ನೆನಪಿನ ಶಕ್ತಿ


courtesy : Malur Ramaswamy Kumaraswamy


ಪ್ರಾಮಾಣಿಕತೆ .. ಇದು ಸಾಮಾನ್ಯವಾಗಿ ನೀತಿ ಕಥೆಗಳಲ್ಲಿ ಹೆಚ್ಚು ಕಾಣುವ ಪದ. ಆದರೆ ಈ ಪ್ರಾಮಾಣಿಕತೆ ಎನ್ನುವ ಪದವನ್ನು ಈಗಂತೂ ದೊಡ್ಡವರು ಸಿಕ್ಕಾಪಟ್ಟೆ ಜಾಸ್ತಿ ಬಳಕೆ ಮಾಡುತ್ತಿರುತ್ತಾರೆ. ಅದೇರೀತಿ ಸಾಮಾನ್ಯರಲ್ಲಿ ಒಂದಷ್ಟು ಜನರು ಸಹ ನಾವು ಪ್ರಾಮಾಣಿಕರು ಎನ್ನುವ ಪದದ ಬಳಕೆಯನ್ನು ಮಾತ್ರ ಮಾಡ್ತಾ ಇರ್ತಾರೆ. ಅವರೆಷ್ಟು ..... ಅನ್ನುವುದು ಅವರ ಸಮೀಪವರ್ತಿಗಳಿಗೆ ಮಾತ್ರವಲ್ಲ   ಬೇರೆಯವರಿಗೂ ಅರ್ಥವಾಗುತ್ತದೆ. ಕೆಲಸ ಮಾಡುವವರು, ಸಹಾಯ ಮಾಡುವವರು ಪದೇಪದೇ ಹೇಳಿಕೊಂಡು ತಿರುಗಲ್ಲ. ಪ್ರಕೃತಿಯಲ್ಲಿ ಪ್ರಾಮಾಣಿಕ ಪದ ಮನುಷ್ಯರಿಗೆ ಮಾತ್ರ ಹೊದಿಕೆಯಾಗುವಂತಹದ್ದು ಅಂತ ಕಾಣುತ್ತೆ. ಬಿಡಿ ಆ ವಿಷ್ಯ ಈಗ್ಯಾಕೆ :-)

courtesy : Malur Ramaswamy Kumaraswamy



@ಪಕ್ಷಿಲೋಕದಲ್ಲಿ ವಲಸೆ ಹೋಗುವ ಕ್ರಿಯೆ ಅತ್ಯಂತ ವಿಸ್ಮಯವಾದದ್ದು. ನಮ್ಮ ಮನೆಗಳ ಸುತ್ತಮುತ್ತ ಇರುವ ಪೆದ್ದು ಪಾರಿವಾಳಗಳು ತಮ್ಮ ಗುಂಪಿನ ಜೊತೆ ಸುತ್ತಮುತ್ತ ಹಾರಾಡುತ್ತಾ ಇರುತ್ತದೆ. ಎಂದಿಗೂ ಗುಂಪಿನಿಂದ ತಪ್ಪಿಸಿಕೊಳ್ಳುವುದಿಲ್ಲ. ಹಾಗೇನಾದರೂ ಆದರೆ ನಾನು ಕಂಡಂಗೆ  ತೊಂದರೆ ಎದುರಿಸಿರುತ್ತದೆ, ಬಹುತೇಕ ಸತ್ತೆ ಹೋಗುತ್ತದೆ.
