ತಪ್ಪು ...ತಪ್ಪು !!



ಅದ್ಯಾಕೋ ಇತ್ತೀಚಿಗೆ ಹೆಸರುಗಳನ್ನೂ ತಪ್ಪು ಬರೀತಾ ಇದ್ದೀನಿ, ಅಂದ್ರೆ ಸಾಧಕರ ಹೆಸರು ತಪ್ಪು ಬರೆಯೋಕೆ ಆರಂಭ ಮಾಡಿದ್ದೇನೆ . ತಲೆ ಎಲ್ಲೋ ಇದೆ ಎನ್ನುವುದು ಇದರ ಅರ್ಥವಲ್ಲ ಪ್ರಾಯಶಃ ಸ್ವಲ್ಪ ಜಾಸ್ತಿನೇ ಬ್ಯುಸಿ ಆಗಿರೋದು ಇದಕ್ಕೆ ಕಾರಣ ಎಂದೇ ಹೇಳ ಬಹುದು.. ನಿನ್ನೆ ಬರೆದ ಪೋಸ್ಟ್ ನಲ್ಲಿ  ಡಾ  ಸಿ  ಎನ್  ರಾಮಚಂದ್ರನ್  ಅವರ ಹೆಸರನ್ನು ಬೇರೆ ಬರೆದಿದ್ದೆ. ಇತ್ತೀಚಿಗೆ ಬರೆದ  ಪೋಸ್ಟ್ ನಲ್ಲಿ ಡಿವೈನ್ ಪಾರ್ಕ್  ಡಾ .  ಚಂದ್ರಶೇಖರ ಉಡುಪ ಅವರ ಹೆಸರು ಸಹಿತ.ನನ್ನ ಅಣ್ಣ ರವಿ ಇದನ್ನು ನನ್ನ ಗಮನಕ್ಕೆ ತಂದರು..  ಪ್ರಿಂಟ್ ಮೀಡಿಯಾದಲ್ಲಿ ಇದ್ದು ಸಹ ಈ ರೀತಿ ತಪ್ಪು ಮಾಡ್ತಾ ಇರೋದು ಅಕ್ಷಮ್ಯ.. ಈ ಮೂಲಕ ನಾನು ಮಾಡಿದ ಈ ಮಿಸ್ಟೇಕ್ ಗಳಿಗೆ ಹಿರಿಯರಿಂದ ಕ್ಷಮೆ ಯಾಚಿಸ್ತೀನಿ.. ತಪ್ಪಾಗಿರುವುದನ್ನು  ಆ ಬಳಿಕ ಬರೆದು   ಸರಿಪಡಿಸ್ತಿವಿ ನಿಜ ಆದ್ರೆ ಆದರೆ ತಪ್ಪಂತು ಮಾಡಿರೋದು ನಿಜ ತಾನೇ :-) ಅಗೇನ್ ಕ್ಷಮೆ ಇರಲಿ ಈ ಪಾಮರಳ  ಮೇಲೆ ಪ್ರಿಯ ಓದುಗರೇ! 

ಗೆಳೆಯ ಬದರಿನಾಥ್   ಈಗಷ್ಟೇ ಒಂದು ಸುದ್ದಿ ಹೇಳಿ ಮನಕ್ಕೆ ಬೇಸರ ಉಂಟು ಮಾಡಿದ್ರು.. ಅವರು ಹೇಳಿದ ಸಂಗತಿ ಹಾಗಿತ್ತು.. ದೃಶ್ಯ ಮಾಧ್ಯಮ ಅದೆಷ್ಟು ಅತಂತ್ರ ಅನ್ನೋದು ಮತ್ತೆ ಮತ್ತೆ ಸಾಬೀತಾಯಿತು.. ಇರಲಿ ಬಿಡಿ ಆ ಸಂಗತಿ !!

