ಜನ ನಿರೀಕ್ಷೆ


google images
ಸಮಸ್ತರಿಗೂ. ಮಕರ ಸಂಕ್ರಾತಿ ಹಬ್ಬದ ಹಾರ್ದಿಕ ಶುಭಾಶಯಗಳು . ರೈತರ ಹಬ್ಬ ಇದು..ಆತನ ವ್ಯಕ್ತಿತ್ವವನ್ನು ಮತ್ತಷ್ಟು, ಮಗದಷ್ಟು, ಇನ್ನಷ್ಟು ಉಜ್ವಲಗೊಳಿಸುವ ಹಬ್ಬ.. ಆತನ ಸಾಕು ಪ್ರಾಣಿಗಳಿಗೆ ಮಾತ್ರವಲ್ಲ  ಆತನ ಬದುಕು  ಮೆರಗುಗೊಳಿಸಿದ ಪ್ರತಿ ಜೀವಕೋಟಿಗೆ   ಧನ್ಯವಾದಗಳನ್ನು ಅರ್ಪಿಸುವ..ಒಟ್ಟಾರೆ ಆತನ ಸಾಕು ಪ್ರಾಣಿಗಳಿಗೆ ಸರ್ಕಾರಿ ರಜೆಯ ದಿನ .. ಇದು ಹೆಣ್ಣುಮಕ್ಕಳ ಹಬ್ಬ.. ರಂಗೋಲಿಯಿಂದ  ಆವರಣವನ್ನು ಸುಂದರಗೊಳಿಸಿ ಆಹ್ಲಾದಗೊಳಿಸುವ ವಿಶಿಷ್ಟ  ಸಂಪ್ರದಾಯದ ಮೂಲಕ  ಆಕೆಯ ಸೃಜನಶೀಲತೆ  ಹೆಚ್ಚು ಜನಕ್ಕೆ ತಿಳಿಯುವಂತೆ ಮಾಡುವ ಹಬ್ಬ  ...
ಸಂಭ್ರಮ- ಸಂತೋಷ  ಎಲ್ಲರ ಬದುಕಲ್ಲಿ ಶಾಶ್ವತವಾಗಿರಲಿ ಎನ್ನುವ ಹಾರೈಕೆ ..
ಕನ್ನಡ ಪತ್ರಿಕಾರಂಗದಲ್ಲಿ ಹೊಸತನ್ನು ತಂದುಕೊಟ್ಟ ವಿಶ್ವೇಶ್ವರ ಭಟ್ಟರ ಹೊಸ ಕನಸು ಇಂದಿನಿಂದ ಆರಂಭವಾಗಿದೆ  .. ಸಾಕಷ್ಟು  ಹಳೆಯ- ಹೊಸ ಹುಮ್ಮಸ್ಸುಗಳು ಕೈ ಜೋಡಿಸಿವೆ..ಅವರ ಪ್ರಯತ್ನ ಸಫಲವಾಗಲಿ.. ಜನ ನಿರೀಕ್ಷೆಯ   ಪತ್ರಿಕೆಯಾಗಿ ವಿಶ್ವವಾಣಿ ಹೊರಹೊಮ್ಮಲಿ ಎನ್ನುವ ಶುಭ ಹಾರೈಕೆ ...


google images

ಜೀಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಾಡುಗರ.. ಅದರಲ್ಲೂ ವಿಶಿಷ್ಟ ಕಂಠಸಿರಿಯನ್ನು   ಪಡೆದ ಅಪರೂಪದ ಸಂಗೀತಗಾರ ರಾಜೇಶ್ ಕೃಷ್ಣನ್ ಅವರ ಕಾರ್ಯಕ್ರಮ ತುಂಬಾ ಚಂದ ಇತ್ತು. ರಾಜೇಶ್ ಅವರು ಧ್ವನಿಯಲ್ಲಿನ ಮಾಧುರ್ಯದ ಬಗ್ಗೆ ನಾನು ಸಾಕಷ್ಟು ಸರ್ತಿ ಹೇಳಿದ್ದೇನೆ. ಎಸ್ಪಿಬಿ, ರಾಜೇಶ್, ಸೋನು ನಿಗಮ್ , ವಿಜಯ್  ಪ್ರಕಾಶ್ ಹೀಗೆ ಒಂದಷ್ಟು ಹಾಡುಗಾರರ ಕಂಠ ಮಾಧುರ್ಯ ನನಗೆ ಹೆಚ್ಚು ವರ್ಣಿಸೋಕೆ ಆಗಲ್ಲ ಆದರೆ  ನನಗೆ ತುಂಬಾ ಇಷ್ಟ..
 ರಾಜೇಶ್ ಅವರ ಬದುಕು, ಕುಟುಂಬ,  ಯಶಸ್ಸು, ಅವರ ಗುರುಗಳು, ಶಿಷ್ಯಕೋಟಿ ,ಅಲ್ಲದೆ ಸ್ನೇಹಿತರು, ಸಹೋದ್ಯೋಗಿಗಳು ಹೀಗೆ ಪ್ರತಿಯೊಂದು ವಿಷಯ ಸರಳವಾಗಿ ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ಚಿಕ್ಕದಾಗಿ ಚೊಕ್ಕವಾಗಿ ಆ ಕಾರ್ಯಕ್ರಮದ ಆಯೋಜಕರು ತಿಳಿಸಿದರು.. ಮನೋಜವಂ ರಾಜೇಶ್ ಶಿಷ್ಯ ಅನ್ನೋದು ನೋಡಿ ಖುಷಿ ಅನ್ನಿಸಿತು. ಚೈತನ್ಯ, ಓಹಿಲೇಶ್ವರಿ ಅವರೆಲ್ಲರಗಿಂತ ಈ ಮನೋಜವಂ ಜಾಸ್ತಿ ನೆನಪಲ್ಲಿ ಉಳಿದಿರುವುದು  ಯಾಕೇಂದ್ರೆ  ಈಹುಡುಗ  ಹೆಚ್ಚು ಹೆಚ್ಚು ಅಣ್ಣಾವರ ಧ್ವನಿಯನ್ನು ಇಮಿಟೇಟ್ ಮಾಡ್ತಾ ಇದ್ದ.ಎಲ್ ಎನ್ ಶಾಸ್ತ್ರಿಯವರು ಸಹ ಈ ಬಾಲಕನನ್ನು ತಿದ್ದಿದ ಮತ್ತೋರ್ವ ಗುರು.. ಅವರನ್ನು ಈ ಕಾರ್ಯಕ್ರಮದಲ್ಲಿ  ನೋಡಿ ಖುಷಿ ಆಯ್ತು..
ರಮೇಶ್ ಮಾತುಗಾರಿಕೆ, ಅತಿಥಿಗಳ ಜೊತೆಗಿನ ಮಾತುಕತೆಯ ಶೈಲಿಯನ್ನು  ಹೊಸಬರು ಮತ್ತು ಹಳಬರು ಮಾತ್ರವಲ್ಲ ನಿರೂಪಣೆಯ ಕನಸು  ಬೆಳೆಸಿಕೊಂಡವರು ಸಹ ಕಲಿಯಬೇಕಿದೆ..


google images


ನೋ... ವೇ.. !

