ಸ್ಟಾರ್ ವಾಹಿನಿಯಲ್ಲಿ ಸತ್ಯ ಮೇವ ಜಯತೆ ಎರಡನೇ ಅವತರಣಿಕೆ ಆರಂಭ ಆಗಿದೆ. ಕನ್ನಡಿಗರು ಅದರಲ್ಲಿ ಹಿಂದಿ ಬಲ್ಲ ಕನ್ನಡಿಗರು ಮಾತ್ರ ನೋಡಲು ಸಾಧ್ಯ ಆದ ಕಾರ್ಯಕ್ರಮ. ನಿನ್ನೆ ಕಸದ ಬಗ್ಗೆ ಇದ್ದ ಮಾಹಿತಿ ಸಕತ್ತಾಗಿತ್ತು. ನಿರೂಪಕ ಅಮೀರ್ ಖಾನ್ ನಟನೆ- ರೂಪದಷ್ಟೇ ನನಗೆ ಅವರ ನಿರೂಪಣೆ ಇಷ್ಟ. ಕಸದ ಬಗ್ಗೆ ಅಥವಾ ವೆಸ್ಟ್ ಮ್ಯಾನೇಜ್ ಮೆಂಟ್ ಬಗ್ಗೆ ನಮ್ಮ ಮನೆಯಲ್ಲಿ ಸದಾ ಚರ್ಚಿತ ಆಗ್ತಾ ಇರುತ್ತೆ. ಯಾಕೆಂದ್ರೆ ಭಾರತದ ಅನೇಕ ಸ್ಥಳಗಳಿಗೆ ನನ್ನ ಅಣ್ಣ ರವೀಂದ್ರ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಹೋಗ್ತಾ ಇರ್ತಾರೆ. ಅದೆಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ ಅಂದ್ರೆ ಇತ್ತೀಚೆಗೆ ಜರ್ಮನ್ ಮೀಡಿಯಾ ಮಂದಿ ಇದರ ಬಗ್ಗೆ ಮಾತನಾಡಲು ಬೆಂಗಳೂರಿಗೆ ಬಂದಿದ್ದಾಗ, ನಮ್ಮ ಅಣ್ಣನನ್ನು ಭೇಟಿ ಮಾಡಲು ಬಯಸಿದ್ದರು. ಆದರೆ ಆತ ಮನಾಲಿಯ ಮಂಜಿನಲ್ಲಿ ಕೆಲಸ ಸಾಗಿಸ್ತಾ ಇದ್ರೂ :-) ಈ ವಿಷ್ಯ ಗೊತ್ತಾದಾಗ ಸಕತ್ ಒಂಥರಾ ಆಯ್ತು ನಮಗೆಲ್ಲಾ! ಬಿಡಿ ಆ ವಿಷ್ಯ..!! ನಮ್ಮ ಮನೆಯಲ್ಲಿ ಕಸದ ಫೋಟೋಗಳೇ ಸೀಡಿ ಮತ್ತು ಪೆನ್ ಡ್ರೈವ್ನಲ್ಲಿ ತುಂಬಿರೋದು !
ಆದರೆ ಬೆಂಗಳೂರಿನಲ್ಲಿ ಅದರಲ್ಲೂ ಬೆಂಗಳೂರಿನ ಸಮೀಪದ ಹಳ್ಳಿ ಮಂಡೂರಿನಲ್ಲಿ ಕಸದ ಬೆಟ್ಟವೇ ಇದೆ. ಅಲ್ಲಿ ಸಮೀಪದ ಹಳ್ಳಿ ಗುನೂರು ಅದರಲ್ಲಿ ನನ್ನ ಕಸಿನ್ ಇದ್ದಾಳೆ. ರೈತರು. ಭೂಮಿ ಬೆಲೆ ಬಿಡಿ.. ! ಆದರೆ ಅವರ ಪರಿಸ್ಥ್ತಿತಿ ಹೇಗಿದೆ ಅಂದ್ರೆ ಅವಳು ಹೇಳ್ತಾಳೆ ಒಮ್ಮೆ ಬನ್ನಿ ಮಳೆಗಾಲದ ಸಮಯದಲ್ಲಿ ಎಂತಹ ಗೊಬ್ಬು ವಾಸನೆಗಳನ್ನು ನಾವು ತಗೋ ಬೇಕು ಅಂತ ಗೊತ್ತಾಗುತ್ತೆ.. ಊಟದಲ್ಲಿ ರುಚಿ ಇರಲ್ಲ, ಉಸಿರಾಟವು ಸಹ ನಿಂತೇ ಹೋಗುತ್ತೆ .. ಒಮ್ಮೆ ನಗರದಲ್ಲಿ ಇರೋರು ನೀವು ಬಂದು ಇದರ ಕಷ್ಟ ಅನುಭವಿಸ ಬೇಕು ಅಂತಾ ಹೇಳ್ತಾಳೆ...