@@ ಉದಯವಾಹಿನಿಯಲ್ಲಿ ಶಾಲಿನಿ ನಡೆಸಿಕೊಡುವ   ಮಕ್ಕಳ ಕಾರ್ಯಕ್ರಮ ಅತ್ಯುತ್ತಮ ಅಂತ ಪದೇಪದೇ ಹೇಳೋಕೆ ಇಷ್ಟ  ಪಡ್ತೀನಿ.. ಮುಖ್ಯವಾಗಿ ತುಂಬಾ ಲವಲವಿಕೆಯ   ಹೆಣ್ಣುಮಗಳು ಆಕೆ . ಈ ವಾರ ಕೊಡಗಿನ ಮಕ್ಕಳ ಸಾಹ ಪ್ರಸಾರ ಆಯ್ತು. ವಿಷದ ಅಂದ್ರೆ ಆಅ ಮಕ್ಕಳಿಗೆ ಕೊಡಗು ಭಾಷೆಯನ್ನೂ ಅವರ ಪೋಷಕರು ಹೇಳಿಕೊಟ್ಟಿಲ್ಲ.. ಆ ಭಾಷೆಯು ಮುಖ್ಯ ಅಲ್ವ ಮಕ್ಕಳಿಗೆ?  ಈ ಕಾರ್ಯಕ್ರಮದಲ್ಲಿ  ಶಾಲಿನಿ ಮಕ್ಕಳ ಜೊತೆ ಮಾತಾಡುವ ಶೈಲಿ ಸಹಿತ ಚಂದ ಇದೆ.. ಮಕ್ಕಳ ಜೊತೆ ಮಕ್ಕಳಾಗುತ್ತಾ  .. ಅವರ ಅಪ ಅಮ್ಮಂದಿರ ಕಾಲು ಎಳೆಯುವ ಕೆಲಸ ಮಾಡುವ ಶಾಲಿನಿ ಪಾಪ ಪಾಂಡು ಧಾರಾವಾಹಿಯ ಪಾಚೋ ಗಿಂತ ಜಾಸ್ತಿ ಇಷ್ಟ ಆಗ್ತಾರೆ. ಅಲ್ಲದೆ, ಈಟೀವಿ ಯಲ್ಲಿ ಪ್ರಸಾರ ಆಗುವ  ಕಾಮಿಡಿ ಸರ್ಕಲ್ ನಲ್ಲೂ ಸಹಿತ ಈಕೆಯ ಭಾಗವಹಿಸುವಿಕೆ ಲುಂಗಿ ಡ್ಯಾನ್ಸ್ ಲುಂಗಿ ಡ್ಯಾನ್ಸ್ ನಂತೆ :-) ಸಕತ್! 
@@  ಹೇಳಿಕೊಳ್ಳುವಷ್ಟು ಹಾಸ್ಯ ಇಲ್ಲದೆ ಇದ್ರೂ ಈ ಧಾರವಾಹಿ ಸ್ವಲ್ಪ ಆಕರ್ಷಣೆ ಉಳಿಸಿ ಕೊಂಡಿದೆ. ಮಾಸ್ಟರ್ ಮಿಸ್ಟರ್ ಆನಂದ್  ಧಾರವಾಹಿ ರೋಬೋ ಬಗ್ಗೆ ಮತ್ತು ಬಳ್ಳಾರಿ ನಾಗ ಬಗ್ಗೆ ಹೇಳ್ತಾ ಇರೋದು.. ಆ ಧಾರವಾಹಿ ಫ್ಯಾನ್ಗಳು ಒಂದಷ್ಟು ಜನ ಇದ್ದಾರೆ ನಮ್ಮ ಮನೆಯಲ್ಲಿ.. ಸ್ವಲ್ಪ  ಜಾಸ್ತಿನೇ ಇಷ್ಟ ಪಟ್ಟು ನೋಡ್ತಾರೆ.. ನಮ್ಮ ಕುಟುಂಬಕ್ಕೆ ಸೇರಿದವರು.. ಹಿಂದೆ ಸುವರ್ಣ  ವಾಹಿನಿಯಲ್ಲಿ  ಪ್ರಸಾರ ಆಗಿದ್ದ ಎಸೆಸೆಲ್ಸಿ  ನನ್ ಮಕ್ಕಳು ಸಹ ನೋಡೋ ಗುಂಪು ಒಂದಿತ್ತು.. ಈಗ ಅವರು ರೋಬೋ ಗೆ ಶಿಫ್ಟ್ ಆಗಿದ್ದಾರೆ...
