ಭಜನ್


Image result for orange color flowers
ಶಾಸ್ತ್ರೀಯ ಸಂಗೀತ ನನಗೆ ಇಷ್ಟ. ಆದರೇ ಹೆಚ್ಚು ಆಲಾಪ್ ಗಳು ಇದ್ದರೆ ಕಷ್ಟ. ನನ್ನಂತಹ ಸಾಮಾನ್ಯರಿಗೆ  ಆಲಾಪಗಳು ಅಂದ್ರೆ ಅರ್ಥ ವಾಗಲ್ಲ. ಅದೇ ದೊಡ್ಡ ಸಮಸ್ಯೆ. ಆ ವಿಷ್ಯ  ಪಕ್ಕಕ್ಕೆಇಡೋಣ. ಹಾಗಂತ ಅಂತಹ ಕಾರ್ಯಕ್ರಮಗಳನ್ನು ವೀಕ್ಷೀಸೋಲ್ಲ ಎಂಬುದು ಇದರ ಅರ್ಥವಲ್ಲ. 
ನಿನ್ನೆ  ಶ್ರೀ ಶಂಕರ ವಾಹಿನಿಯಲ್ಲಿ ಮುಂಬೈಯಲ್ಲಿ  ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಲೈವ್ ನೋಡಿದೆ. ಸಕತ್ ಮನಸೋಲ್ಲಾಸ ಉಂಟಾಯಿತು.ಗಾಯಕರು  ಪ್ರಾಯಶಃ ಇಬ್ಬರು ಸಹೋದರರು ಇರಬೇಕು. ಯಾಕೆಂದರೆ ಆ ಕಾರ್ಯಕ್ರಮ ಸೆರೆ ಹಿಡಿಯುತ್ತಿದ್ದ ಕ್ಯಾಮರ ಟಕ್ನೀಷಿಯನ್ ಬ್ಯಾನರ್ ಮೇಲೆ ಬರೆದಿದ್ದ ಹೆಸರುಗಳನ್ನು  ವೀಕ್ಷಕರಿಗೆ ಹಾಗೂ ಸಂಗೀತಾಸಕ್ತರಿಗೆ ತೋರಿಸುವ ಗೋಜಿಗೆ ಹೋಗಿರಲಿಲ್ಲ. ಅಂತಹ ಕಾರ್ಯಕ್ರಮಗಳಲ್ಲಿ ಆದರಷ್ಟು ಕಲಾವಿದರ ಹೆಸರನ್ನು ಪ್ರಸಾರಿಸಿದರೆ ಹೆಚ್ಚು ಒಳ್ಳೆಯದು.

ಅನೇಕ ವಿಷಯಗಳಿಂದ ಈ ವಾಹಿನಿ ನನ್ನನ್ನು ಹೆಚ್ಚು ಆಕರ್ಷಿಸಿದೆ.ನಾನು ಕೆಲವೊಂದು ಚಾನಲ್ಗಳನ್ನು ಹೆಚ್ಚು ವೀಕ್ಷಿಸುತ್ತೇನೆ. ಅದರಲ್ಲಿ ಶಂಕರ ಸಹಿತ ಒಂದಾಗಿದೆ. ಇದರಲ್ಲಿ ಪ್ರಸಾರವಾಗುವ ಭಜನ್ ಸಾಮ್ರಾಟ್ ತುಂಬಾ ಚನ್ನಾಗಿರುತ್ತದೆ. ದೇವರನ್ನು ಹೆಚ್ಚಾಗಿ ನಂಬುವ,ಭಜನೆಯಂತಹ ಸಂಗೀತ ಪ್ರಕಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ನನ್ನಂತಹ ಅನೇಕಾನೇಕ ವೀಕ್ಷಕರಿಗೆ ಇದು ಹೆಚ್ಚು ಆಕರ್ಷಿಸಿದೆ.  ಈಗ 5 ನೇ ಸೀಸನ್ ಸಧ್ಯದಲ್ಲೇ ಆರಂಭವಾಗಲಿದೆ.ದಕ್ಷಿಣ ಭಾರತ ರಾಜ್ಯಗಳ, ಅದರಲ್ಲೂ ಮುಖ್ಯವಾಗಿ ಕನ್ನಡ, ತಮಿಳು ಮತ್ತು ತೆಲುಗು ಭಾಷಿಗರು ಇದರಲ್ಲಿ ಹೆಚ್ಚಾಗಿ ಭಾಗವಹಿಸುವುದು.









