ಗ್ಲಾಮಿ ಪೂನಂ...!




ನಿನ್ನೆ ಈ ಟೀವಿ ಕನ್ನಡ ವಾರ್ತಾವಾಹಿನಿಯ ಉದ್ಘಾಟನೆಯ ನೇರ ಪ್ರಸಾರ ಇತ್ತು. ಈಟೀವಿ ಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭಾಷಣ ಇತ್ತು. ನೇರವಾಗಿ ದೃಶ್ಯ ಮಾಧ್ಯಮಗಳ , ಅದರಲ್ಲೂ ವಾರ್ತಾ ವಾಹಿನಿಗಳ ಬಗ್ಗೆ ತಿಳಿಸಿದರು. ನನಗೆ ಸಿದ್ದು ಅವರ ಮಾತುಗಾರಿಕೆ ಅಂದ್ರೆ ಜಾಸ್ತಿ ಇಷ್ಟ. ಅವರೀಗ ಮುಖ್ಯಮಂತ್ರಿ ಆಗಿರ ಬಹುದು, ಆದರೆ ಅದಕ್ಕಿಂತ ಮುಂಚಿನಿಂದಲೂ ರಾಜಕೀಯ ನಾಯಕ ಮತ್ತು ಉತ್ತಮ ವಾಗ್ಮಿ ಆಗಿದ್ದಾರಲ್ಲ.ಅವರ ಮಾತಿನಲ್ಲಿ ಇರುವ ತಿಳಿ ಹಾಸ್ಯ, ಮೊನಚು, ವಿಷಯವನ್ನು ಹೇಳುವ ಪರಿ .. ಹಾಗೆಂದು ಅವರು ಹೇಳಿದ್ದೆಲ್ಲಾ ಇಷ್ಟ ಆಗುತ್ತೇ ಎಂದಲ್ಲ. ನಿನ್ನೆ ಅವರು ದೃಶ್ಯಮಾಧ್ಯಮಗಳ ಕಾರ್ಯ ವೈಖರಿ, ಅವರು ವ್ಯಕ್ತಿತ್ವಗಳನ್ನು ತೇಜೋವಧೆ ಮಾಡಲು ಪ್ರಯತ್ನಿಸುವ ರೀತಿ ಇಲ್ಲದ ಬಗ್ಗೆ ಹೇಳುತ್ತಾ, ಆರೀತಿ ಮಾಡಿದರೆ ಆ ವ್ಯಕ್ತಿಗೆ ತೇಜೋವಧೆ ಆಗುತ್ತೆ ವಿನಃ ಸಮಾಜಕ್ಕೆ ಮತ್ತು ಜನಗಳಿಗೆ ಏನು ಪ್ರಯೋಜನ ಇಲ್ಲ ಅಂದ್ರು..ಅದು ಸತ್ಯ ಬಿಡಿ ಯಾರ ಬಗ್ಗೆ ಎಷ್ಟೇ ಕಾರ್ಯಕ್ರಮ ಮಾಡಿದರು ಸಹ ಜನರು ತಮ್ಮ ನಾಯಕನಿಗೆ ಓಟು ಹಾಕಿ ಗೆಲ್ಲಿಸೋದು..

@@ ಟೀವಿ ನೈನ್ ನಲ್ಲಿ ಅಂಬರೀಶ್ ಅವರ ಜೊತೆಗೆ ಮಾತುಕತೆಯನ್ನು ಆಡಿದ ಕಾರ್ಯಕ್ರಮ  ಪ್ರಸಾರ ಆಗ್ತಾ ಇದೆ. ಅಂಬಿ ಅವರನ್ನು ನೋಡಿ ಹೆಚ್ಚು ಖುಷಿ ಆಗ್ತಾ ಇದೆ. ಏನಾಗಿದೆ ಎನ್ನುವ  ಸಂಗತಿ ಅರಿಯದಷ್ಟು ನಿಗೂಡ ಇತ್ತು .. ರೆಹಮಾನ್ ಮುಖ್ಯ ನಿರೂಪಕರಾಗಿದ್ದರೆ. ಘೋಶಾಲ್ ಜೊತೆಗಿದ್ದಾರೆ.. ತುಂಬಾ ವಿಶೇಷವಾದ ಕಾರ್ಯಕ್ರಮ.. ಗೆಟ್ ವೆಲ್ ಸೂನ್ ಅಂಬಿ ಬ್ರೋ!