Image result for orange and blue flower
ಅತ್ಯಂತ ಕುತೂಹಲಕಾರಿಯಾದ ಘಟ್ಟದಲ್ಲಿ ಮುನ್ನಡೆಯುತ್ತಿದೆ  ಕಲರ್  ವಾಹಿನಿಯಲ್ಲಿ ಕನ್ನಡ ಬಿಗ್  ಬಾಸ್.. ಯಾಕೆ ಅಂದ್ರೆ  ಕೊನೆ ಹಂತಕ್ಕೆ ಬರುತ್ತಿದೆ ಕಾರ್ಯಕ್ರಮ. ಜನ ಕಡಿಮೆ ಆಗಿದ್ದಾರೆ. ಆ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಹೆಚ್ಚು ಹೆಚ್ಚು  ಭಾಗವಹಿಸಬೇಕು. ಯಾರು ಮೈಗಳ್ಳರಾಗೋಕೆ ಆಗಲ್ಲ..ಆದರು ಅವರನ್ನೇ ಹೆಚ್ಚು ಫೋಕಸ್ ಮಾಡ್ತಾರೆ  ಟೀವಿ ಮಂದಿ.
ಜೋಡಿಗಳು ಒಟ್ಟಿಗೆ ನಿಂತ ಆ ಟಾಸ್ಕ್ ನಲ್ಲಿ ಆನಂದ್ ಅವರು ಮಾತು, ಆ ಓಘ , ತುಂಟ ಪ್ರತಿಕ್ರಿಯೆ ಖುಷಿ ಕೊಡ್ತು.. ಶ್ರುತಿಯವರು ಧನುರ್ಮಾಸದಲ್ಲಿ ಏನ್ ವಿಶೇಷ ಅಂದಾಗ  ಜಾಣ ಕಲಾವಿದ ಅಯ್ಯಪ್ಪ ಪೂಜಾ ಅಂತ ಉತ್ರ ಕೊಟ್ರು..ಬಾಲ್ಯದಲ್ಲಿ ನಾವು ಎರಡು ಪ್ರಶ್ನೆಗೆ  ಒಂದೇ ಉತ್ರ ಕೊಡುವ ಆಡ್ತಾ ಇದ್ವಿ..  ಉದಾಹರಣೆಗೆ :ಒಬ್ಬಾತ ಅಂಗಡಿಗೆ ಬಂದು ಸರ್ ಈ ದಾರಿ ಮೈಸೂರ್ ಕಡೆಗೆ ಹೋಗುತ್ತಾ ಎಂದು ಪ್ರಶ್ನಿಸುತ್ತಾನೆ, ಅದೇ ಸಮಯದಲ್ಲಿ ಹುಡುಗಿಯೊಬ್ಬಳು ಬಂದು ಅಂಕಲ್ ಈ ಚಾಕ್ಲೆಟ್ ಎಷ್ಟು ಅಂತ ಕೇಳ್ತಾಳೆ.. ಅದಕ್ಕೆ ಒಂದೇ ಉತ್ರ ನಾಕಾಣೆ ..
ಹೀಗೆ ಎರಡು ಪ್ರಶ್ನೆ ಒಂದು ಶ್ರುತಿ ಅವರದ್ದು, ಮತ್ತೊಂದು ವೀಕ್ಷಕರದ್ದು . ಎರಡಕ್ಕೂ ಒಂದೇ ಉತ್ರ ಆನಂದ್ ಕಡೆಯಿಂದ.....ಜಾಣ :-)
ಆನಂದ್  ಹಾಗೂ ಶ್ರುತಿ ಅವರು ಎಷ್ಟು ಪ್ರತಿಭಾವಂತರು  ಅನ್ನೋದು ಮತ್ತೊಂದು ಟಾಸ್ಕ್ ನಿಂದಲೂ ಸಹ ಪ್ರಕಟ ಆಗಿದೆ.. ತುಂಬಾ ಖುಷಿ ಕೊಡ್ತಾ ಇದೆ..ಸಾಮಾನ್ಯವಾಗಿ ಜಗಳ , ಕದನ, ಅಸೂಯೆ, ಹೀಗೆ ಮನಸೋ ಇಚ್ಚೆಯ ಭಾವನೆಗಳನ್ನು ಹೊಮ್ಮಿಸುವ ಸ್ಪರ್ಧಿಗಳು, ಅವೆಲ್ಲ ನೋಡುವ ಕಿರಿಕಿರಿಗಿಂತ  ಹೀಗೆ ಭಿನ್ನ ರೀತಿಯ ಟಾಸ್ಕ್ ಗಳು ಚಂದ ಇರುತ್ತದೆ.