  

ಪ್ಲೀಸ್ :-)

Image result for pink flower

ಸ್ಟಾರ್  ಹಿಂದಿ ವಾಹಿನಿಯಲ್ಲಿ ರಿಶ್ತೋಂಕಾ ಚಕ್ರವ್ಯೂಹ್ ಎನ್ನುವ ಹೆಸರಿನ ಧಾರವಾಹಿ ಪ್ರಸಾರವಾಗ್ತಾ ಇದೆ. ಅದರ ಕಥೆ, ಡೈಲಾಗ್ ಮತ್ತು ಪಾತ್ರಗಳು ತುಂಬಾ ಚೆನ್ನಾಗಿವೆ. ಸಂಭಾಷಣೆ ಸಕತ್ ಲವಲವಿಕೆಯಿಂದ ಕೂಡಿವೆ ಎಂದೇ ಹೇಳಬಹುದು. ಸಾಮಾನ್ಯವಾಗಿ ಹೆಚ್ಚು ಕಡಿಮೆ ಒಂದೇ ರೀತಿಯ ಡೈಲಾಗ್ ಗಳು ಹೆಚ್ಚಿನ ಧಾರವಾಹಿಗಳಲ್ಲಿ ಇರುತ್ತವೆ. ಅವುಗಳನ್ನು ಕೇಳಿಕೇಳಿ ಬೋರೆದ್ದು ಹೋಗಿರುವ ಇಂತಹ ಕಾಲದಲ್ಲಿ ಈ ಧಾರವಾಹಿಯ ಡೈಲಾಗ್ ಗಳು ಖುಷಿ ಕೊಡ್ತಾ ಇದೆ.
ಇದರ ಮುಖ್ಯ ಪಾತ್ರಗಳಾದ ಸತ್ರುಭ, ಅನಾಮಿ, ಅಧಿರಾಜ್,ಆತನ ತಂದೆ,  ಹಿರಿಯ ರಾಜ ರಾಣಿ, ಸುಧ, ಪೂಜನ್ ಆತನ ಹೆಂಡತಿ,ಮಗ ಎಲ್ಲರ ನಟನೆ ಸಕತ್ ಸಕತ್.
ಅನಾಮಿ ಪಾತ್ರಧಾರಿ ನಟಿ ಜಿ ಹಿಂದಿ ವಾಹಿನಿಯಲ್ಲಿನ ಸೀರಿಯಲ್  ಒಂದರಲ್ಲಿ ಭಯ-ಸಂಕೋಚದ ಹುಡುಗಿಯಾಗಿ ಗಮನ ಸೆಳೆದಿದ್ದುದಕ್ಕಿಂತ ಈ ಧಾರವಾಹಿಯಲ್ಲಿ ಇಷ್ಟ ಆಗ್ತಾರೆ. ಅದೇ ರೀತಿ ಸತ್ರುಭ ಪಾತ್ರಧಾರಿ ನಟನೆ ಅದ್ಭುತ.
ಈ ಧಾರವಾಹಿಯನ್ನು ಕನ್ನಡಕ್ಕೆ ತಂದರೆ ಸತ್ರುಭ ಪಾತ್ರಕ್ಕೆ ಸರಿಯಾದವರನ್ನೇ ಆಯ್ಕೆ ಮಾಡಬೇಕು. 
Image result for pink flower
## ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೇರಿ ದುರ್ಗಾ ಧಾರವಾಹಿ ಸಾಕಷ್ಟು ಬದಲಾವಣೆಗಳನ್ನು ಕಂಡಿವೆ. ಆಗಾಗ ಥ್ರಿಲ್ಗಳು ಕೊಡುತ್ತಾ ವೀಕ್ಷಕರ ಗಮನ ಸೆಳೆಯುವಲ್ಲಿ ಈ ಧಾರವಾಹಿ ಮುಂದಿದೆ. ದುರ್ಗಾ ಪಾತ್ರಧಾರಿ, ಅವರತ್ತೆ ಜೆಸ್ಸಿ ಗಾಯತ್ರಿದೇವಿ, ಪ್ರಿನ್ಸ್, ದುರ್ಗ ಅಪ್ಪ, ಚಿಕ್ಕಪ್ಪ, ಅಮ್ಮ ,ಚಿಕ್ಕಮ್ಮ, ಅಕ್ಕ, ಹಳೆ ಕೋಚ್ ರಾಣ ಎಲ್ಲರ ನಟನೆ ಬಗ್ಗೆ ಹೇಳುವಂತಿಲ್ಲ. ಆದರೇ ರಾಣ ಬದುಕಲ್ಲಿ ಬದಲಾವಣೆ ತರದೇ, ದುರ್ಗಾ ಜೀವನದಲ್ಲಿ ಹೊಸತನ ಕೊಡದೇ ನಮ್ಮಂತಹ ವೀಕ್ಷಕರಿಗೆ ನೋವು ಉಂಟು ಮಾಡುತ್ತಿದ್ದಾರೆ ಈ ಸೀರಿಯಲ್ ಮಂದಿ. ಅದರ ಬಗ್ಗೆ ಗಮನ ಹರಿಸಿ ಪ್ಲೀಸ್ :-)

