ಎನ್ಕರೇಜ್ ...

Image result for red flowers
ಬ್ಲಾಗ್ ಬರೆಯೋಕೆ ಆರಂಭಿಸಿ ಸುಮಾರು ಹತ್ತು ವರ್ಷಗಳು ಕಳಿದಿವೆ. ಆರಂಭದಿಂದಲೂ ನಾನು ಟೀವಿ ಮಾಧ್ಯಮದ ,ಅದರ ಕಾರ್ಯಕ್ರಮಗಳ ಬಗ್ಗೆ ಬರೆಯುತ್ತಾ ಬಂದಿದ್ದೇನೆ. ಆರಂಭದಲ್ಲಿ ನನಗೆ ನನ್ನ ಬ್ಲಾಗ್ ಹೆಚ್ಚು ಮಂದಿ ಓದಲಿ ಅನ್ನುವ ಆಸೆ  ಸಹಜವಾಗಿ ಇತ್ತು.. ಅದಕ್ಕಾಗಿ ಮಾಡಿದ ಕಸರತ್ತು ಅಷ್ಟಿಷ್ಟಲ್ಲ.. ಬ್ಲಾಗ್ ಅಂದ ಹೆಚ್ಚಿಸುವ ನಿಟ್ಟಿನಲ್ಲಿ  ಆಗ ನನ್ನ ಕಲೀಗ್ ಗಳು -  ವಿನ್ಯಾಸಕಾರರು ಆಗಿದ್ದ ಸತೀಶ್ ಕುಮಾರ್ ಮತ್ತು ಮಹಂತೇಶ್  ಇಬ್ಬರ ತಲೆ ತಿಂದು  ಅದರ ಬಗ್ಗೆ ಚರ್ಚಿಸುವುದು ಆಗಿನ ಬಹು ಮುಖ್ಯ ಕೆಲಸಗಳಲ್ಲಿ ಒಂದಾಗಿತ್ತು. ನನ್ನ ಬ್ಲಾಗ್ ನ ಆರಂಭ ಕಾಲದಲ್ಲಿ ಸುದ್ದಿ ಟೀವಿಯ ಎಡಿಟರ್ ಇನ್ ಚೀಫ್ ಆಗಿರುವ ಶಶಿಧರ್ ಭಟ್ ಅವರು ಸುವರ್ಣ ವಾಹಿನಿಯಲ್ಲಿದ್ದರು. ಅವರ ರಾಜಕೀಯ ವಿಶ್ಲೇಷಣೆ , ಸುದ್ದಿಯ ಸವಿಯು ಸಾಮಾನ್ಯರಿಗೆ     ತಿಳಿಯುವಂತೆ ಮಾಡಿದ ಅಗ್ಗಳಿಕೆ ಭಟ್ರಿಗೆ ಸೇರುತ್ತದೆ. ಆನಂತರ ಅವರು ಸುವರ್ಣ ನ್ಯೂ ಸ್  ಗೆ ಮುಖ್ಯಸ್ಥರಾಗಿದ್ದಾಗ ಅವರ ಕಮ್ರಿ ಬ್ಲಾಗ್ ಮೂಲಕ  ನನಗೆ ಪರಿಚಿತರಾದರು.. ಫೇಸ್ ಬುಕ್  ಫ್ರೆಂಡ್  ಸಹ  ಸರ್  ಆಗಿದ್ದಾರೆ. :-)  ವಿಷಯ ಅದಲ್ಲ  ನಾನು ಬ್ಲಾಗ್ ಲೋಕಕ್ಕೆ ಅಡಿ ಇಟ್ಟ  ಆರಂಭದಲ್ಲಿಯೇ  ಶಶಿ ಸರ್ ನನ್ನ ಪೋಸ್ಟ್ ಗಳಿಗೆ  ಪ್ರತಿಕ್ರಿಯೆ ಬರೆಯುತ್ತಿದ್ದರು. ನಾವು ನಿಮ್ಮ ಬ್ಲಾಗ್ ನೋಡೇ ಇಲ್ಲ, ನಿಮ್ಮ ಬರಹಗಳ ಬಗ್ಗೆ ಗೊತ್ತೇ ಇಲ್ಲ  ಎನ್ನುವ ಕಾಲದಲ್ಲಿ ಅವರು ನೀಡಿದ  ಎನ್ಕರೇಜ್ ಮರೆಯಲಾಗದ್ದು..ಅಂತಹ ಕಾಲದಲ್ಲಿ  ಪ್ರತಿಷ್ಠಿತ ಚಾನೆಲ್ ಮುಖ್ಯಸ್ಥರು ಕಮೆಂಟ್ ಬರೆಯೋದು ಅಂದ್ರೆ ಸರಳವಾದ ಸಂಗತಿ ಅಲ್ಲವೇ ಅಲ್ಲ. ಪತ್ರಕರ್ತರು  ಕೆಲಸದಲ್ಲಿ ಇರೋದು ಎಷ್ಟು ಸತ್ಯವೋ ಕೆಲಸ ಕಳೆದು ಕೊಳ್ಳುವುದು ಅಷ್ಟೇ ಸತ್ಯ.. [ಈಗ ನಾನು ನಿರುದ್ಯೋಗಿ ಪರ್ವದಲ್ಲಿ ಇದ್ದೇನೆ.. ಹೋಪ್ ಫಾರ್ ಬೆಸ್ಟ್ ನನ್ನ ಪ್ರತಿಭೆ ಯಿಂದ ಅಲ್ಲದಿದ್ದರೂ ಈ ರಂಗದಲ್ಲಿ ನಾನು ಪಟ್ಟ ಶ್ರಮದ ಪ್ರತಿಫಲವಾಗಿ ನನಗೂ ಕೆಲಸ ಸಿಗಬಹುದೇನೋ :-) ]
ನಮ್ಮ ಭಟ್ರು ಸಹ ತಮ್ಮ ವೃತ್ತಿ ಬದುಕಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ.ಅವರು ನಿರುದ್ಯೋಗ ಪರ್ವಕಾಲದ ಸವಿ ಬೇಕಾದಷ್ಟು ಸವಿದಿದ್ದಾರೆ :-).. ಈಗ ಅವರು  ಸುದ್ದಿ ಟೀವಿ ಚೀಫ್  ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ..
ನನ್ನ ಬ್ಲಾಗ್ ಓದಿ ಅದಕ್ಕೆ ಕಮೆಂಟಿಸಿದ್ದ ಶಶಿ ಸರ್ ಬಗ್ಗೆ ನಾನು ಸದಾ ಕೃತಜ್ಞಳಾದ್ದೇನೆ.. ಅವರು ಪ್ರಗತಿಪರರು-ಚಿಂತಕರು, ಆದರೇ ಅವ್ಯಾವುದೂ ನಾನು ಅಲ್ಲ ಆದರೇ ಅವರ ಬರಹಗಳಲ್ಲಿನ ಸಂವೇದನೆ ಮನಕ್ಕೆ ಖುಷಿ ಕೊಡತ್ತದೆ.. ಇತ್ತೀಚೆ ಗೋ ಹತ್ಯ ನಿಷೇಧ ಕಾಯ್ದೆ  ಜಾರಿಯಾದ ಸಮಯದಲ್ಲಿ , ಅದರಲ್ಲೂ  ಶಶಿ ಸರ್ ಇತ್ತೀಚಿನ  ಬರಹಗಳಲ್ಲಿ ನನಗೆ  ಹೆಚ್ಚು ಆಪ್ತವಾಗಿದ್ದು.....