ಕಳೆದವಾರ ಮನೆಯಿಂದ ಹೊರಗೆ ಬಂದ ಸುಷ್ಮಾ ಅವರು ಭಾವನ ಬೆಳಗೆರೆಯನ್ನು ಸ್ಲೋ ಪಾಯಿಸನ್ ಅಂತ ಕರೆದರು .. ತುಂಬಾ ಆಶ್ಚರ್ಯ ಆಯ್ತು ನನಗೆ ಆ ಪದ ಕೇಳಿ.. ಯಾಕೇಂದ್ರೆ ಭಾವನ ಓರ್ವ ಸರಳ ಮನದ ಹೆಣ್ಣುಮಗಳು.. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಆಕೆ ಟಾಸ್ಕ್ ಆಡದೆ ಇರಬಹುದು, ಆದರೆ ಅಪ್ಪಟ ಗೃಹಿಣಿ.. ಇಲ್ಲಿ ನಾನು ಗೃಹಿಣಿ ಅನ್ನುವ ಪದ ಯಾವ ಕಾರಣದಿಂದ ಬಳಸ್ತಾ ಇದ್ದೀನಿ ಅಂದ್ರೆ ಎಲ್ಲರ ಜೊತೆ ಸಮಾನಭಾವದಿಂದ  ಪ್ರಯತ್ನಿಸುವ ಗುಣವೇ ಗೃಹಿಣಿ ಪಟ್ಟ..(ಇಲ್ಲಿ ನನ್ನ ಅಭಿಪ್ರಾಯದಲ್ಲಿ  ಮದುವೆ ಆಗಿದ್ರೆ ಮಾತ್ರ ಈ ಪಟ್ಟ ದೊರಕ ಬೇಕಿಲ್ಲ..ಇದು ಒಂದು ವಿಶೇಷ ಸ್ಥಾನ) .  ಆಕೆಗೆ ದುಡ್ಡು ಮುಖ್ಯ ಅಲ್ಲ, ಅದರ ಬಗ್ಗೆ ಕನ್ನಡ ವೀಕ್ಷಕರಿಗೆ ಹೇಳಬೇಕಿಲ್ಲ.. ದುಡ್ಡಿಗಾಗಿ ಆಕೆ ಆಡುತ್ತಿದ್ದಳು ಅನ್ನೋದು ಸುಳ್ಳು.. ಮತ್ತು ಅಪ್ಪಟ ತಾಯಿ ಕೊನೆ ಕೊನೆ ದಿನಗಳಲ್ಲಿ ಆಕೆ ತನ್ನ ಮಗಳು ಪರಿಣಿತಳನ್ನು ನೆನಪಿಸಿಕೊಂಡು ಭಾವುಕರಾಗುತ್ತಿದ್ದರು.  ಭಾವನ ಹಾಯ್  ಬೆಂಗಳೂರ್ ನಲ್ಲಿ ಇದ್ದಾಗ ನಾನು  ಓ ಮನಸೇಯಲ್ಲಿ  ಎಂಟು ದಿನಗಳ ಕಾಲ ಕೆಲಸ ಮಾಡಿದ್ದೆ.. ಆಗ ಕಂಡ ಭಾವನ ಹೇಗಿದ್ದರೋ ಹಾಗೆ ಇದ್ರೂ ಬಿಗ್ ಬಾಸ್ ಮನೆಯಲ್ಲೂ.. ನಾನು ಒಟ್ಟಿಗೆ ಕೆಲಸ ಮಾಡುವಾಗ ತಾನಾಯಿತು, ತನ್ನ ಮೇಕಪ್  ಆಯ್ತು, ತನ್ನ ಫ್ರೆಂಡ್ಸ್, ಮೆಸೇಜ್ , ಮಾತು, ಹರಟೆ, ಸಾಧ್ಯವಾದರೆ ನಿದ್ದೆ.ಇವೆಲ್ಲ ಆಕೆಯ ದಿನಚರಿಯ ಭಾಗವಾಗಿತ್ತು. ಜಾಸ್ತಿ ಅಲಂಕಾರಪ್ರಿಯೆ ಆಕೆ..
ಆದರೆ ಸುಷ್ಮಾ ಹೇಳಿದಂತೆ ದೇವ್ರೇ  ನೋ... ವೇ..  !
Image result for orange and blue flower
ಸಾವು ಒಬ್ಬ ವ್ಯಕ್ತಿಯ ಬದುಕಿನ ಕೊನೆ ಪುಟ. ಆಮೇಲೆ ಏನಾಗುತ್ತೋ ಗೊತ್ತಿರಲ್ಲ.. ಆದರೆ ನಮ್ಮಲ್ಲಿ ಮಣ್ಣು ಮಾಡುವ   ಅಥವಾ ಸುಡುವ ಬಳಿಕವಷ್ಟೇ ಆತನ ಆತ್ಮಕ್ಕೆ ಶಾಂತಿ ಸಿಗೋದು. ಆ ಅತಂತ್ರ ಆತ್ಮಕ್ಕೆ ಮಾತ್ರವಲ್ಲ ಸತ್ತ ಆ ವ್ಯಕ್ತಿಯ ಕುಟುಂಬಕ್ಕೂ ನೆಮ್ಮದಿ ನೀಡಿದ ನಿಮಗೆ ನಮೋನ್ನಮಃ..ಡಿಯರ್ ಕಿಚ್ಚ ..

