ಅತ್ಯಂತ ಸುಂದರವಾದ ಕಾರ್ಯಕ್ರಮಗಳಲ್ಲಿ ಸೋನಿ ವಾಹಿನಿಯ ಇಂಡಿಯ ಐಡಲ್ ಜೂನಿಯರ್ ಸಹ ಸೇರ್ಪಡೆ ಆಗಿದೆ. ಭಾರತದೆಲ್ಲೆಡೆಯಿಂದ ಬಂದ ಪ್ರತಿಭೆಗಳ ಒಂದು ಅಪರೂಪದ ಸಂಗಮ ಅದು. ಪ್ರತಿವಾರ ತಪ್ಪದೆ ನೋಡಲೇ ಬೇಕು ಎಂದು ಆಸೆ ಹುಟ್ಟಿಸುವ ಕಾರ್ಯಕ್ರಮ. ಅದರಲ್ಲಿ ಕನ್ನಡದ ಶ್ರೀಲಕ್ಷ್ಮಿ ಅತ್ಯುತ್ತಮವಾಗಿ ಹಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಅಕೆ ಈಗ ಎಲಿಮಿನೇಟ್ ಆಗಿದ್ದಾಳೆ ಎನ್ನುವ ಸುದ್ದಿಯನ್ನು ಈಗಷ್ಟೇ ಓದಿದೆ. ಬಿಡಿ. ಎಲ್ಲರೂ ಕೊನೆ ಸುತ್ತಿನ ತನಕ ಇರಬೇಕಿಲ್ಲ. ಆದರೆ ಆಕೆ ಬಾಟಮ್ ತ್ರೀ ತನಕ ಬಂದಿದ್ದು ಅತ್ಯಂತ ಹೆಮ್ಮೆಯ ಸಂಗತಿ. ಸೋನಾಕ್ಷಿ, ಸಲೀಮ್, ಕುನಾಲ್ ಅವರೊಂದಿಗೆ ಹುಸೇನ್, ಆಶಾ ನೇಗಿ ಅವರ ಒಂದು ಟೀಮ್ ಚಂದ . ಮುಖ್ಯವಾಗಿ ಯಾವ ಕಡೆಯಿಂದ ಬಂದಿರಲಿ ಆದರೆ ಪ್ರತಿಭೆಗಳು ಉಜ್ವಲವಾಗಿ ಬೆಳಗುವುದು ಬಹಳ ಮುಖ್ಯ. ಮತ್ತೊಂದು ಸಂಗತಿ ಅಂದ್ರೆ ಇತ್ತೀಚಿಗೆ ಕ್ರೀಡಾಪಟು ವೀರೇಂದ್ರ ಸೆಹ್ವಾಗ್ ಅವರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಓ ಪಾಲನ್ಹಾರೆ ನಿರ್ಗುಣ ಔರ್ ನ್ಯಾರೆ , ತುಮಾರೆ ಬಿನ್ ಹಮಾರ ಕೌನ್ ನಹೀ . ಅಲ್ಲಿನ ಸ್ಪರ್ಧಿಗಳು ಹಾಡಿದ್ದ ಆ ಹಾಡು ಅತ್ಯಂತ ಖುಷಿ ಕೊಟ್ಟಿತ್ತು. ಹಿಂದಿ ಭಾಷೆ ಬರದೆ ಇದ್ರೂ ಶ್ರೀ ಲಕ್ಷ್ಮಿ ಚಂದ ಹಾಡ್ತಾಳೆ ಎನ್ನುವ ಮಾತನ್ನು ತೀರ್ಪುಗಾರರು ಸದಾ ಹೇಳೋರು. ಆದರೆ ಸಂಗೀತಕ್ಕೆ ಭಾಷೆ ಅನ್ನೋದು ಇಲ್ಲ. ಆದ್ದರಿಂದ ಆ ಹಿಡಿತ, ಆ ಟೈಮಿಂಗ್ ಎಲ್ಲವೂ ಹಿಡಿತಕ್ಕೆ ಬರುವಂತೆ ಸಾಧನೆ ಮಾಡಿರುತ್ತಾರೆ. ನನ್ನ ಶಾಲಾ- ಕಾಲೇಜ್ ಸಮಯದಲ್ಲಿ ಸ್ಪರ್ಧೆಗಳಿಗೆ ಹೋಗುವಾಗ (ಗ್ರೂಪ್ ಸಾಂಗ್ ) ಒರಿಯ, ಬೆಂಗಾಲಿ , ಅಸ್ಸಾಮಿ ಹೀಗೆ ಬರದ, ಗೊತ್ತಿಲ್ಲದ ಭಾಷೆಗಳ ಹಾಡುಗಳು ಹೆಚ್ಚಾಗಿರ್ತಾ ಇದ್ವು ಅಮ್ಮನ ಹೇಳಿಕೊಟ್ಟ ಹಾಡುಗಳಲ್ಲಿ ಹಮ್ ಕೊ ಮನ್ ಕಿ ಶಕ್ತಿ ದೇನ ಮನ್ ವಿಜಯ್ ಕರೋ ದೂಸುರೊಂಕಿ ಜೈಸೆ ಪೆಹಲೆ ಖುದ್ಕೋ ಜೈ ಕರೆ, ಆಲೋಕಿತ್ ಪಥ್ ಕರೋ ಹಮಾರ ಹೇ ಜಗಕೆ ಅಂತರಯಾಮಿ. ಆ ಹಾಡು ಆಲಿಸುವಾಗ ಈ ಹಾಡಲ್ಲವೂ ನೆನಪಿಗೆ ಬಂತು.
ಅಂಡ್ ಟೀವಿ (& tv ) ಯಲ್ಲಿ ಹಿಮೇಶ್ ರೇಷ್ಮಿಯ, ಸುನಿಧಿ, ಮಿಕ, ಶಾನ್ ಅವರ ನೇತೃತ್ವದಲ್ಲಿ ದಿ ವಾಯ್ಸ್ ಆಫ್ ಇಂಡಿಯಾ ರಿಯಾಲಿಟಿ ಷೋ ಪ್ರಸಾರ ಆಗ್ತಾ ಇದೆ. ಹೊಸ ಚಾನೆಲ್ ಇದು. ಆದರೆ ಹಳೆಯ ಚಾನೆಲ್ ಗಳ ಎದುರು ಗೆಲ್ಲಲು ಬೇಕಾದ ಕಸರತ್ತು ಸರಿಯಾದ ಕ್ರಮದಲ್ಲಿ ಸಾಗಿಸುತ್ತಿದೆ. ಹೊಸ ಪ್ರತಿಭೆಗಳ ಸಂಗಮ. ಈ ಕಾರ್ಯಕ್ರಮ ವೀಕ್ಷಿಸುವಾಗ ಭಾರತದಲ್ಲಿ ಅದೆಷ್ಟು ಪ್ರತಿಭೆಗಳು ಅಡಗಿ ಕುಳಿತಿವೆ, ಮತ್ತಿನ್ನೆಷ್ಟು ಪ್ರತಿಭೆಗಳು ಹುಟ್ಟುತ್ತವೆ-ತ್ತಿವೆ.. ಎನ್ನುವ ಹೆಮ್ಮೆ ಆಗುತ್ತದೆ. ಅತ್ಯಂತ ಸುಂದರ ಕಾರ್ಯಕ್ರಮ. ಈಗಾಗಲೇ ಎದ್ದು- ಗೆದ್ದಿರುವ ಚಾನೆಲ್ ನೋಡಲು ಇಷ್ಟ ಪಡದ ನಮ್ಮ ಮನೆಯ ರೆಬೆಲ್ ಶಿಲ್ಪ ಸಂತೋಷ್ ಈಗ ಈ ಒಂದು ಈ ಕಾರ್ಯಕ್ರಮ ತಪ್ಪದೆ ನೋಡೋದಲ್ಲದೆ , ನಮಗೂ ಆ ಒಂದು ಅಭ್ಯಾಸ ಮಾಡಿದ್ದಾಳೆ. ಅದಕ್ಕಿಂತ ಸದಾ ಧಾರವಾಹಿ ಅಂತ ಅಂಟಿಕೊಂಡು ಕೂತ ಅವರ ಅತ್ತೆಗೂ ಈ ಚಾನೆಲ್ ನ ಈ ಕಾರ್ಯಕ್ರಮದ ಹುಚ್ಚು ಹಚ್ಚಿಸಿ ಆಕೆ ವಾರಾಂತ್ಯಕ್ಕೆ ಕಾಯುವಂತೆ ಮಾಡಿದ್ದಾಳೆ. ಹೆಣ್ಣು ಮನಸ್ಸು ಮಾಡಿದರೆ ಏನ್ ಬೇಕಾದ್ರೂ ಮಾಡ ಬಹುದು ಎನ್ನುವುದಕ್ಕೆ ಬೇಕಾದರೆ ಇದನ್ನು ಸಹ ಉದಾಹರಣೆಯಾಗಿ ತೆಗೆದು ಕೊಳ್ಳ ಬಹುದು. :-)
ಕಲರ್ ವಾಹಿನಿಯಲ್ಲಿ ಪ್ರಸಾರ ಆಗುವ ಝಲಕ್ ದಿಕ್ಲಾಜ ಕಾರ್ಯಕ್ರಮ ವೀಕ್ಷಿಸುವಾಗ ಸ್ಪರ್ಧಿ ಒಬ್ಬರನ್ನು ಕಂಡಾಗ ಈಕೆಯನ್ನು ಎಲ್ಲೋ ನೋಡಿದ್ದೇನೆ ಅಂತ ಪದೇ ಪದೇ ಅನ್ನಿಸಿತ್ತು. ಆಕೆ ಶಿಲ್ಪಶೆಟ್ಟಿ ತಂಗಿ ಶಮಿತಾ ಅಂತ ನನ್ನ ಅಣ್ಣ ರವಿ ಹೇಳಿದಾಗ ಅರೆ ಹೌದಲ್ವ ಅಂತ ಅನ್ನಿಸಿತ್ತು. ಕರಾವಳಿ ಸುಂದರಿ, ಕನ್ನಡ ಮೂಲಕ ಬೆಡಗಿ ಹೀಗೆ ವರ್ಣಿಸುವ ವಾಡಿಕೆ ಸಿನಿಮಾ ನ್ಯೂಸ್ ಬರೆಯುವಾಗ :-) ಶಮಿತಾ ಸ್ವಲ್ಪ ಹೆಚ್ಚೇ ಗಂಭೀರ ಎಂದು ಆಕೆಯ ಜೊತೆಗಾರ ಡ್ಯಾನ್ಸರ್ ಹೇಳಿದ್ದಾರೆ. ಅದು ರಕ್ತಗತವಾಗಿ ಬಂದಿರುತ್ತದೆ ಬಿಡಿ. ಶಮಿತಾ ಅವರ ನಟನೆಯ ಜಹರ್ ಹಾಡು ಅಗರ್ ತುಮ್ ಮಿಲ್ ಜಾವೋ ಜಮಾನ ಚೋಡ್ ದೇಂಗೆ ಹಮ್ ಸಿನಿ ಸಂಗೀತ ಪ್ರೇಮಿಗಳನ್ನು ಬಹಳ ಕಾಡಿದ ಹಾಡು . ನನ್ನ ಅವ್ವಲ್ ನಂಬರ್ ನಲ್ಲಿ ಅದು ಒಂದಾಗಿದೆ. ಕರಣ್ ಜೋಹರ್, ಶಾಹೀದ್ ಕಪೂರ್, ಮನೀಷ್ ಪೌಲ್, ಗಣೇಶ್ ಹೆಗ್ಡೆ, ಲೌರೆನ್.