ಸುದೀಪಾ ?

Image result for red flower images

ಕನ್ನಡ ಬಿಗ್  ಬಾಸ್  ನ್ನು ಆರಂಭದಿಂದಲೂ ನೋಡುತ್ತಾ ಇದ್ದೇನೆ. ಈ ಸೀಸನ್ ಮೂರು ಕಾರಣಗಳಿಂದ ನನಗೆ ತುಂಬಾ ಇಷ್ಟವಾಗಿದೆ. ಮೊದಲನೆಯದ್ದು ಸಾಮಾನ್ಯರು ಮತ್ತು ಸೆಲಬಿಗಳ ಸಂಗಮ, ಎರಡನೆಯದ್ದು  ಆಟಗಳಲ್ಲಿ ಭಿನ್ನತೆ. ಮೂರನೆಯದ್ದು ಅಂದ್ರೆ ಕಿಚ್ಚಾ ಸುದೀಪಾ ನಿರೂಪಣೆ.

ಕಾಮನರ್ ಗಳಲ್ಲಿ  ಸಮೀರ ಮತ್ತು ರಿಯಾಜ್ ಹೆಚ್ಚು ಇಷ್ಟವಾದ ಆಟಗಾರರು.ಹೊರ ಜಗತ್ತಿನಲ್ಲಿ  ಬೇರೆಯದ್ದೇ ಇಮೇಜ್ ಹೊಂದಿರುವ ಭಿನ್ನ ಕೋಮು- ಜಾತಿಯ ಇಬ್ಬರೂ ಒಟ್ಟಾಗಿ , ತುಂಬಾ ಸಾಮರಸ್ಯವಾಗಿ ಇರೋದು ನಿಜಕ್ಕೂ ಇಷ್ಟವಾಗುವ ಸಂಗತಿ. ಮುಖ್ಯವಾಗಿ ರಿಯಾಜ್ ಮತ್ತು ಸಮೀರ್ ಬಗ್ಗೆ  ಸಾಫ್ಟ್ ಕಾರ್ನರ್ ನನಗೆ. ಅದರಲ್ಲೂ ಸಮೀರನ ಬಗ್ಗೆ ಸ್ವಲ್ಪ ಜಾಸ್ತಿ. ಎಲ್ಲಾ ವಿಷಯಗಳ ಬಗ್ಗೆಯೂ  ಬೇರೆ  ಸ್ಪರ್ಧಿಗಳ  ಕೆಂಗಣ್ಣು ಬೀಳುವುದು ಆತನ ಮೇಲೆ ( ನಾನು ಕೇವಲ ಒಂದು ಗಂಟೆ ವೀಕ್ಷಿಸಿದಾಗ ಕಂಡದ್ದು, ನನಗೆ ಅನ್ನಿಸಿದ್ದು ಹೇಳ್ತಾ ಇದ್ದೀನಿ) . ಪ್ರಾಯಶ‍ಃ ಆತನ ಡ್ರಸ್, ಹೇರ್ ಸ್ಟೈಲ್, ಹಣೆಗೆ ಇಡುವ  ಆ ಲಾಂಛನಗಳು, ಮಡಿ ಅಡುಗೆ ಮಾಡಿಕೊಳ್ಳುವ ಸಂಗತಿ ಬೇರೆಯವರಿಗೆ ಅದರಲ್ಲೂ ಬಣ್ಣದ- ಬೆಳಕಿನ ಲೋಕದವರಿಗೆ  ಇಷ್ಟ ವಾಗುತ್ತಿಲ್ಲ ಅಂತ ಕಾಣುತ್ತೆ. 