ನನಗೊಂದು ಡೌಟ್  ಸುದೀಪ್ ನೀವು ಅದೇ ಕಾರದ ಪುಡಿ ಕಂಪನಿಯ ಬಗ್ಗೆ  ಹೇಳುವಾಗ ಮಾತ್ರ ಅದ್ಯಾಕೆ ಅಷ್ಟು ಜೋರಾಗಿ ಹೇಳ್ತೀರಿ.. ನೀವು ಪ್ರತಿ ಬಾರಿ ಆ ರೀತಿ ಹೇಳುವ ಮುನ್ನ ಕಾರವಾಗಿ ಏನಾದ್ರೂ ಮಾಡಿಕೊಡ್ತಾರ ಕಾರದ ತಿಂಡಿ  ;-)

ಯಾರ್ ನಂಬ್ತಾರೆ

Image result for flowers
ಹಿಂದಿ ವಾಹಿನಿಗಳಲ್ಲಿ ಕೆಲವು ಕಾರ್ಯಕ್ರಮಗಳು ಸಾಮಾನ್ಯವಾಗಿ ಎಲ್ಲಾ  ಚಾನೆಲ್ ಗಳಲ್ಲೂ ಸಹಿತ ಪ್ರಸಾರವಾಗಿರುತ್ತದೆ. ಆದರೆ ಮತ್ತೇ ಸ್ವಲ್ಪ  ಬದಲಾವಣೆಯ ಮೂಲಕ ಜನರ ಮುಂದೆ ಬರುತ್ತೆ.. ಅಂತಹ ಕಾರ್ಯಕ್ರಮ ಒಂದು ಈಗ ಸೋನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಕಹಾನಿ ಪವರ್ ಕಪಲ್ ಕಿ ಎನ್ನುವ  ರಿಯಾಲಿಟಿ ಷೋ ಆರಂಭವಾಗಿದೆ. ಅರ್ಬಾಜ್ ಖಾನ್ ಅದರ ನಿರೂಪಕರಾಗಿದ್ದಾರೆ. ಯಾವ ಜೋಡಿ  ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ;ಅದರಲ್ಲೂ ಮುಖ್ಯವಾಗಿ ಸೆಲೆಬ್ರಿಟಿ  ಜೋಡಿಗಳು ಎಷ್ಟರಮಟ್ಟಿಗೆ ತಮ್ಮ ಸಂಗಾತಿಯ  ಇಷ್ಟಾನಿಷ್ಟಗಳನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳುವ ಕಹಾನಿ ಇದು. ಇದರಲ್ಲಿ ಡೆಲ್ನಾಜ್ ಇರಾನಿ ಮತ್ತು  ಪರ್ಸಿ ಜೋಡಿ ಇಷ್ಟ ಆಯ್ತು ನನಗೆ. ಪ್ರಾಯಶಃ ಈಗ ಅವರು ಸ್ಪರ್ಧೆಯಿಂದ ಹೊರ ಬಂದಿರಬೇಕು ಆದರೂ ಆ ಜೋಡಿ ಅದರಲ್ಲೂ ಡೆಲ್ಲು ಬಿಗ್ ಬಾಸ್ 6 ರ ಬಳಿಕ ಕೆಲವು ಧಾರಾವಾಹಿಗಳಲ್ಲಿ ನಟಿಸಿದರು ಸಹ ಈಗ ಪರ್ಸಿ ಅನ್ನುವ ಫ್ರೆಂಡ್ ಜೊತೆ ಇದ್ದಾರೆ. ಅವರೇ ಈ ರಿಯಾಲಿಟಿ ಶೋನಲ್ಲಿ ಜೊತೆಗಾರ.
ಹಿಂದಿ ಗ್ಲಾಮರಸ್ ಜೋಡಿಗಳು ಈ ಪ್ರತಿಷ್ಟಿತ ಶೋನಲ್ಲಿ ಇದ್ದಾರೆ.. ಸಮಯ ಕಳೆಯಲು ಮಾತ್ರ ಇದು ಸಹಾಯಕಾರಿ. ಏಕೆಂದರೆ ಗಂಡನ  ಬಗ್ಗೆ ಹೆಂಡತಿ, ಹೆಂಡ್ತಿ ಬಗ್ಗೆ ಗಂಡ ಸಾಕಷ್ಟು ಒಳಗುಟ್ಟುಗಳನ್ನು ತಿಳಿಯದೆ ಇದ್ದರೂ  ತುಂಬಾ ಖುಷಿಯಾಗಿದ್ದಾರೆ ಸಾಮಾನ್ಯ ಜನರು...
@ ಇದೇ ವಾಹಿನಿಯಲ್ಲಿ ಪ್ರಸಾರ ಆಗುವ ಸಿ ಐ ಡಿ ಅದರ ಕಥೆಗಳು , ಪಾತ್ರಧಾರಿಗಳು, ಅವರು ಗುಂಪು ಗುಂಪಾಗಿ ಕಳ್ಳನನ್ನು ಹಿಡಿಯುವ ರೀತಿ, ಆ ಧಾರವಾಹಿ ಮಂದಿ ಪಟ್ಟಿರುವ ಕಷ್ಟ, ದೊಡ್ಡ ಪೊಲೀಸ್ ಆಫೀಸರ್ ಪ್ರದ್ಯುಮ್ನ, ಕನ್ನಡದ ದಯಾ ಶೆಟ್ಟಿ ಹೀಗೆ ಎಲ್ಲಾ  ಪಾತ್ರಧಾರಿಗಳು  ನಮಗೆ ತುಂಬಾ  ಪರಿಚಿತರೆನೋ , ವೈಯಕ್ತಿಕವಾಗಿ ಗೊತ್ತೇನೋ ಅನ್ನುವಷ್ಟು ಹತ್ತಿರವಾಗಿದ್ದಾರೆ ಈ ಧಾರವಾಹಿ ಮೂಲಕ. ಅಷ್ಟು ವರ್ಷಗಳಿಂದ ಧಾರವಾಹಿ ಪ್ರಸಾರ  ಆಗ್ತಾನೇ ಇದ್ರೆ ಯಾರ್ ತಾನೇ ನಂಬ್ತಾರೆ  ಇದು ಬರಿ  ಕಥೆ ಅಂತ :-)..ಇಷ್ಟು  ವರ್ಷಗಳಾದರೂ ಹಾಗೆ ಇದ್ದಾರಲ್ಲ  ಯಾವ ಔಷಧ ತಗೋತಾರೋ.. ತಿಳಿಯುವ ಆಸೆ ಆಗಿದೆ ... 