ಬಾಲಿವುಡ್ ಕೊರಿಯಾಗ್ರಾಫರ್, ಸಿಂಗರ್, ಅದೂ ಇದು ಅಂತ ಹೆಸರು ಮಾಡಿಕೊಂಡಿರುವ ಕನ್ನಡ ಮೂಲದ ತುಳು ಮ್ಯಾನ್ ಗಣೇಶ್ ಹೆಗ್ಡೆ ಬಗ್ಗೆ ಹೇಳೋದು ಏನೂ ಇಲ್ಲ ಯಾಕೇಂದ್ರೆ ಸಾಧಕರ ಬಗ್ಗೆ ಹೇಳೋದು ಏನಿದೆ.. ಮತ್ತಷ್ಟು ಸಾಧನೆ ಮಾಡಿ ಅಂತ ಹಾರೈಸೋದು ಅಷ್ಟೇ.
ಕರಣ್ ಅವರು ನನಗೆ ಸಾಕಷ್ಟು ನೆನಪಿಗೆ ಬಂದಿದ್ದು ಅನುಷ್ಕ ಶರ್ಮ ಅವರು ಟ್ವೀಟ್ ಓದಿದಾಗ. ಅದಕ್ಕೆ ಕಾರಣ ಇದೆ, ಭಾರತದ ಹೆಮ್ಮೆ ಡಾ. ಎಪಿಜೆ ಅಬ್ದುಲ್ ಕಲಾಮ್ ಅವರ ಹೆಸರನ್ನು ತನಗಿಷ್ಟ ಬಂದಂಗೆ ಬದಲಾಯಿಸಿದ ಆಕೆಯನ್ನು ಕಂಡಾಗ ಆಲಿಯ ಭಟ್ ಗೆ ಜೋಡಿ ಸಿಕ್ಕರು ಅಂತ ಅನ್ನಿಸಿದ್ದು ಸುಳ್ಳಲ್ಲ :-). ಆಕೆ ಜೊತೆ ಮತ್ತೊಂದು ಗಿಳಿ ಸೇರಿ ಕೊಳ್ತು ಅಂತ ಅನ್ನಿಸಿದ್ದಲ್ಲದೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಎಂತಹ ಪ್ರತಿಭೆ ಮಿಸ್ ಆಯ್ತು ಅಂತ ಅನ್ನಿಸಿತ್ತು. ಈಕೆ ಆದರೂ ಪರವಾಗಿಲ್ಲ, ಕನ್ನಡದಲ್ಲಿ ಒಂದು ಜೋಕ್ ಇದೆ ಒಬ್ಬಾತ ತುಂಬಾ ಫೇಮಸ್ಸು. ಆತನ ಬಳಿ ದುಡ್ಡು , ಪ್ರಭಾವ ಎಲ್ಲ ಜಾಸ್ತಿ. ಅವನ ಮಗ ಶುದ್ಧ ದಡ್ಡ. ಅವನಿಗೆ ಒಳ್ಳೆ ಕೆಲಸ ಕೊಡಿಸಿ ಬಿಡೋಣ ಬದುಕಿರ್ತಾನೆ ಅಂತ ಅಪ್ಪ ನಿರ್ಧಾರ ಮಾಡ್ತಾರೆ ಸಂದರ್ಶನದಲ್ಲಿ ಆತ ಒಂದರಲ್ಲೂ ಪಾಸ್ ಆಗಲ್ಲ . ತನ್ನ ಪ್ರಭಾವ ಮುಂದಿಟ್ಟು ಆತನಿಗೆ ಕೆಲಸ ನೀಡುವಂತೆ ಒತ್ತಾಯ ಮಾಡಿದಾಗ ತಾನು ಒಂದು ಪದ ಹೇಳ್ತೀನಿ ಅದರ ಸ್ಪೆಲ್ಲಿಂಗ್ ನಲ್ಲಿ ಒಂದು ಅಕ್ಷರ ಸರಿಯಾಗಿ ಹೇಳಿದರೆ ಸಾಕು ಆತನಿಗೆ ಕೆಲಸ ಖಾಯಂ ಅಂತ ಆಶ್ವಾಸನೆ ನೀಡ್ತಾರೆ.. ಸರಿ ಅಲ್ಲೂ ಆತ ಪಾಸ್ ಆಗಲಿಲ್ಲ. ಹಾಗಾದ್ರೆ ಆ ಪದ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಕಾಫಿ. ಆತ coffee ಬದಲಾಗಿ kapi ಎಂದು ಬರೆದಿರುತ್ತಾನೆ.