ನನ್ನ ಅಮ್ಮ ತನ್ನ ಇದುವರೆಗಿನ ಬದುಕಿನಲ್ಲಿ ಅತಿ ಹೆಚ್ಚು ಸಮಯ ಕಳೆದಿದ್ದು ಕೊಟ್ಟಿಗೆಯಲ್ಲಿ. ಅವಳಿಗೆ ಕೊಟ್ಟಿಗೆಯೆ ಮನೆ. ಆಕೆ ಕೊಟ್ಟಿಗೆಯಲ್ಲಿರುವ ಹಸು ಕರುಗಳ ಜೊತೆ ಮಾತನಾಡುತ್ತಾಳೆ, ಆಕೆ ಹೇಳಿದ್ದು ಹಸು ಕರುಗಳಿಗೆ ಅರ್ಥವಾಗುತ್ತಿದೆಯೋ ಇಲ್ಲವೋ, ಆದರೆ ಹಸು ಕರುಗಳ ಭಾಷೆ ಅವಳಿಗೆ ಅರ್ಥವಾಗುತ್ತದೆ. ನಿನ್ನೆ ರಾತ್ರಿ ನಾನು ಪ್ರೈಮ್ ನ್ಯೂಸ್ ಮಾಡುತ್ತಿದ್ದೆ. ಅಮ್ಮ ಟೀವಿಯ ಮುಂದೆ ಕುಳಿತಿದ್ದಳು. ಅವಳಿಗೆ ಪ್ರತಿ ದಿನ ಮಗನನ್ನು ನೋಡುವುದು ತುಂಬಾ ಸಂತೋಷದ ಕೆಲಸ. ಆಗಲೇ ಕೊಟ್ಟಿಗೆಯಲ್ಲಿದ್ದ ಅವಳ ಮಗಳಿಗೆ ಆರೋಗ್ಯ ಕೈ ಕೊಟ್ಟಿತು. ಅಮ್ಮ ಅವಳಿಗೆ ಬೆಲ್ಲ ನೀಡಿದಳಂತೆ. ಬೆಲ್ಲ ತಿಂದು ಸ್ವಲ್ಪ ಹೊತ್ತಿಗೆ ಆಕೆ ಅಸು ನೀಗಿದಳು. ನನ್ನ ನ್ಯೂಸ್ ಮುಗಿಯುವ ಹೊತ್ತಿಗೆ ಅಮ್ಮ ದುಃಖದಲ್ಲಿದ್ದಳು. ಅವಳ ಕಣ್ಣಲ್ಲಿ ನೀರು. ನಾನು ಫೋನ್ ಮಾಡಿ ಸಮಾಧಾನ ಹೇಳಿದೆ. ಅಯ್ಯೋ ಏನು ಮಾಡುವುದು ಬಿಡೋ. ಆಕೆಯೂ ಮಕ್ಕಳನ್ನು ಕಂಡಳು. ಮೊಮ್ಮಕ್ಕಳನ್ನು ಕಂಡಳು. ವಯಸ್ಸಾಗಿದ್ದರೂ ಅವಳನ್ನು ಕಳುಹಿಸುಕೊಡಲು ನಾನು ಸಿದ್ಧನಿರಲಿಲ್ಲ. ಅಮ್ಮ ದುಃಖದಲ್ಲೇ ಇದ್ದಳು. ಅವಳು ಅಳುತ್ತಿರುವುದು ೪೦೦ ಕಿಲೋ ಮೀಟರ್ ದೂರದಲ್ಲಿರುವ ನನಗೆ ಕಾಣುತ್ತಿತ್ತು.

