ಕಾಣಿಕೆ,,, ಎಲ್ಲವು... ..!!

 

ಕಲರ್ಸ್ ಕನ್ನಡ ಬಿಗ್ ಬಾಸ್   ನಲ್ಲಿ  ಕಳೆದ ವಾರ ಬ್ರಹ್ಮಾಂಡ ಗುರೂಜಿ ಬಂದಿದ್ದರು. ಅವರು ಸ್ಪರ್ಧಿಗಳ ಭವಿಷ್ಯ ಹೇಳ ಬಹುದೇನೋ ಎಂದು ಅಂದುಕೊಂಡೆ. ಇತ್ತೀಚೆಗೆ  ಅವರ ತಂದೆ ತೀರಿಕೊಂಡದ ಕಾರಣ ಅವರ ವೇಷ ಬದಲಾವಣೆ ಇತ್ತು. ಇರಲಿ ಆ ವಿಷ್ಯ ಬೇಡ. ಆದರೆ ನರೇಂದ್ರ  ಅವರನ್ನು  ಜ್ಯೋತಿಷ್ಯ ಹೇಳುವ ಗುರುವಿಗಿಂತ ಹಳೆ ಸ್ಪರ್ಧಿಯಂತೆ  ನೋಡಿದ್ದು  ಅಷ್ಟೇನೂ  ಇಷ್ಟ ಆಗಲಿಲ್ಲ .. ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಇವರು ಸಾಕಷ್ಟು ಕೆಲಸ ಮಾಡಿದ್ದಾರೆ. ಯಾರೇ ನಂಬಲಿ ಬಿಡಲಿ ಜ್ಯೋತಿಷ್ಯ ಶಾಸ್ತ್ರವನ್ನು ನಿಯಮಿತ ರೀತಿಯಲ್ಲಿ ಅಧ್ಯಯನ ಮಾಡಬೇಕು.. ಅದರ ವಿಷ್ಯದಲ್ಲಿ ಬ್ರಹ್ಮಾಂಡ ಕೆಲಸ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. 

ಗಂಡಸು ಹುಡುಗರಿಗೆ ಕಿಚ್ಚ ಸುದೀಪಾ ನೀವು ಗಿಫ್ಟ್ ಕೊಟ್ಟಿದ್ದು ಅವರಲ್ಲಿ ಒಂದು ಬಗೆಯ ಚೈತನ್ಯ ನೀಡಿತು. ಫೈನ ಆದರೆ ಪಾಪದ ಹೆಣ್ಣು ಮಕ್ಕಳೇನು  ತಪ್ಪು ಮಾಡಿದ್ರು .. ಈ ಸೀಜನ್ ನಲ್ಲಿ ತನಿಷಾ ಅದ್ಭುತ ಸ್ಪರ್ಧಿ ಆಗಿದ್ದಾರೆ. ಆಕೆ ರೂಪ,  ಆಟ , ಮುನ್ನುಗ್ಗುವ ಗುಣ ಎಲ್ಲವು  ಪರ್ಫೆಕ್ಟ್.. ಒಟ್ಟಿನಲ್ಲಿ ನೀವು  ಗಂಡುಹುಡುಗರಿಗೆ ಕಾಣಿಕೆಯನ್ನು ನೀಡುವುದರ ಮೂಲಕ ಹೆಣ್ಣುಮಕ್ಕಳಿಗೆ ಬೇಸರ ಉಂಟು ಮಾಡಿರುವ  ಸಂಗತಿಯನ್ನು ನಾವು ಖಂಡಿಸ್ತೀವಿ 😀😎.. ಮೈಕೆಲ್ ಮತ್ತು ಪ್ರತಾಪ್ ಪದೇಪದೇ ನಾಯಕರಾಗುವ  ಅಗತ್ಯತೆ ಇರಲಿಲ್ಲ.. ತುಂಬಾ ಮುಗ್ಧ ಮುಖ ತೋರುತ್ತಾ  ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ನಮ್ರತಾ  ಮತ್ತು ಕಾರ್ತಿಕ್ ಅವ್ರ  ಬಗ್ಗೆ ತೆಗೆದುಕೊಂಡ ನಿರ್ಧಾರ ಹಾಸ್ಯಾಸ್ಪದ.   ಮೈಕೆಲ್ ಬಿಟ್ರೆ ಆ ಟೀಮ್  ನಲ್ಲಿ ಸಮರ್ಥ  ನಾಯಕಿ /ಕ  ಇದ್ದರು ಸಹ ಅವರ ಆಯ್ಕೆ  ಮತ್ತು  ಸಿರಿಯನ್ನು ಉಳಿಸಿದ್ದು  ಎಲ್ಲವು...  ..!!