@@ ಸೋನಿ ವಾಹಿನಿಯಲ್ಲಿ ಮತ್ತೆ ಕೌನ್ ಬನೇಗ ಆರಂಭ ಆಗಿದೆ.. ಎಷ್ಟು ಬಾರಿ ಬಿಗ್ ಬಿ ಆ ರಿಯಾಲಿಟಿ ಷೋ  ನಡೆಸಿಕೊಟ್ರು ಬೇಜಾರು ಆಗಲ್ಲ.. ಅತ್ಯುತ್ತಮ ನಿರೂಪಕ ಮುಖ್ಯವಾಗಿ ಅತ್ಯಂತ ಆಕರ್ಷಣೆ ಉಂಟು  ಮಾಡುವ ನಿರೂಪಕರು ಬಿಗ್ ಬಚ್ಚನ್.. ಆ ನಗು, ಮಾತಿನ ಶೈಲಿ ಎವರ್   ಗ್ರೀನ್ :-) ವಾವ್ ಸರ್ಜಿ ವಾವ್ ! 

ಎಂತಹ ನಿಸ್ಸಹಾಯಕತೆ ... ಛೆ!


ಯು ಆರ್ ಅನಂತ ಮೂರ್ತಿಯವರ ಸಾವು.. ಅವರ ವಿವಾದ ... ಅವರ ಬಗ್ಗೆ ಹರಡಿದ್ದ ಕಳಪನೆಗಳು.. ಊಹೆಗಳು.. ವಾಸ್ತವ ಯಾಕೋ ಕಳೆದೆರಡು ದಿನಗಳಿಂದ ಹೆಚ್ಚು ಬೇಸರ.. ನೋವು ಸಣ್ಣ ಮಟ್ಟದಲ್ಲಿ ಅಳು ಬರುವಂತೆ ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ..

ಎಲ್ಲ ವಾಹಿನಿಗಳು ಆ ಹಿರಿಯ ಚೇತನಕ್ಕೆ ತಮ್ಮದೇ ಆದ ರೀತಿಯಲ್ಲಿ  ನಮನ ಸಲ್ಲಿಸಿತು. ಇಂದು ಚಂದನವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಹಿರಿಯ ಸಾಹಿತಿ-ವಿಮರ್ಶಕ  ಡಾ  ಸಿ  ಎನ್  ರಾಮಚಂದ್ರನ್ , ಪತ್ರಕರ್ತ  ಮತ್ತು ಫೇಸ್ ಬುಕ್ ಮಿತ್ರ ಜೋಗಿ  ಮತ್ತು ಷಡಕ್ಷರಿ ಅವರ ಸಂದರ್ಶನ ಹಾಗೆ ಅನ್ನುವುದಕ್ಕಿಂತ ಅವರ ಜೊತೆಗೆ ನಡೆಸಿದ ಮಾತುಕತೆ ಯು ಆರ್ ಅನಂತ್ ಮೂರ್ತಿ ಅವರ ಅನೇಕಾನೇಕ ಸಂಗತಿಗಳ ಅನಾವರಣ ... ನಿಜ ಹೇಳ ಬೇಕೆಂದರೆ ತುಂಬಾ ಅಚ್ಚುಕಟ್ಟಾಗಿತ್ತು. ಅನಂತ  ಮೂರ್ತಿ ಅವರು ಮೋದಿ ಅವರು ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ ಎನ್ನುವ ಮಾತನ್ನು ಯಾವ ರೀತಿ ಬೆಳೆಸಿದರು ಮಾಧ್ಯಮದವರು, ಹೇಗೆ ಅವರನ್ನು ತೇಜೋವಧೆ ಮಾಡಿದರು ಎನ್ನುವ ಸಂಗತಿ ಹೇಳುವಾಗ ಸಕತ್ ನೋವಾಯಿತು.ಹಿರಿಯ ಜೀವ ಆ ಬಳಿಕ ಅದೆಷ್ಟು ಹಿಂಸೆ ಅನುಭವಿಸಿರ ಬೇಕು. 