ಏನ್ ಮಾಡ್ತಾ ಇರ್ತಾರೆ

Image result for flowers drawings
“You have to grow from the inside out. None can teach you, 
none can make you spiritual. 
There is no other teacher but your own soul.” 
― Swami Vivekananda

ಇಂದು ವಿವೇಕಾನಂದರ ಹುಟ್ಟುಹಬ್ಬ.. ನನ್ನ ಪ್ರೀತಿಯ ಗುರುದೇವ..ಆದರ್ಶ ಅವರು .. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಗುರುದೇವ..

ಕಳೆದವಾರ ಪುಟ್ಟಆಕ್ಸಿಡೆಂಟ್ ಆಯ್ತು.. ಕೈಗೆ ಸ್ವಲ್ಪ ಗಾಯ ಆಗಿದೆ.. ಕೀ ಬೋರ್ಡ್ ಮುಟ್ಟುವ..ತಟ್ಟುವ ಯಾವ ಕೆಲಸ ಆಗದ ಸ್ಥಿತಿ. ನಾನು ಎಡಗೈ ಬರಹಗಾರ್ತಿ  ಆದ ಕಾರಣ ಸ್ವಲ್ಪ ಸೇಫ್ .. ಆದರೂ ಸಹ ಕೀ ಬೋರ್ಡ್ಗೆ ಎರಡು ಕೈಗಳು ಬೇಕಾಗಿರುತ್ತೆ..ಇನ್ನು ಬೆರಳ ಹುಣ್ಣು ಮತ್ತು ಮೈಕೆ ನೋವು ಹಾಗೇ ಇದೆ.. ಮಲಗಿದರೆ.. ಆಗಿರುವ ಸಮಸ್ಯೆ ಬಗ್ಗೆ ಚಿಂತಿಸುತ್ತಾ ಕೂತರೆ ಅದರ ಪರಿಣಾಮ ಹೆಚ್ಚಾಗುತ್ತೆ.. ಅಂದು ಅಂದ್ರೆ ಬಿದ್ದ ದಿನವು ಸಹ ನಾನು ಆಫೀಸಿಗೆ ಹೋಗಿ ಕೆಲಸ ಮಾಡಲು ಆರಂಭ ಮಾಡಿದ್ದೆ.. ಮಧ್ಯಾಹ್ನ ಆಗುವಷ್ಟರಲ್ಲಿ ಇಡೀ ದೇಹವೆ ಚೂರು ಚೂರು ಆದ ನೋವು.. ಬಲಭಾಗಕ್ಕೆ ಬಿದ್ದಾಗ ಆದಂತಹ  ಗಾಯ..ರಕ್ತ . ಎಡ ಪಾದಕ್ಕೆ ಹೆಜ್ಜೆ ಇಡಲು ಸಾಧ್ಯವಾಗದೆ ಇರುವ  ಪರಿಸ್ಥಿತಿ. ನಮ್ಮ ಬಗ್ಗೆ ನಾವು ತಿಳಿಯ ಬೇಕಾದರೆ ಆಗಾಗ ಇಂತಹದ್ದೇನಾದರು ಆಗ್ತಾ ಇರಬೇಕೇನೋ  ಗೊತ್ತಿಲ್ಲ. ಸಾಮಾನ್ಯವಾಗಿ ನನಗೆ ತೊಂದರೆ ಆದ ಬಗ್ಗೆ ನಾನು ನನ್ನ ಬ್ಲಾಗ್ ಅಥವಾ ನನ್ನ ಫ್ರೆಂಡ್ಸ್ಗೂ ಸಹ ಹೇಳೋಲ್ಲ. ಕಳೆದವಾರ ಅಂದ್ರೆ ಶನಿವಾರ ನಾನು ಹಾಕಿದ ಪೋಸ್ಟ್ ಒಂದರ ಬಗ್ಗೆ ಬಂದ ಬೃಹತ್ ಅಭಿಪ್ರಾಯಕ್ಕೆ - ಅಭಿಮತಕ್ಕೆ  ಗೊತ್ತಿಲ್ಲ ನನಗೆ ಏನು ಹೇಳ ಬೇಕು ಅಂತ.. ಯಾಕೇಂದ್ರೆ ನನ್ನ ಕನ್ನಡ ಅಷ್ಟೊಂದು ಗಟ್ಟಿಯಿಲ್ಲ.. ನಾನು ಉತ್ತರಿಸಲು ತಡವಾದುದಕ್ಕೆ.. ಬೇರೆ ಬೇರೆಯ ರೀತಿಯಲ್ಲಿ ವಿಷಯಗಳು..ಟ್ಯಾಗುಗಳು ಹರಡಿ... ಕೈ ನೋವುತ್ತಿದ್ದರು ಎದ್ದು ಉತ್ತರಿಸುವ ಒಂದು ಪರಿಸ್ಥಿತಿ.