@@@ರವಿಚಂದ್ರನ್ ಸಿನಿಮಾದಲ್ಲಷ್ಟೊಂದು ಗ್ಲಾಮಿ ಆಗಿ ಕಂಡಿದ್ದ ಪೂನಂ ದಿಲ್ಲೊನ್ ಈಗ ಸೋನಿ ವಾಹಿನಿಯಲ್ಲಿ ಏಕ್  ನಯಿ ಪೆಹಚಾನ್ ಅನ್ನುವ ಸೀರಿಯಲ್ ಮುಖಾಂತರ ಮತ್ತೆ ಬಂದಿದ್ದಾರೆ. ಕನ್ನಡ ದ   ಯುದ್ಧಕಾಂಡ ಚಿತ್ರದಲ್ಲಿ ರವಿಚಂದ್ರನ್ ಅವರ ಜೊತೆ ನಟಿಸಿದ್ದ ಆ ಕಲಾವಿದೆ.. ಈಗ ಈ ಧಾರವಾಹಿ ಮುಖಾಂತರ ನಯಿ ಪೆಹಚಾನ್ ರೀತಿನೇ ಇದ್ದಾರೆ. ಚೆನ್ನಾಗಿದೆ ಧಾರವಾಹಿ , ಅದಕ್ಕಿಂತ ಗ್ಲಾಮಿ ಪೂನಂ ಅವರನ್ನು ಇಂತಹ ಪಾತ್ರಗಳಲ್ಲಿ ನೋಡುವಾಗ ಆಹಾ ಅಂತ ಅನ್ನಿಸುತ್ತೆ!


@@ ಇದೆ ವಾಹಿನಿಯಲ್ಲಿ ಪ್ರಸಾರ ಆಗೋ ಮತ್ತೊಂದು ಧಾರವಾಹಿ   ಮೈ ನಾ ಭೂಲುಂಗಿ  ತೆಲುಗು ಸಿನಿಮಾದ ಕಥೆಯಂತೆ ಇದೆ.. ಸಕತ್ ಮಜಾ ಸಿಕ್ಕಿದೆ ನನಗೆ.. ಆದಾಗ ತಪ್ಪದೆ ನೋಡ್ತೀನಿ.. ಮೂರು ತಿಂಗಳಿಗೆ ಆಕೆ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡು, ಹಾಡು ಕಲಿತು, ಪಾಪ್ಯುಲರ್ ಆಗಿ .. ವಾವ್ .. ಸಕತ್ ರೀ.. ಯಾವುದನ್ನು ಆಗಲಿ ವಿಮರ್ಶಾತ್ಮಕವಾಗಿ ನೋಡ ಬಾರದು, ಅನೇಕ ಖುಷಿಗಳು ನಮ್ಮಿಂದ ದೂರ ಆಗುತ್ತೆ.. ಈ ಧಾರಾವಾಹಿಯಲ್ಲಿ ಏನು -ಹೇಗೆ ಸಾಧ್ಯ ಅಂತ ನೋಡಿದ್ರೆ ಎಲ್ಲ ತಪ್ಪಾಗಿ ಕಾಣುತ್ತೆ.. ಆದರೆ ನನಗಂತೂ ಈ ಧಾರಾವಾಹಿಯಿಂದ ಸಕತ್ ಎಂಜಾಯ್ ಮೆಂಟ್ ಸಿಕ್ಕಿದೆ ಬಿಡಿ.. ಕಾಸ್ಮೆಟಿಕ್ ಸರ್ಜರಿ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಬರೆದಿದ್ದೇನೆ ನಾನು.. ಅದರಲ್ಲೂ ಲೈಪೋ ಸಕ್ಷನ್ ಆಪರೇಶನ್ ಕಣ್ಣಾರೆ ಕಂಡಿದ್ದೀನಿ  , ಕಾಸ್ಮೆಟಿಕ್ ಗೆ ಸಂಬಂಧಪಟ್ಟ ಅನೇಕ ಚಿಕಿತ್ಸೆಗಳನ್ನು- ಅದರ ಫಲಿತಾಂಶ ನೋಡಿದ್ದೇನೆ.. ಕಥೆ ಮತ್ತು ನಿಜ ಎರಡು ಬೇರೆ ಆಗಿರೋದ್ರಿಂದ ನನಗೆ ಈ ಧಾರವಾಹಿ ಲೈಕ್ ಆಗಿದೆ..! 

