ಸ್ಟಾರ್ ಪ್ಲಸ್ ನಲ್ಲಿ ಮಾಸ್ಟರ್ ಶೆಫ್ ಸ್ವಲ್ಪ ಜಾಸ್ತಿ ವಿರಾಮದ ನಂತರ ಮತ್ತೆ ಶುರು ಆಗಿದೆ. ವಿಕಾಸ್,ರಣವೀರ್ ಮತ್ತು ವಿನೀತ್ ಅವರ ಮೇಲುಸ್ತುವಾರಿಯಲ್ಲಿ ಈ ಬಾರಿಯ ಎಂ ಎಸ್ ಕಾರ್ಯಕ್ರಮ ನಡಿಯುತ್ತಿದೆ. ಆಸಕ್ತಿ ಇರುವ ಯಾವುದೇ ಕ್ಷೇತ್ರ ಆಗಿರಲಿ ಯಶಸ್ವಿಯಾಗಲು , ವಿಶ್ವಮಾನ್ಯವಾಗಲು ಸಾಧ್ಯವಾಗುತ್ತದೆ ಕಷ್ಟಪಟ್ಟು ಪ್ರಾಮಾಣಿಕವಾಗಿ ದುಡಿದರೆ ಎನ್ನುವುದಕ್ಕೆ ವಿನೀತ್ ಅವರ ಸಾಧನೆಯೇ ಸಾಕ್ಷಿ . ಅತ್ಯಂತ ಸ್ಟೈಲಿಶ್ ಶೆಫ್ ರಣವೀರ್ .. ಅವರ ಪೇಜ್ ನಾನು ಫಾಲೋ ಮಾಡ್ತೀನಿ ಎಫ್ಭಿಯಲ್ಲಿ.ಇನ್ನು ವಿಕಾಸ್ ಬಗ್ಗೆ ಹೇಳುವುದಾದರೆ ಹಲವಾರು ಅಂಶಗಳಿಂದ ಮೊದಲಿನ ಸೀಸನ್ ಗಳಿಂದ ಅವರು ಒಂದರ್ಥದಲ್ಲಿ ಮಾಸ್ಟರ್ ಆಗಿದ್ದಾರೆ ನನಗೆ.. ಯಾಕೆಂದ್ರೆ ಅಡುಗೆ ಮಾಡುವಾಗ ಹೇಗೆಂದರೆ ಹಾಗೆ ಪದಾರ್ಥಗಳನ್ನು ಚಲ್ಲುವ, ಬಿಟ್ಟು ಹೋಗುವ ಮುಚ್ಚಿಡದೆ ಇರುವಂತಹ ಅಂಶ ಗಳು ಉತ್ತಮ ಶೆಫ್ ಆಗುವ ಲಕ್ಷಣಗಳಲ್ಲ ಎನ್ನುವುದನ್ನು ವಿಕಾಸ್ ಬಂದ ಸ್ಪರ್ಧಿಗಳಿಗೆ ಪದೇಪದೇ ಮನದಟ್ಟು ಮಾಡ್ತಾರೆ.ಅಡುಗೆ ಮನೆಯಲ್ಲಿ ಎಂದಿಗೂ ನಿರ್ಲಕ್ಷ್ಯ , ಸೋಮಾರಿತನಕ್ಕೆ ಸ್ಥಳ ಇರಲೇ ಬಾರದು .. ಇದನ್ನು ಅಳವಡಿಸ್ಕೊಂಡವರೆಲ್ಲರೂ ಮಾಸ್ಟರ್ ಶೆಫ್ಗಳೆ!
ಅಡುಗೆ ಮಾಡುವುದು ಅತ್ಯಂತ ಕಠಿಣ ಹಾಗು ಸುಲಭವಾದ ಸಂಗತಿ..