ಏನೇ ಆದರು ಅತ್ಯಂತ ಒಳ್ಳೆ ಕಾರ್ಯಕ್ರಮ ಸತ್ಯಮೇವ ಜಯತೆ.. ಸೂಪರ್ ಲೈಕ್ ನನ್ನ ಕಡೆಯಿಂದ! ಆದರೆ ಕಾರ್ಯಕ್ರಮದ ಮಧ್ಯೆ ಆಮೀರ್ ತಾವು ಸ್ನಾನ ಮಾಡ್ತೀನಿ ಕಿರಣ್ ಕಾಫಿ ವಿತ್ ಕರಣ್ ನಲ್ಲಿ ನಾನು ಸ್ನಾನ ಮಾಡಲ್ಲ ಅಂತ ಹೇಳಿದ್ದು ಸುಳ್ಳು ಅನ್ನುವ ಮಾತು ಹೇಳಿದ್ದು ಕೇಳಿ ಯಾಕೋ ಪಾಪ ಅನ್ನಿಸ್ತು.. ನೋಡಿ ದಕ್ಷಿಣ ಭಾರತ ಹೆಣ್ಣುಮಕ್ಕಳು ಎಷ್ಟು ನೇರವಾಗಿ ಇದ್ದದ್ದು ಇದ್ದಂಗೆ ಹೇಳಿ ಬಿಡ್ತಾರೆ . ಈಸಿ ಈಸಿ ಅಮೀರ್ ;-)
@ ಇದೆ ವಾಹಿನಿಯಲ್ಲಿ ಆರುಗಂಟೆಗೆ ಒಂದು ಧಾರವಾಹಿ ಬರುತ್ತೆ. ಅದರಲ್ಲಿ ಆಸ್ಥ ಮತ್ತು ಶ್ಲೋಕ್ ಅನ್ನುವ ಪಾತ್ರಗಳು ಹೀರೊಹೀರೊಯಿನ್.. ಕಥೆ ಓಕೆ ಬೇಸರ ಆಗಲ್ಲ.. ಸ್ಟಾರ್ ಕಥೆಗಳೇ ಹಾಗೆ. ಆದರೆ ಆ ಕಥೆಯ ನಾಯಕ ನಾಯಕಿಯರ ಹೆಸರು ಸಿಕ್ಕಾಪಟ್ಟೆ ಇಷ್ಟ ಆಯ್ತು ನನಗೆ .. ಅದಕ್ಕಿಂತ ಹೆಚ್ಚಾಗಿ ಆ ಕಥೆಯ ನಾಯಕ ಶ್ಲೋಕ್ ಸಾಮಾನ್ಯವಾಗಿ ಮಂಚದ ಕೆಳಗೆ ಕಾಲು ಚಾಚಿ ಕುಳಿತುಕೊಳ್ತಾರೆ .. ಆ ರೀತಿ ಸಹ ಸಕತ್ ಖುಷಿ ಕೊಡುತ್ತೆ.. ನಾನು ಹೆಚ್ಚು ನೆಲದ ಮೇಲೆ ಕೂರೋಕೆ ಇಷ್ಟ ಪಡೋದು.. ಕಥೆಗಳಲ್ಲೂ ಸಹ ಇಂತಹವನ್ನು ತೋರಿಸಿದರೆ ನನಗೆ ಬೊಂಬಾಟ್ ಖುಷಿ ಆಗುತ್ತೆ !
@ ಸಾಕಷ್ಟು ದಿನಗಳಿಂದ ಕಾದಿದ್ದ ಗುತ್ತಿ ಕಾರ್ಯಕ್ರಮ ಅದ್ಯಾಕೋ ಹೆಚ್ಚು ಇಷ್ಟ ಆಗಲಿಲ್ಲ. ಅದಕ್ಕೆ ಕಾರಣ ಅದರಲ್ಲಿ ಗುತ್ತಿ -ಮನೀಶ್ ಪಾಲ್ ಇದ್ರೂ ಹಾಸ್ಯ ಮುದ ಕೊಡಲ್ಲ. ಅತಿ ಹೆಚ್ಚು ಪಾತ್ರಗಳ ಬಳಕೆ ಮತ್ತು ಆ ಪಾತ್ರಗಳು ಗುಂಪು ಗುಂಪಾಗಿ ವೇದಿಕೆ ಮೇಲೆ ಬರೋದು ಇದಕ್ಕೆ ಕಾರಣ ಅಂತ ಹೇಳ ಬಹುದು. ಸಣ್ಣ ಸಂಗತಿಗಳತ್ತ ಗಮನ ಕೊಟ್ರೆ !!
No comments:
Post a Comment