ಟಿಪ್ಸ್ ಗಳು


ನಾನು ಸಾಮಾನ್ಯವಾಗಿ  ನ್ಯೂಸ್ ವಾಹಿನಿಗಳಲ್ಲದೆ ಅಡುಗೆ ಚಾನೆಲ್ ಗಳ ಬಗ್ಗೆನು ಹೆಚ್ಚಿ ಆಸ್ಥೆಯಿಂದ   ನೋಡ್ತೀನಿ. ಯಾರೇ ಆಗಿರಲಿ ಅಂತಿಮವಾಗಿ ತಲುಪೋದು   ರುಚಿಯಾದ ಆಹಾರದ ಕಡೆಗೆ . ಮೊದಲೆಲ್ಲಾ ಇಂತಹ ಕಾರ್ಯಕ್ರಮಗಳ ಬಗ್ಗೆ ಜನರಿಗೆ ನಗು ಬರ್ತಾ ಇತ್ತು ಆದರೆ ಈಗಂತೂ ಹುಡುಗಿಯರ- ಹೆಣ್ಣು ಮಕ್ಕಳಂತೆ   ಅಪಾರ ಸಂಖ್ಯೆಯ ಗಂಡು ಮಕ್ಕಳು ಸಹ ಇಂತಹ ಕಾರ್ಯಕ್ರಮ ನೋಡ್ತಾರೆ.. ಜೀ ಅವರ ಖಾನ ಖಜಾನ ಚಾನೆಲ್ ನಾನು ಆಸ್ಥೆಯಿಂದ ನೋಡುವ ಚಾನೆಲ್ ಗಳಲ್ಲಿ ಒಂದು. ಒಂದೊಮ್ಮೆ ಅದರಲ್ಲೂ ಜೀ ವಾಹಿನಿಯು ಹೆಚ್ಚು ಪಾಪ್ಯುಲರ್ ಆಗೋಕೆ ಇದರಲ್ಲಿ ಪ್ರಸಾರ ಆಗ್ತಾ ಇದ್ದ ಖಾನ ಖಜಾನ ಕಾರ್ಯಕ್ರಮ ಸಹ ಕಾರಣ ಅಂತ ಹೇಳ ಬಹುದು. ಎಲ್ಲಿ ಹೆಣ್ಣು ಮಕ್ಕಳು ಆಕರ್ಷಿತರಾಗುತ್ತಾರೋ ಅಲ್ಲಿ ಯಶಸ್ಸು- ಜನಪ್ರಿಯತೆ ಇದ್ದೆ ಇರುತ್ತದೆ. ನಾನು ಕೇವಲ ನಮ್ಮ ದೇಶದ್ದು ಮಾತ್ರವಲ್ಲ ವಿದೇಶಿ ಅಡುಗೆ ತಯಾರು ಮಾಡುವುದಕ್ಕೆ ಆದ್ಯತೆ ನೀಡುವ ಚಾನೆಲ್ ಗಳನ್ನು ನೋಡ್ತೀನಿ.. ಅಲ್ಲಿ ಶೆಫ್ ಗಳು ನೀಡುವ ಅನೇಕ ಟಿಪ್ಸ್ ಗಳು ಹೆಚ್ಚು ಇಷ್ಟ ನನಗೆ!
ಅದೆಷ್ಟು ಟೀವಿ ನೋಡ್ತೀಯ ನೀನು ಅಂತ ನನ್ನ ಅನೇಕ ಎಫ್ಬಿ ಸ್ನೇಹಿತರು ಹೇಳ್ತಾ ಇರ್ತಾರೆ. ಜಾಸ್ತಿ ನೋಡಲ್ಲ, ನೋಡ ಬೇಕಾಗಿರುವುದನ್ನು ಬಿಡಲ್ಲ ಅಷ್ಟೇ !
ಹೆಚ್ಚು ಹಾಸ್ಯದ ಚಾನೆಲ್ ಗಳು, ರಿಯಾಲಿಟಿ ಶೋಗಳು ನೋಡುವ ಪೈಕಿಯಲ್ಲಿ ಸೇರಿದ್ದೇನೆ ನಾನು. ಅಲ್ಲದೆ ಜಿಗ್ರಫಿ, ಡಿಸ್ಕವರಿ ಕಾಮನ್... ! ಇದರ ಮಧ್ಯೆ ಓದು, ರಾಶಿ ರಾಶಿ ಬರೆಯೋ ಕೆಲಸ, ಜಿಮ್ ಗೆ ಹೋಗೋದು.. ಹೀಗೆ ಎಲ್ಲವು ಇದ್ದೆ ಇರುತ್ತೆ. ಮನಸ್ಸಿದ್ದರೆ ಮಾರ್ಗ ಅನ್ನೋ ಹಾಗೆ..!