ಕೃಷಿ ಈ ಬಾರಿಯ ಕ್ಯಾಪ್ಟನ್. ಆಕೆಗೆ ಸಮೀರ್  ಮೇಲೆ ತುಂಬಾ ಬೇಗ ಕೋಪ ಬರುತ್ತೇ. ಅದನ್ನು ಈ ಬಾರಿಯ ನಾಮಿನೇಷನ್ ಮೂಲಕ ತೋರಿಸಿದ್ದು .... !! ಇರ್ಲಿ ಬಿಡಿ ಅದೇನು ದೊಡ್ಡದಲ್ಲ,  ಆದರೇ ಈ ಸರ್ತಿ ಬಂದಿರುವ  ಇಬ್ಬರು ಹುಡುಗಿಯರು ಮಾತ್ರ  ಅದರಲ್ಲೂ   ಕಿರಿಕ್ ಪಾರ್ಟಿ ನಟೀದು ಸ್ವಲ್ಪ ಜಾಸ್ತಿ ಅನ್ನಿಸಿತು. ಇಷ್ಟು ದಿನಗಳ ಕಾಲ ಕಷ್ಟಪಟ್ಟು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸ್ಫರ್ಧಿಗಳನ್ನು ಅದರಲ್ಲೂ  ಜೆಕೆ, ಜಗನ್, ಚಂದನ್ ಹೊರೆತು ಪಡಿಸಿ ಬೇರೆಲ್ಲರ ಬಗ್ಗೆ ವಿಶ್ಲೇಷಣೆ  ಅದರಲ್ಲೂ ಮುಖ್ಯವಾಗಿ ನಿವೇದಿತಾ, ದಿವಾಕರ್, ರಿಯಾಜ್ , ಜಯಶ್ರೀನಿವಾಸ್ , ಸಮಿರ ಅವರುಗಳ ಬಗ್ಗೆ  ಈ ಎರಡೂ ಹೆಣ್ಣುಮಕ್ಕಳಿಗಿರುವ ದೃಷ್ಟಿಕೋನ  ತುಂಬಾ ಹಾಸ್ಯಾಸ್ಪದ ಹಾಗೂ  ಹುಂಬತನದಿಂದ ಕೂಡಿದ್ದು ಅಂತ ಅನ್ನಿಸಿತು. ನಿಜಕ್ಕೂ ಅವರಿಗೆ  ಎಲ್ಲರೂ ಒಂದೇ ಎನ್ನುವ ಭಾವ  ಇದ್ದಿದ್ದರೆ ಖಂಡಿತವಾಗಿ  ನಿವೇದಿತ  ಮುಗ್ಧತೆ ಮುಂದಿಟ್ಟುಕೊಂಡು  ಗೇಮ್ ಆಡ್ತಾ ಇದ್ದಾಳೆ ಅಂತ ಹೇಳ್ತಾ ಇರಲಿಲ್ಲ. ಯಾಕೇಂದ್ರೆ  ನಿವೇದಿತಾ ಮುಗ್ಧತೆ ಹಾಗೂ ಪ್ರಬುದ್ಧತೆ ಎರಡರ ಸಮ್ಮಿಳನ. ಅದನ್ನು