ಗೆಳತಿ ಅಂಜಲಿ ರಾಮಣ್ಣ ಅನಂತ ಮೂರ್ತಿ ಅವರ ಮರಣದ ರಾತ್ರಿ ಒಂದು ಸಂಗತಿ ಬರೆದು ಕೊಂಡಿದ್ದರು ತಮ್ಮ ವಾಲ್ ನಲ್ಲಿ 
ಆ ದಿನ ಅವರೇ ಫೋನ್ ತೆಗೆದುಕೊಂಡರು. " ಓಹ್ , ಯಾವಾಗ ದೇಶ ಬಿಡ್ತೀರಿ ಅಂತ ಕೇಳೊಕ್ಕೆ ಮಾಡುವವರ ಕಾಲ್ ಅಂದುಕೊಂಡೆ " ಅಂದರು.
ಎಷ್ಟೇ ಗಟ್ಟಿ ಮನುಷ್ಯ ಆದರೂ ವಿವಾದ, ಅವಮಾನ, ಸಲ್ಲದ ಅನುಮಾನಗಳಿಂದ ಕಂಗೆಡುತ್ತಾನೆ. ಅದರಲ್ಲೂ ಆ ವಯಸ್ಸಿನಲ್ಲಿ....ಇದಂತೂ ನಾ ಹತ್ತಿರದಿಂದ ಕಂಡುಕೊಂಡ ಸತ್ಯ. 
ಈ ಕಾರಣಕ್ಕೇ ಅನಂತಮೂರ್ತಿಯವರ ಬಗ್ಗೆ ಮನಸ್ಸು ಮರುಗುತ್ತೆ. ಅವರೇನೋ ತುಂಬಾ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು.
but, ನಾನು ಮಾತ್ರ 'ಸರ್' ಗಿಂತ ಹೆಚ್ಚು ಆತ್ಮೀಯತೆ ಬೆಳಸಿಕೊಳ್ಳಲೇ ಇಲ್ಲ. My bad !  
ಅವರು ಈಗಿರುವ ಕಡೆಯಲ್ಲೂ ಅವರೇ ಆಗಿರುತ್ತಾರೆ. ಅಷ್ಟಂತೂ ಖಚಿತ.


@ ಇಂದು ಪೂರಕವಾಗಿ ಮುಂಜಾನೆ ವಿದೇಶಿ ಚಾನೆಲ್  ಅಲ್ ಜಜೀರ ವೀಕ್ಷಿಸಿದೆ.. ಅದರಲ್ಲಿ ನಿರ್ದಾಕ್ಷಿಣ್ಯವಾಗಿ  ನಿಷ್ಪಾಪಿ ಜನರನ್ನು ಬಾಂಬ್ ಗಳ ಮೂಲಕ ಸಾಯಿಸಿದ ಭಯೋತ್ಪಾದಕರು ವಿಶ್ವದ ಪ್ರಸಿದ್ಧ ಧರ್ಮದ ಅನುಯಾಯಿಗಳು.. ಅತಿ ಹೆಚ್ಚ್ಗು ದುಖ ಅನ್ನಿಸಿದ್ದು  .. ಒಬ್ಬಾತ ಮುರಿದು ಚೂರಾದ ಒಂದು ಬಿಲ್ಡಿಂಗ್ ತೋರಿಸುತ್ತ ಇದು ಹೆಣ್ಣು ಮಕ್ಕಳ ಶಾಲೆ, ಇದರಲ್ಲಿ ಕೇವಲ ಹೆಣ್ಣುಮಕ್ಕಳು