ಪಾಪ!

Image result for pink red flowers
ಕಳೆದ ಎರಡು ವರ್ಷಗಳಿಂದ ಮಾಡಿದ ಪ್ರಯತ್ನಗಳು ವ್ಯರ್ಥವಾದರೂ ನಿರಂತರವಾಗಿ ಮಾಡುವ ಯತ್ನ ನಿಂತಿಲ್ಲ.. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಮೈಸೂರು ಮತ್ತು ಬೆಂಗಳೂರು  ಎರಡು ಕಡೆ ಇರುವ ನಾನು ಮೈಸೂರು ಹಾಗು ಬೆಂಗಳೂರಿನ ರೇಡಿಯೋ ಸ್ಟೇಷನ್ ನಲ್ಲಿ ಅನೌನ್ಸರ್ ಆಗಿ ಸೇರಿಕೊಳ್ಳಲು  (ಅರೆಕಾಲಿಕ) ಸಿದ್ಧತೆ ನಡೆಸಿದ್ದೆ. ಮೈಸೂರಿನಲ್ಲಿ  ಬರೆದು ಪಾಸ್ ಆದರೂ    ಧ್ವನಿ ಕೈ ಕೊಡ್ತು.. ಬೆಂಗಳೂರಿನಲ್ಲಿ ಬರೆಯುವ, ಧ್ವನಿ, ಟ್ರೈನಿಂಗ್ ಎಲ್ಲದರಲ್ಲೂ ಓಕೇ ಆಯ್ತು. ಕಿಚ್ಚ, ದಚ್ಚು ಸೇರಿದಂತೆ  ಕನ್ನಡಿಗರ ಮುದ್ದಿನ ಕಲಾವಿದರ ಹಾಡುಗಳ ಪ್ಲೆ ಲಿಸ್ಟ್  ಸಿದ್ಧ ಮಾಡುವ, ಕೇಳಿಸಿ ಕೊಳ್ಳುವ, ಎಲ್ಲಾ ಹೋಮ್ ವರ್ಕ್ ಮಾಡಿದ್ದಾಯ್ತು.. ಆದ್ರೆ ಅಲ್ಲಿಯೂ  ಅದೃಷ್ಟ ಕೈ ಕೊಡ್ತು ಸೊ ಮುಂದುವರೆಯಲು ಆಗಲಿಲ್ಲ, ಇದರ ಮಧ್ಯೆ ಚಾನೆಲ್, ಸಿನಿಮಾ, ಧಾರವಾಹಿ,ಪೇಪರ್  ಅಂತ ಪ್ರಯತ್ನ ಪಟ್ಟಿದ್ದಾಯ್ತು ಫಲಿತಾಂಶ ಶೂನ್ಯ ಶೂನ್ಯ..! ಹಣೆಯಲ್ಲಿ ಬರದಷ್ಟೇ ದಕ್ಕೋದು, ಮುಖ್ಯವಾಗಿ  ನಾನು ಮಿಸ್ಫಿಟ್ ಆಗಿದ್ದಕ್ಕೆ ನನಗೆ ಅವಕಾಶಗಳು ಸಿಕ್ಕಿಲ್ಲ  ಅನ್ನುವ ನಿರ್ಧಾರಕ್ಕೆ ಬಂದು ನನ್ನನ್ನು ಗುರುತಿಸಿದ್ದ  ಹಿಂದೆ ಇದ್ದ ಪತ್ರಿಕೆಯಲ್ಲಿ ಫ್ರಿಲ್ಯಾನ್ಸರ್ ಆಗಿ ಹಾಯಾಗಿದ್ದೀನಿ.. ಇದು ನನ್ನ ಎರಡು ವರ್ಷದ ಅಫಿಡವಿಟ್ಟು..

ಕಳೆದ ವಾರದ ಆರಂಭದ ದಿನಗಳಲ್ಲಿ  ನಾನು ತಿರುಪತಿ ಬೆಟ್ಟ ಹತ್ತುವ ಕಾರ್ಯಕ್ರಮದಲ್ಲಿ ಇದ್ದೆ ..ಅದೊಂದು ಖುಷಿಯ ಪ್ರಪಂಚ. ಯಾಕೆಂದ್ರೆ ಅಲ್ಲಿ ಸಾವಿರಾರು ಮೆಟ್ಟಿಲುಗಳು, ಅಪಾರವಾದ ಭಕ್ತರು, ಅವರ ರಾಶಿರಾಶಿ ನಂಬಿಕೆಗಳು, ಮೆಟ್ಟಿಲುಗಳಲ್ಲಿ  ತಮ್ಮ ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿಕೊಂಡಿರುವ ಸಣ್ಣಪುಟ್ಟ ವ್ಯಾಪಾರಿಗಳು.. ಇವೆಲ್ಲವೂ ಅದ್ಭುತವಾದ ಪ್ರಪಂಚವನ್ನು ಅನಾವರಣ  ಮಾಡುತ್ತದೆ ...