 ಲೇಖಕ, ಅಂಕಣಕಾರ , ವಿವಾದಿತ ಹೀಗೆ ಹತ್ತು ಹಲವಾರು ಅಂಶಗಳನ್ನು ಪ್ರೀತಿಯಿಂದ ಜೊತೆ ಮಾಡಿಕೊಂಡಿರುವ ಫೇಸ್ಬುಕ್ ಗೆಳೆಯ ರೋಹಿತ್  ಚಕ್ರತೀರ್ಥ  ಬರೆಯುವ ವಿಷಯದಲ್ಲೇ ಎಳ್ಳಷ್ಟು ಹಿಂದೆ ಮುಂದೆ ನೋಡಲ್ಲ. ಅಷ್ಟೊಂದು ಸುಂದರ ಶೈಲಿ. ಕರ್ಮವೀರ , ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ  ಆತ ವೈಜ್ಞಾನಿಕ, ವೈಚಾರಿಕ, ಧಾರ್ಮಿಕ ಹೀಗೆ  ಹತ್ತು ಹಲವಾರು ವಿಷಯಗಳ ಬಗ್ಗೆ  ಲೇಖನಗಳನ್ನು ಬರೆಯುತ್ತಾರೆ. ಚಂದನವಾಹಿನಿಯಲ್ಲಿ  ಪ್ರಸಾರವಾಗುವ  ನಾ ಸೋಮೇಶ್ವರ್ ಮೇಷ್ಟ್ರ ಕಾರ್ಯಕ್ರಮದಲ್ಲಿ  ಆಗಾಗ ರೋಹಿತ್ ಪುಸ್ತಕ ಸಹ ಗೆದ್ದವರಿಗೆ ನೀಡುವ ಪುಸ್ತಕಗಳಲ್ಲಿ ಸೇರುತ್ತದೆ.
ಈಗ ಅವರ ಬಗ್ಗೆ ಹೇಳೋಕೆ ಹೊರಟಿದ್ದು ಯಾಕೇಂದ್ರೆ  ಇತ್ತೀಚಿಗೆ ಒಂದು ಪೋಸ್ಟ್ ನೋಡಿದೆ. ಅದರಲ್ಲಿ ಒಂದು ಕಾಲಿಲ್ಲದ ಹಕ್ಕಿ ಇತ್ತು. ಬಹಳ ಆಸಕ್ತಿಯಿಂದ ಓದಿದೆ.  ಅದು ಬೇರೆ ದೇಶದಿಂದ ವಲಸೆ ಬಂದ ಪಕ್ಷಿ ಆಗಿತ್ತು. ಒಂದು ಕಾಲಿಲ್ಲದ ಕಾರಣ ಪಕ್ಷಿಪ್ರಿಯ ಲೇಖಕನಿಗೆ ಅದರ ನೆನಪಾಗಿತ್ತು. ಸಾವಿರಾರು ಮೈಲಿಗಳಿಂದ ತಾವೂ ವಲಸೆ ಬರು ಪಕ್ಷಿಗಳ ಬಗ್ಗೆ ತಿಳಿದಷ್ಟು  ತಿಳಿಯೋಣ ಎಂದೆನ್ನಿಸುತ್ತದೆ ಈ ಬಗ್ಗೆ ರೋಹಿತ್ ತಮ್ಮ ಗೆಳೆಯ ಗಮನಿದ ಸಂಗತಿ ಬಗ್ಗೆ ಹೇಳಿದ್ದರು. ನಾನು ಅವರ ವಾಲ್ ನಲ್ಲಿ ಆ ಫೋಟೋ ಗಾಗಿ   ಸಾಕಷ್ಟು ಹುಡುಕಾಡಿದೆ. ಆದರೆ ಅದು ಸಿಗುವುದು ಕಷ್ಟವಾಯ್ತು. ಮತ್ತೆಂದಾದರೂ ಕಂಡ್ರೆ ಹಾಕುವೆ.
ಯಾಕೆ ಈಗ ಈ ಪಕ್ಷಿ ಬಗ್ಗೆ ಹೇಳ್ತಾ ಇದ್ದೀನಿ ಅಂದ್ರೆ
-- ಕಳೆದ ವಾರ ಸುವರ್ಣ ನ್ಯೂಸ್ ನಲ್ಲಿ ಬೆರಗು ಕಾರ್ಯಕ್ರಮದಲ್ಲಿ ಪಕ್ಷಿ ಒಂದರ ಬಗ್ಗೆ ಹೇಳ್ತಾ ಇದ್ರೂ. ಅದು ಯಾವ ರೀತಿ ವಲಸೆ ಜಾಗವನ್ನು ನೆನಪಲ್ಲಿ ಇಟ್ಟು ಕೊಳ್ಳುತ್ತದೆ ಹೀಗೆ ಹತ್ತು ಹಲವಾರು ಸಂಗತಿಗಳು  ಸಾವಿರಾರು ಮೈಲಿಗಳಿಂದ ವಲಸೆ ಬರುವ ಪಕ್ಷಿಗಳು ಬರಬೇಕಾದ ಸ್ಥಳವನ್ನು ನೆನಪಲ್ಲಿ  ಉಳಿಸಿಕೊಂಡು ಇರುತ್ತವೆ. ಪ್ರಕೃತಿಯ ಅದ್ಭುತಗಳಲ್ಲಿ ಇದು  ಒಂದು. ಆ ಪಕ್ಷಿಗಳಿಗೆ ತಾವು ಇದ್ದ ಜಾಗ ಮರೆಯುವಂತೆ  ಇಲ್ಲ. ಖುಷಿ ಅನ್ನಿಸಿತು ಆ ಒಂದು ಎಪಿಸೋಡ್.