ಎವರೆಸ್ಟ್

Image result for flowers
ಚಾನೆಲ್  ಗಳು  ಅದರಲ್ಲಿ ಪ್ರಸಾರ  ಆಗುವ ಕಾರ್ಯಕ್ರಮಗಳು  .... ಆ ಕಾರ್ಯಕ್ರಮಗಳ ನಿರೂಪಕರು,  ಅವರು, ಇವರು  ಎಲ್ಲರೂ ತಮ್ಮದೇ ಅದ ರೀತಿಯಲ್ಲಿ ಕಷ್ಟ ಪಟ್ಟಿರುತ್ತಾರೆ ಅದರ ಯಶಸ್ಸಿಗಾಗಿ....
 ವಿಷಾದದ ಸಂಗತಿ ಅಂದ್ರೆ ನಿರೂಪಕರು ಬೆಳಕಿಗೆ ಬಂದಷ್ಟು ಸುಲಭವಾಗಿ ಆ ಕಾರ್ಯಕ್ರಮದ ಬೆನ್ನೆಲುಬಾಗಿರುವ ತಾಂತ್ರಿಕ  ವರ್ಗ, ಪರದೆಯ ಹಿಂದಿನ ಶ್ರಮಜೀವಗಳು ಎಂದಿಗೂ ಬೆಳಕಿಗೆ ಬರುವುದೇ ಇಲ್ಲ.
ಬಿಡಿ ಆ ಖೇದಕರ ಸಂಗತಿ ಎಲ್ಲಡೆ ಇದ್ದದ್ದೇ  ನೀಲಾಂಜನದ ಅಡಿಯಲ್ಲಿ  ಕತ್ತಲು ಇದ್ದಂತೆ.