 @ ಕಳೆದ ಶುಕ್ರವಾರ ಚಂದನ ವಾಹಿನಿಯಲ್ಲಿ  ಥಟ್ ಅಂತ ಹೇಳಿ ಕಾರ್ಯಕ್ರಮ ತುಂಬಾ ಇಷ್ಟ ಆಯ್ತು. ಅದಕ್ಕೆ ಕಾರಣ ಅಂದಿನ ಅತಿಥಿಗಳು. ಅದರಲ್ಲೂ ಅತಿಥಿಗಳಲ್ಲಿ ಒಬ್ಬರಾದ ಅಶ್ವಥ್ ನಾರಾಯಣ ಅವರ ಜೊತೆಗೆ ನಮ್ಮ ನಾ ಸೋಮೇಶ್ವರ್ ಮೇಷ್ಟು ಮಾತುಕತೆ ನಡೆಸಿದರು.ಇಲ್ಲಿ ಪ್ರಶ್ನೆಗಳು ಹಾಗೂ ಪುಸ್ತಕ ಒಂದು ನೆಪ ಅಷ್ಟೇ.
ಅಶ್ವಥ್ ನಾರಾಯಣ ಸರ್ ಅವರನ್ನು ನಡೆದಾಡುವ ವಿಶ್ವಕೋಶ ಎಂದು ಹೇಳುತ್ತಾರೆ ಎನ್ನುವ ಮಾತನ್ನು ಸೋಮೇಶ್ವರ್ ಸಾರ್ ಅವರು ಈ ಸಮಯದಲ್ಲಿ ತಿಳಿಸಿದರು. ಪ್ರಾಯಶಃ ಅವರೇ ಅನ್ನಿಸುತ್ತೆ ಲಾರ ಇಂಗಲ್ಸ್ ಅವರ ಕನ್ನಡ ರೂಪಾಂತರವನ್ನು ಕನ್ನಡಿಗರಿಗೆ ನೀಡಿದ್ದು..
ಕನ್ನಡದಲ್ಲಿ ಇರುವಷ್ಟು ಸಾಹಿತ್ಯ ಭಂಡಾರ ಬೇರೆಲ್ಲೂ ಇಲ್ಲ ಎಂದು ಹೇಳಲ್ಲ :).. ಆದರೇ, ವಿಶ್ವದ ಕೆಲವೇ ಕೆಲವು ಭಾಷೆಗಳಿಗೆ ಮಾತ್ರ  ಭಾಷೆಯೊಂದಿಗೆ ಆಡುವ ಶಕ್ತಿಯಿದೆ..ಅದರಲ್ಲಿ ಕನ್ನಡ ಸಹ ೊಂದಾಗಿದೆ. ಒಂದು ಪದಕ್ಕೆ ನಾನಾರ್ಥ ನೀಡುವ  ಶಕ್ತಿ ಇರುವ ಕನ್ನಡದ ಬಗ್ಗೆ ಎಷ್ಟು ಹೇಳಿದರು ಸಾಲದು. ಒಂದು ಲೇಖನ ಬರೆಯುವಾಗ ಒಮ್ಮೊಮ್ಮೆ ಅದೆಷ್ಟು ಚಿಂತನೆಗೀಡು ಮಾಡುತ್ತದೆ ಅಂದ್ರೆ ಒಂದು ಪದದ ಸಮಾನಾರ್ಥಕವನ್ನು ಹುಡುಕಿ ಬರೆಯುವಷ್ಟರಲ್ಲೇ ಸಮಯ ಕರಗಿರುತ್ತದೆ.. ಆದರೂ ಆ ಮೂಲಕ ಸಾಕಷ್ಟು ಸಗತಿಗಳನ್ನು ತಿಳಿಯುವ ಒಂದು ಅವಕಾಶ ..
