ಜಿಯೊ ಹಾಸ್ಟಾರ್ ನಲ್ಲಿ ಕ್ರಿಮಿನಲ್ ಜಸ್ಟಿಸ್ ಎನ್ನುವ ಸೀರಿಸ್
ಇದೆ. ಅದರಲ್ಲಿ ಕೋರ್ಟ್ ಕಥಾಹಂದರ ಇರುವ ಈ ಸೀರೀಸ್ ನಲ್ಲಿ ಪಂಕಜ್ ತ್ರಿಪಾಠಿ ಮುಖ್ಯ ಭೂಮಿಕೆಯಲ್ಲಿ
ನಟಿಸಿದ್ದಾರೆ. ನಾಲ್ಕು ಸೀಜನ್ ಇದೆ. ಭಿನ್ನ ಕಥೆಗಳು.
ಇದೇ ಓಟಿಟಿ ಯಲ್ಲಿ ಇಲ್ಲಿಗಲ್ ಎನ್ನುವ ಮತ್ತೊಂದು ವೆಬ್ ಸೀರೀಸ್ ಇದೆ. ಅದೂ ಸಹ ಕೋರ್ಟ್ ಸಂಬಂಧಿತ ಕಥೆ.
ಅದರ ಕಥೆ ಸಹ ತುಂಬಾ ಆಸಕ್ತಿದಾಯವಾಗಿದೆ. ಈ ಕೋರ್ಟ್ ಸೀರೀಸ್ ಬಗ್ಗೆ ಏಕೆ ಹೇಳೋಕೆ ಹೊರಟಿದ್ದೀನಿ
ಎಂದರೆ ಮುಖ್ಯವಾಗಿ ಟೀವಿ ಧಾರವಾಹಿಗಳಲ್ಲಿ ಟಿ.ಎನ್ . ಸೀತಾರಾಮ್ ಸರ್ ಬಳಿಕ ಹೆಚ್ಚು ಗಮನ ಸೆಳೆದಿರುವ ಲಾಯರ್ ಗಳು ಅಂದರೆ ಭಾರ್ಗವಿ ಎಲ್ ಎಲ್ ಬಿ ಯ ಭಾರ್ಗವಿ ಮತ್ತು ಅವರ ಮಾವ ಜೆ.ಪಿ ಪಾಟೀಲ್
ನಟನೆ ಅದ್ಭುತ.ಯಾವುದೇ ಧಾರವಾಹಿ ಆಗಿರಲಿ ಅದರ ಪಾತ್ರಧಾರಿಗಳ
ನಟನೆ ಅದ್ಭುತವಾಗಿರುತ್ತದೆ. ಭಾರ್ಗವಿಯ ಪಾತ್ರಧಾರಿಗಳು ಇದ್ಕೆ ಹೊರತಲ್ಲ ..ಅದ್ಭುತ ನಟನೆ..
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುವ ಸುವರ್ಣ ಗೃಹಮಂತ್ರಿ ರಿಯಾಲಿಟಿ ಶೋ ಅಂದಕಾಲತ್ತಿನಲ್ಲಿ ಉದಯ ವಾಹಿನಿಯಲ್ಲಿ ಇದೇ ಹೋಲಿಕೆಯ ಕಾರ್ಯಕ್ರಮಗಳು ಪ್ರಸಾರ
ಆಗುತ್ತಿತ್ತು. ಯಾವುದೇ ಬೇಸರ ಇಲ್ಲದೆ, ಆರಾಮವಾಗಿ ಎಲ್ಲರ ಜೊತೆ ನೋಡ ಬಹುದಾದ ಕಾರ್ಯಕ್ರಮ ಇದಾಗಿದೆ.
ಸಿಲ್ಲಿ ಲಲ್ಲಿಯ ರವಿಶಂಕರ್ ಹೋಸ್ಟ್ ಮಾಡುತ್ತಿದ್ದಾರೆ .