ಮನುಷ್ಯನ ಕನಸುಗಳು ಅನೇಕ.. ಕೆಲವು ಕಷ್ಟಪಟ್ಟು ನನಸು ಮಾಡಿಕೊಂಡರೆ ಒಂದಷ್ಟು ಹಾಗೆ ಕರಗಿ ಬಿಡುತ್ತದೆ... ಇದಕ್ಕೆ ಡಿಸ್ಕವರಿ ವಾಹಿನಿಯಲ್ಲಿ ಪುನರ್ ಪ್ರಸಾರ ವಾಗುತ್ತಿರುವ Man vs. Wild ನ  Bear Grylls ಹೊರತಲ್ಲ. ಇತ್ತೀಚಿನ ಕೆಲವು  ತಿಂಗಳುಗಳ ಹಿಂದೆ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾಗ  ಻ಡಿಯಲ್ಲಿ ಫೆಸ್ ಬುಕ್ ನಲ್ಲಿ Bear Grylls  ಅವರ ಜೊತೆಯಲ್ಲಿ ಚಾಟ್ ಮಾಡಿದ್ದ ಭಾರತೀಯ ಮಕ್ಕಳ ಕೇಳುತ್ತಿದ್ದ ಪ್ರಶ್ನೆಗಳು, ಅದಕ್ಕೆ  ಈ ಸಾಹಸಿಯ  ಉತ್ತರ ಆಸಕ್ತಿಭರಿತವಾಗಿತ್ತು..ಈಗ  ನೀವು ಆಯ್ಕೆ ಮಾಡಿಕೊಂಡಿರುವ ರಂಗ ಹೊರೆತು ಪಡಿಸಿದರೆ ನಿಮಗೆ ಯಾವುದರ ಬಗ್ಗೆ ಆಸೆ ಇತ್ತು, ಏನು ಮಢಬೇಕೆಂಬ  ಆಸಕ್ತಿ ಇತ್ತು ಎಂದು ಕೇಳಿದ್ದಕ್ಕೆ Bear Grylls  ತಮಗೆ ಎವರೆಸ್ಟ್ ಶಿಖರ ಹತ್ತಬೇಕೆಂಬ ಕನಸಿತ್ತು ಎಂದು ಉತ್ತರಿಸಿದ್ದರು..
ಎವರೆಸ್ಟ್ ಅದೆಷ್ಟು ಸಾಹಸಿಗಳ ಕನಸಿನ ಚಾರಣ...

ಪ್ರಿಯ-ಅಪ್ರಿಯ


 Image result for yoga quotes


ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆ ಅವರು ರಾಜೀನಾಮೆ ಕೊಟ್ಟ ಸಂಗತಿಯಿಂದ ಬಹಳ ಖೇದವಾಗಿದೆ. ಅತಿ ಹೆಚ್ಚು ಮನ್ನಣೆ ಪಡೆದ ಕ್ರಿಕೆಟ್ ಆಟದ ಮಂದಿಯ ರಾಜಕೀಯ, ಅಬ್ಬರದ ಮುಂದೆ ಅನಿಲ್ ರಂತಹ ಡೆಡಿಕೇಟೆಡ್ ಆಟಗಾರರು, ಗುರುಗಳು ಮಂಕಾಗುತ್ತಿದ್ದಾರೆ ಅನ್ನುವುದಂತೂ ಸತ್ಯ.