@ ಉದಯ ವಾಹಿನಿಯಲ್ಲಿ  ಸಂಗೀತ ರಿಯಾಲಿಟಿ ಷೋ ಬರುತ್ತದೆ. ಪ್ರಾಯಶಃ  ಭಾನುವಾರ ಮಾತ್ರ ಬರೋದು ಅಂತ ಕಾಣುತ್ತೆ. ಅದರಲ್ಲಿ ವಿಜಯ್ ಪ್ರಕಾಶ್ ಮುಖ್ಯ ಜಡ್ಜ್ ಗಳಲ್ಲಿ ಒಬ್ಬರು. ಕನ್ನಡದಲ್ಲಿ ಅತಿ ಹೆಚ್ಚು ಇಷ್ಟ ಆಗುವ ಹಾಡುಗಾರರಲ್ಲಿ, ವಿಜಯ್ ಪ್ರಕಾಶ್, ಹೇಮಂತ್, ರಾಜೇಶ್ ಕೃಷ್ಣನ್. ಎಲ್ಲರ ಧ್ವನಿಯು ತುಂಬಾ ಭಿನ್ನ.. ಅದರಲ್ಲೂ ಜಡ್ಜ್ ಗಳಾಗಿ ಅವರು ಮುಂದಿನ ಪೀಳಿಗೆಯವರಿಗೆ   ನೀಡುವ ಸಲಹೆ ಅನನ್ಯ.
ಸುವರ್ಣ ವಾಹಿನಿಯಲ್ಲಿ ಇಂತಹದ್ದೇ ಕಾರ್ಯಕ್ರಮವನ್ನು ತಪ್ಪದೆ ನೋಡುತ್ತಿದ್ದೆ ಆರಂಭಿಕ ಅವತರಣಿಕೆಯನ್ನು. ಆಗ ಗುರುಕಿರಣ್, ನಂದಿತಾ , ಪ್ರವೀಣ್ ಡಿ  ರಾವ್  ರವರು  ಜಡ್ಜ್ ಗಳಾಗಿ  ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ಅತಿ ಹೆಚ್ಚು ಆಕರ್ಷಿಸಿತ್ತು ನನಗೆ. ಒಂದು ದಿನವು ತಪ್ಪದೆ ನೋಡುತ್ತಿದ್ದ ಕಾರ್ಯಕ್ರಮ ಅದಾಗಿತ್ತು. ಈಗ ಈ ಕಾರ್ಯಕ್ರಮದಲ್ಲೂ ಗುರು, ವಿಜಯ್ ಪ್ರಕಾಶ್  ಅಲ್ಲದೆ ನಿರೂಪಕಿ ಚೈತ್ರ ಕಾಣ ಸಿಗ್ತಾರೆ. ಹಳೆಯ ನೆನಪುಗಳನ್ನು ಮರಕಳಿಸುತ್ತಾ...ಸುವರ್ಣ ವಾಹಿನಿಯ ಬಿಗ್ ಫ್ಯಾನ್ ಆಗಿದ್ದೆ ತುಂಬಾ ದಿನಗಳ ಕಾಲ!!