Image result for pink red flowers
 ಬಿಗ್ ಬಾಸ್  (ಕನ್ನಡ-ಹಿಂದೀ) ರಿಯಾಲಿಟಿ ಷೋ ನನಗೆ ಯಾಕೆ ಆಕರ್ಷಿಸುತ್ತದೆ  ಅಂದ್ರೆ ಅದ್ರ ಬಗ್ಗೆ ಯಾರೇನೇ ಹೇಳಲಿ ನಿಜ ಬದುಕಲ್ಲಿ ಮಾನವ ಅನಿವಾರ್ಯವಾದರೆ ಎಷ್ಟೆಲ್ಲಾ ಹೊಂದಾಣಿಕೆ ಮಾಡಿಕೊಳ್ತಾನೆ ಎನ್ನುವ ಅಂಶವನ್ನು ಪದೇಪದೇ ಸಾರಿ ಹೇಳುತ್ತದೆ.
ನಮಗಿಷ್ಟವಿಲ್ಲ  ಅಂದವರು, ನಾವು ನೋಡುವುದೇ ಇಲ್ಲ ಎನ್ನುವವರು ಸಹ ಈ ಮನೆಗೆ ಬರುವುದಕ್ಕೆ  ಆಶಿಸುತ್ತಾರೆ.ಇನ್ನು ವಾರದ ಕೊನೆಯಲ್ಲಿ ಕಿಚ್ಚನ, ಹರಟೆ,  ಪಂಚಾಯಿತಿ,  ಕನ್ನಡ ಎಲ್ಲವೂ ನನಗೆ ಇಷ್ಟವಾದುದು.. ಅದನ್ನು ಮಿಸ್ ಮಾಡಿಕೊಳ್ಳುವುದಕ್ಕೆ ಆಗಲ್ಲ..
ಹರೀಶ್ ರಾಜ್, ಕುರಿ ಪ್ರತಾಪ್ ಅವರು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ತಾರೆ..ಆ ಅಂಶ  ಹೆಚ್ಚು ಇಷ್ಟವಾಗುತ್ತದೆ. ಪಾಪ ಚಂದನ್ ಆಚಾರ್ ಅಂದ್ರೆ ಅದ್ಯಾಕೋ ಮಂದಿಗೆ ಕಿರಿಕಿರಿ.. ಸಕತ್ ಪ್ರತಿಭಾವಂತ..ಆದ್ರೆ ಆತುರಗಾರ..
Image result for pink red flowers
ಸಲ್ಮಾನ್ ವಿಷಯದಲ್ಲಿಯೂ ಅಷ್ಟೇ ಅವರ ಮಾತು , ಪ್ರತಿವಾರ ಧರಿಸುವ ಒಂದೇ ಕಲರ್ ನ ಬೇರೆಬೇರೆ  ಬಟ್ಟೆ :-) (ಕರಿ ಬಣ್ಣದ್ದು) ಇವೆಲ್ಲವೂ  ಆಸಕ್ತಿಯಿಂದ ವೀಕ್ಷಿಸುವಂತೆ ಮಾಡುತ್ತದೆ. ಆದ್ರೆ ಹಿಂದೀ ಬಿಗ್ ಬಾಸ್ ನಲ್ಲಿ ಬಂದಿರುವ ಸ್ಪರ್ಧಿಗಳು ಯಪ್ಪಾ ಅದೇನ್ ಜಗಳ ಮಾಡ್ತಾರೆ.. ಒಣಪ್ರತಿಷ್ಠೆಯ  ಪ್ರತಿರೂಪಗಳು..   ಈ ಪ್ರಕೃತಿಯ ಮುಂದೆ..ನಾವೇನು ಅಲ್ಲ ಮುಖ್ಯವಾಗಿ  ನಮ್ಮಂತವರು ಇದ್ದೀವಿ ಅನ್ನುವುದು ಸಹ ಪ್ರಪಂಚಕ್ಕೆ  ಗೊತ್ತಿಲ್ಲ.. ಇರುವ ಎರಡು ದಿನಗಳು  ಅದೇನು  ಕಾದಾಟ, ಕೋಪಾಟ, ಒದ್ದಾಟ.. 