ಹೊಸ ಚಾನೆಲ್ ಗಳು ಆರಂಭವಾದಾಗ ಅದನ್ನು ಆರಂಭಿಸಿದವರ, ಮುನ್ನಡೆಸುತ್ತಿರುವವರ ಬಗ್ಗೆ ಒಂದು ಬಗೆಯ ಕುತೂಹಲವಿರುವುದು ಸಹಜ.ತಮ್ಮ ಮಾತು .. ಮಾತು ಮತ್ತು ಮಾತಿನಿಂದ.. ಚರ್ಚೆಯಿಂದ ವೀಕ್ಷಕರ ಗಮನ ಸೆಳೆದಿರುವ ಆರ್ನಬ್ ಗೋಸ್ವಾಮಿ ಅವರ ರಿಪಬ್ಲಿಕ್ ಚಾನೆಲ್ ಬಗ್ಗೆ ಸಹ ಕುತೂಹಲ ವೀಕ್ಷಕರಿಗೆ ಇತ್ತು...ಅವರನ್ನು ಬಲಪಂಥೀಯ ಎನ್ನುವ ಮಂದಿ ಸಹಿತ ಕದ್ದುಮುಚ್ಚಿ ನೋಡುವ ಮೂಲಕ ಆ ಚಾನೆಲ್, ಅವರ ಮಾತು, ಚರ್ಚೆಗೆ ಮರುಳಾಗಿದ್ದಾರೆ ಎನ್ನುವ ಸುದ್ದಿಯಿದೆ. ಯಾವುದೇ ವ್ಯಕ್ತಿಯನ್ನು ಹೊಗಳುವುದರಿಂದ ಅವರಿಗೆಷ್ಟು ಜನಪ್ರಿಯತೆ ಸಿಗುತ್ತದೆಯೋ ಅಷ್ಟೇ ಜನಪ್ರಿಯತೆ ತೆಗಳುವುದರಿಂದಲೂ ಸಿಗುತ್ತದೆ. ಆರ್ನಬ್ ಚಾನೆಲ್ ಬಗ್ಗೆ ಸಾಕಷ್ಟು ವಾಟ್ಸಪ್ ಚಿತ್ರಗಳು ಹೊರಬಂದು ... ಬಂದು... ವೀಕ್ಷಕರಿಗೆ ಆತ ಸಂಥಿಂಗ್ ಸ್ಪೆಷಲ್ ಅಂತ ಅನ್ನಿಸುವಂತೆ ಮಾಡಿದ್ದು ಸಹ  ಆರ್ನಬ್ ಅವರ ಪ್ರಿಯ-ಅಪ್ರಿಯ ಮಂದಿ :-) 

ಸರಳ ಜೀವನ

Image result for orange flowers


ಈಗ ಚಾನೆಲ್ ಗಳ ಭರಾಟೆ..ನ್ಯಾಷನಲ್ ಚಾನೆಲ್  ಪ್ರತಿಯೊಂದು ಭಾಷೆಯಲ್ಲೂ ಆರಂಭಗೊಂಡು ವಿಕ್ಷಕರು ಅವರು ನೀಡುವ ಅಲ್ಪಾಹಾರವನ್ನು ಸೇವಿಸುತ್ತಾ ಜೀವಿಸುತ್ತಿದ್ದರು. ಯಾವಾಗ ಕೇಬಲ್ ಕಾಲ ಆರಂಭ ಆಯ್ತೋ ಅಂದಿನಿಂದ ಚಾನೆಲ್ ಗಳ ಅಂದಿನಿಂದ ವೀಕ್ಷಕರಿಗೆ ಊಟ ಹೆಚ್ಚಾಗಿ ಅಜೀರ್ಣ ಜಾಸ್ತಿಯಾಗಿ ಅತ್ತ ಹೋಗಲಾಗದೆ, ಇತ್ತ ಇರಲೂ ಸಾಧ್ಯವಾಗದೆ ಬದುಕಿದ್ದಾರೆ. ಅಕಟಕಟಾ... !!!
ಆದರೇ ಈ ರೀತಿಯ ಚಾನೆಲ್ ಗಳ ನಡುವೆ ಸರಳವಾಗಿ ಸಿಹಿಯಾಗಿ ಸರಳ ಜೀವನ್ ಎಂಬ  ಕನ್ನಡ ಚಾನೆಲ್ ತನ್ನದೇ ಅಸ್ತಿತ್ವ ಪಡೆದಿದೆ. ತುಂಬಾ ಸರಳ ಕಾರ್ಯಕ್ರಮಗಳು, ಸರಳ ಬದುಕಿನ ಬಗ್ಗೆ ತಿಳಿಸುವ, ಸ್ವಾದಿಷ್ಟ ಸಸ್ಯಹಾರಿ ಅಡುಗೆ ಬಗ್ಗೆ ಹೇಳುವ ಈ ಚಾನೆಲ್ ಎಲ್ಲಾ ಸಮಯದಲ್ಲೂ ವೀಕ್ಷಿಸುವಂತೆ ಕಾರ್ಯಕ್ರಮ ಸಿದ್ಧ ಮಾಡಿದ್ದಾರೆ. ಸರಳ ವಾಸ್ತು ಇಷ್ಟ ಪಡುವವರಿಗೂ ಇದು ಉತ್ತಮ ಆಯ್ಕೆ..ಇದರ ಲೊಗೊ ಸಹ ಸರಳವಾಗಿಯೇ ಇದೆ.. ಕಾರ ಮಸಾಲೆ ಊಟ ಮಾಡಿದವರಿಗೆ ಈದು ಸಪ್ಪೆ ಸಪ್ಪೆ ಅನ್ನಿಸ ಬಹುದು.. ಆದರೇ ಒಮ್ಮೆ ಸರಳ ಬದುಕನ್ನು ಅಭ್ಯಾಸ ಮಾಡಿಕೊಂಡರೆ ಬದುಕಲ್ಲಿ ನೊ ಟೆನ್ಷನ್..

