರೊ ..ಪ್ರತಿ ಬಾರಿ ಫ್ರೆಶ್ ಆಗಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣುತ್ತಿದ್ದ ಸಲ್ಮಾನ್ ಅದ್ಯಾಕೋ ಸ್ವಲ್ಪ ಲವಲವಿಕೆ  ಕಳೆದುಕೊಂಡಿರುವಂತೆ ನನಗೆ ಅನ್ನಿಸಿತು 😨. ರಾಶಿ ರಾಶಿ ಸ್ಪರ್ಧಿಗಳು ಮಾಡುವ ಜಗಲ್ ಬಿಡಿಸಿ ಬಿಡಿಸಿ ಹೈರಾಣಾದರ ಸಲ್ಮಾನ್ ? ಗೊತ್ತಿಲ್ಲ ಅದಕ್ಕೆ ಉತ್ತರ ಅವರೇ ಹೇಳಬೇಕು  😲😧😃

ಹವಾ

 

  ಸುವರ್ಣ ನ್ಯೂಸ್  ನಲ್ಲಿ ಪ್ರಸಾರ ಆಗುವ ಕಾರ್ಯಕ್ರಮಗಳು   ಬಹಳಷ್ಟು ಬಾರಿ ಚರ್ಚೆಯ   ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುತ್ತದೆ . ಈಗ ಹೆಚ್ಚಿನ ಚಾಲ್ತಿಯಲ್ಲಿರುವ ಎಡ - ಬಲ ಪಂಥೀಯರು ಅವರದ್ದೇ ಆದ ರೀತಿಯಲ್ಲಿ ಅಭಿಮಾನ ವ್ಯಕ್ತ ಪಡಿಸುತ್ತಿರುತ್ತಾರೆ . ಅದರಲ್ಲೂ ನ್ಯೂಸ್ ಪ್ರಸೆಂಟರ್ ಅಜಿತ್  ಬಗ್ಗೆ ಅಭಿಮಾನ ಮತ್ತು ವಿರೋಧಾಭಿಮಾನ ಹೆಚ್ಚು ಮಂದಿಗೆ .ಕಳೆದ ಎರಡು ದಿನಗಳಿಂದ ಅಜಿತ್ ಹನುಮಕ್ಕ ನವರ್  ದ್ದೇ   ಹವಾ ಎನ್ನಬಹುದು ಸೋಷಿಯಲ್ ಮೀಡಿಯಾದಲ್ಲಿ . ಇತ್ತೀಚೆಗೆ  ಅವರು ಮಾಡಿದ ಸಂದರ್ಶನ ದಿಂದ  ಅತಿಥಿಗಿರುವ  ಜ್ಞಾನ  ವಿಸ್ತಾರದ ಪರಿಚಯ ಮಾಡಿತು ಎನ್ನುವುದೇ ಬರೆದವರ ಮುಖ್ಯ ಅನಿಸಿಕೆ ಆಗಿತ್ತು .
ಕ್ರೈಮ್ ನಿಂದ ಹಿಡಿದು ರಾಜಕೀಯ ವಿಶ್ಲೇಷಣೆ ಮಾಡುವ ತನಕ ತಮ್ಮ ವ್ಯಾಪ್ತಿಯನ್ನು ವಿಸ್ತಾರ ಮಾಡಿಕೊಂಡಿರುವ ಅಜಿತ್  ಬಗ್ಗೆ ನಾನು ಹೆಚ್ಚು ಹೇಳುವ ಅಗತ್ಯವಿಲ್ಲ .ಭಾಷೆ ಬಳಕೆ , ಮಾತನಾಡುವ ಇರಬೇಕಾದ ಧ್ವನಿಯ ಹಿಡಿತ ,ಮಾತಿನ ಓಘ ಎಲ್ಲವು ಜನ ಮೆಚ್ಚಿನ ಸಂಗತಿ . ಅದರಲ್ಲೂ ಬಲ ಪಂಥೀಯರು ಎಂದು ಹಣೆ ಪಟ್ಟಿ ಹೊಂದಿರುವ ವೀಕ್ಷಕರಿಗೆ ಇವರೆಂದರೆ ಅಭಿಮಾನ . ಇನ್ನೊಂದು ಪಂಥದವರಿಗೆ ವಿ-ರೋಧಾಭಿಮಾನ ಅಷ್ಟೇ !