ಶೆಫ್

Image result for coral red flowers
ಸ್ಟಾರ್ ಪ್ಲಸ್ ನಲ್ಲಿ ಮಾಸ್ಟರ್ ಶೆಫ್  ಸ್ವಲ್ಪ ಜಾಸ್ತಿ ವಿರಾಮದ ನಂತರ ಮತ್ತೆ ಶುರು ಆಗಿದೆ. ವಿಕಾಸ್,ರಣವೀರ್  ಮತ್ತು  ವಿನೀತ್ ಅವರ  ಮೇಲುಸ್ತುವಾರಿಯಲ್ಲಿ ಈ ಬಾರಿಯ  ಎಂ ಎಸ್ ಕಾರ್ಯಕ್ರಮ  ನಡಿಯುತ್ತಿದೆ. ಆಸಕ್ತಿ ಇರುವ ಯಾವುದೇ ಕ್ಷೇತ್ರ ಆಗಿರಲಿ ಯಶಸ್ವಿಯಾಗಲು  , ವಿಶ್ವಮಾನ್ಯವಾಗಲು ಸಾಧ್ಯವಾಗುತ್ತದೆ ಕಷ್ಟಪಟ್ಟು ಪ್ರಾಮಾಣಿಕವಾಗಿ ದುಡಿದರೆ ಎನ್ನುವುದಕ್ಕೆ  ವಿನೀತ್ ಅವರ ಸಾಧನೆಯೇ ಸಾಕ್ಷಿ . ಅತ್ಯಂತ ಸ್ಟೈಲಿಶ್  ಶೆಫ್  ರಣವೀರ್ .. ಅವರ  ಪೇಜ್ ನಾನು ಫಾಲೋ ಮಾಡ್ತೀನಿ ಎಫ್ಭಿಯಲ್ಲಿ.ಇನ್ನು   ವಿಕಾಸ್   ಬಗ್ಗೆ  ಹೇಳುವುದಾದರೆ  ಹಲವಾರು ಅಂಶಗಳಿಂದ ಮೊದಲಿನ ಸೀಸನ್ ಗಳಿಂದ   ಅವರು ಒಂದರ್ಥದಲ್ಲಿ ಮಾಸ್ಟರ್ ಆಗಿದ್ದಾರೆ ನನಗೆ.. ಯಾಕೆಂದ್ರೆ ಅಡುಗೆ ಮಾಡುವಾಗ ಹೇಗೆಂದರೆ ಹಾಗೆ ಪದಾರ್ಥಗಳನ್ನು ಚಲ್ಲುವ, ಬಿಟ್ಟು ಹೋಗುವ ಮುಚ್ಚಿಡದೆ  ಇರುವಂತಹ ಅಂಶ ಗಳು   ಉತ್ತಮ ಶೆಫ್ ಆಗುವ ಲಕ್ಷಣಗಳಲ್ಲ ಎನ್ನುವುದನ್ನು ವಿಕಾಸ್ ಬಂದ ಸ್ಪರ್ಧಿಗಳಿಗೆ ಪದೇಪದೇ ಮನದಟ್ಟು  ಮಾಡ್ತಾರೆ.ಅಡುಗೆ ಮನೆಯಲ್ಲಿ ಎಂದಿಗೂ ನಿರ್ಲಕ್ಷ್ಯ , ಸೋಮಾರಿತನಕ್ಕೆ ಸ್ಥಳ ಇರಲೇ ಬಾರದು .. ಇದನ್ನು ಅಳವಡಿಸ್ಕೊಂಡವರೆಲ್ಲರೂ ಮಾಸ್ಟರ್ ಶೆಫ್ಗಳೆ!
ಅಡುಗೆ ಮಾಡುವುದು ಅತ್ಯಂತ ಕಠಿಣ ಹಾಗು ಸುಲಭವಾದ  ಸಂಗತಿ..