ಬಾಹುಬಲಿ !

Image result for red flower images

 ಸರೆಗಮಪ ಲಿಲ್ ಚಾಂಪ್  ಅತ್ಯಂತ ಜನಪ್ರಿಯತೆ ಹೊಂದಿರುವ ರಿಯಾಲಿಟಿ ಶೋ..ಜೀ ಹಿಂದಿ ವಾಹಿನಿಯಲ್ಲಿ  ಪ್ರಸಾರ ಆಗುತ್ತಿರುವ ಈ ಕಾರ್ಯಕ್ರಮದ ಮೂಲಕ ಅಪಾರ ಸಂಖ್ಯೆಯಲ್ಲಿ ಪ್ರತಿಭೆಗಳು ಮುಖ್ಯವಾಹಿನಿಗೆ ಸೇರುತ್ತಿದ್ದಾರೆ. ಇವರಲ್ಲಿ ಯಾರ ಅದೃಷ್ಟ ಹೇಗಿದೆಯೋ ಗೊತ್ತಿಲ್ಲ ಆದರೇ ಪ್ರತಿಭಾವಂತ ಮಕ್ಕಳು ವೀಕ್ಷಕರ ವೀಕೆಂಡ್ ಗೆ ಅರ್ಥ ನೀಡಿದ್ದಾರೆ.
ಹಿಂದಿಯಲ್ಲಿ ಈ ಕಾರ್ಯಕ್ರಮ ನಿರೂಪಣೆ ಮಾಡುವ  ಆದಿತ್ಯ ನಾರಾಯಣ್ ಮಾತಿನ ಶೈಲಿ, ಲವಲವಿಕೆ, ಅಲ್ಲಿರುವ ಪ್ರತಿಯೋರ್ವ ಸಾಧಕ ತೀರ್ಪುಗಾರರನ್ನು ಛೇಡಿಸುವ ರೀತಿ  ತುಂಬಾ ಇಷ್ಟವಾಗುತ್ತದೆ. ನಿರೂಪಣೆ ಅಂದ್ರೆ ಕಿರುಚಲೇ ಬೇಕು, ಫಿಲಾಸಫರ್ ರೀತಿಯಲ್ಲಿ ಇರಬೇಕು ಎಂದೇನೂ ಇಲ್ಲ.. ಈ ಹುಡುಗ  ತಮ್ಮ ನಿರೂಪಣೆ ಮೂಲಕ ಹೆಚ್ಚಿನ ಸಂಖ್ಯೆಯ ವೀಕ್ಷಕರನ್ನು ಆಕರ್ಷಿಸಿದ್ದಾರೆ ಅನ್ನೋದಂತೂ ಸತ್ಯ.
ಹಿಮೇಶ್ ರೇಶ್ಮಿಯಾ, ಜಾವೇದ್ ಬಾಹುಬ(ಅ)ಲಿ ;-), ನೇಹ ಕಕ್ಕರ್ ತೀರ್ಪು ಅವರ ಕಾರ್ಯಕ್ರಮ ಹಿಡಿದಿಡುವ ರೀತಿ ಎಲ್ಲವೂ ಚಂದ..
ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ಮಗುವು ಚನ್ನಾಗಿ ಹಾಡ್ತಾರೆ.. ಆದರೇ ಷಣ್ಮುಗ ಪ್ರಿಯ, ಜಯಸ್ ಕುಮಾರ್ ಸ್ವಲ್ಪ ಜಾಸ್ತಿ ಇಷ್ಟವಾದ ಮಕ್ಕಳು..  