ಓದುತ್ತಾ ಇದ್ದುದು. ಇಲ್ಲಿದೆ ನೋಡಿ ಅವರ ಅಪ್ಲಿಕೇಶನ್.. ನಾವು ಪ್ರಪಂಚದ ಜೊತೆ ಬಾಳಲು ಇಷ್ಟ ಪಡ್ತೀವಿ.. ಪ್ರಪಂಚದ ಭಾಗ ಆಗಲು ಇಷ್ಟ. ಆದರೆ ಸಾಮಾನ್ಯವಾಗಿ ಕೇವಲ ಮಿಲಿಟರಿ ನೆಲೆಗಳ ಮೇಲೆ  ದಾಳಿ ಆಗಿದೆ ಎಂದು ಮಾಧ್ಯಮಗಳು ಮತ್ತು ಸರ್ಕಾರವು ಬಿಂಬಿಸುತ್ತದೆ. ಆದರೆ ಎಲ್ಲ ಕಡೆ ದಾಳಿ ಆಗಿದೆ. ನಮಗೆ ವಿಶ್ವದ ಎಲ್ಲ ಧರ್ಮಗಳ  ಬಗ್ಗೆ ಗೌರವ ಇದೆ...ಹೀಗೆ ಆ ದೇಶದ ಸ್ಥಳೀಯ ವ್ಯಕ್ತಿ ವರ್ಣಿಸುತ್ತಿದ್ದಾಗ ಮನಸ್ಸು ಕಲಕಿ ಹೋಯ್ತು ಎಂತಹ ನಿಸ್ಸಹಾಯಕತೆ  ... ಛೆ! 
ಜನಪ್ರಿಯತೆಗಾಗಿ ಮತ್ತು ಬಿಟ್ಟಿ ಪ್ರಚಾರದ ಹುಚ್ಚಿನಲ್ಲಿ ಕೆಲವೊಂದನ್ನು ಕಾಲ ಕೆಳಕ್ಕೆ ಹಾಕಿ ತುಳಿಯುವ .. ಒಂದಷ್ಟನ್ನು ಸುಖಾಸುಮ್ಮನೆ ಮೇಲೆತ್ತುವ ಕೆಲಸ ಸಾಗಿದೆ.. ದುರಾದೃಷ್ಟಕರ ಸಂಗತಿ ಎಂದರೆ ಈ ಎರಡು ವರ್ಗಗಳಿಗೆ ಮಾತ್ರವಲ್ಲ ಅಂತಹ ವ್ಯಕ್ತಿತ್ವಗಳಿಂದ ಸಮಾಜಕ್ಕೂ ಹೆಚ್ಚಿನ ಪ್ರಯೋಜ ಆಗಿಲ್ಲ..ಯಾವ ಧರ್ಮ ಮತ್ತು ಜಾತಿ ಇಲ್ಲಿ ಏನು ಮಾಡಲ್ಲ.. ವಿಶ್ವದ ಪ್ರಸಿದ್ಧ ಧರ್ಮಗಳು ಒಡೆದಿರುವುದು ಇದಕ್ಕೆ ಸಾಕ್ಷಿ. ಮತ್ತು ಒಂದೇ ಧರ್ಮದವರು ಅದೇ ಧರ್ಮದ ಮತ್ತೊಂದು ಪಂಗಡದ ನಿಷ್ಪಾಪಿ ಜೀವ ತೆಗೆಯುತ್ತಿರುವುದೇ ಸಾಕ್ಷಿ.. ಭಾರತದಲ್ಲಿ ಜಾತಿ ಪ್ರಭಾವ ಇದ್ದರೇ ವಿಶ್ವದಲ್ಲಿ ಧರ್ಮ ಪ್ರಭಾವ.. ಎರಡೂ ಕಡೆ ಮನುಷ್ಯನ ಹೀನ ಮನಸ್ಥಿತಿ ಅವಘಡಗಳಿಗೆ ಕಾರಣ ...