ಈಸಿ ಈಸಿ ಅಮೀರ್ ;-)



ಸ್ಟಾರ್ ವಾಹಿನಿಯಲ್ಲಿ ಸತ್ಯ ಮೇವ ಜಯತೆ ಎರಡನೇ ಅವತರಣಿಕೆ ಆರಂಭ ಆಗಿದೆ. ಕನ್ನಡಿಗರು ಅದರಲ್ಲಿ ಹಿಂದಿ ಬಲ್ಲ ಕನ್ನಡಿಗರು ಮಾತ್ರ ನೋಡಲು ಸಾಧ್ಯ ಆದ ಕಾರ್ಯಕ್ರಮ. ನಿನ್ನೆ ಕಸದ ಬಗ್ಗೆ ಇದ್ದ ಮಾಹಿತಿ ಸಕತ್ತಾಗಿತ್ತು. ನಿರೂಪಕ ಅಮೀರ್ ಖಾನ್ ನಟನೆ- ರೂಪದಷ್ಟೇ ನನಗೆ ಅವರ ನಿರೂಪಣೆ ಇಷ್ಟ. ಕಸದ ಬಗ್ಗೆ ಅಥವಾ ವೆಸ್ಟ್ ಮ್ಯಾನೇಜ್ ಮೆಂಟ್ ಬಗ್ಗೆ ನಮ್ಮ ಮನೆಯಲ್ಲಿ ಸದಾ ಚರ್ಚಿತ ಆಗ್ತಾ ಇರುತ್ತೆ. ಯಾಕೆಂದ್ರೆ ಭಾರತದ ಅನೇಕ ಸ್ಥಳಗಳಿಗೆ ನನ್ನ ಅಣ್ಣ ರವೀಂದ್ರ  ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಹೋಗ್ತಾ ಇರ್ತಾರೆ. ಅದೆಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ ಅಂದ್ರೆ ಇತ್ತೀಚೆಗೆ ಜರ್ಮನ್ ಮೀಡಿಯಾ ಮಂದಿ ಇದರ ಬಗ್ಗೆ ಮಾತನಾಡಲು ಬೆಂಗಳೂರಿಗೆ ಬಂದಿದ್ದಾಗ, ನಮ್ಮ ಅಣ್ಣನನ್ನು ಭೇಟಿ ಮಾಡಲು ಬಯಸಿದ್ದರು. ಆದರೆ ಆತ ಮನಾಲಿಯ ಮಂಜಿನಲ್ಲಿ ಕೆಲಸ ಸಾಗಿಸ್ತಾ ಇದ್ರೂ :-) ಈ ವಿಷ್ಯ ಗೊತ್ತಾದಾಗ ಸಕತ್  ಒಂಥರಾ ಆಯ್ತು ನಮಗೆಲ್ಲಾ! ಬಿಡಿ ಆ ವಿಷ್ಯ..!! ನಮ್ಮ ಮನೆಯಲ್ಲಿ ಕಸದ ಫೋಟೋಗಳೇ ಸೀಡಿ ಮತ್ತು ಪೆನ್ ಡ್ರೈವ್ನಲ್ಲಿ   ತುಂಬಿರೋದು !
ಆದರೆ ಬೆಂಗಳೂರಿನಲ್ಲಿ ಅದರಲ್ಲೂ ಬೆಂಗಳೂರಿನ   ಸಮೀಪದ ಹಳ್ಳಿ ಮಂಡೂರಿನಲ್ಲಿ ಕಸದ  ಬೆಟ್ಟವೇ ಇದೆ. ಅಲ್ಲಿ ಸಮೀಪದ ಹಳ್ಳಿ ಗುನೂರು ಅದರಲ್ಲಿ ನನ್ನ ಕಸಿನ್ ಇದ್ದಾಳೆ. ರೈತರು. ಭೂಮಿ ಬೆಲೆ ಬಿಡಿ.. ! ಆದರೆ ಅವರ ಪರಿಸ್ಥ್ತಿತಿ  ಹೇಗಿದೆ ಅಂದ್ರೆ ಅವಳು ಹೇಳ್ತಾಳೆ ಒಮ್ಮೆ ಬನ್ನಿ ಮಳೆಗಾಲದ ಸಮಯದಲ್ಲಿ ಎಂತಹ ಗೊಬ್ಬು ವಾಸನೆಗಳನ್ನು ನಾವು ತಗೋ ಬೇಕು ಅಂತ ಗೊತ್ತಾಗುತ್ತೆ.. ಊಟದಲ್ಲಿ ರುಚಿ ಇರಲ್ಲ, ಉಸಿರಾಟವು ಸಹ ನಿಂತೇ ಹೋಗುತ್ತೆ  .. ಒಮ್ಮೆ ನಗರದಲ್ಲಿ ಇರೋರು ನೀವು ಬಂದು ಇದರ ಕಷ್ಟ ಅನುಭವಿಸ ಬೇಕು ಅಂತಾ ಹೇಳ್ತಾಳೆ...  