ಯಸ್ ಐ ನೋ 😀

ಯಾವುದೇ ಕ್ಷೇತ್ರ ಆಗಿ ರಲಿ ಅಲ್ಲಿಸ್ಪರ್ಧೆ ಸಾಮಾನ್ಯ. ಮಾಧ್ಯಮ  ಕ್ಷೇತ್ರದ ಸ್ಪರ್ಧೆ ಸ್ವಲ್ಪ ವಿಚಿತ್ರ ಇರುತ್ತೆ ಆ ವಿಷ್ಯ ಬೇರೆ .. ಅದರಲ್ಲೂ ದೃಶ್ಯ ಮಾಧ್ಯಮದ  ವಿಷಯಕ್ಕೆ ಬರುವುದಾದರೆ ಒಂದೇ ಸಂಗತಿಯನ್ನು ನಮ್ಮಲ್ಲೇ ಮೊದಲು  ಎಂದು ಪ್ರಸರಿಸುತ್ತ.. ವಿವಿಧತೆಯಲ್ಲಿ ಏಕತೆ ಮತ್ತು ಏಕತೆಯ ಮೂಲಕ ವಿವಿಧತೆ ತೋರಿಸುತ್ತಾ ಏಕತಾನತೆಯನ್ನು ಕಾಪಾಡುವುದು  ಸಾಮಾನ್ಯ. 
ನಮ್ಮ ಮನೆಯಲ್ಲಿ   ನನ್ನ ಅಣ್ಣಂದಿರು ಹೆಚ್ಚು ನೋಡುವುದು  ರಿಪಬ್ಲಿಕ್  ಚಾನಲ್ ..  ನಮ್ಮ ಭಾವ ಒಬ್ರು ಸ್ವಿಜರ್  ಲ್ಯಾ೦ಡ್  ನಂತಹ ದೇಶಗಳಿಗೆ ಆಗಾಗ  ಹೋಗಿ ಅಲ್ಲಿನ ವಿದ್ಯಾರ್ಥಿಗಳಿಗೆ  ಪಾಠ  ಮಾಡಿಕೊಂಡು ಬರುವ ಮೇಸ್ಟ್ರು  .. ಹೀಗೆ ನೋಡುವವರ ಲಿಸ್ಟ್ ದೊಡ್ಡದಿದೆ.  ಕನ್ನಡದಲ್ಲಿ ಹೆಚ್ಚಾಗಿ ರಂಗಣ್ಣನ ಚಾನಲ್..( ನಾವ್ ಬಿಡಿ ಎಲ್ಲಾ ಚಾನಲ್ ನವರು ) !! 

ಯಾವಾಗ ಕನ್ನಡಲ್ಲೂ ರಿಪಬ್ಲಿಕ್  ಚಾನಲ್  ಬರುತ್ತೆ ಅಂತ ವಿಷಯ ಹರಡಿತೋ ಆಗ ಹೆಚ್ಚು ಚರ್ಚೆ ಆಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ. ಒಂದಷ್ಟು ರಂಗಣ್ಣನ  ದ್ವೇಷಿಗಳು, ಅಜಿತ್ ಕಂಡ್ರೆ ಆಗದವರು, ರಮಾಕಾಂತ್ ಇಷ್ಟ ಪಡದೆ ಇರುವವರು ,ಚಂದನ್  ಮಾತಿಗೆ ಸಿಡಿಮಿಡಿ ಆಗುವವರು  ಇನ್ನೈತೆ  ಕಥೆ ಅಂತ ಬರೆದಿದ್ದೆ ಬರೆದಿದ್ದು.  ಅರ್ನಾಬ್   ನೇರವಾಗಿ ಕನ್ನಡದಲ್ಲಿ ಚರ್ಚೆ ಮಾಡ್ತಾರೆ ಅನ್ನುವ ರೇಂಜಲ್ಲಿ ಇತ್ತು. ನನಗೆ ಅರ್ನಾಬ್   ಹಿಂದೀ  ಶೈಲಿಯೇ ಆಂಗ್ಲ ಶೈಲಿಯಂತೆ ಧ್ವನಿಸುತ್ತದೆ.. ಇನ್ನು ಅವರಿಗೇನಾದ್ರು ಕನ್ನಡ ಬಂದಿದ್ರೆ  ಅವರ  ಕನ್ನಡ  ಊಒ ಮೈ ಗಾಡ್ .. ಆದ್ರೂ ಯಾರಾದ್ರೂ ಸರ್ ನಿಮಗೆ ಕನ್ನಡ ಬರುತ್ತಾ ಅಂತ ಕೇಳಿ . ಅವರು ಆತ್ಮವಿಶ್ವಾಸದಿಂದ ಹೇಳುತ್ತಾರೆ ಯಸ್ ಐ ನೋ ಕನ್ನಡ  ಸ್ವಲ್ಪಸ್ವಲ್ಪ ..!   😀😀😀😀😀😀😀😀