ಆಕೆ ಎಂದಿಗೂ  ಕೆಟ್ಟ ಗೇಮ್ ಆಡಲು ಬಳಸಿಲ್ಲ. ಬದುಕಲ್ಲಿ ನಾವು ಸಾಯುವ ತನಕ ಮುಗ್ಧತೆಯನ್ನು ಸ್ವಲ್ಪ ಪ್ರಮಾಣದಲ್ಲಾದರೂ ಹೊಂದಿರಬೇಕು. ಅದು ಬದುಕಿನ ಸವಿಯನ್ನು ಹೆಚ್ಚಿಸುತ್ತದೆ.
ಜಯ ಶ್ರೀನಿವಾಸ್ ಅವರ ಕ್ಷೇತ್ರದಲ್ಲಿ ಕಷ್ಟಪಟ್ಟು ಬಂದವರು. ಅವರದ್ದೇ ಆದ ಅನುಯಾಯಿಗಳನ್ನು ಪಡೆದವರು. ಅದು ಅವರ ಸಾಧನೆ. ಬಿಬಾ ಮನೆಯಿಂದ ಹೊರಬಂದ ನಂತರವೂ  ಎಲ್ಲಾ ಕಾಲದಲ್ಲೂ ಚಾಲ್ತಿಯಲ್ಲಿ ಇರುವ ವ್ಯಕ್ತಿತ್ವ. ಅವರ ಬಳಿ  ಈ  ಮುಗುದೆಯರಲ್ಲದ ಹುಡುಗಿಯರು ಮಾತನಾಡಿದ  ರೀತಿ...!!
ಅದೆಲ್ಲಕ್ಕಿಂತ ಸಮೀರ ಅವರ ಜುಟ್ಟು, ಜನಿವಾರ, ಅಗ್ಗಿಷ್ಟಿಕೆಯ ಜೀವನ ಶೈಲಿಯನ್ನು ಮುಂದಿಟ್ಟುಕೊಂಡು ಅವರ ವೃತ್ತಿಯ ಬಗ್ಗೆ ಮಾತಾಡಿದ್ದು, ಅವರ ಸಂಸ್ಕೃತ ಜ್ಞಾನದ ಬಗ್ಗೆ ಅವಹೇಳನ ಮಾಡಿದ್ದು ಶುದ್ಧ ತಪ್ಪು. ಲಾಸ್ಯ  ಹೆಸರಿಗೆ ಅರ್ಥ ಕೇಳಿ ಇದು ಅರ್ಥ ನಿಮಗೆ ಗೊತ್ತಿಲ್ಲ ಎಂದು ಹೇಳಿದ ರೀತಿ ಸಹ  ಬೇಸರ ನೀಡಿತು.
ಕೊನೆದಾಗಿ ಹೇಳಬೇಕೆಂದು ಅನ್ನಿಸಿರುವ ಮತ್ತೊಂದು ಮುಖ್ಯಸಂಗತಿ ಅಂದ್ರೆ, ಟಾಸ್ಕ್ ನಲ್ಲೂ  ಸಹಿತ ಅವರಿಬ್ಬರೂ ಜೆಕೆ ಮತ್ತು  ಜಗನ್ನಾಥ್ ಅವರಿಬ್ಬರನ್ನೇ ಹುರಿದುಂಬಿಸಿದ್ದು.
ಯಾಕ್ ಹೀಗೆ ಮಾಡಿದ್ರು ಆ ಬಾಲಕಿಯರು ಮಿತ್ರಾ ಸುದೀಪಾ ? :-) 