ಏನೇ ಆದರು ಅತ್ಯಂತ ಒಳ್ಳೆ ಕಾರ್ಯಕ್ರಮ ಸತ್ಯಮೇವ ಜಯತೆ.. ಸೂಪರ್ ಲೈಕ್ ನನ್ನ ಕಡೆಯಿಂದ! ಆದರೆ ಕಾರ್ಯಕ್ರಮದ ಮಧ್ಯೆ ಆಮೀರ್ ತಾವು ಸ್ನಾನ ಮಾಡ್ತೀನಿ ಕಿರಣ್  ಕಾಫಿ ವಿತ್  ಕರಣ್ ನಲ್ಲಿ ನಾನು ಸ್ನಾನ ಮಾಡಲ್ಲ ಅಂತ  ಹೇಳಿದ್ದು ಸುಳ್ಳು ಅನ್ನುವ ಮಾತು ಹೇಳಿದ್ದು ಕೇಳಿ  ಯಾಕೋ  ಪಾಪ ಅನ್ನಿಸ್ತು.. ನೋಡಿ ದಕ್ಷಿಣ ಭಾರತ ಹೆಣ್ಣುಮಕ್ಕಳು ಎಷ್ಟು ನೇರವಾಗಿ ಇದ್ದದ್ದು ಇದ್ದಂಗೆ ಹೇಳಿ ಬಿಡ್ತಾರೆ . ಈಸಿ ಈಸಿ ಅಮೀರ್ ;-)  
@ ಇದೆ ವಾಹಿನಿಯಲ್ಲಿ ಆರುಗಂಟೆಗೆ  ಒಂದು ಧಾರವಾಹಿ ಬರುತ್ತೆ. ಅದರಲ್ಲಿ ಆಸ್ಥ ಮತ್ತು ಶ್ಲೋಕ್ ಅನ್ನುವ ಪಾತ್ರಗಳು ಹೀರೊಹೀರೊಯಿನ್.. ಕಥೆ ಓಕೆ ಬೇಸರ ಆಗಲ್ಲ.. ಸ್ಟಾರ್ ಕಥೆಗಳೇ ಹಾಗೆ. ಆದರೆ ಆ ಕಥೆಯ ನಾಯಕ ನಾಯಕಿಯರ ಹೆಸರು ಸಿಕ್ಕಾಪಟ್ಟೆ ಇಷ್ಟ ಆಯ್ತು ನನಗೆ .. ಅದಕ್ಕಿಂತ ಹೆಚ್ಚಾಗಿ ಆ ಕಥೆಯ ನಾಯಕ ಶ್ಲೋಕ್ ಸಾಮಾನ್ಯವಾಗಿ ಮಂಚದ ಕೆಳಗೆ ಕಾಲು ಚಾಚಿ ಕುಳಿತುಕೊಳ್ತಾರೆ  .. ಆ ರೀತಿ ಸಹ ಸಕತ್ ಖುಷಿ ಕೊಡುತ್ತೆ.. ನಾನು ಹೆಚ್ಚು ನೆಲದ ಮೇಲೆ ಕೂರೋಕೆ ಇಷ್ಟ ಪಡೋದು.. ಕಥೆಗಳಲ್ಲೂ ಸಹ ಇಂತಹವನ್ನು ತೋರಿಸಿದರೆ ನನಗೆ ಬೊಂಬಾಟ್ ಖುಷಿ ಆಗುತ್ತೆ !
@ ಸಾಕಷ್ಟು ದಿನಗಳಿಂದ ಕಾದಿದ್ದ  ಗುತ್ತಿ ಕಾರ್ಯಕ್ರಮ ಅದ್ಯಾಕೋ ಹೆಚ್ಚು ಇಷ್ಟ ಆಗಲಿಲ್ಲ. ಅದಕ್ಕೆ ಕಾರಣ ಅದರಲ್ಲಿ ಗುತ್ತಿ -ಮನೀಶ್ ಪಾಲ್  ಇದ್ರೂ  ಹಾಸ್ಯ ಮುದ ಕೊಡಲ್ಲ. ಅತಿ ಹೆಚ್ಚು ಪಾತ್ರಗಳ ಬಳಕೆ ಮತ್ತು ಆ ಪಾತ್ರಗಳು ಗುಂಪು ಗುಂಪಾಗಿ ವೇದಿಕೆ ಮೇಲೆ ಬರೋದು ಇದಕ್ಕೆ ಕಾರಣ ಅಂತ ಹೇಳ ಬಹುದು. ಸಣ್ಣ ಸಂಗತಿಗಳತ್ತ ಗಮನ ಕೊಟ್ರೆ !!