ಶ್ರೀ ಶಂಕರ-ರಾಚ್ಚಸ-ನಗುವನಯನ-ರಾಜೇಶ್ ವೈದ್ಯ

 


ಕಳೆದ ವರ್ಷ ಗಣೇಶ ಉತ್ಸವದ ಸಮಯ ಇರಬೇಕು. ಆಗ ಶ್ರೀ ಶಂಕರ ಚಾನಲ್ ನಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಇತ್ತು. ಸಾಮಾನ್ಯವಾಗಿ  ಮನೋರಂಜನಾ ಕಾರ್ಯಕ್ರಮಗಳು ಮಾತ್ರ   ಪ್ರಸಾರ ಆಗುವ ಚಾನಲ್ ಗಳನ್ನೂ ನಾನು ವೀಕ್ಷಣೆ ಮಾಡಿದರು ಜೊತೆಗೆ ನ್ಯೂಸ್, ಸಂಗೀತ, ಭಕ್ತಿ ಚಾನಲ್  ಗಳನ್ನೂ ತಪ್ಪದೆ ನೋಡುವ ಅಭ್ಯಾಸ ಇದೆ. ಟಿಟಿಡಿ  ಸಹ ನನ್ನ ಲಿಸ್ಟ್ ನಲ್ಲಿ ಇದೆ. ಶ್ರೀ ಶಂಕರ ಚಾನಲ್ ವಿಷ್ಯಕ್ಕೆ ಬರುವುದಾದರೆ  ಮೊದಲೇ ಹೇಳಿದಂತೆ ಆ  ಸಂಗೀತ ಕಾರ್ಯಕ್ರಮದಲ್ಲಿ ಓರ್ವ ಸಾಧಕರು  ಅಥವಾ ವೀಣಾ ವಾದಕರು ನಗುವ ನಯನ ಮಧುರ ಮೌನ ಹಾಡನ್ನು ಸಂಗೀತಾಸಕ್ತರ ಮುಂದೆ ಇಟ್ಟರು. ತುಂಬಾ ಯುನಿಕ್ ಆದ ಅವರ ಸಂಗೀತ ಹಾಗು ಅವರ ಸ್ಟೈಲ್ ನನಗೆ ಆಸಕ್ತಿ ಉಂಟು ಮಾಡಿ ಸರ್ಫ್ ಮಾಡಿದಾಗ ಅವರು ವೀಣಾವಾದಕ ರಾಜೇಶ್ ವೈದ್ಯ ಅಂತ ತಿಳಿಯಿತು. ತಮಿಳು ಭಾಷೆಯ ಈ ಪ್ರತಿಭೆಯು   ಸ್ವಲ್ಪ ಮಾತ್ರ   ನಗುವನಯನ ಮತ್ತು ಜಾಸ್ತಿ ಜೊತೆಜೊತೆಯಲಿ  ನುಡಿಸಿರುವ ವಿಡಿಯೋ ಯು ಟ್ಯೂಬ್ ನಲ್ಲಿ ನೋಡಿದೆ. / ಹಾಗೆ ಉಳಿದ ವಿಡಿಯೋಗಳನ್ನು ನೋಡಿದಾಗ ಎಸ್  ಬಿ  ಬಾಲು  ಸರ್  ಅವರು  ಹೇಳುತ್ತಿದ್ದ ರಾಚ್ಚಸ ರಲ್ಲಿ ಇವರು ಒಬ್ಬರು ಅಂತ ತಿಳಿಯಿತು. ಇಂತಹ ಅಗಾಧ ಪ್ರತಿಭೆ ಅಬ್ಭಾ  ಸಕತ್ ಖುಷಿ ಆಯ್ತು. ಇವರು ನಗುವ ನಯನ ಪೂರ್ತಿ ನುಡಿಸಿ ನಮ್ಮಂತಹ ಸಂಗೀತ ಆಸಕ್ತರ ಖುಷಿ ಹೆಚ್ಚಿಸಲಿ ಎಂದು  ಕೇಳಿಕೊಳ್ತಾ ಇದ್ದೀನಿ ಶ್ರೀ ಶಂಕರ ಚಾನಲ್ ನವರೇ.. ಕೇಳಿಸಿತಾ ನಿಮಗೆ.. ?!