ವೀಕೆಂಡ್

ಕೆಲವು ಕಾರ್ಯಕ್ರಮಗಳು ಜನಪ್ರಿಯತೆಯನ್ನು ಕಳೆದುಕೊಳ್ಳುವುದೇ ಇಲ್ಲ. ಅಂತಹ ಕಾರ್ಯಕ್ರಮಗಳಲ್ಲಿ ವೀಕೆಂಡ್ ವಿತ್ ರಮೇಶ್ ಸಹ ಒಂದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಈ ಕಾರ್ಯಕ್ರಮದ ಈ ಬಾರಿಯ ಸರಣಿ ತುಂಬಾ ಇಷ್ಟವಾಯ್ತು. ಸಾಮಾನ್ಯವಾಗಿ ಸಿನಿ  ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಂದಿಯನ್ನು ಹೆಚ್ಚಾಗಿ ಕರೆಯುವ ಪರಿಪಾಠ ಇರುವ ಈ ರಿಯಾಲಿಟಿ ಟಾಕ್ ಶೋ ನಲ್ಲಿ ಈ ಬಾರಿ ಎಲ್ಲಾ ಕ್ಷೇತ್ರದ ಸಾಧಕರನ್ನು ಕರೆಯಿಸುವುದರ ಮೂಲಕ ತಾವು ಭಿನ್ನವಾಗಿ ಜನರಮುಂದೆ ಬಂದಿದ್ದೇವೆ ಎಂದು ವೀಕ್ಷಕರಿಗೆ ತಿಳಿಸಿ ಕೊಟ್ಟರು ಈ ಟೀಮ್. ರಮೇಶ್ ಅರವಿಂದ್ ಅವರ ನಿರೂಪಣೆ.. ಅವರ ಸ್ಟೈಲಿಷ್ ವರ್ತನೆ.. ಜ್ಞಾಪಕ ಎಲ್ಲವೂ ದಿನೇದಿನೇ ಪ್ರಜ್ವಲವಾಗುತ್ತಲೇ ಇದೆ.. ನಿಮ್ಮ ಸೌಂದರ್ಯದ ರಹಸ್ಯವೇನು ರಮೇಶ್ ಅರವಿಂದ್ ;-)
ಈ ಬಾರಿ  ದೇವೇ ಗೌಡ್ರು, ಸಂತೋಷ್ವಿ ಹೆಗ್ಡೆ, ಡಾ.ವಿಜಯ್  ಸಂಕೇಶ್ವರ್, ಬಿ. ಜಯಶ್ರೀ, ಕಾಶಿನಾಥ್, ಕಣ್ಣನ್ ಮಾಮ, ಶೃತಿ ಸ್ವಲ್ಪ ಜಾಸ್ತೀನೆ ಇಷ್ಟ ಆದ್ರೂ.. ವೀಕೆಂಡ್ ಕಾರ್ಯಕ್ರಮಕ್ಕಾಗಿ ಕಾಯುವಂತೆ ಮಾಡುವ ಕೆಲವು ಶೋಗಳಲ್ಲಿ ರಮೇಶ್ ಮತ್ತು ಟೀಮ್ ನಡೆಸಿಕೊಡುವ ವೀಕೆಂಡ್ ಸಹ ಒಂದು...