ತಲೆ ಅಲುಗಾಡಿಸ್ತಾರೆ




ಪ್ರತಿಯೊಂದು ಸಂಗತಿಗೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಯಾವುದೋ ಒಂದು ಲೇಖನ ಓದುತ್ತಿದ್ದೆ ತಂತ್ರಜ್ಞಾನವನ್ನು ನಾವು ಸರಿಯಾಗಿ ಬಳಸಿದಲ್ಲಿ ಅದು ನಮ್ಮ ಸ್ನೇಹ ಬೆಳೆಸುತ್ತದೆ  , ಇಲ್ಲದೆ ಹೋದಲ್ಲಿ ಅದು ನಮ್ಮ ಶತ್ರುವಾಗುತ್ತೆಂತ. ಟೀವಿ ವಿಷಯಕ್ಕೆ ಬಂದಾಗ ಅದೇ ಅಂಶ ಹೊಂದಿಕೆ ಆಗುತ್ತೆ ನಿಜ ಆದರೆ ಅಷ್ಟು ಹೊತ್ತು ಬೇಸರ ಇಲ್ಲದೆ ನೋಡುವಂತಹ ವ್ಯವಧಾನ ಯಾರಿಗೂ ಇರಲ್ಲ ಬಿಡಿ.


ನೋಡಿದ ಕಾರ್ಯಕ್ರಮ ಮನದಲ್ಲಿ ಉಳಿದಾಗ ಮಾತ್ರ ಅದಕ್ಕೆ ಬೆಲೆ. ಕೆಲವು ಮತ್ತೆ ಮತ್ತೆ ನೋಡ ಬೇಕು ಅನಿಸುವಷ್ಟು ಚಂದ ಇದ್ದರೆ, ಒಂದಷ್ಟು ಸಾಕಪ್ಪ ಅನ್ನಿಸುವಂತೆ ಇರುತ್ತದೆ. ಆದರೆ ಒಂದಷ್ಟು ಆರಕ್ಕೂ ಎರಡೇ ಮೂರಕ್ಕೂ ಇಳಿಯದೆ ತನ್ನ ಪಾಡಿಗೆ ಏಕ ರೂಪದಲ್ಲಿ ನಡೆಯುತ್ತಾ ಸಾಗುತ್ತದೆ, ಅಂತಹ  ಕಾರ್ಯಕ್ರಮದಲ್ಲಿ  ಚಂದನ ವಾಹಿನಿಯಲ್ಲಿ  ಪ್ರಸಾರ ಆಗುವ ಥಟ್ ಅಂತ ಹೇಳಿ ಸಹ ಒಂದು. ಅಲ್ಲಿ ಪುಸ್ತಕಗಳು, ಪ್ರಶ್ನೆಗಳು ಮಾತುಗಳು ಮತ್ತು ಮಾಹಿತಿಗಳು ಎಲ್ಲವು ಚಂದ. ಡಾ. ನಾ . ಸೋಮೇಶ್ವರ ಅವರ ನಿರೂಪಣಾ ಶೈಲಿ ಸಹ ಆಪ್ತ ಅನ್ನಿಸುತ್ತೆ.ಇಷ್ಟು ದಿನಗಳಾದರೂ ಯಾರಿಗೂ ಬೋರ್ ಹೊಡಿಸಿಲ್ಲ.


 ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ  ಸಂತಸದ ಸಂಗತಿ ಅಂದ್ರೆ ಅದು ಪ್ರಸಾರ ಆಗುವ ವೇಳೆಯಲ್ಲಿ ಬದಲಾವಣೆ. ಮತ್ತೆ ಒಂಬತ್ತೂವರೆಗೆ ಪ್ರಸಾರ ಆಗ್ತಾ ಇರೋದು ನಿಜಕ್ಕೂ ಖುಷಿಯ ಸಂಗತಿ. ವೀಕ್ಷಕರಿಗೆ  ಬೋರ್ ಆಗದೆ ಮುನ್ನಡೆಸಿಕೊಂಡು  ಹೋಗುವ ಸುಂದರ ಕಾರ್ಯಕ್ರಮ.


 @ ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ ಮತ್ತೊಂದು ಸುಂದರ ಕಾರ್ಯಕ್ರಮ ಮಧುರ ಮಧುರವಿ ಮಂಜುಳಾ ಗಾನ.. ಹಳೆಯ ಹೊಸದರ ಸಮ್ಮಿಲನ. ಜೊತೆಗೆ ಹೊಸ ಪ್ರತಿಭೆಗಳ ಅನಾವರಣ . ಸದಾ ಉತ್ಸಾಹ ಹೆಚ್ಚಿಸುವ ಕಾರ್ಯಕ್ರಮ. ಚಂದನದ್ದಲ್ಲಿ ಈ ಕಾರ್ಯಕ್ರಮ ಸಹಿತ ಯಾವುದೇ ಗಲಾಟೆ -ಅಬ್ಬರ ಇಲ್ಲದೆ ಮುನ್ನಡೆಯುವ., ವೀಕ್ಷಿಸಲು ಖುಷಿ ಅನ್ನಿಸುವ ಕಾರ್ಯಕ್ರಮ ಸಚ್ಚಿ!

@ ಇದೆ ವಾಹಿನಿಯ ಅಡುಗೆ ಕಾರ್ಯಕ್ರಮ ಸಹ ತುಂಬಾ ಆಸಕ್ತಿಯಿಂದ ವಿಕ್ಕ್ಷಿಸುವಂತೆ ಇರುತ್ತದೆ. ನಿರೂಪಕಿಯರು ಪಾಪ ಸ್ವಲ್ಪ ಹೆಚ್ಚೇ ತಲೆ ಅಲುಗಾಡಿಸ್ತಾರೆ ಮಾತಾಡುವಾಗ ಅನ್ನೋದು ಬಿಟ್ರೆ ಇನ್ನು ಎಲ್ಲ ವಿಷಯದಲ್ಲೂ ಪರ್ಫೆಕ್ಟ್.


 comments :