ವಿಕೆಂಡ್ ಕಾ ವಾರ್


ಬಿಗ್ ಬಾಸ್ ಕನ್ನಡ ಕಲರ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದೆ.ನಾನು ಹೆಚ್ಚು ಆಸಕ್ತಿಯಿಂದ ವೀಕ್ಷಿಸುವ  ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಸಹಿತ ಒಂದಾಗಿದೆ. ಹಿಂದಿ ಹಾಗೂ ಕನ್ನಡ ಎರಡನ್ನೂ ನಾನು ಆಸಕ್ತಿಯಿಂದ ವೀಕ್ಷಿಸುತ್ತೇನೆ.ಮುಖ್ಯವಾಗಿ ನನಗೆ ಬಿಗ್ ಬಾಸ್ ರಿಯಾಲಿಟಿ  ಶೋ ಮತ್ತು ಕಿಚ್ಚ ಸುದೀಪಾ - ಸಲ್ಮಾನ್ ಖಾನ್ ಇಬ್ಬರೂ ಇಷ್ಟವಾದ ಕಾರಣ ಸಾಮಾನ್ಯವಾಗಿ  ನಾನು ನೋಡಲು ಮಿಸ್ ಮಾಡಲ್ಲ. ಆದರೇ ಕಳೆದ ಬಾರಿ ನನಗೆ ಕಾರಣಾಂತರಗಳಿಂದ ಹಿಂದಿ ಬಿಗ್ ಬಾಸ್  ಹೆಚ್ಚಿನ ಎಪಿಸೋಡ್  ವೀಕ್ಷಿಸಲು ಆಗಲಿಲ್ಲ. ಈ ಬಾರಿ ಪರವಾಗಿಲ್ಲ  :-). ಮುಖ್ಯವಾಗಿ ಈಗಿನ ಸೀಸನ್ ನಲ್ಲಿ ಹೆಚ್ಚಾಗಿ ಗಲಾಟೆ -ಜಗಳ ಮತ್ತು ಕದನವಿದ್ದರೂ ಸಹಿತ ಹೆಚ್ಚು ಆಕರ್ಷಿಸಲು ಕಾರಣ ಕಾರ್ಯಕ್ರಮದಲ್ಲಿನ ಭಿನ್ನತೆ.
ಅದರ ಜೊತೆಗೆ ಸಲ್ಮಾನ್ BOY  ಮಾತು, ಅವರ ನಿರೂಪಣೆ.......ವಿಕೆಂಡ್ ಕಾ ವಾರ್ ಗಿಂದ ವೀಕ್ ಫುಲ್ ವಾರ್ ಜಾಸ್ತಿ ಜೋರಾಗಿರುತ್ತೇ ಅಲ್ವಾ  ಸಲ್ಮಾನ್  BOY  :-)  
ಹಿಂದಿ ಬಿಬಾದಲ್ಲಿ ನನಗೆ ಹೆಚ್ಚು ಇಷ್ಟವಾದ ಸ್ಪರ್ಧಿ ಅಂದ್ರೆ ಶಿಲ್ಪ ಶಿಂಧೆ. ಸಾಕಷ್ಟು ಬಾರಿ ಏಕಾಂಗಿಯಾಗಿ ಹೋರಾಟ ನಡೆಸಿದರೂ ಸಹಿತ ಆಕೆ ಎಂದಿಗೂ ಸೋತಿಲ್ಲ. ರೂಪ-ಧೈರ್ಯ, ಆಟದ ಶೈಲಿ ಎಲ್ಲವೂ ಇಷ್ಟ ವಾಗಿದೆ.
ಮತ್ತೊಂದು ಸಂಗತಿ.. ಹಿಂದಿ ಬಿಗ್ ಬಾಸ್  ಈಗ 11 ಸೀಸನ್.  ಮೊಟ್ಟಮೊದಲ ಸೀಸನ್ ನಲ್ಲಿ ಇದ್ದವರನ್ನು  ಬಿಗ್ ಬಾಸ್ ಸ್ಟೇಜ್ ಮೇಲೆ ಒಮ್ಮೆ ಕರೆತನ್ನಿ. ಯಾಕೇಂದ್ರೆ  ಅವರಿಂದ ತಾನೆ  ನಾವೆಲ್ಲಾ  ಬಿಗ್ ಬಾಸ್  ನೋಡುವ  ಹುಚ್ಚಿಗೆ ಬಿದ್ದದ್ದು :-)
 ಆಗುತ್ತಾ ಸಲ್ಮಾನ್ ಈ ಕೆಲಸ ನಿಮ್ಮ ಕೈಲಿ ಮಾಡೋಕೆ  ???