ಅನುಷ್ಕ ಎಬಿಜೆ ಕಲಾಮ್ ಅಜಾದ್ ಮತ್ತು ಎಪಿಜೆ ಕಲಾಮ್ ಅಜಾದ್ ಅಂತ ಟ್ವೀಟ್ ಮಾಡಿದಾಗ, ಕಲಾಮ್ ಹೆಸರು ನೆನಪಿದೆಯಲ್ಲ ಅದೇ ದೇವರದಯೇ ! ;-) ಅಂತ ನೆಮ್ಮದಿ ಆಗಿದ್ದು ಸುಳ್ಳಲ್ಲ.
ಡಿಐಡಿ ಜೀ ಹಿಂದಿ ವಾಹಿನಿಯ ಪ್ರತಿಷ್ಠಿತ ಡ್ಯಾನ್ಸ್ ಕಾರ್ಯಕ್ರಮ. ಈ ಬಾರಿ ಬಂದಿರುವ ಪ್ರತಿಭೆಗಳು, ಅವರ ಗುರುಗಳಾದ ತೀರ್ಪುಗಾರಾದ ಪುನೀತ್, ಮುದಸ್ಸರ್, ಗೇತಿ, ಜೊತೆಗೆ ನಿರೂಪಕ ಜಾಯ್, ದೊಡ್ಡ ಮಾಸ್ಟರ್ ಎವರ್ ಗ್ರೀನ್ ಸ್ಮಾರ್ಟ್ ದಾದ ಮಿಥುನ್ ...
ಎಲ್ಲರೂ ಚಂದ, ಎಲ್ಲವೂ ಸಹ. ಆದರೆ ಅವರ ವೈಯಕ್ತಿಕ ಬದುಕು, ಸಾಧನೆ ಎಲ್ಲವೂ ಮಾದರಿ. ಕಷ್ಟಪಟ್ಟು ಮೇಲೆ ಬಂದ ಮುದಸ್ಸರ್ ಅದೃಷ್ಟ ಅವರನ್ನು ಈ ಹಂತಕ್ಕೆ ತಂದಿದೆ. ಅವರು ಈ ಹಂತಕ್ಕೆ ಬರಲು ಅವರ ಅಪಾರವಾದ ಶ್ರಮ ಸಹ ಪ್ರಾಮುಖ್ಯತೆ ಪಡೆಯುತ್ತದೆ ಎನ್ನುವುದು ಸುಳ್ಳಲ್ಲ.
ಆದರೆ ಈ ಬಾರಿ ಮುದಸ್ಸರ್ ತಂಡ ಹಿನ್ನಡೆಯಲ್ಲಿದೆ. ಅದಕ್ಕೆ ನನಗನ್ನಿಸಿದ್ದು ಅಂದ್ರೆ ಮುದಸ್ಸರ್ ಅತಿಯಾದ ಆತ್ಮವಿಶ್ವಾಸಕ್ಕೆ ಒಳಗಾಗಿ ಈ ರೀತಿ ಸೋಲ್ತಾ ಇದ್ದಾರ? ಹಾಗಿದ್ದರೆ ಆ ಅಂಶ ಮನದಿಂದ ಕಿತ್ತು ಹಾಕಿದರೆ ಒಳ್ಳೆಯದು. ಇಲ್ಲದೆ ಹೋದರೆ ತೊಂದರೆ ಅವರಿಗೂ ಮತ್ತು ಅವರ ತಂಡಕ್ಕೂ !!