ಇದು ಒಂದು ಬಗೆಯಲ್ಲಿ ಮೆದುಳಿನ ವ್ಯಾಯಾಮ. ಅಡುಗೆ ಮಾಡುವವರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಹತ್ತಿರ ಬರದು . ಅದರಲ್ಲೂ ಮರೆವಿನ ಕಾಯಿಲೆಯಂತು ದೂರದೂರ ..ಯಾಕೆಂದ್ರೆ ಅಡುಗೆ ಮಾಡುವಾಗ ಸಾಮಾನ್ಯವಾಗಿ ಯಾವ್ಯಾವ ಪದಾರ್ಥಗಳನ್ನು ಬಳಸ ಬೇಕು, ಎಷ್ಟು ಪ್ರಮಾಣ, ಎಷ್ಟು ಹೊತ್ತು ಬೇಯಬೇಕು, ಹೀಗೆ ಹಲವಾರು ಸಂಗತಿಗಳು ಪ್ರಾಮುಖ್ಯತೆ ಗಳಿಸಿಕೊಳ್ಳುತ್ತದೆ. ಈ ಎಲ್ಲಾ ಅಂಶಗಳನ್ನು ಮೆದುಳು ನೆನಪಲ್ಲಿಟ್ಟುಕೊಳ್ಳುವುದು ಸಹಿತ ಒಂದು ಬಗೆಯ ವ್ಯಾಯಾಮ. ಇದು ನೂರು ಫಜಲ್ ಬಿಡಿಸಿದ್ರೆ ಸಿಗುವಂತಹ ಶಕ್ತಿ ದೊರಕಿಸುತ್ತದೆ.. ಸತ್ಯ ಕಣ್ರೀ.. ಇದನ್ನು ನಾನು ಹೇಳ್ತಾ ಇಲ್ಲ.. ಸರ್ವೇಗಳು ಸಾಬೀತು ಮಾಡಿವೆ..ಆದ್ದರಿಂದಲೇ ಅಂತ ಕಾಣುತ್ತೆ ಅಡುಗೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು ಹೆಚ್ಚು ಕಾಲ ಯಂಗಿ(young)ಗಳಾಗಿ ಉಳಿದಿರುತ್ತಾರೆ.. ಅಲ್ವ ವಿಕಾಸ್ , ರಣವೀರ್ :-).
ಕನ್ನಡ ಮೇರುನಟರಲ್ಲಿ ಒಬ್ಬರಾಗಿದ್ದ ಡಾ.ಅಂಬರೀಷ್ . ಅವರ ಜೀವನ ಕಥನದಲ್ಲಿ ತಮ್ಮ ತಾಯಿಯ ಬಗ್ಗೆ ಒಂದು ಅಂಶವನ್ನು ಹೇಳಿದ್ದರು.( ಅವರ ಜೀವನಕಥೆಯ ಪುಸ್ತಕದ ಸ್ವಲ್ಪಭಾಗ ಪ್ರೂಫ್ ನೋಡುವಾಗ ಸೌಭಾಗ್ಯ ನನಗೆ ದೊರಕಿತ್ತು ) ಅವರ ತಾಯಿ ರುಚಿಕರವಾಗಿ ಅಡುಗೆ ಮಾಡುವದರ ಜೊತೆಗೆ ಮಾಡಿದ ನಂತರ ಅಷ್ಟೊಂದು ಆಹಾರ ಪದಾರ್ಥಗಳನ್ನು ತಯಾರಿಸಿದ್ದರಾ ಎನ್ನುವಂತೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟು ಕೊಂಡಿರುತ್ತಿದ್ದರಂತೆ .. ನನ್ನ ಮನೆಯಲ್ಲಿ ಈಗ ಅಡುಗೆಯವರು ಇದ್ದಾರೆ.. ಅವರು ಮಾಡಿರುವುದೇನು ಅಂತ ಹರಡಿರುವ, ಅಲ್ಲಲ್ಲಿ ಬಿದ್ದಿರುವ ತರಕಾರಿ , ಈರುಳ್ಳಿ ಸಿಪ್ಪೆಗಳು ಹೇಳಿ ಬಿಡುತ್ತವೆ ಎಂದು ಹೇಳಿದ್ದರು.ಈ ವಿಷಯದಲ್ಲಿ ನನಗೆ ನಮ್ಮ ಅಮ್ಮನ ಬಗ್ಗೆ ಸಹ ಹೆಮ್ಮೆ ಆಗುತ್ತದೆ.. ಅವರು ಅಷ್ಟೇ ಅಡುಗೆ ಹಾಗು ಸ್ವಚ್ಛತೆ ಎರಡಕ್ಕೂ ಹೆಚ್ಚಿನ ಪ್ರಾಮಖ್ಯತೆ ನೀಡುತ್ತಾರೆ.
No comments:
Post a Comment