Image result for coral red flowers
 ಇದು ಒಂದು ಬಗೆಯಲ್ಲಿ  ಮೆದುಳಿನ ವ್ಯಾಯಾಮ. ಅಡುಗೆ ಮಾಡುವವರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಹತ್ತಿರ ಬರದು . ಅದರಲ್ಲೂ ಮರೆವಿನ ಕಾಯಿಲೆಯಂತು ದೂರದೂರ ..ಯಾಕೆಂದ್ರೆ ಅಡುಗೆ ಮಾಡುವಾಗ ಸಾಮಾನ್ಯವಾಗಿ ಯಾವ್ಯಾವ ಪದಾರ್ಥಗಳನ್ನು ಬಳಸ ಬೇಕು, ಎಷ್ಟು ಪ್ರಮಾಣ, ಎಷ್ಟು  ಹೊತ್ತು ಬೇಯಬೇಕು, ಹೀಗೆ ಹಲವಾರು ಸಂಗತಿಗಳು ಪ್ರಾಮುಖ್ಯತೆ ಗಳಿಸಿಕೊಳ್ಳುತ್ತದೆ.  ಈ ಎಲ್ಲಾ ಅಂಶಗಳನ್ನು ಮೆದುಳು ನೆನಪಲ್ಲಿಟ್ಟುಕೊಳ್ಳುವುದು ಸಹಿತ  ಒಂದು ಬಗೆಯ ವ್ಯಾಯಾಮ. ಇದು ನೂರು ಫಜಲ್ ಬಿಡಿಸಿದ್ರೆ ಸಿಗುವಂತಹ ಶಕ್ತಿ ದೊರಕಿಸುತ್ತದೆ.. ಸತ್ಯ ಕಣ್ರೀ.. ಇದನ್ನು ನಾನು ಹೇಳ್ತಾ ಇಲ್ಲ.. ಸರ್ವೇಗಳು ಸಾಬೀತು ಮಾಡಿವೆ..ಆದ್ದರಿಂದಲೇ ಅಂತ ಕಾಣುತ್ತೆ ಅಡುಗೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು ಹೆಚ್ಚು ಕಾಲ ಯಂಗಿ(young)ಗಳಾಗಿ ಉಳಿದಿರುತ್ತಾರೆ.. ಅಲ್ವ ವಿಕಾಸ್ , ರಣವೀರ್  :-).
Image result for coral red flowers
ಕನ್ನಡ ಮೇರುನಟರಲ್ಲಿ  ಒಬ್ಬರಾಗಿದ್ದ ಡಾ.ಅಂಬರೀಷ್ . ಅವರ ಜೀವನ ಕಥನದಲ್ಲಿ  ತಮ್ಮ ತಾಯಿಯ ಬಗ್ಗೆ ಒಂದು ಅಂಶವನ್ನು ಹೇಳಿದ್ದರು.( ಅವರ ಜೀವನಕಥೆಯ ಪುಸ್ತಕದ ಸ್ವಲ್ಪಭಾಗ ಪ್ರೂಫ್  ನೋಡುವಾಗ  ಸೌಭಾಗ್ಯ ನನಗೆ ದೊರಕಿತ್ತು ) ಅವರ ತಾಯಿ  ರುಚಿಕರವಾಗಿ ಅಡುಗೆ ಮಾಡುವದರ  ಜೊತೆಗೆ ಮಾಡಿದ ನಂತರ ಅಷ್ಟೊಂದು ಆಹಾರ ಪದಾರ್ಥಗಳನ್ನು ತಯಾರಿಸಿದ್ದರಾ  ಎನ್ನುವಂತೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟು  ಕೊಂಡಿರುತ್ತಿದ್ದರಂತೆ .. ನನ್ನ ಮನೆಯಲ್ಲಿ ಈಗ ಅಡುಗೆಯವರು ಇದ್ದಾರೆ.. ಅವರು ಮಾಡಿರುವುದೇನು ಅಂತ ಹರಡಿರುವ, ಅಲ್ಲಲ್ಲಿ ಬಿದ್ದಿರುವ ತರಕಾರಿ , ಈರುಳ್ಳಿ ಸಿಪ್ಪೆಗಳು ಹೇಳಿ ಬಿಡುತ್ತವೆ ಎಂದು ಹೇಳಿದ್ದರು.ಈ ವಿಷಯದಲ್ಲಿ ನನಗೆ ನಮ್ಮ ಅಮ್ಮನ ಬಗ್ಗೆ ಸಹ ಹೆಮ್ಮೆ ಆಗುತ್ತದೆ.. ಅವರು ಅಷ್ಟೇ  ಅಡುಗೆ ಹಾಗು ಸ್ವಚ್ಛತೆ ಎರಡಕ್ಕೂ ಹೆಚ್ಚಿನ ಪ್ರಾಮಖ್ಯತೆ ನೀಡುತ್ತಾರೆ.