ಪ್ರತಿದಿನ ಎಂಟೂವರೆಗೆ ಬೆರಗು ಕಾರ್ಯಕ್ರಮ ಪ್ರಸಾರವಾಗುತ್ತದೆ. ನೋಡಲು   ಅರ್ಹವಾದ ಕಾರ್ಯಕ್ರಮ.
Image result for purple flowers
@ ಅತ್ಯಂತ ಸುಂದರವಾದ  ಕಾರ್ಯಕ್ರಮಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಲಿಲ್ ಚಾಂಪ್ ಸಹ ಒಂದು. ಇದರಲ್ಲಿ ಈಗ ಕೊನೆ ಕೊನೆ ಸುತ್ತುಗಳು . ಅಂದರೆ ಕಡಿಮೆ ಸ್ಪರ್ಧಿಗಳ ಅತ್ಯದ್ಭುತವಾದ  ಪರ್ಫಾರ್ಮೆನ್ಸ್. ಅತಿ ಹೆಚ್ಚು ಖುಷಿ ಕೊಡುವ ಕಾರ್ಯಕ್ರಮ ಇದಾಗಿದೆ. ಯಾವ ಮಕ್ಕಳ  ಬಗ್ಗೆ ಹೇಳಿದರೂ ಕಡಿಮೆಯೇ. ಆದ್ದರಿಂದ ಅವರು ಇವರು ಎನ್ನದೆ ಎಲ್ಲ ಪರ್ಫಾರ್ಮೆನ್ಸ್ ಖುಷಿಯಿಂದ ವೀಕ್ಷಿಸ ಬೇಕು ಹಾಗಿದೆ ಕಾರ್ಯಕ್ರಮ. ಈ ವಾರಕನ್ನಡಿಗರ ಪ್ರೀತಿಯ ಸಂಗೀತ ಮೇಸ್ಟ್ರು ಹಂಸಲೇಖ ಬಂದಿದ್ದರು. ಅವರ ರಚನೆ, ಸಂಗೀತ ನಿರ್ದೇಶನದ ಹಾಡುಗಳು ಎಂದಿಗೂ ಎಂದೆಂದಿಗೂ ಅಪರೂಪ. ಅವರ ಗೀತೆಗಳನ್ನು ಹಾಡಿದ ರಾಜೇಶ್ ಕೃಷ್ಣನ್ ಧ್ವನಿ ಆಹಾ.
ಈ ಕಾರ್ಯಕ್ರಮದಲ್ಲಿ ತೀರ್ಪುಗಾರ ವಿಜಯ್ ಪ್ರಕಾಶ್ ಅವರು ರಾಜೇಶ್ ಅವರ ನೆನಪಿನ ಶಕ್ತಿಗೆ ಬೆರಗಾದರು. ಹಂಸ್ ಅವರು ಯಾವುದೇ ಘಟನೆ ಹೇಳಲಿ ಅದಕ್ಕೆ ಸಂಬಂಧಪಟ್ಟ  ಅಂಶವನ್ನು ನೆನಪಿಸಿಕೊಂಡು ಆ ರಾಗವನ್ನು ಮತ್ತೆ  ಮಹಾಗುರುವಿನ ಮುಂದೆ ಹೇಳಿದ ಶಿಷ್ಯ. ಎಲ್ಲವೂ ಅದ್ಭುತವಾದ ಸಂಗತಿ. ದೊಡ್ಡ ಮೇಷ್ಟ್ರ ಮುಂದೆ ಚಿಕ್ಕ ಮೇಷ್ಟ್ರು ಅರ್ಜುನ್ ಜನ್ಯ ತಾವು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿದ್ದು. ಒಟ್ಟಾರೆ ಖುಷಿ ಕೊಡ್ತು ಕಾರ್ಯಕ್ರಮ.