ಅಶ್ವಥ್ ನಾರಾಯಣ ಸರ್ ಅವರು ವೆಂಕಣ್ಣಯ್ಯನವರ  ಬಗ್ಗೆ ಹೇಳುತ್ತಾ ಅವರು ಆಧ್ಯಾತ್ಮದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು, ಒಮ್ಮೆ ದೇವರಕೋಣೆಗೆ   ಹೋದರೆ ಕೆಲವು ಗಂಟೆಗಳು ಬರುತ್ತಿರಲಿಲ್ಲ .. ಅಲ್ಲಿ ಏನ್ ಮಾಡ್ತಾ ಇರ್ತಾರೆ ಎನ್ನುವ ಜನರ ಪ್ರಶ್ನೆಗೆ ಬೆಳಗೆರೆ ಕೃಷ್ಣ ಶಾಸ್ತ್ರಿ ಅವರು  ಉತ್ತರ ನೀಡಿದ್ದರು. ದೇವರ ಕೋಣೆಯಲ್ಲಿ ಕುಳಿತು ದೇವರ  ಧ್ಯಾನ, ಪೂಜೆ, ಪುನಸ್ಕಾರದ ಜೊತೆಗೆ, ತಮ್ಮ ಶಾಲಾ ಮಕ್ಕಳ ಕರಡು ತಿದ್ದುವುದು, ಗ್ರಂಥ ಸಂಪಾದನೆಗೆ ಸಂಬಂಧಪಟ್ಟ ಕೆಲಸ ಹೀಗೆ ಕನ್ನಡದ ಕೆಲಸಗಳಲ್ಲಿ ಸಂಪೂರ್ಣವಾಗಿ ಮಗ್ನರಾಗಿರುತ್ತಿದ್ದರಂತೆ. ಏನು ನೀವು ಹೀಗೆ ಅಂದಾಗ ಕನ್ನಡದ ಕೆಲಸ ದೇವರ ಕೆಲಸ ಎಂದು ಉತ್ತರಿಸಿದ್ದರಂತೆ ಆ ಮಹನೀಯರು ಎಷ್ಟು ಅದ್ಭುತ ಅಲ್ವೇ! ಖುಷಿ ಆಯ್ತು ಆ ಮಾಹಿತಿ  ಕೇಳಿ.. ಶುಕ್ರವಾರದ ಥಟ್ ಅಂತ ಹೇಳಿ ಕಾರ್ಯಕ್ರಮ ಈರೀತಿಯ ವಿಭಿನ್ನತೆ ಹೊಂದಿರುತ್ತದೆ.. ಹೆಚ್ಚು ಆಸಕ್ತಿಯಿಂದ ಕಾಯುವ ದಿನ ಅದು ನನಗೆ..
ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಯೇಗ್ದಾಗೆಲ್ಲ ಐತೆ ಓದಿ ಅದು ಸಹ ಅತ್ಯಂತ ಖುಷಿ ನೀಡುವ ಕೃತಿ..